
ತುಮಕೂರು(ಅ.05): ನನಗೆ ಒಳ್ಳೆ ಸಿನಿಮಾ ಮಾಡೋದು ಗೊತ್ತು, ಹಿಟ್ ಸಿನಿಮಾ ಮಾಡೋದು ಗೊತ್ತಿಲ್ಲ.. ಸಿನಿಮಾನ ಹಿಟ್ ಮಾಡೋದು ಜನರು, ಬರಿ ನಾವು ಒಳ್ಳೆ ಸಿನಿಮಾ ಮಾಡ್ತೀವಿ. ಈ ಸಿನಿಮಾದಲ್ಲಿ ಕಾಮಿಡಿ, ಎಂಟಟೈನ್ ಎಲ್ಲಾವು ಇದರಲ್ಲಿ ಇದೆ ಎಂದು ಚಿತ್ರ ನಿರ್ದೇಶಕ ದಿನಕರ್ ತೂಗುದೀಪ್ ಹೇಳಿದ್ದಾರೆ.
ಇಂದು(ಶನಿವಾರ) ನಗರದಲ್ಲಿ ನಡೆದ ರಾಯಲ್ ಮೂವಿ ಸಾಂಗ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ದಿನಕರ್ ತೂಗುದೀಪ್, ನೀವು ನನ್ನ ಹಾಗೂ ನಮ್ಮ ಕುಟುಂಬಕ್ಕೆ ತುಂಬಾ ಪ್ರೀತಿ ತೋರಿಸಿದ್ದೀರಿ. ದರ್ಶನ್ ಮೇಲೆ ನನ್ನ ಮೇಲೆ ನಮ್ಮ ಕುಟುಂಬದ ಮೇಲೆ ಹೀಗೆ ಇರಲಿ ಪ್ರೀತಿ. ನಿಮ್ಮ ಹಾರೈಕೆ ಪ್ರೀತಿ ಇರೋವರೆಗೂ ನಿಮ್ಮ ಡಿ.ಬಾಸ್ ಗೆ ಯಾರು ಏನು ಮಾಡೋಕ್ಕೆ ಆಗಲ್ಲ. ನಿಮ್ಮ ಜೋಶ್ ನೋಡಿದ್ರೆ ಖುಷಿಯಾಗುತ್ತಿದೆ ಎನ್ನುತ್ತಿದ್ದಂತೆ ಡಿ.ಬಾಸ್ ಡಿ.ಬಾಸ್ ಎಂದು ಘೋಷಣೆ ವಿದ್ಯಾರ್ಥಿಗಳು ಕೂಗಿದ್ದಾರೆ. ಡಿ.ಬಾಸ್ ಡಿ.ಬಾಸ್ ಘೋಷಣೆಗೆ ಜೈ ಡಿಬಾಸ್ ಎಂದ ದಿನಕರ್ ಕೂಡ ಧ್ವನಿ ಗೂಡಿಸಿದ್ದಾರೆ.
ಜಾಮೀನು ನಿರೀಕ್ಷೆಯಲ್ಲಿದ್ದ ದರ್ಶನ್‌ಗೆ ನಿರಾಸೆ, 57ನೇ ಸಿಸಿಹೆಚ್ ಕೋರ್ಟ್ ಹೇಳಿದ್ದೇನು?
ನಮ್ಮ ಫ್ಯಾಮಿಲಿ ಸದಾ ಚಿರಾಋಣಿಯಾಗಿರುತ್ತೇವೆ. ತುಂಬಾ ದಿನಗಳಿಂದ ಮಾತನಾಡಲು ಆಗಿರಲಿಲ್ಲ. ಪರಿಸ್ಥಿತಿ ಸರಿ ಇರಲಿಲ್ಲ, ಮಾತನಾಡಲು ಆಗಿರಲಿಲ್ಲ. ಈ ವೇದಿಕೆ ಉಪಯೋಗಿಸಿಕೊಂಡು ಎಲ್ಲಾ ಸೆಲೆಬ್ರಟಿಗಳಿಗೆ ದೊಡ್ಡ ನಮಸ್ಕಾರ ತಿಳಿಸುತ್ತೇನೆ. ನಮ್ಮ ಎಫರ್ಟ್ ಗೆ, ಡಿ. ಬಾಸ್ ಫ್ಯಾನ್ಸ್ ಗೆ ದೊಡ್ಡ ಥ್ಯಾಂಕ್ಯೂ. ನಾನು ಇಷ್ಟು ದಿನ ಎಲ್ಲೂ ಹೋಗಿರಲಿಲ್ಲ. ಹೋಗುವ ಪರಿಸ್ಥಿತಿಯಲ್ಲಿ ನಾವು ಇರಲಿಲ್ಲ. ಇದು ನನ್ನ ಜವಾಬ್ದಾರಿ, ನನ್ನ ನಂಬಿಕೊಂಡು ಬೋಗಣ್ಣ- ಜಯಣ್ಣ ಕೋಟಿಗಟ್ಟಲೇ ಹಣ ಹಾಕಿದ್ದಾರೆ. ಪ್ರಮೋಟ್ ಮಾಡಲು ಬರಲೇ ಬೇಕಿತ್ತು. ನನ್ನ ಸಪೋರ್ಟ್ ಮಾಡಿದ ತಂಡಕ್ಕೆ ಧನ್ಯವಾದಗಳು ಎಂದು ನಿರ್ದೇಶಕ ದಿನಕರ್ ತೂಗದೀಪ್ ತಿಳಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.