ಚಿತ್ರರಂಗದ 7 ವರ್ಷದ ಜರ್ನಿ ನೆನೆದು ಡಿಂಪಲ್ ಕ್ವೀನ್ ಭಾವುಕ; ಎಮೋಷನಲ್ ಸಂದೇಶವಿದು!

By Suvarna NewsFirst Published May 12, 2020, 3:20 PM IST
Highlights

ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ ಇಂದಿಗೆ 7 ವರ್ಷ ಪೂರೈಸಿದ ರಚ್ಚು ಭಾವುಕ ಪೋಸ್ಟ್‌.... 

ಸ್ಯಾಂಡಲ್‌ವುಡ್‌ ಡಿಂಪಲ್‌ ಹುಡುಗಿ ರಚಿತಾ ರಾಮ್‌ ಸಿನಿ ಪ್ರೇಮಿಗಳ ನೆಚ್ಚಿನ 'ಬುಲ್ ಬುಲ್'. ತೂಗುದೀಪ್‌ ಬ್ಯಾನರ್‌ ಮುಖಾಂತರ  ಚಾಲೆಂಜಿಂಗ್‌ ದರ್ಶನ್‌ಗೆ ಜೋಡಿಯಾಗಿ ಕಾವೇರಿ ಪಾತ್ರದ ಮೂಲಕ  ಕನ್ನಡ ಚಿತ್ರರಂಗದಲ್ಲಿ  ಬುಲ್ ಬುಲ್ ಅಲಿಯಾಸ್‌ ರಚಿತಾ ರಾಮ್‌ 7 ವರ್ಷ ಪೂರೈಸಿದ್ದಾರೆ. ಈ ಬಗ್ಗೆ ಎಮೋಷನಲ್‌ ಪೋಸ್ಟ್‌ವೊಂದನ್ನು ಬರೆದಿದ್ದಾರೆ.

ರಚ್ಚು ಪೋಸ್ಟ್‌: 

'ನನ್ನ ಈ ಕಲಾ ಬದುಕಿಗೆ 7 ವರ್ಷಗಳು ತುಂಬಿದೆ ಅಂದ್ರೆ ನಂಬಕ್ಕೇ ಆಗ್ತಿಲ್ಲ..ನನ್ನನ್ನ ಸಿನಿಮಾ ರಂಗಕ್ಕೆ ಪರಿಚಯ ಮಾಡಿಸಿದ ತೂಗುದೀಪ ಪ್ರೊಡಕ್ಷನ್ಸ್‌ಗೆ ಸದಾ ಚಿರಋಣಿಯಾಗಿರ್ತೀನಿ. ಬುಲ್ ಬುಲ್‌ನಿಂದ ಬೆಳ್ಳಿತೆರೆಗೆ ಇಟ್ಟ ಹೆಜ್ಜೆ ಇಂದಿಗೂ ಮಾಸಿಲ್ಲ ಇದಕ್ಕೆ ಕಾರಣ ನನ್ನ ತಂದೆ ತಾಯಿಯ ನಂಬಿಕೆ, ದೇವರ ಅನುಗ್ರಹ ಹಾಗೂ ನನ್ನ ಪ್ರೀತಿಯ ಅಭಿಮಾನಿಗಳ ಆರ್ಶೀವಾದ . ಈ ಪಯಣದಲ್ಲಿ ಕಲಿತ ಪಾಠಗಳು, ಅರಿತ ಮನಸುಗಳು, ಪ್ರತಿಯೊಂದು ಸಿನಿಮಾ ನೆನಪುಗಳ ನೆನೆಸಿಕೊಂಡ್ರೆ ಕಣ್ತುಂಬಿ ಬರುತ್ತೆ. ನನ್ನ  ಸಿನಿ ಬದುಕಿನ ಮಾರ್ಗದರ್ಶಿಗಳಿಗೆ  ಕೃತಜ್ಞತೆಗಳನ್ನು ಸಲ್ಲಿಸ್ತೀನಿ. ನಿಮ್ಮೆಲ್ಲರ ಪ್ರೀತಿ ಬೆಂಬಲ ಸದಾ  ನನ್ನ ಮೇಲೆ ಹೀಗೆ ಇರಲಿ. ನಿಮ್ಮ ರಚಿತಾರಾಮ್ ' ಎಂದು  ಬುಲ್ ಬುಲ್‌ 100 ದಿನಗಳ ಹಿಟ್‌ ಪೋಸ್ಟ್‌ ಜೊತೆ ಬರೆದುಕೊಂಡಿದ್ದಾರೆ.

 

 
 
 
 
 
 
 
 
 
 
 
 
 

ನನ್ನ ಈ ಕಲಾ ಬದುಕಿಗೆ 7ವರ್ಷಗಳು ತುಂಬಿದೆ ಅಂದ್ರೇ ನಂಬಕ್ಕೇ ಆಗ್ತಿಲ್ಲ...ನನ್ನನ್ನ ಸಿನಿಮಾ ರಂಗಕ್ಕೆ ಪರಿಚಯ ಮಾಡಿಸಿದ ತೂಗುದೀಪ ಪ್ರೊಡಕ್ಷನ್ಸ್'ಗೆ ಸದಾ ಚಿರಋಣಿಯಾಗಿರ್ತೀನಿ🙏 ಬುಲ್ ಬುಲ್'ನಿಂದ ಬೆಳ್ಳಿತೆರೆಗೆ ಇಟ್ಟ ಹೆಜ್ಜೆ ಇಂದಿಗೂ ಮಾಸಿಲ್ಲ ಇದಕ್ಕೆ ಕಾರಣ ನನ್ನ ತಂದೆ ತಾಯಿಯ ನಂಬಿಕೆ, ದೇವರ ಅನುಗ್ರಹ ಹಾಗೂ ನನ್ನ ಪ್ರೀತಿಯ ಅಭಿಮಾನಿಗಳ ಆಶೀರ್ವಾದ. ಈ ಪಯಣದಲ್ಲಿ ಕಲಿತ ಪಾಠಗಳು, ಅರಿತ ಮನಸುಗಳು, ಪ್ರತಿಯೊಂದು ಸಿನಿಮಾದ ನೆನಪುಗಳು ನೆನೆಸಿಕೊಂಡ್ರೆ ಕಣ್ತುಂಬಿ ಬರುತ್ತೆ. ನನ್ನ ಸಿನಿ ಬದುಕಿನಲ್ಲಿ ನನಗೆ ಮಾರ್ಗದರ್ಶಿಗಳಾಗಿ ನಿಂತ ಪ್ರತಿಯೊಬ್ಬರಿಗೂ ತುಂಬು ಹೃದಯದ ಕೃತಜ್ಞತೆಗಳನ್ನ ಸಲ್ಲಿಸ್ತೀನಿ🙏 ನಿಮ್ಮೆಲ್ಲರ ಪ್ರೀತಿ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ.🙏 ನಿಮ್ಮ, ರಚಿತರಾಮ್

A post shared by Rachita Ram (@rachita_instaofficial) on May 11, 2020 at 1:27am PDT

ರಚಿತಾ ರಾಮ್‌ ಬ್ಯಾಕ್‌ಗ್ರೌಂಡ್:

ರಚಿತಾ ರಾಮ್‌ ಚಿತ್ರರಂಗಕ್ಕೆ ಪದಾರ್ಪಣೆ ಮಾಡುವ ಮೊದಲು ಬಿಂದ್ಯಾ ರಾಮ್ ಎಂದು ಹೆಸರಿಟ್ಟಿಕೊಂಡಿದ್ರು. ಚಿತ್ರರಂಗಕ್ಕೆ 'ರ' ಎನ್ನುವ ಅಕ್ಷರ ಸಿಕ್ಕಾಪಟ್ಟೆ ಲಕ್ಕಿ ಎಂದು ಬ್ಯಾನರ್‌ನಿಂದಾಗಿ ಹೆಸರು ಬದಲಾಯಿಸಿಕೊಂಡರು.  ರಚಿತಾ ರಾಮ್‌ ತಂದೆ ನೃತ್ಯ ಶಿಕ್ಷಕ, ಅಕ್ಕ ನಿತ್ಯಾ ರಾಮ್‌ ಕಿರುತೆರೆ ಕಲಾವಿದೆ. ತಂದೆಯ ಬಳಿಯೇ ಇಬ್ಬರು ಹೆಣ್ಣು ಮಕ್ಕಳು ನೃತ್ಯ ಕಲಿತರು. 

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಅರಸಿ' ಧಾರಾವಾಹಿ ಮೂಲಕ ಕಿರುತೆರೆ ಕಾಲಿಟ್ಟರು. 2012ರಲ್ಲಿ 200 ಹೆಣ್ಣುಮಕ್ಕಳ ಪೈಕಿ ಬುಲ್ ಬುಲ್‌ಗೆ ಆಡಿಷನ್‌ ನೀಡಿ ರಚ್ಚು ಸೆಲೆಕ್ಟ್‌ ಆದರು. ಅಲ್ಲಿಂದ ಶುರುವಾದ ಜರ್ನಿ ಇಂದಿಗೂ ಕಲರ್‌ಫುಲ್‌ ಆಗಿದೆ....

ಕಿರುತೆರೆ ನಂಟು:

ಕಿರುತೆರೆಯಿಂದ ಚಿತ್ರರಂಗಕ್ಕೆ ಕಾಲಿಟ್ಟ ರಚ್ಚು ಈಗಲೂ  ಕಿರುತೆರೆ ನಂಟು ಬಿಟ್ಕೊಟ್ಟಿಲ್ಲ. ಅವಾರ್ಡ್‌ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾ ಕಾಮಿಡಿ ರಿಯಾಲಿಟಿ ಶೋ 'ಮಜಾಭಾರತ' ತೀರ್ಪುಗಾರ್ತಿಯಾಗಿ ಮಿಂಚುತ್ತಿದ್ದಾರೆ.  ರಚಿತಾ ಡ್ರೆಸಿಂಗ್ ಸ್ಟೈಲ್‌ ಹಾಗೂ ಸ್ಮೈಲ್‌ ನೋಡಲೆಂದು  ವೀಕ್ಷಕರು ಮಿಸ್‌ ಮಾಡದೆ ಶೋ ನೋಡುತ್ತಾರೆ.

ಲಾಕ್‌ಡೌನ್‌ನಲ್ಲಿ ರಚ್ಚು ಮಿಸ್ಸಿಂಗ್:

ಕೊರೋನಾ ವೈರಲ್‌ ಲಾಕ್‌ಡೌನ್‌ನಿಂದ ಸಿನಿಮಾ ಹಾಗೂ ರಿಯಾಲಿಟಿ ಶೋ ಚಿತ್ರೀಕರಣ ರದ್ದಾಗಿರುವುದರಿಂದ  ಮನೆ ಫ್ಯಾಮಿಲಿ ಜೊತೆ ಟೈಮ್ ಕಳೆಯುತ್ತಿರುವ ರಚ್ಚು ಯಾವ ಸೋಷಿಯಲ್‌ ಮೀಡಿಯಾದಲ್ಲೂ ಕಾಣಿಸಿಕೊಳ್ಳುತ್ತಿಲ್ಲ ಯಾವುದೇ ಪೋಸ್ಟ್ ಹಾಕಿಲ್ಲ. ಆದರೆ ಅಮ್ಮಂದಿರ ದಿನಾಚರಣೆಂದು ವಿಶ್‌ ಮಾಡಿ ಆ ನಂತರ ಬುಲ್ ಬುಲ್‌ ಸಿನಿಮಾ ಬಗ್ಗೆ ಬರೆದುಕೊಂಡಿದ್ದಾರೆ ಅಷ್ಟೆ.

 

ರಚ್ಚು ನೆಕ್ಸ್‌ ಸಿನಿಮಾ:

7 ವರ್ಷ ಪಯಣದಲ್ಲಿ 20 ಸಿನಿಮಾಗಳಲ್ಲಿ ಮಿಂಚಿರುವ  ರಚಿತಾ ರಾಮ್‌ ಕೈಯಲ್ಲಿ ಈಗ ಅನೇಕ ಚಿತ್ರಗಳು ತುಂಬಿವೇ, ಲಾಕ್‌ಡೌನ್‌ ಫ್ರೀ ಆದ ತಕ್ಷಣವೇ ಚಿತ್ರೀಕರಣ ಆರಂಭಿಸುತ್ತಾರೆ.

ರಚಿತಾ ಕೈಗೆ ಸಿಗರೇಟ್, ರಕ್ಷಿತಾ ಕೈಗೆ ಎಣ್ಣೆ ಬಾಟ್ಲಿ, ಫ್ಯಾನ್ಸ್‌ ಕೈಯಲ್ಲಿ ಪ್ರೇಮ್!

ಜೋಗಿ ಪ್ರೇಮ್‌ ನಿರ್ದೇಶನ ಹಾಗೂ ರಾಣಾ ಅಭಿನಯದ 'ಏಕ್‌ ಲವ್‌ ಯಾ' ಸಿನಿಮಾ ಸದ್ಯಕ್ಕೆ ಪೋಸ್ಟ್‌ ಪ್ರೊಡಕ್ಷನ್‌ ಕೆಲಸದಲ್ಲಿ ಬ್ಯುಸಿಯಾಗಿದೆ. ರಮೇಶ್‌ ಅರವಿಂದ್  ಅವರ ಜೊತೆ '100' ಎಂಬ  ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಟಾಲಿವುಡ್‌ನ 'ಸೂಪರ್‌ ಮಚಿ' ಸಿನಿಮಾದಲ್ಲೂ ಅಭಿನಯಿಸುತ್ತಿದ್ದಾರೆ...ಇಷ್ಟೆಲ್ಲಾ  ಅನೇಕ ಸಿನಿಮಾಗಳನ್ನು ಲೈನ್‌ ಅಪ್‌ ಮಾಡಿಕೊಂಡಿರುವ ರಚ್ಚು ಸದ್ಯಕ್ಕೆ  ರಿಲ್ಯಾಕ್ಸ್‌ ಮಾಡಿಕೊಳ್ಳುತ್ತಿದ್ದಾರೆ.

click me!