ಕೂಲಿ ಚಿತ್ರದಲ್ಲಿ ಬುಲ್ ಬುಲ್ ಕಮಾಲ್. ಕನ್ನಡದ ಸ್ಟಾರ್ ನಟರನ್ನು ಬಿಟ್ಟು ತಲೈವಾ ಜೊತೆ ನಟಿಸಲು ಮುಂದಾದ ರಚ್ಚು.....
ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ರಜಿನಿಕಾಂತ್ ವರ್ಷ ವರ್ಷ ಹೊಸ ಸಿನಿಮಾ ಪ್ರಾಜೆಕ್ಟ್ ಅನೌನ್ಸ್ ಮಾಡುತ್ತಿದ್ದಂತೆ ಸಿನಿ ರಸಿಕರ ನಿರೀಕ್ಷೆ ಹೆಚ್ಚಾಗುತ್ತದೆ. ರಜಿನಿಕಾಂತ್ ಜೊತೆ ಒಂದು ಸಲ ಮಾತನಾಡಬೇಕು, ಒಂದು ಸೆಲ್ಫಿ ತೆಗೆದುಕೊಳ್ಳಬೇಕು ಅನ್ನೋ ಪ್ರತಿಯೊಬ್ಬರ ಆಸೆ. ಹೀಗಿರುವಾಗ ಅವಕಾಶ ಮನೆ ಬಾಗಿಲಿಗೆ ಬಂದಾಗ ಯಾರಾದರೂ ಬಿಡುತ್ತಾರಾ? ರಜಿನಿ ಜೊತೆ ಸಿನಿಮಾದಲ್ಲಿ ಸಣ್ಣ ಪಾತ್ರವಾದರೂ ಸಿಗಲಿ ಎಂದು ಅನೇಕರು ಕಾಯುತ್ತಿರುತ್ತಾರೆ. ಇನ್ನು ರಚಿತಾ ರಾಮ್ ಆಫರ್ ರಿಜೆಕ್ಟ್ ಮಾಡ್ತಾರಾ?
ಕನ್ನಡ ಚಿತ್ರರಂಗದ ಬುಲ್ ಬುಲ್, ಡಿಂಪಲ್ ಕ್ವೀನ್ ರಚಿತಾ ರಾಮ್‌ಗೆ ಕೂಲಿ ಚಿತ್ರದಲ್ಲಿ ನಟಿಸಲು ಅವಕಾಶ ಸಿಕ್ಕಿದೆ ಎನ್ನಲಾಗಿದೆ. ಬೆಂಗಳೂರಿನಿಂದ ಚೆನ್ನೈಗೆ ರಚಿತಾ ರಾಮ್ ಪ್ರಯಾಣ ಮಾಡುತ್ತಿದ್ದಾರೆ ಅಲ್ಲದೆ ಒಂದು ರೌಂಡ್ ನಿರ್ದೇಶಕ ಲೋಕೇಶ್ ಕನಕರಾಜ್ ಜೊತೆ ಮಾತುಕತೆ ಅಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಗಾಸಿಪ್ ನಿಜವಾದರೆ ರಚಿತಾ ರಾಮ್ ಬಂಪರ್ ಲಾಟರಿ ಹೊಡೆದಿದ್ದಾರೆ ಎನ್ನಬಹುದು. ಕೂಲಿ ಸಿನಿಮಾದಲ್ಲಿ ನಟಿಸಲು ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಆಫರ್ ಬಂದಾಗ ಬಾಚಿಕೊಂಡರು. ಇನ್ನು ಕೂಲಿ ಸಿನಿಮಾದಲ್ಲಿ ಕನ್ನಡದವರು ಯಾರು ಯಾರಿದ್ದಾರೆ, ಯಾರು ಸೇರಿಕೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ.
ಅಶ್ವಿನಿ ಪುನೀತ್‌ಗೆ ಅವಮಾನ ಮಾಡಿದ ಕಿಡಿಗೇಡಿ; ಮು** ಎಂದವನನ್ನು ತರಾಟೆಗೆ ತೆಗೆದುಕೊಂಡ ನೆಟ್ಟಿಗರು!
ಸನ್ ಪಿಕ್ಚರ್ ನಿರ್ಮಾಣ ಮಾಡುತ್ತಿರುವ ಕೂಲಿ ಸಿನಿಮಾವನ್ನು ಲೋಕೇಶ್ ನಿರ್ದೇಶನ ಮಾಡುತ್ತಿದ್ದಾರೆ. ಇದೊಂದು ಆಕ್ಷನ್ ಥ್ರಿಲರ್ ಸಿನಿಮಾ ಆಗಿದ್ದು ರಜಿನಿಕಾಂತ್ ಜೊತೆ ಸತ್ಯರಾಜ್, ಶ್ರುತಿ ಹಾಸನ್, ಮಹೇಂದ್ರ ಮತ್ತು ಉಪೇಂದ್ರ ನಟಿಸುವುದು ಕನ್ಫರ್ಮ್ ಆಗಿದೆ. ಈ ಚಿತ್ರಕ್ಕೆ ಅನಿರುದ್ಧ್ ರವಿಚಂದ್ರನ್ ಮೂಸಿಕ್ ಕಂಪೋಸ್ ಮಾಡುತ್ತಿದ್ದಾರೆ. ರಜಿನಿಕಾಂತ್ ಮತ್ತು ಅನಿರುದ್ಧ್ ಒಟ್ಟಿಗೆ 5ನೇ ಸಲ ಕೆಲಸ ಮಾಡುತ್ತಿರುವುದು. 2025ರಲ್ಲಿ ರಿಲೀಸ್ ಆಗಲಿರುವ ಕೂಲಿ ಸಿನಿಮಾ ಓಟಿಟಿ ರೈಟ್ಸ್‌ನ ಅಮೇಜಾನ್ ಪ್ರೈಂ ವಿಡಿಯೋ ಖರೀದಿಸಿದ್ದಾರೆ ಹಾಗೂ ಸ್ಯಾಟಿಲೈಟ್ ರೈಟ್ಸ್‌ನ ಸನ್ ಟಿವಿ ಖರೀದಿಸಿದ್ದಾರೆ.
ತರುಣ್ - ಸೋನಲ್ ಫಸ್ಟ್ ನೈಟ್ ಆಯ್ತಾ?; ಹನಿಮೂನ್ ಕೇಳಿದ್ರೆ ಬಜೆಟ್ ಲೆಕ್ಕಾಚಾರವಿದೆ ಅಂದಿದ್ಯಾಕೆ?