
ಸ್ಯಾಂಡಲ್‌ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಇರುವ ಕಾರಣ ಯಾವುದೇ ವಿಶೇಷ ಸಂದರ್ಭವಿದ್ದರೂ, ಫೋಟೋ ಹಂಚಿಕೊಂಡು, ಅಭಿಮಾನಿಗಳಿಗೆ ಸ್ಪೆಷಲ್ ವಿಶ್ ಮಾಡುತ್ತಾರೆ. ಇದೀಗ ಫಾದರ್ಸ್‌ಗೆ ವಿಶ್ ಮಾಡಿರುವ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ.
'ಯಶ್ ಗ್ರೇಟ್ ಬಾಯ್‌ಫ್ರೆಂಡ್, ಬೆಟರ್ ಹಸ್ಬೆಂಡ್. ನಾನು ನೋಡುವ ಪ್ರಕಾರ ಬೆಸ್ಟ್ ವರ್ಶನ್ ಆಫ್ ಅಪ್ಪ ಆಗಿದ್ದಾರೆ. ಐರಾ, ಯಥರ್ವ್ ಮತ್ತು ಮಮ್ಮಾ (ನಾನು), ಡಾಡಾ (ಯಶ್) ಲವ್ ಯು. ಎಲ್ಲರಿಗೂ ಫಾದರ್ಸ್ ಡೇ ಶುಭಾಶಯಗಳು,' ಎಂದು ರಾಧಿಕಾ ಬರೆದುಕೊಂಡಿದ್ದಾರೆ.
ಪುತ್ರನಿಗೆ ಉಗುರು ಕತ್ತರಿಸಿದ ರಾಧಿಕಾ ಪಂಡಿತ್; ಇದೊಂದು ಟ್ರೆಡಿಷನ್ ಆಗಿದೆ ಎಂದ ನಟಿ!
ರಾಧಿಕಾ ಹಂಚಿಕೊಂಡಿರುವ ಮೂರು ಫೋಟೋಗಳಲ್ಲಿ ಒಂದು ಐರಾ ಪುಟ್ಟ ಹುಡುಗಿ ಇದ್ದಾಗ ಮಾಡಿದ ಕೇಕ್ ಸ್ಮ್ಯಾಷ್, ಯಥರ್ವ್ ತಂದೆ ಮಡಿಲಿನಲ್ಲಿ ಕುಳಿತಿರುವುದು ಮತ್ತೊಂದು ಇಬ್ಬರೂ ಮಕ್ಕಳನ್ನು ಯಶ್ ಎತ್ತಿಕೊಂಡಿರುವುದು. ಫೋಟೋ ಸೂಪರ್ ಆಗಿದೆ ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ನಮಗೂ ಯಶ್ ನಂತೆ ಬಾಯ್‌ಫ್ರೆಂಡ್ ಬೇಕು ಎಂದು ಕಾಮೆಂಟ್ ಮಾಡಿದ್ದಾರೆ.
ರಾಧಿಕಾ ಕೂಡ ತಂದೆ ಜೊತೆಗಿರುವ ಫೋಟೋವನ್ನು ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.