
ಕನ್ನಡ ಚಿತ್ರರಂಗದಲ್ಲಿ ಹಾಗೂ ಕಿರುತೆರೆ ಲೋಕದ ಜನಪ್ರಿಯ ನಟಿ ಸುನೇತ್ರಾ ಪಂಡಿತ್ ಮೂರು ದಿನಗಳ ಹಿಂದೆ ಬರೆದ ಪೋಸ್ಟ್ ವೈರಲ್ ಆಗುತ್ತಿದೆ. ಸುನೇತ್ರಾ ಮಾತನ್ನು ನೆಟ್ಟಿಗರು ಮಾತ್ರವಲ್ಲ, ಸಿನಿಮಾ ತಾರೆಯರೂ ಒಪ್ಪಿಕೊಂಡಿದ್ದಾರೆ.
ಕೆಲವು ದಿನಗಳ ಹಿಂದೆ ರಸ್ತೆ ಆಪಘಾತದಲ್ಲಿ ನಿಧನರಾದ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್‌ರ ಅಂತಿಮ ದರ್ಶನ ಪಡೆಯಲು ನಟಿ ಸುನೇತ್ರಾ ಪಂಡಿತ್ ರವಿಂದ್ರ ಕಲಾಕ್ಷೇತ್ರಕ್ಕೆ ತೆರಳಿದ್ದರು. ಅಲ್ಲಿಂದ ಮನೆಗೆ ಹಿಂದಿರುವ ದಾರಿಯಲ್ಲಿ ಅವರ ಗಾಡಿಯೂ ಸ್ಕಿಡ್ ಆಗಿದೆ. ಇದಕ್ಕೆ ಕಾರಣ ಹೇಗೆ ಬೇಕೋ ಹಾಗೆ ಹಾಕಿರುವ ಟಾರ್ ಹಾಗೂ ನಿರ್ಲಕ್ಷ್ಯ ಮಾಡುತ್ತಿರುವ ಸರ್ಕಾರವೆಂದು ಆರೋಪಿಸಿದ್ದಾರೆ.
'ಸಾಯುವುದು ಅನಿವಾರ್ಯ ನಿಜ. ಆದರೆ ಇಷ್ಟು ಬೇಗ? ರವಿಂದ್ರ ಕಲಾಕ್ಷೇತ್ರದಿಂದ ಹಿಂದಿರುಗಿ ಬರುವಾಗ ಮೈಸೂರು ರಸ್ತೆಯಲ್ಲಿ ನನ್ನ ಗಾಡಿ ಸ್ಕಿಡ್ ಆಯಿತು. ಅದು ಅವೈಜ್ಞಾನಿಕವಾಗಿ ರಸ್ತೆಗೆ ಟಾರ್ ಹಾಕಿರುವುದಕ್ಕೆ ಈ ರೀತಿ ಆಗುತ್ತಿದೆ. ಯಾರು ಎಷ್ಟೇ ಜಾಗೃತೆಯಿಂದ ಗಾಡಿ ಓಡಿಸಿದರೂ, ಸ್ಕಿಡ್ ಆಗುತ್ತದೆ. ಅಷ್ಟು ಹಾಳಾಗಿದೆ ಈ ರಸ್ತೆಗಳು. ರಸ್ತೆ ಕಾಂಟ್ರ್ಯಾಕ್ಟ್ ತೆಗೆದುಕೊಳ್ಳುವವರೇ ದಯವಿಟ್ಟು ಹಣ ತೆಗೆದುಕೊಂಡು, ಜನರ ಜೀವನದ ಜೊತೆ ಆಡಬೇಡಿ. ಜನರನ್ನು ಈ ದುಸ್ಥಿತಿಗೆ ತರಬೇಡಿ. ನಮ್ಮ ಸರ್ಕಾರವೂ ಇದರ ಬಗ್ಗೆ ಗಮನ ಹರಿಸಿ ಹೆಚ್ಚಿನ ಕ್ರಮ ಕೈಗೊಳ್ಳಬೇಕಿದೆ. ಕಾಸು ಮಾಡೋ ಆಸೆಯಲ್ಲಿ ಜೀವ ಕಿತ್ಕೋಬೇಡಿ. ದಯವಿಟ್ಟು ಹೆಲ್ಮೆಟ್ ಧರಿಸಿ, ಸೀಮಿತ ವೇಗದಲ್ಲಿ ಗಾಡಿ ಚಲಾಯಿಸಿ. ನನ್ನ ಗೆಳೆಯ ವಿಜಿ ಆತ್ಮಕ್ಕೆ ಶಾಂತಿ ಸಿಗಲಿ,' ಎಂದು ಸುನೇತ್ರಾ ಬರೆದುಕೊಂಡಿದ್ದಾರೆ.
'ಸಿಲ್ಲಿಲಲ್ಲಿ' ವಿಶಾಲು ಈಗ ಹೇಗಿದ್ದಾರೆ ಗೊತ್ತಾ? ಅವರ ಫ್ಯಾಮಿಲಿ ಇದು!
'ಮೇಡಂ ನೀವು ಹೇಳಿದ್ದು ಸರಿ? ನಾವು ಎಷ್ಟೇ ಜಾಗೃತೆಯಿಂದ ಇದ್ದರೂ ರಸ್ತೆಗಳಿಂದ ತೊಂದರೆ ಆಗುತ್ತಿದೆ,' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.