
ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿನಯದ 'ಟಗರು' ಸಿನಿಮಾ ಸೇರಿ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ ಇಡೀ ಭಾರತದಲ್ಲಿಯೇ ಗುರುತಿಸಿಕೊಂಡಿತ್ತು. ಚಿತ್ರದಿಂದ ಧನಂಜಯ್ ಹೇಗೆ ಡಾಲಿ ಎಂದು ಖ್ಯಾತಿ ಪಡೆದರೋ ಹಾಗೆ ತ್ರಿವೇಣಿ ಅವರು ಕಾನ್ಸ್‌ಟೇಬಲ್ ಸರೋಜಾ ಎಂಬ ಬಿರುದು ಪಡೆದುಕೊಂಡರು. ಆದರೀಗ ತ್ರಿವೇಣಿ ಹೆಸರು ಬದಲಾಯಿಸಿದ್ದಾರೆ. ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ತಮ್ಮ ಹೆಸರು ಬದಲಾಯಿಸಿಕೊಂಡು ಅಧಿಕೃತವಾಗಿ ಘೋಷಿಸಿಕೊಂಡಿದ್ದಾರೆ.
ಕಾನ್ಸ್‌ಟೇಬಲ್ ಸರೋಜಾ ಸ್ಯಾಂಡಲ್‌ವುಡ್‌ನಲ್ಲಿ ಎಷ್ಟು ಹೆಸರು ಮಾಡಿದ್ದಾರೋ, ಹಾಗೆ ಟಾಲಿವುಡ್‌ನಲ್ಲಿ ಹೆಚ್ಚು ಬ್ಯುಸಿಯಾಗಿದ್ದಾರೆ. ಬ್ಯುಸಿ ಲೈಫನಲ್ಲಿ ನಡುವೆ ತ್ರಿವೇಣಿ ಅವರು ರುಷಿಕಾ ರಾಜ್ ಎಂದು ತಮ್ಮ ಹೆಸರು ಬದಲಾಯಿಸಿಕೊಂಡಿದ್ದಾರೆ. ತಮ್ ಮುಂದಿನ ಚಿತ್ರಗಳಲ್ಲಿ ರುಷಿಕಾ ರಾಜ್ ಎಂದು ಬಳಸಲಾಗುತ್ತದೆ ಎಂದಿದ್ದಾರೆ. 'ಇನ್ನುಂದೆ ನನ್ನ ಹೆಸರು ರುಷಿಕಾ ರಾಜ್, ನಿಮ್ಮೆಲ್ಲರ ಬೆಂಬಲ ಹೀಗೆ ಮುಂದುವರಿಯಲಿ,' ಎಂದು ಬರೆದುಕೊಂಡಿದ್ದಾರೆ.
ಕನ್ನಡ ಸಿನಿ ರಸಿಕರೂ ಈ ನಟಿಯ ಹೆಸರು ಬದಲಾವಣೆಗೆ ಪ್ರತಿಕ್ರಿಯೆ ನೀಡಿದ್ದಾರೆ. 'ನಿಮ್ಮ ಹೆಸರು ತ್ರಿವೇಣಿ ಅಂತಾನೇ ಗೊತ್ತಿರಲಿಲ್ಲ. ಇನ್ನು ರುಷಿಕಾ ರಾಜ್ ಅಂತ ತಿಳಿದುಕೊಂಡು ಏನು ಮಾಡೋದು? ನೀವು ಡಾಲಿ ಗರ್ಲ್‌ಫ್ರೆಂಡ್ ಅಷ್ಟೇ ಸಾಕು,' ಎಂದರೆ ಮತ್ತೊಬ್ಬರು 'ನೀವು ಏನೇ ಹೆಸರೂ ಬದಲಾಯಿಸಿಕೊಂಡರೂ, ಕನ್ನಡ ಚಿತ್ರರಂಗದಲ್ಲಿ ಕಾನ್ಸ್‌ಟೇಬಲ್ ಸರೋಜಾನೇ,' ಎಂದು ಕಾಮೆಂಟ್ ಮಾಡಿದ್ದಾರೆ.
ಟಗರು, ತಾಯಿಗೆ ತಕ್ಕ ಮಗ, ರಾಜ ಮಾರ್ತಾಂಡ, ಸಲಗ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ ಇವರು. ತೆಲುಗಿನಲ್ಲಿ ಸೀಟಿಮಾರ್, ಅಶ್ಮಿ ಹಾಗೂ ಜಾತಿಯ ರಹದಾರಿ ಎಂಬ ಸಿನಿಮಾನೂ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.