ಸಿನಿಮಾ ಬಿಟ್ಟು ಶಾಲೆ ಮೆಟ್ಟಿಲೇರಿದ ಪ್ರಣಿತಾ!

Published : Mar 24, 2019, 08:59 AM IST
ಸಿನಿಮಾ ಬಿಟ್ಟು ಶಾಲೆ ಮೆಟ್ಟಿಲೇರಿದ ಪ್ರಣಿತಾ!

ಸಾರಾಂಶ

ನಟಿ ಪ್ರಣಿತಾ ಸುಭಾಷ್ ಶಾಲೆಯಲ್ಲಿ ಪ್ರತ್ಯಕ್ಷ | ಮಾಸ್ ಲೀಡರ್ ಸಿನಿಮಾದ ನಂತರ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ | ಹಾಸನದ ಶಾಲೆಯೊಂದರಲ್ಲಿ ಹೋಳಿ ಹಬ್ಬವನ್ನು ಆಚರಿಸಿಕೊಂಡಿದ್ದಾರೆ 

ಬೆಂಗಳೂರು (ಮಾ. 24): ಮಾಸ್ ಲೀಡರ್ ಚಿತ್ರದ ನಂತರ ಪ್ರಣಿತಾ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಎಲ್ಲಿ ಹೋದರು ಎಂದು ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದರು. ಇದೀಗ ಇದ್ದಕ್ಕಿದ್ದಂತೆ ಪ್ರತ್ಯಕ್ಷರಾಗಿದ್ದಾರೆ. ಅದು ಶಾಲೆಯೊಂದರಲ್ಲಿ. ಅರೇ! ಇದೇನಿದು! ಸಿನಿಮಾ ಬಿಟ್ಟು ಶಾಲೆ ಸೇರಿದ್ರಾ ಎಂದು ಹುಬ್ಬೇರಿಸಬೇಡಿ. ಪ್ರಣಿತಾ ಒಂದೊಳ್ಳೆ ಉದ್ದೇಶಕ್ಕಾಗಿ ಶಾಲೆ ಮೆಟ್ಟಿಲೇರಿದ್ದಾರೆ.

ಪ್ರಣಿತಾ ಹಾಸನ ಜಿಲ್ಲೆಯ ಒಂದು ಹಳ್ಳಿಯ ಸರ್ಕಾರಿ ಶಾಲೆಯನ್ನು ದತ್ತು ತೆಗೆದುಕೊಂಡಿದ್ದರು. ಹೋಳಿ ಹಬ್ಬವನ್ನು ಆ ಶಾಲೆಯ ಮಕ್ಕಳೊಂದಿಗೆ ಕಳೆದಿದ್ದಾರೆ. ಗೋಡೆಗಳ ಮೇಲೆ ವಿವಿಧ ಬಣ್ಣಗಳಿಂದ ಪೇಯಿಂಟ್ ಮಾಡಿದ್ದಾರೆ.  ಪ್ರಣಿತಾರ ಕೆಲಸಕ್ಕೆ ಎನ್ ಜಿಒ ಸಾಥ್ ನೀಡಿದೆ. 

ನಾಮಕಾವಸ್ತೆಗೆ ಪ್ರಣಿತಾ ಶಾಲೆಯನ್ನು ದತ್ತುಪಡೆದಿಲ್ಲ. ಸಾಕಷ್ಟು ಅಭಿವೃದ್ಧಿಪಡಿಸಿದ್ದಾರೆ. ಕುಡಿಯುವ ನೀರು, ಸ್ವಚ್ಛತೆ, ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಗೊಳಿಸಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

666 operation Dream Theatre Teaser: ಶಿವರಾಜ್‌ಕುಮಾರ್-ಧನಂಜಯ್ '666 ಆಪರೇಶನ್ ಡ್ರೀಮ್ ಥಿಯೇಟರ್ ಟೀಸರ್' ಬಿಡುಗಡೆ; ಭಾರೀ ಹೈಪ್ ಸೃಷ್ಟಿ!
BBK13: 'ಪ್ರತಿ ವರ್ಷವೂ ನನ್ನ ಹೆಸರು ಕೇಳಿಬರುತ್ತೆ'... ಈ ಬಾರಿ ಬಿಗ್ ಬಾಸ್‌ಗೆ ಹೋಗ್ತಾರಾ ಮೇಘಾ ಶೆಟ್ಟಿ?