ತಾನೇ ನಾಯಕಿಯಾದ ಸಿನಿಮಾಗೆ ಹಾಡುಗಾರ್ತಿಯಾದ ಶೃತಿ ಪ್ರಕಾಶ್

Published : Mar 13, 2019, 12:33 PM ISTUpdated : Mar 13, 2019, 12:38 PM IST
ತಾನೇ ನಾಯಕಿಯಾದ ಸಿನಿಮಾಗೆ ಹಾಡುಗಾರ್ತಿಯಾದ ಶೃತಿ ಪ್ರಕಾಶ್

ಸಾರಾಂಶ

ಇಲ್ಲಿಯವರೆಗೂ ನಟಿಯಾಗಿ ಪರಿಚಯವಿದ್ದ ಶ್ರುತಿ ಪ್ರಕಾಶ್‌ ಈಗ ಹಾಡುವುದಕ್ಕೂ ಶುರು ಮಾಡಿದ್ದಾರೆ. ಅದರಲ್ಲೂ ತಾನು ನಾಯಕಿಯಾಗಿ ನಟಿಸಿದ ಚಿತ್ರದಲ್ಲೇ ಹಾಡು ಮೂಲಕ ತಾನು ಹಾಡುಗಾರ್ತಿ ಕೂಡ ಹೌದು ಎಂಬುದನ್ನು ತೋರಿಸಿಕೊಂಡಿದ್ದಾರೆ. ಆ ಮೂಲಕ ಮೊದಲ ಬಾರಿಗೆ ಚಿತ್ರವೊಂದರ ಗೀತೆಗೆ ಧ್ವನಿ ಆಗಿದ್ದಾರೆ. ಹೀಗೆ ಶ್ರುತಿ ಪ್ರಕಾಶ್‌ ಹಾಡಿರುವುದು ‘ಲಂಡನ್‌ನಲ್ಲಿ ಲಂಬೋದರ’ ಚಿತ್ರಕ್ಕೆ. 

ಬೆಂಗಳೂರು (ಮಾ. 13): ಇಲ್ಲಿಯವರೆಗೂ ನಟಿಯಾಗಿ ಪರಿಚಯವಿದ್ದ ಶ್ರುತಿ ಪ್ರಕಾಶ್‌ ಈಗ ಹಾಡುವುದಕ್ಕೂ ಶುರು ಮಾಡಿದ್ದಾರೆ. ಅದರಲ್ಲೂ ತಾನು ನಾಯಕಿಯಾಗಿ ನಟಿಸಿದ ಚಿತ್ರದಲ್ಲೇ ಹಾಡು ಮೂಲಕ ತಾನು ಹಾಡುಗಾರ್ತಿ ಕೂಡ ಹೌದು ಎಂಬುದನ್ನು ತೋರಿಸಿಕೊಂಡಿದ್ದಾರೆ. ಆ ಮೂಲಕ ಮೊದಲ ಬಾರಿಗೆ ಚಿತ್ರವೊಂದರ ಗೀತೆಗೆ ಧ್ವನಿ ಆಗಿದ್ದಾರೆ. ಹೀಗೆ ಶ್ರುತಿ ಪ್ರಕಾಶ್‌ ಹಾಡಿರುವುದು ‘ಲಂಡನ್‌ನಲ್ಲಿ ಲಂಬೋದರ’ ಚಿತ್ರಕ್ಕೆ.

ಯಶ್ ಅಭಿಮಾನಿಗಳಿಗೆ ಗುಡ್‌ನ್ಯೂಸ್! ಶುರುವಾಗುತ್ತಿದೆ ಕೆಜಿಎಫ್-2 ಶೂಟಿಂಗ್

ರಾಜ್‌ ಸೂರ್ಯ ನಿರ್ದೇಶನದ ಈ ಚಿತ್ರಕ್ಕೆ ಶ್ರುತಿ ನಾಯಕಿ. ಸಂತೋಷ್‌ ಚಿತ್ರದ ನಾಯಕ. ಬಿಡುಗಡೆಯ ಹಂತಕ್ಕೆ ಬಂದಿರುವ ಈ ಚಿತ್ರದ, ಪ್ರಣವ್‌ ಅಯ್ಯಂಗಾರ್‌ ಬರೆದಿರುವ ‘ಈ ಮನಸು ಅಲೆಮಾರಿ’ ಎನ್ನುವ ಗೀತೆಯನ್ನೇ ಶ್ರುತಿ ಪ್ರಕಾಶ್‌ ಹಾಡಿದ್ದಾರೆ. ದೀಪಕ್‌ ದೊಡ್ಡೇರ ಇವರಿಗೆ ಸಾಥ್‌ ನೀಡಿದ್ದಾರೆ.

ಸದ್ಯಕ್ಕೆ ಶ್ರುತಿ ಪ್ರಕಾಶ್‌ ಅವರು ಹಾಡಿರುವ ಹಾಡನ್ನು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಲಾಗಿದ್ದು, ಒಳ್ಳೆಯ ಪ್ರತಿಕ್ರಿಯೆ ಬರುತ್ತಿದೆಯಂತೆ. ಸಾಧುಕೋಕಿಲ, ಅಚ್ಯುತ್‌ ಕುಮಾರ್‌, ಸಂಪತ್‌ ರಾಜ್‌, ಸುಧಾ ಬೆಳವಾಡಿ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.

ಸೂಪರ್‌ಹಿಟ್ ಚಿತ್ರ ’ಉದ್ಭವ’ ಎರಡನೇ ಭಾಗ ತೆರೆ ಮೇಲೆ

ವಿಶೇಷ ಅಂದರೆ ಈ ಚಿತ್ರದ ಅರ್ಧ ಭಾಗ ಚಿತ್ರೀಕರಣ ಲಂಡನ್‌ ನಗರದಲ್ಲೇ ಮಾಡಲಾಗಿದೆ. ಹೆಸರಿಗೆ ತಕ್ಕಂತೆ ಕನ್ನಡ ಚಿತ್ರವೊಂದು ಇಷ್ಟುದೊಡ್ಡ ಮಟ್ಟದಲ್ಲಿ ಲಂಡನ್‌ನಲ್ಲೇ ಶೂಟಿಂಗ್‌ ಮಾಡಿರುವುದು ಹೆಗ್ಗಳಿಕೆ. ದಿನಭಷ್ಯ, ಜ್ಯೋತಿಷ್ಯವನ್ನು ನೋಡಿ ತಮ್ಮ ಕೆಲಸಗಳ ಕಾರ್ಯಗಳನ್ನು ಆರಂಭಿಸುವವರ ಬದುಕಿನ ಚಿತ್ರಣಗಳನ್ನೇ ಆಧರಿಸಿ ಈ ಚಿತ್ರಕ್ಕೆ ಕತೆ ಬರೆಯಲಾಗಿದೆಯಂತೆ.

‘ನಾಯಕನ ನಂಬಿಕೆಗಳು ಮತ್ತು ಅದು ತಂದೊಡ್ಡುವ ಅನಾಹುತಗಳು ರಂಜನೀಯವಾಗಿದೆ. ಚಿಕ್ಕ ಮನೆಯಿಂದ ಶುರುವಾಗಿ, ಲಂಡನ್‌ ತನಕ ಮುಂದುವರಿಯುತ್ತದೆ. ಬೆಂಗಳೂರು ಮತ್ತು ಲಂಡನ್‌ ಎರಡೇ ಕಡೆ ಚಿತ್ರೀಕರಣ ಮಾಡಲಾಗಿದೆ’ ಎಂಬುದು ರಾಜ್‌ ಸೂರ್ಯ ಅವರ ಮಾತು.

ಯುಕೆಯಲ್ಲಿ ವಾಸವಿರುವ ಕುಮಾರ್‌, ಪ್ರಕಾಶ್‌ ಘಟ್ಟಪುರ ಮುಂತಾದ ಕನ್ನಡಿಗರೇ ಸೇರಿ ಕ್ರೌಡ್‌ ಫಂಡಿಂಗ್‌ನಲ್ಲಿ ನಿರ್ಮಾಣ ಮಾಡಿರುವ ಸಿನಿಮಾ ಇದು. ಈ ಚಿತ್ರ ಯಶಸ್ವಿ ಆದರೆ ಅಲ್ಲಿನ ಕನ್ನಡಿಗರು ಮತ್ತಷ್ಟುಸಿನಿಮಾಗಳನ್ನು ನಿರ್ಮಿಸುವುದಕ್ಕೆ ಸಿದ್ಧರಾಗಿದ್ದಾರಂತೆ. ಮಾಚ್‌ರ್‍ 20ರಂದು ಸಿನಿಮಾ ಅದ್ದೂರಿಯಾಗಿ ತೆರೆಗೆ ಬರಲಿದೆ ಎಂಬುದು ನಿರ್ದೇಶಕರೇ ಕೊಡುವ ಮಾಹಿತಿ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
ಕರ್ನಾಟಕ ನನ್ನ ಅಣ್ಣನ ಮನೆ.. 'ಅಖಂಡ 2'ನಲ್ಲಿ ಬಾಲಯ್ಯ ಡೈಲಾಗ್‌ಗೆ ಶಿಳ್ಳೆ-ಚಪ್ಪಾಳೆ ಜೈಜೈ ಘೋಷ!