ತಾಯಿಯಾಗ್ತಿದ್ದಾರ ನಟಿ ಸೋನಲ್ ಮೊಂಥೆರೋ? ವೈರಲ್ ವಿಡಿಯೋ ಅಸಲಿಯತ್ತೇನು?

Published : Mar 25, 2026, 07:52 PM IST
Sonal Monteiro

ಸಾರಾಂಶ

ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ತರುಣ್ ಸುಧೀರ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ನಟಿ ಸೋನಲ್ ಮೊಂಥೆರೋ ಅವರು ತಾಯಿಯಾಗ್ತಿದ್ದಾರ? ಸೋಶಿಯಲ್ ಮೀಡಿಯಾದಲ್ಲಿ ತುಂಬು ಗರ್ಭಿಣಿ ಸೋನಲ್ ಹಸಿರು ಬಣ್ಣದ ಸೀರೆಯುಟ್ಟು ಸೀಮಂತಕ್ಕೆ ರೆಡಿಯಾಗ್ತಿರೋ ವಿಡಿಯೋ ವೈರಲ್ ಆಗ್ತಿದೆ. 

ನಟಿ ಸೋನಲ್ ಮೊಂಥೇರೋ ತಾಯಿಯಾಗ್ತಿದ್ದಾರ?

ತುಳು ಸಿನಿಮಾಗಳ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟು, ಇದೀಗ ಚಂದನವನದಲ್ಲಿ ನಾಯಕಿಯಾಗಿ ಮಿಂಚುತ್ತಿದ್ದಾರೆ. 2024ರ ಆಗಸ್ಟ್ 11 ರಂದು ಸೋನಲ್ ಮೊಂಥೆರೋ ಕನ್ನಡ ಚಿತ್ರರಂಗದ ಜನಪ್ರಿಯ ನಿರ್ದೇಶಕ ತರುಣ್ ಸುಧೀರ್ ಅವರ ಜೊತೆ ಅದ್ದೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಬಳಿ ನಟಿ ಎಲ್ಲೆ ಹೋದರೂ ಗುಡ್ ನ್ಯೂಸ್ ಯಾವಾಗ? ಎನ್ನುವ ಪ್ರಶ್ನೆಯೇ ಕೇಳಿ ಬರುತ್ತಿತ್ತು. ಹಿಂದೊಮ್ಮೆ ನಟಿ ಗರ್ಭಿಣಿ ಎನ್ನುವ ಗಾಸಿಪ್ ಕೂಡ ಹರಡಿತ್ತು. ಇದೀಗ ಮತ್ತೆ ವೈರಲ್ ಆಗಿರುವ ನಟಿ ಸೋನಲ್ ಅವರ ವಿಡಿಯೋ ಒಂದು ಸದ್ದು ಮಾಡುತ್ತಿದೆ. ಇದನ್ನ ನೋಡಿದ್ರೆ ನಟಿ ಗರ್ಭಿಣಿಯಾಗಿರೋದು ಖಚಿತಾ ಎನ್ನುತ್ತಿದ್ದಾರೆ. ಆದರೆ ನಿಜಕ್ಕೂ ಸೋನಲ್ ತಾಯಿಯಾಗ್ತಿದ್ದಾರ? ವೈರಲ್ ವಿಡಿಯೋ ಹಿಂದಿನ ಸತ್ಯಾಸತ್ಯತೆ ಏನು?

ವೈರಲ್ ವಿಡಿಯೋದಲ್ಲಿ ಏನಿದೆ?

ಅಂದ ಹಾಗೆ ವೈರಲ್ ಆಗಿರುವ ವಿಡಿಯೋದಲ್ಲಿ ಸೋನಲ್ ಮೊಂಥೆರೋ ತುಂಬು ಗರ್ಭಿಣಿಯಂತೆ ಕಾಣಿಸುತ್ತಿದ್ದು. ಅವರಿಗೆ ಹಸಿರು ಬಣ್ಣದ ಸೀರೆಯನ್ನು ಉಡಿಸಲಾಗುತ್ತಿದೆ. ಹಸಿರು ಜರಿ ಸೀರೆಗೆ ಸೋನಲ್ ಹಳದಿ ಬಣ್ಣದ ಬ್ಲೌಸ್ ಧರಿಸಿ, ಕಿವಿಯೋಲೆ, ಮುಂದಾಲೆ, ನೆಕ್ಲೆಸ್ ಧರಿಸಿ, ತಲೆ ತುಂಬಾ ಮಲ್ಲಿಗೆ ಹೂವು ಮುಡಿದು, ಮುದ್ದಾಗಿ ನಗು ಬೀರುತ್ತಿರುವುದು ಕಾಣಿಸುತ್ತಿದೆ. ಇದನ್ನ ನೋಡಿದ್ರೆ ನಟಿ ಸೀಮಂತಕ್ಕೆ ತಯಾರಿ ನಡೆಸುತ್ತಿರುವಂತೆ ಕಾಣಿಸುತ್ತಿದೆ. ಆದರೆ ಈ ವಿಡಿಯೋದಲ್ಲಿ ಕಾಣಿಸಿರುವಂತೆ ಸೋನಲ್ ಅವರು ಗರ್ಭಿಣಿಯಾಗಿಲ್ಲ, ಜೊತೆಗೆ ಅಲ್ಲಿ ಅವರ ನಿಜ ಸೀಮಂತ ಕೂಡ ನಡೆಯುತ್ತಿಲ್ಲ. ಇದು ಸಿನಿಮಾ ಶೂಟಿಂಗ್ ಗಾಗಿ ಮಾಡಿದಂತಹ ಗೆಟಪ್ ಆಗಿದೆ. ಸೋನಲ್ ರಾಧೇಯಾ ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದು, ಆ ಸಿನಿಮಾದಲ್ಲಿ ಇವರು ಗರ್ಭಿಣಿಯಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಸೆಟ್ ನಿಂದ ಯಾರೋ ವಿಡಿಯೋ ಮಾಡಿ ಅದನ್ನು ಸೋಶಿಯಲ್ ಮೀಡಿಯದಲ್ಲಿ ಹರಿಯಬಿಟ್ಟಿದ್ದಾರೆ.

 

 

ಸೋನಲ್ ಮತ್ತು ತರುಣ್ ಲವ್ ಸ್ಟೋರಿ

ದರ್ಶನ್ ನಟನೆಯ 'ರಾಬರ್ಟ್' ಚಿತ್ರವನ್ನು ತರುಣ್ ಸುಧೀರ್ ನಿರ್ದೇಶನ ಮಾಡಿದ್ದು, ಆ ಚಿತ್ರದಲ್ಲಿ ಸೋನಲ್ ಕೂಡ ನಟಿಸಿದ್ದರು. ಅದೇ ಸಮಯದಲ್ಲಿ ಇಬ್ಬರ ಪರಿಚಯವಾಗಿತ್ತು. ಬಳಿಕ ಸ್ನೇಹಕ್ಕೆ ತಿರುಗಿತ್ತು. ಆದರೆ ಇವರಿಬ್ಬರು ಲವ್ ಮಾಡುತ್ತಿದ್ದಾರೆ ಎಂಬ ಗಾಸಿಪ್ ಹರಡಿತ್ತು. ಆದರೆ ಇವರು ಆ ಬಗ್ಗೆ ಯೋಚಿಸಿರಲಿಲ್ಲವಂತೆ. ಬಳಿಕ 'ರಾಬರ್ಟ್' ಸಿನಿಮಾ ಮುಗಿದು 'ಕಾಟೇರ' ಚಿತ್ರದ ಸಮಯದಲ್ಲಿ ಯಾಕೆ ಗಾಸಿಪ್ ಅನ್ನೆ ನಿಜ ಮಾಡಬಾರದು, ಆ ರೀತಿ ಯಾಕೆ ಯೋಚನೆ ಮಾಡಬಾರದು ಎಂದು ನಿರ್ಧರಿಸಿ, ಕೊನೆಗೆ ಅದಕ್ಕೆ ಟೈಮ್ ತೆಗೆದುಕೊಂಡು, ಪ್ರೀತಿಸಿ, ಬಳಿಕ ಮದುವೆಯಾಗಿದ್ದರು ಈ ಜೋಡಿ.

ಈ ಜೋಡಿಗೆ ಈ ಹಿಂದೆಯೂ ಹಲವಾರು ಬಾರಿ ಜನ, ಮೀಡಿಯಾ ಎಲ್ಲಾ ಪ್ರೆಗ್ನೆನ್ಸಿ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದರು. ಹಾಗೇ ಹಿಂದೆ ಒಂದು ಸಂದರ್ಶನದಲ್ಲಿ ಪ್ರೆಗ್ನೆನ್ಸಿ ಪ್ಲಾನಿಂಗ್ ಬಗ್ಗೆ ಉತ್ತರಿಸಿದ ಸೋನಲ್ ಪ್ಲ್ಯಾನಿಂಗ್ ಅಂತೆಲ್ಲಾ ಏನು ಇಲ್ಲ, ದೇವರ ಆಶೀರ್ವಾದ ಯಾವಾಗ ಆಗಿದ್ರು ಸರಿ, ಅದನ್ನು ನಾನು ಒಪ್ಪಿಕೊಳ್ತೀನಿ ಎಂದು ಹೇಳಿದ್ದರು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಧುರಂಧರ್‌ 2' ಚಿತ್ರವನ್ನು ಹಾಡಿಹೊಗಳಿದ ಶಿವರಾಜ್‌ಕುಮಾರ್‌; ಮೆಚ್ಚಿ ಮನಸಾರೆ ಪ್ರಶಂಸೆ ಮಾಡಿದ ಅಜನೀಶ್ ಲೋಕನಾಥ್
ಇವು ಕನ್ನಡದ Hidden Gems… ತಮ್ಮ ಕಾಲಘಟ್ಟಕ್ಕಿಂತ ತುಂಬಾನೆ ಮುಂದಿತ್ತು ಈ ಕನ್ನಡ ಸಿನಿಮಾಗಳು