300 ವರ್ಷ ಆದರೂ ಹಾಳಾಗುವುದಿಲ್ಲ ನಟಿ ಊರ್ವಶಿ ರೌಟೆಲ್ಲಾ ಧರಿಸಿರುವ ಈ ಸೀರೆ. ಅಬ್ಬಾ! ಬೆಲೆ ಕೇಳಿ ನೆಟ್ಟಿಗರು ಶಾಕ್!
'ಮಿಸ್ಟರ್ ಐರಾವತ' ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿಯೂ ಛಾಪು ಮೂಡಿಸಿದ ನಟಿ ಊರ್ವಶಿ ರೌಟೇಲಾ ಕೆಲವು ದಿನಗಳ ಹಿಂದೆ ರಾಜಕಾರಣಿ ಮನೋಕ್ ಕುಮಾರ್ ಅವರ ಮೊಮ್ಮಗಳು ಮುಸ್ಕಾನ್ ಗೋಸ್ವಾಮಿ ಮದುವೆ ಕಾರ್ಯಕ್ರಮಕ್ಕೆ ಧರಿಸಿದ್ದ ಸೀರೆ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಬೆಲೆ ಎಷ್ಟಿರ ಬಹುದು ಎಂದು ಹುಡುಕಿದ ನೆಟ್ಟಿಗರಿಗೆ ಸಖತ್ ಶಾಕ್ ಕಾದಿತ್ತು.
ಹೌದು! ಊರ್ವಶಿ ಧರಿಸಿದ ಸೀರೆಯ ಬೇಲೆ ಬರೋಬ್ಬರಿ 58.75 ಲಕ್ಷ ರೂಪಾಯಿ ಎನ್ನಲಾಗಿದೆ. ಇದು ಗುಜರಾತಿನ ಪಟೋಲಾ ಶೈಲಿಯ ಸೀರೆಯಾಗಿದ್ದು, 300 ವರ್ಷವಾದರೂ ಹಾಳಾಗುವುದಿಲ್ಲ ಮತ್ತು ಬಣ್ಣ ಕಳೆದು ಕೊಳ್ಳುವುದಿಲ್ಲ. ಊರ್ವಶಿ ಧರಿಸಿದ ಈ ಸೀರೆಯನ್ನು ತಯಾರಿಸಲು ಕುಶಲಕರ್ಮಿಗಳು 6 ತಿಂಗಳು ತೆಗೆದುಕೊಂಡಿದ್ದಾರೆ. ಸೀರಗೆ ಬಣ್ಣ ತುಂಬುವುದಕ್ಕೆ 75 ದಿನ, ನೇಯಲು 25 ದಿನಗಳಾಗಿವೆ. ಸುಮಾರು 27 ಪಟೋಲಾ ಸೀರೆಗೆ ಖರ್ಚು ಮಾಡುವಷ್ಟು ವಸ್ತುಗಳು ಮತ್ತು ಶ್ರಮವನ್ನು ಈ ಒಂದೇ ಸೀರೆಗೆ ವ್ಯಯಿಸಲಾಗಿದೆ. ಸುಮಾರು 600 ಗ್ರಾಂಗಿಂತಲೂ ಹೆಚ್ಚು ಶುದ್ಧ ರೇಷ್ಮೆ ಬಳಸಲಾಗಿದೆ.
ಊರ್ವಶಿ ರೌಟೇಲಾ 'No pain No gain' ವರ್ಕೌಟ್ ವಿಡಿಯೋ ವೈರಲ್!
ಈ ಸೀರೆ ಎಲ್ಲೆಡೆ ಬಾರಿ ಸದ್ದು ಮಾಡುತ್ತಿದ್ದ ಕಾರಣ ಊರ್ವಶಿ ಪರ್ಸನಲ್ ಡಿಸೈನರ್ ತುಷಾರ್ ಕಪೂರ್ ಮಾಹಿತಿ ಹಂಚಿಕೊಂಡಿದ್ದಾರೆ. ಈ ಸೀರೆಗೆ ಮ್ಯಾಜ್ ಅಗುವಂತೆ ವಜ್ರದ ಸರ, ನೀಲಿ ಬಣ್ಣದ ಕಣ್ಣಿನ ಮೇಕಪ್ ಮತ್ತು ವೆಸ್ಟ್ರನ್ ಟ್ವಿಸ್ಟ್ ಹೇರ್ ಸ್ಟೈಲ್ ಮಾಡಿಸಿಕೊಂಡಿದ್ದಾರೆ ನಟಿ. ಕೆಲವರು ಸೀರೆ ಬೆಲೆ ಕೇಳಿ ಶಾಕ್ ಆದ್ರೆ, ಇನ್ನೂ ಕೆಲವು ಇದನ್ನು ಆಮೇಲೆ ಯಾರಿಗೆ ನೀಡುತ್ತಾರೆ? ಅವರೇ ಇಟ್ಟಿಕೊಳ್ಳುತ್ತಾರಾ? ಎಂದು ವಿಚಾರಿಸಿದ್ದಾರೆ.
undefined