ಫ್ಯಾನ್‌ ಜೊತೆ ತನ್ನ ನೆಚ್ಚಿನ ಲುಕ್, ನಟ ಹಾಗೂ ಸೊಂಬೇರಿತನದ ಬಗ್ಗೆ ರಿವೀಲ್ ಮೇಘನಾ ಗಾಂವ್ಕರ್!

By Suvarna NewsFirst Published Jun 11, 2021, 1:19 PM IST
Highlights

ಲಾಕ್‌ಡೌನ್‌ನಲ್ಲಿ ಅಭಿಮಾನಿಗಳ ಜೊತೆ ಇನ್‌ಸ್ಟಾಗ್ರಾಂನಲ್ಲಿ ಮಾತನಾಡಿದ ಮೇಘನಾ ಗಾಂವ್ಕರ್. ಸೊಂಬೇರಿ ಆದರೆ ಏನು ಮಾಡಬೇಕು ಗೊತ್ತಾ? 

ಸ್ಯಾಂಡಲ್‌ವುಡ್‌‌ನ ಗಿಣಿ ಮುಖದ ಚೆಲುವೆ ನಟಿ ಮೇಘನಾ ಗಾಂವ್ಕರ್ ಲಾಕ್‌ಡೌನ್‌ನಲ್ಲಿ AMA (Ask Me Anything) ಎಂದು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ಅಭಿಮಾನಿಗಳ ಜೊತೆ ಮಾತನಾಡಿದ್ದರು. ಅಭಿಮಾನಿಗಳು ಕೇಳಿದ ಕೆಲವೊಂದು ತಮಾಷೆ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. 

ಅಭಿಮಾನಿಗಳ ಪ್ರಶ್ನೆ: 

- 'ನಿಮ್ಮ ನೆಚ್ಚಿನ ನಟ ಯಾರು'
 ಸುದೀಪ್, ಯಶ್, ದರ್ಶನ್, ಶಿವಣ್ಣ, ಶಂಕರ್ ನಾಗ್ ಸರ್ , ವಿಷ್ಣು ಸರ್ ಇನ್ನೂ ತುಂಬಾ ಜನರಿದ್ದಾರೆ.

ನಟಿ ಮೇಘನಾಗೆ ಏರ್‌ಪೋರ್ಟ್‌ ಸಿಬ್ಬಂದಿ ಕಿರುಕಳ ; 'ಹಣ, ಸಮಯ ಹಾಗೂ ಎನರ್ಜಿ ವೇಸ್ಟ್‌'!

- ನಿಮ್ಮ ಫೇವರೆಟ್ ಲುಕ್ ಯಾವುದು?
ನನಗೆ ಇಳಕಳ್ ಸೀರಿ ಲುಕ್ ತುಂಬಾನೇ ಇಷ್ಟ.

- ನೀವು ಸೊಂಬೇರಿ ಆದಾಗ ಮಾಡುವ ಕೆಲಸ ಯಾವುದು?
ಮಲಗುವೆ. ಇಷ್ಟದ ಆಹಾರ ತಿನ್ನುವೆ ಹಾಗೂ ಸಖತ್ ಕಾಮಿಡಿ ವಿಡಿಯೋಗಳನ್ನು ನೋಡುವೆ.

- ಕರ್ನಾಟಕದಲ್ಲಿ ನಿಮಗೆ ಇಷ್ಟವಾದ ಜಾಗ?
ಬೆಂಗಳೂರು .

- ನೆಕ್ಸ್ಟ್ ಸೋಲೋ ಟ್ರಿಪ್ ಯಾವಾಗ?
ನಾನು ಮೊದಲು Istanbulಗೆ ಹೋಗಬೇಕು. ಮುಂದಿನ ವರ್ಷ ಹೋಗುವೆ. 

ಅಭಿಮಾನಿಗಳ ಜೊತೆ ಮಾತನಾಡುತ್ತ ಸಮಯ ಕಳೆದ ಮೇಘನಾ ಲಾಕ್‌ಡೌನ್‌ ಸಡಿಲಿಕೆ ನಂತರ ಕರ್ವ-3 ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗುವುದಾಗಿ ತಿಳಿಸಿದ್ದಾರೆ.

click me!