ಕಡಲ ತೀರದಲ್ಲಿ ಕಲರ್​ಫುಲ್​ ಓಕುಳಿಯಾಟವಾಡಿದ ನಟಿ ರಾಧಿಕಾ ಕುಮಾರಸ್ವಾಮಿ

By Suvarna News  |  First Published Mar 26, 2024, 12:08 PM IST

ಹೋಳಿ ಹಬ್ಬದ ನಿಮಿತ್ತ ನಟಿ ರಾಧಿಕಾ ಕುಮಾರಸ್ವಾಮಿ ಅವರು ನದಿತೀರದಲ್ಲಿ ಹೋಳಿ ಹಬ್ಬ ಆಚರಿಸಿದ್ದು, ಅದರ ವಿಡಿಯೋ ಶೇರ್​ ಮಾಡಿದ್ದಾರೆ. ನೆಟ್ಟಿಗರು ಏನೆಲ್ಲಾ ಹೇಳಿದ್ರು ನೋಡಿ...
 


ಸ್ಯಾಂಡಲ್‌ವುಡ್‌ನ ಸ್ವೀಟಿ ಎಂದೇ ಕರೆಸಿಕೊಳ್ಳುತ್ತಿರುವ ರಾಧಿಕಾ ಕುಮಾರಸ್ವಾಮಿ ಕೆಲ ಕಾಲ ಸಿನಿಮಾದಿಂದ ದೂರವಿದ್ದರು. 2 ದಶಕಗಳಿಂದ ಚಿತ್ರರಂಗದಲ್ಲಿರುವ ನಟಿ ರಾಧಿಕಾ ಕುಮಾರಸ್ವಾಮಿ, ಆಗಾಗ ಶಾರ್ಟ್ ಬ್ರೇಕ್​ ತೆಗೆದುಕೊಂಡಿದ್ರು. ಅಲ್ಲೊಂದು, ಇಲ್ಲೊಂದು ಸಿನಿಮಾ ಮಾಡ್ತಾ ಸುದ್ದಿಯಲ್ಲಿದ್ದಾರೆ. ಆಗಾಗ ಸೋಶಿಯಲ್ ಮೀಡಿಯಾದಲ್ಲೂ ಸದ್ದು ಮಾಡುತ್ತಿರುತ್ತಾರೆ. ವಯಸ್ಸು 37 ಆದರೂ, 14 ವರ್ಷದ ಮಗಳು ಶಮಿಕಾಳ ಅಮ್ಮನಾದರೂ ರಾಧಿಕಾ ಅವರ  ಬ್ಯೂಟಿ ಇಂದೂ ಕುಂದಿಲ್ಲ. ಮಗುವಾದ ಮೇಲೆ ಇನ್ನಷ್ಟು ಹಾಟ್​ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸ್ವಲ್ಪ ವರ್ಷ ಬ್ರೇಕ್​ ತೆಗೆದುಕೊಂಡಿದ್ದ ನಟಿ, ಮತ್ತೆ ಕಮ್​ಬ್ಯಾಕ್​ ಆಗಿದ್ದಾರೆ. ಇವರು ನಟಿಸುತ್ತಿರುವ ಎರಡು ಸಿನಿಮಾಗಳು ರಿಲೀಸ್ ಆಗಬೇಕಿದೆ. 'ಭೈರಾದೇವಿ' ಸಿನಿಮಾದಲ್ಲಿ ನಟಿಸಿದ್ದು ಅದು ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಇನ್ನೊಂದು ಸಿನಿಮಾ 'ಅಜಾಗ್ರತಾ' ಪ್ಯಾನ್ ಇಂಡಿಯಾ ಮಟ್ಟದಲ್ಲಿ ರೆಡಿಯಾಗುತ್ತಿದೆ. ಏಳು ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ ಎಂದು ಮುಹೂರ್ತ ಸಂದರ್ಭದಲ್ಲಿ ತಿಳಿಸಲಾಗಿದ್ದು,  ಈ ಸಿನಿಮಾ ಕೂಡ ಶೂಟಿಂಗ್ ಹಂತದಲ್ಲಿದೆ.

ಇಂತಿಪ್ಪ ರಾಧಿಕಾ ಸೋಷಿಯಲ್​ ಮೀಡಿಯಾದಲ್ಲಿ ಕಾಣಿಸಿಕೊಳ್ಳುವುದು ಅಪರೂಪವೇ. ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾ ಪ್ರಾಣಪ್ರತಿಷ್ಠೆ ಸಂದರ್ಭದಲ್ಲಿ, ಅದ್ಭುತ ಡ್ಯಾನ್ಸ್​ ಮಾಡಿ ನಟಿ ಗಮನ ಸೆಳೆದಿದ್ದರು. ಇದೇ ರೀತಿ  ಹಬ್ಬಗಳ ಸಮಯದಲ್ಲಿ ಕಾಣಿಸಿಕೊಳ್ಳುತ್ತಾರೆ. ಇದೀಗ  ಹೋಳಿ ಹಬ್ಬದ ಸಂಭ್ರಮದ ಬಗ್ಗೆ ನಟಿ ಸೋಷಿಯಲ್​ ಮೀಡಿಯಾದಲ್ಲಿ ಬಣ್ಣದೋಕುಳಿಯ ವಿಡಿಯೋ ಶೇರ್​ ಮಾಡಿದ್ದಾರೆ.   ಕಡಲ ತೀರದಲ್ಲಿ ರಾಧಿಕಾ ಕುಮಾರಸ್ವಾಮಿ ಹೋಳಿ ಹಬ್ಬವನ್ನು ಆಚರಿಸಿದ್ದಾರೆ. ಹೋಳಿಯ ಜೊತೆ ಡ್ಯಾನ್ಸ್​ ಕೂಡ ಮಾಡಿದ್ದು, ಅಭಿಮಾನಿಗಳ ಕಣ್ಣಿಗೆ ತಂಪು ನೀಡಿದ್ದಾರೆ.  ಬಿಳಿ ಬಣ್ಣದ  ಚೂಡಿದಾರ ಧರಿಸಿ ಹೋಳಿ ಆಡುತ್ತಿರುವ ನಟಿಗೆ ಹೋಳಿಯ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.

Tap to resize

Latest Videos

ಕೋತಿಗಳ ಮದ್ವೆ ಫೋಟೋ ಶೇರ್​ ಮಾಡಿದ ರಾಖಿ ಸಾವಂತ್​: ನಟಿ ಪ್ರಕಾರ ಇವರು ಯಾರು ಗೊತ್ತಾ?

ಹಲವು ನೆಟ್ಟಿಗರು ಹಾರ್ಟ್​ ಇಮೋಜಿ ಹಾಕಿದ್ರೆ, ಇನ್ನು ಕೆಲವರು ಈ ಬೀಚ್​ ಯಾವುದು ಇರಬಹುದು ಎಂಬ ಬಗ್ಗೆ ಚರ್ಚಿಸುತ್ತಿದ್ದಾರೆ.  ಕೆಲವರು ನೀವು ದುಬೈನಲ್ಲಿ ಹೋಗಿ ಹೋಳಿ ಆಡಿದ್ದು ನಿಜನಾ ಎಂದಿದ್ದರೆ, ಕರಿಮಣಿ ಮಾಲೀಕನಿಗೆ ಬಣ್ಣ ಹಚ್ಚಿದ್ರಾ, ಅಣ್ಣಂಗೂ ಸ್ವಲ್ಪ ಬಣ್ಣ ಹಚ್ಚಿ ಅಕ್ಕಾ ಎಂದೆಲ್ಲಾ ನಟಿಗೆ ಹೇಳುತ್ತಿದ್ದಾರೆ. ಇನ್ನು ಕೆಲವರು ನಟಿಯ ಕಾಲೆಳೆಯುತ್ತಿದ್ದಾರೆ. ನಟಿಗೆ ಎದುರುಗಡೆಯಿಂದ ಬಣ್ಣದ ಓಕುಳಿ ಎರಚಲಾಗಿದ್ದು, ಎದುರಿಗೆ ಇದ್ದವರು ಯಾರು ಎಂದು ಅಭಿಮಾನಿಗಳುಪ್ರಶ್ನಿಸುತ್ತಿದ್ದಾರೆ.  ಅಂದಹಾಗೆ ನಟಿಯ  ಪರ್ಸನಲ್ ಲೈಫ್ ಹಾಗೂ ಪ್ರೊಪೆಷನಲ್ ಲೈಫ್ ಎರಡೂ ತುಂಬಾ ಕುತೂಹಲಕಾರಿಯಾಗಿದ್ದು, ಇವರ ಬಗ್ಗೆ ಕೆಲವು ಮಾಹಿತಿಗಳೂ ಇತ್ತೀಚೆಗೆ ಹೊರಬಂದಿದ್ದವು. ಅದೇನೆಂದರೆ, ತಮ್ಮ 14ನೇ ವಯಸ್ಸಿಗೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು ರಾಧಿಕಾ ‘ ಎನ್ನಲಾಗಿದೆ. ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ತುಳು ಮೂಲದ ರತನ್ ಕುಮಾರ್ ಎಂಬವರೊಂದಿಗೆ ರಾಧಿಕಾ ಮದುವೆಯಾಗಿತ್ತಂತೆ. 26 ನವೆಂಬರ್ 2000ದಲ್ಲಿ ಮಂಗಳೂರಿನ ದೇವಸ್ಥಾನದಲ್ಲಿ ಮದುವೆಯಾಗಿದ್ದರು ಎನ್ನಲಾಗಿದೆ. ಆದರೆ, ಮದುವೆ ಬಳಿಕ ಒಂದೂವರೆ ವರ್ಷದಲ್ಲೇ ಗಂಡ ಅಪಘಾತದಲ್ಲಿ ನಿಧನರಾದರಂತೆ. 

ಅತ್ತೆ ಮನೆಯಲ್ಲಿ ಬಹಳಷ್ಟು ಸಂಕಟ, ನೋವು ಹಾಗೂ ಹಿಂಸೆಯನ್ನು ಅನುಭವಿಸಿದ ರಾಧಿಕಾ ಜೀವನದಲ್ಲಿ ಏನಾದ್ರೂ ಸಾಧನೆ ಮಾಡಬೇಕು ಎಂದು ಯೋಚನೆ ಮಾಡಿದರಂತೆ. ಅದರಂತೆ ತಮ್ಮ ಜೀವನದ ದಿಕ್ಕನ್ನೇ ಬದಲಾಯಿಸಿದ ಅವರು ಸಿನಿಮಾರಂಗದ ಕಡೆಗೆ ಮುಖ ಮಾಡಿದರಂತೆ. ಅವರ ಮೊದಲ ಸಿನಿಮಾ ಸೃಜನ್ ಲೋಕೇಶ್ ನಾಯಕತ್ವದ 'ನೀಲ ಮೇಘ ಶ್ಯಾಮ'. ಆದರೆ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದ್ದ ನಟ ವಿಜಯರಾಘವೇಂದ್ರ ಜತೆಗಿನ 'ನಿನಗಾಗಿ' ಸಿನಿಮಾ. ಈ ಸಿನಿಮಾದ ಬಳಿಕ ನಟಿ ರಾಧಿಕಾ ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿ ಮುಂದುವರೆದರು. ಸಿನಿಮಾರಂಗದಲ್ಲಿ ನಿರ್ಮಾಪಕರಾಗಿ ಕ್ರಿಯಾಶೀಲರಾಗಿದ್ದ ರಾಜ್ಯದ ಪ್ರತಿಷ್ಠಿತ ರಾಜಕಾರಣಿಯೊಬ್ಬರು ರಾಧಿಕಾ ಅಪ್ಪ ದೇವರಾಜ್ ಸೇರಿದಂತೆ ಇಡೀ ಫ್ಯಾಮಿಲಿಗೆ ಪರಿಚಯವಾಗಿದ್ದರು. ಬಳಿಕ ಹಲವು ವರ್ಷಗಳಲ್ಲಿ ರಾಧಿಕಾ ಅವರೊಟ್ಟಿಗೆ ಮದುವೆಯೂ ಆದರು. ಆದರೆ, 2010ರವರೆಗೆ ಎಲ್ಲೂ ತಮ್ಮಿಬ್ಬರ ಮದುವೆ ಬಗ್ಗೆ ಅಧಿಕೃತವಾಗಿ ರಾಧಿಕಾ ಆಗಲೀ ಆ ರಾಜಕಾರಣಿಯಾಗಲಿ ಹೇಳಿರಲಿಲ್ಲ. ಬಳಿಕ ನಟಿ ರಾಧಿಕಾ ಅವರೇ ಬಹಿರಂಗವಾಗಿ ತಾವು 2006ರಲ್ಲಿ ರಾಜಕೀಯ ಮುಖಂಡನನ್ನು ಮದುವೆಯಾಗಿರುವುದಾಗಿ ಹೇಳಿಕೊಂಡಿದ್ದಾರೆ. ತಮ್ಮಿಬ್ಬರ ದಾಂಪತ್ಯದ ಫಲವಾಗಿ ನಮಗೆ 'ಶಮಿಕಾ' ಎಂಬ ಮಗಳಿದ್ದಾಳೆ ಎಂದೂ ಸಹ ರಾಧಿಕಾ ಹೇಳಿಕೊಂಡಿದ್ದಾರೆ.  

ಸವತಿ ರಾಜಿಗೇ ಮೇಕಪ್​ ಮಾಡೋದಾ ಪುಟ್ಟಕ್ಕ? ವಿಡಿಯೋ ನೋಡಿ ಹುಷಾರ್​ ಕಣವ್ವೋ ಎಂದ ಅಭಿಮಾನಿಗಳು!

click me!