ನಾಗಮಂಡಲ ನಟಿ‌ ವಿಜಯಲಕ್ಷ್ಮಿ ತಾಯಿ ನಿಧನ

By Suvarna NewsFirst Published Sep 27, 2021, 5:55 PM IST
Highlights

ಅನಾರೋಗ್ಯದಿಂದ ತಾಯಿಯನ್ನು ಕಳೆದುಕೊಂಡ ನಟಿ ವಿಜಯಲಕ್ಷ್ಮಿ. ತಾಯಿ ದಿಢೀರ್‌ ನಿಧನ. ಆತಂಕದಲ್ಲಿ ನಟಿ...
 

ಕನ್ನಡ ಚಿತ್ರರಂಗದ 'ನಾಗಮಂಡಲ' ವಿಜಯಲಕ್ಷ್ಮಿ ಅವರ ತಾಯಿ ವಿಜಯ ಸುಂದರಂ ಸೆ.27ರಂದು ಕೊನೆ ಉಸಿರೆಳೆದಿದ್ದಾರೆ. ಕಾರವಾರದ ಮನೆ ಒಂದರಲ್ಲಿ ವಾಸವಿದ್ದ ವಿಜಯಲಕ್ಷ್ಮಿ ಮೂರು ದಿನಗಳಿಂದ ಬೆಂಗಳೂರಿನ (Bengaluru) ಗಾಂಧಿನಗರದಲ್ಲಿರುವ ಸಂತೃಪ್ತಿ ರೆಸಿಡೆನ್ಸಿ ಹೊಟೇಲ್‌ನಲ್ಲಿ ತಂಗಿದ್ದರು. ತಾಯಿ ಅವರ ದಿಢೀರ್ ನಿಧನದಿಂದ ವಿಜಯಲಕ್ಷ್ಮಿ (Vijayalakshmi) ಶಾಕ್ ಆಗಿದ್ದಾರೆ.

75 ವರ್ಷದ ವಿಜಯ ಸುಂದರಂ ಅವರ ಅಂತ್ಯಕ್ರಿಯೆ (Cremation) ಎಲ್ಲಿ ಮಾಡಬೇಕು ಎಂದು ಚಿಂತಿಸುತ್ತಿದ್ದಾರೆ. ಆರ್ಥಿಕ ಸಮಸ್ಯೆ (Financial Crisis) ಇರುವ ಕಾರಣ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (Karnataka Film Chambers) ಮಾಜಿ ಕಾರ್ಯದರ್ಶಿ ಬಾ.ಮಾ ಹರೀಶ್ ಹೋಟೆಲ್‌ಗೆ ತೆರಳಿ ಸಾಂತ್ವಾನ ಹೇಳುತ್ತಿದ್ದಾರೆ. 

ಎರಡು ಮೂರು ವರ್ಷಗಳಿಂದ ಆರ್ಥಿಕ ಸಂಕಷ್ಟದಲ್ಲಿರುವ ನಟಿ ವಿಜಯ ಲಕ್ಷ್ಮಿ ಸೋಷಿಯಲ್ ಮೀಡಿಯಾ (Social Media) ಮೂಲಕ ಸಹಾಯಕ್ಕಾಗಿ ಜನರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದರು. ವಿಜಯಲಕ್ಷ್ಮಿ ಅವರ ಆರೋಗ್ಯ (Health) ಹದಗೆಟ್ಟಿದಾಗ ಸಹೋದರು ಉಷಾ ನೋಡಿಕೊಂಡರು, ಉಷಾ ಅವರಿಗೆ ಪ್ಯಾರಲೈಸ್‌ (Paralyse) ಆಗಿ ಹಾಸಿಗೆ ಹಿಡಿದ್ದಾರೆ. ತಾಯಿ ವಿಜಯ್ ಸುಂದರಂ ಅವರಿಗೂ ವಯಸ್ಸಾಗಿದ್ದು, ಕೆಲಸವಿಲ್ಲ ಹಣ ಇಲ್ಲದೆ ವಿಜಯ ಲಕ್ಷ್ಮಿ ಬೀದಿಗೆ ಬಂದಿದ್ದಾರೆ. ಕನ್ನಡದ ಜನತೆಯನ್ನು ನಂಬಿಕೊಂಡು ಕೆಲವು ತಿಂಗಳುಗಳ ಹಿಂದೆ ಚೆನ್ನೈನಿಂದ ಕರ್ನಾಟಕಕ್ಕೆ ಬಂದರು. 

ನನ್ನ ತಂದೆಗೆ ಹುಷಾರಿಲ್ಲ, ಬಾಡಿಗೆ ಹಣವನ್ನು ನಟಿ ವಿಜಯಲಕ್ಷ್ಮಿಗೆ ನೀಡುವೆ: ಹುಚ್ಚ ವೆಂಕಟ್

ಬೆಂಗಳೂರಿನಲ್ಲಿ ಇರಲು ಮನೆ ಇಲ್ಲದ ಕಾರಣ ಆಸ್ಪತ್ರೆ ಪಕ್ಕದಲ್ಲಿಯೇ ಒಂದು ರೂಮ್‌ ಮಾಡಿಕೊಂಡು ತಾಯಿ ಹಾಗೂ ಅಕ್ಕನನ್ನು ನೋಡಿಕೊಳ್ಳುತ್ತಿದ್ದರು. ಕಳೆದ ವಾರ ವಿಜಯಲಕ್ಷ್ಮಿ ಅವರ ಕೊರೋನಾ (Coronavirus)ದಿಂದ ಬಳಲುತ್ತಿದ್ದರು. ಉತ್ತರಹಳ್ಳಿ ಬಳಿ ಇರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು, ಚೇತರಿಸಿಕೊಂಡಿದ್ದಾರೆ. ಆದರೆ ಇರಲು ಮನೆ ಬೇಕೆಂದು ಮನವಿ ಮಾಡಿಕೊಂಡಾಗ ಕಾರವಾರದಲ್ಲಿರುವ ಅಭಿಮಾನಿಯೊಬ್ಬರು ತಮ್ಮ ಮನೆ ಪಕ್ಕದಲ್ಲಿರುವ ಮನೆಯಲ್ಲಿ ಇರಲು ಜಾಗ ನೀಡಿದ್ದರು. ಮಲಗುವುದಕ್ಕೆ ಹಾಸಿಗೆ ಇಲ್ಲ, ಟಾಯ್ಲೆಟ್ ದೂರವಿದೆ, ತಿನ್ನುವುದಕ್ಕೆ ಊಟ ಇಲ್ಲ ವಾಂತಿ ಬರುವಂತೆ ಆಗುತ್ತಿದೆ, ಎಂದು ವಿಡಿಯೋ ಮಾಡಿದ್ದರು. 

ವಿಜಯಲಕ್ಷ್ಮಿ ಅವರ ಕಷ್ಟ ನೋಡಲಾಗದೆ ನಟ ಹುಚ್ಚ ವೆಂಕಟ್‌ ತಮ್ಮ ಬಳಿ ಹಣವಿಲ್ಲ. ಆದರೂ ತಮಗೆ ಒಂದು ಮನೆ ಬಾಡಿಗೆ ಬರಬೇಕಿದೆ. ಹಣ ಬಂದ ತಕ್ಷಣ ನಿಮ್ಮ ಕೈಗೆ ತಲುಪಿಸುವೆ ಎಂದು ವಿಡಿಯೋ ಮೂಲಕ ತಿಳಿಸಿದ್ದಾರೆ.

"

click me!