ನಟಿ ಸಿಂಧು ಮೆನನ್ ಯಾರಿಗೆ ನೆನಪಿಲ್ಲ? ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳಂ ಸಿನಿಮಾರಂಗಗಳಲ್ಲಿ ಮಿಂಚಿದ್ದ ನಟಿ ಸಿಂಧು ಮೆನನ್ ಈಗೆಲ್ಲಿದ್ದಾರೆ ಎಂಬ ಕುತೂಹಲ ಹಲವರಲ್ಲಿ ಇರುವುದು ತುಂಬಾ ಸಹಜ.
ನಟಿ ಸಿಂಧು ಮೆನನ್ ಯಾರಿಗೆ ನೆನಪಿಲ್ಲ? ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳಂ ಸಿನಿಮಾರಂಗಗಳಲ್ಲಿ ಮಿಂಚಿದ್ದ ನಟಿ ಸಿಂಧು ಮೆನನ್ (Sindhu Menon) ಈಗೆಲ್ಲಿದ್ದಾರೆ ಎಂಬ ಕುತೂಹಲ ಹಲವರಲ್ಲಿ ಇರುವುದು ತುಂಬಾ ಸಹಜ. ಹಾಗಿದ್ದರೆ ಇದಕ್ಕೆ ಉತ್ತರ ಇಲ್ಲಿದೆ. ಹೌದು ನಟಿ ಸಿಂಧು ಮೆನನ್ ಈಗ ಲಂಡನ್‌ನಲ್ಲಿ ನೆಲೆಸಿದ್ದಾರೆ. ಅಲ್ಲಿಗೆ ಯಾಕೆ ಹೋಗಿದ್ದಾರೆ? ಯಾಕೆ ಈಗ ನಟಿಸುತ್ತಿಲ್ಲ. ಸಿನಿಮಾಗಳಲ್ಲಿ ಚಾನ್ಸ್ ಇಲ್ಲದಿದ್ದರೆ ಹಲವರು ನಟಿಸುತ್ತಿರುವಂತೆ ಸೀರಿಯಲ್‌ನಲ್ಲಾದರೂ ನಟಿಸಬಹುದಲ್ಲ ಎಂಬುದು ಕೆಲವರ ಅಭಿಪ್ರಾಯ ಇರಬಹುದು. ಅದಕ್ಕೂ ಉತ್ತರ ಇಲ್ಲಿದೆ ನೋಡಿ..
ಹೌದು, ನಟಿ ಸಿಂಧು ಮೆನನ್ ಲಂಡನ್‌ನಲ್ಲಿ ನೆಲೆಸಿದ್ದು ಈಗ ಸಿನಿಮಾರಂಗದಿಂದ ಸಂಪೂರ್ಣ ದೂರವಿದ್ದಾರೆ. ಸಿಂಧು ಗಂಡ ಪ್ರಭು ಇಂಗ್ಲೆಂಡ್‌ನಲ್ಲಿ ಬಿಸಿನೆಸ್‌ಮ್ಯಾನ್ ಆಗಿದ್ದಾರೆ. ಇಬ್ಬರು ಗಂಡು ಮಕ್ಕಳು, ಒಂದು ಮಗಳ ಜೊತೆ ನಟಿ ಸಿಂಧು ಮೆನನ್ ಸುಖ ಸಂಸಾರ ಮಾಡಿಕೊಂಡಿದ್ದಾರೆ. ಆಗಾಗ ಭಾರತಕ್ಕೆ ಬಂದು ಹೋಗುತ್ತಾರೆ. ಆದರೆ, ನಟನೆಗೆ ಸಂಬಂಧಿಸಿ ಯಾವುದೇ ಪ್ರಾಜೆಕ್ಟ್ ಒಪ್ಪಿಕೊಳ್ಳುತ್ತಿಲ್ಲ ಎನ್ನಲಾಗಿದೆ.
ಉಪೇಂದ್ರರ 'ಎ' ಚಿತ್ರ ಪ್ರದರ್ಶನದ ವೇಳೆ ಕಾವೇರಿ ಥಿಯೇಟರ್‌ಗೆ ಪೊಲೀಸರು ಬಂದಿದ್ದೇಕೆ?ನಟಿ ಸಿಂಧು ಮೆನನ್ ಮೂಲತಃ ಮಲಯಾಳಂ ಚಿತ್ರರಂಗದಿಂದ ತಮ್ಮ ಕೆರಿಯರ್ ಶುರು ಮಾಡಿದ್ದಾರೆ. ಬಳಿಕ ಅವರು ತಮಿಳು, ತೆಲುಗು, ಮಲಯಾಳಂ ಹಾಗೂ ಕನ್ನಡ ಚಿತ್ರಗಳಲ್ಲಿ ನಟಿಸಿ ಸೌತ್ ಇಂಡಿಯಾದಲ್ಲಿ ಸಖತ್ ಫೇಮಸ್ ಆಗಿದ್ದರು. ಕನ್ನಡದಲ್ಲಿ ಸಿಂಧು ಅವರು ಕಿಚ್ಚ ಸುದೀಪ್ ನಟನೆಯ 'ನಂದಿ' ಸಿನಿಮಾದಲ್ಲಿ ನಟಿಸಿ ಅಪಾರ ಮೆಚ್ಚುಗೆ ಗಳಿಸಿದ್ದಾರೆ. ನಂದಿ ಮಾತ್ರವಲ್ಲದೇ ಧರ್ಮ, ಖುಷಿ, ಜೇಷ್ಠ ಹಾಗೂ ವಿಕ್ರಮ ಚಿತ್ರಗಳಲ್ಲಿ ಸಿಂಧು ನಟಿಸಿದ್ದಾರೆ.
ಬಾಲಿವುಡ್‌ನಲ್ಲಿ ಕೋಮಲ್ ಜಾ ಬಿರುಗಾಳಿ ಶುರು; ಬೇರೆ ಭಾಷೆಯ ಮೇಲೂ ಕಣ್ಣು!
ಸದ್ಯ ಸಿನಿಮಾ ನಟನೆಯಿಂದ ಬ್ರೇಕ್ ತೆಗೆದಕೊಂಡಿರುವ ನಟಿ ಸಿಂಧು ಮೆನನ್, ಲಂಡನ್‌ನಲ್ಲಿ ಗಂಡ-ಮಕ್ಕಳ ಜೊತೆ ಹಾಯಾಗಿ ಕಾಲ ಕಳೆಯುತ್ತಿದ್ದಾರೆ. ಮೊದಲು ಫೀಟ್ ಅಂಡ್ ಫೈನ್ ಆಗಿದ್ದ ನಟಿ ಸಿಂಧು ಮೆನನ್, ಈಗ ಕೊಂಚ ದಪ್ಪಗಾಗಿದ್ದಾರೆ. ಮೊದಲು ನೋಡಿದ್ದವರು ಈಗ ನೋಡಿದರೆ ಸಿಂಧು ದಪ್ಪಗಾಗಿದ್ದಾರಲ್ಲ ಎನಿಸುವುದು ಸಹಜ. ಅಭಿಮಾನಿಗಳು ಈಗ ದಪ್ಪವಾಗಿರುವ ಸಿಂಧು ನೋಡಿ ಬೇಸರವನ್ನೂ ವ್ಯಕ್ತಪಡಿಸಬಹುದು. ಆದರೆ, ಸಂಸಾರದಲ್ಲಿ ಮುಳುಗಿ ಹೋಗಿರುವ ನಟಿ ಸಿಂಧು ಸದ್ಯ ತಮ್ಮ ಫಿಟ್‌ನೆಸ್ ಬಗ್ಗೆ ಅಷ್ಟಾಗಿ ಗಮನ ಕೊಡುತ್ತಿಲ್ಲ ಎನ್ನಬಹುದು.
ವಿಷ್ಣುವರ್ಧನ್-ಭಾರತಿ ಮೊದಲು ಭೇಟಿಯಾಗಿದ್ದು ಎಲ್ಲಿ; ಲವ್ ಆಗಿದ್ದು ಯಾವಾಗ?
ಒಟ್ಟಿನಲ್ಲಿ, ಸಿಂಧು ಅಂದು ಅಪಾರ ಅಭಿಮಾನಿಗಳನ್ನು ಹೊಂದಿದ್ದು ಇಂದು ಅವರೆಲ್ಲಿರಬಹುದು ಎಂದು ಖಂಡಿತವಾಗಿಯೂ ಅವರೆಲ್ಲ ಯೋಚಿಸುತ್ತಿರಬಹುದು. ಅಂಥವರಿಗೆ ಉತ್ತರ ದೊರಕಲಿ ಎಂಬ ಸದುದ್ಧೇಶದಿಂದ 'ನಂದಿ' ಹೀರೋಯಿನ್ ಸಿಂಧು ಅವರ ಬಗ್ಗೆ ತಿಳಿಸುವ ಪ್ರಯತ್ನ ಮಾಡಲಾಗಿದೆ. ಇಷ್ಟಾದರೂ ವಿಷಯ ತಿಳಿಯಿತಲ್ಲ ಎಂದು ಹಲವರಿಗೆ ಕೊಂಚ ಖುಷಿ ಆಗಬಹುದು. ಅಂದಹಾಗೆ, ನಟಿ ಸಿಂಧು ಮೆನನ್ 'ಖುಷಿ' ಚಿತ್ರದ ಹೀರೋಯಿನ್ ಕೂಡ ಹೌದು!