
1993ರಲ್ಲಿ ಅಣ್ಣಯ್ಯ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದ ನಟಿ ಮಧುಬಾಲ ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಒಂದೇ ಸಮಯದಲ್ಲಿ ಮೂರ್ನಾಲ್ಕು ಭಾಷೆಗಳಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಅದೆಷ್ಟೋ ಸೂಪರ್ ಹಿಟ್ ಆಫರ್‌ಗಳ ಕೈ ಬಿಡುವ ಪರಿಸ್ಥಿತಿ ಎದುರಿಸಿದ್ದಾರೆ. ಈ ವಿಚಾರಗಳ ಬಗ್ಗೆ ಸಂದರ್ಶನದಲ್ಲಿ ಮಾತನಾಡಿದ್ದಾರೆ.
'ನಾನು ಚಿತ್ರ ಕಥೆಗಳನ್ನು ಕೇಳಿ ಡ್ರಾಪ್ ಮಾಡುವುದಿಲ್ಲ. ತುಂಬಾ ದುರಾಸೆ ಇರುವ ಕಲಾವಿದೆ ನಾನು. ಹಾಗಂತ ಯೋಚನೆ ಮಾಡಿ ಮಾಡಿ ಕಥೆಗಳನ್ನು ಆಯ್ಕೆ ಮಾಡುವುದಿಲ್ಲ ಏಕೆಂದರೆ ನಾನು ಆಯ್ಕೆ ಮಾಡಿಕೊಂಡ ಸಿನಿಮಾಗಳು ಹಿಟ್ ಆಗುತ್ತೆ ಇಲ್ಲ ಅನ್ನೋದು ನನಗೆ ಗೊತ್ತಿಲ್ಲ. ಯಾವುದೇ ಬಂದರೂ ಒಪ್ಪಿಕೊಳ್ಳುವೆ. ಒಂದು ರೀತಿ ವರ್ತನೆಯಲ್ಲಿ ನಾನು ಫೀಮೇಲ್ ಅಕ್ಷಯ್ ಕುಮಾರ್ ರೀತಿ. ಅಕ್ಷಯ್ ಕುಮಾರ್ ಹೇಳಿರುವುದನ್ನು ಕೇಳಿದ್ದೀನಿ...ಅರೇ ನಾನು ಅಕ್ಷಯ್ ಕುಮಾರ್ ಗುರು ನಾನು ಎಲ್ಲಾ ಪಾತ್ರ ಎಲ್ಲ ಚಿತ್ರಗಳಲ್ಲಿ ಮಾಡುತ್ತೀನಿ. ಇದು ಸರಿ ಅಥವಾ ತಪ್ಪು ನನಗೆ ಗೊತ್ತಿಲ್ಲ ಆದರೆ ಆಗಿನ ಕಾಲದಲ್ಲಿ ಏನಾಗುತ್ತಿತ್ತು ಅಂದ್ರೆ ತುಂಬಾ ಭಾಷೆ ಸಿನಿಮಾಗಳಿಗೆ ಸಿಹಿ ಮಾಡುತ್ತಿದ್ದೆ. ಮಲಯಾಳಂ, ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಸಿನಿಮಾದಲ್ಲಿ ನಟಿಸುತ್ತಿದ್ದೆ. ತೆಲುಗು ಭಾಷೆಯಲ್ಲಿ ನನ್ನ ಸಿನಿಮಾ ಹಿಟ್ ಆದರೆ ತೆಲುಗು ಜನರಿಗೆ ನಾನು ಮತ್ತೊಂದು ಸಿನಿಮಾ ಸಹಿ ಮಾಡಬೇಕಿತ್ತು, ಅವರು ಬಂದಾಗ ನಾನು ಬೇರೆ ಭಾಷೆಯಲ್ಲಿ ತುಂಬಾ ಬ್ಯುಸಿಯಾಗಿರುತ್ತಿದ್ದೆ. ತುಂಬಾ ಕೆಲಸಗಳನ್ನು ಮಾಡುತ್ತಿದ್ದ ಕಾರಣ ಕೆಲವೊಂದು ಸಿನಿಮಾಗಳು ಮಿಸ್ ಆಗಿತ್ತು' ಎಂದು ಪ್ರೇಮಾ ದಿ ಜರ್ನಲಿಸ್ಟ್ ಯೂಟ್ಯೂಬ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಪ್ಲಾಸ್ಟಿಕ್ ಸರ್ಜರಿ ಮಾಡ್ಸಿ ಪಶ್ಚಾತ್ತಾಪ ಪಡುತ್ತಿರುವ ನಟಿ ನೀತು; ತಲೆ ನೋವು ಬಂದ್ರೂ ಮಾತ್ರೆ ನುಂಗಲಾಗದು
'ಒಂದು ದಿನ ಚೆನ್ನೈನಲ್ಲಿ ಇರುತ್ತಿದ್ದೆ ಮತ್ತೊಂದು ದಿನ ಮುಂಬೈನಲ್ಲಿ ಇರುತ್ತೆ ಅಷ್ಟು ಕೆಲಸ ಮಾಡುತ್ತಿದೆ. ಕಹಿ ಸತ್ಯ ಏನೆಂದರೆ ನಾನು ಹೆಚ್ಚಿನ ಹೆಸರು ಮಾಡಲಿಲ್ಲ...ಕರೀನಾ ಕಪೂರ್ ಕರೀಷ್ಮಾ ಕಪೂರ್ ಹೆಸರು ಮಾಡಿರುವ ರೀತಿ ನಾನು ಹೆಸರು ಮಾಡಲಿಲ್ಲ. ಹಿಟ್ ಆಗಿರಲಿ ಫ್ಲಾಪ್ ಆಗಿರಲಿ ಒಂದಾದ ಮೇಲೊಂದು ಸಿನಿಮಾ ಮಾಡಿ ಹಿಟ್ ಕಂಡರು ಆದರೆ ನಾನು ಹಿಟ್ ಕೊಟ್ಟು ಬೇರೆ ಬೇರೆ ಭಾಷೆಯಲ್ಲಿ ಇದ್ದ ಕಾರಣ ಹೆಸರು ಮಾಡಲಿಲ್ಲ. ಕೈ ತುಂಬಾ ಕೆಲಸ ಇತ್ತು ಬ್ಯುಸಿಯಾಗಿದ್ದೆ ಅನ್ನೋದು ಒಳ್ಳೆಯ ವಿಚಾರ, ಎರಡು ವರ್ಷಗಳ ಕಾಲ ಒಂದು ಚಿತ್ರರಂಗವನ್ನು ರೂಲ್ ಮಾಡಿಲ್ಲ ಅನ್ನೋದು ಕೆಟ್ಟ ವಿಚಾರ' ಎಂದು ಮಧುಬಾಲ ಹೇಳಿದ್ದಾರೆ.
ರಗಡ್ ಹಳ್ಳಿ ಹುಡುಗಿ ಪಾತ್ರದಲ್ಲಿ ಕೀರ್ತಿ ಕೃಷ್ಣ; ಫೋಟೋಗಳು ವೈರಲ್
ಮದುವೆ:
'1997 ನಾನು restless ಆಗಿಬಿಟ್ಟೆ. ಚಿತ್ರರಂಗಕ್ಕೆ ಕಾಲಿಟ್ಟ 7 ವರ್ಷಕ್ಕೆ ಹೀಗೆ ಅನಿಸಿದ್ದು ನಿಜ ಏಕೆಂದರೆ ಸರಿಯಾಗಿ ಅವಕಾಶಗಳು ಸಿಗುತ್ತಿರಲಿಲ್ಲ. ಏಪ್ರಿಲ್ ತಿಂಗಳಿನಲ್ಲಿ ನನ್ನ ಪತಿಯನ್ನು ಮೊದಲ ಸಲ ಭೇಟಿ ಮಾಡಿದ್ದು ಅಕ್ಟೋಬರ್ ತಿಂಗಳಿನಲ್ಲಿ ನಾವು ಮದುವೆ ಮಾಡಿಕೊಂಡೆ. ನನ್ನ ಕೈಯಲ್ಲಿದ್ದ ಸಿನಿಮಾಗಳು ಮುಗಿಸಬೇಕಿತ್ತು ಹೀಗಾಗಿ ನಿರ್ದೇಶಕರಿಗೆ ಪತ್ರ ಬರೆದು ಹೇಳಿದ ಒಂದು ವರ್ಷದಲ್ಲಿ ಮುಗಿಸಿ ಎಂದು. ಆ ಸಮಯದಲ್ಲಿ ನಾನು ಪಬ್ಲಿಕ್ ಲೆಟರ್ ಕೂಡ ಬರೆದೆ. ಇದರಿಂದ ಜನರು ನನ್ನ ಬಗ್ಗೆ ತಪ್ಪು ತಿಳಿದುಕೊಂಡು ಆಫರ್ ಕೊಡುವುದು ನಿಲ್ಲಿಸಿಬಿಟ್ಟರು. ನಾನು ತೆಗೆದುಕೊಂಡ ಈ ನಿರ್ಧಾರದಿಂದ ನನ್ನ ವೃತ್ತಿ ಜೀವನ ಕುಸಿದಿತ್ತು. ಮದುವೆ ಆಗಬೇಕು ಮಗು ಮಾಡಿಕೊಳ್ಳಬೇಕು ಅನ್ನೋ ಆಸೆ ತುಂಬಾ ಇತ್ತು. ಹೆಣ್ಣು ಮಗು ಬೇಕು ಅಂತ ಪ್ರಾರ್ಥಿಸುತ್ತಿದ್ದೆ. ನನ್ನ ಪುಟ್ಟ ಮಕ್ಕಳ ಸಣ್ಣ ಪುಟ್ಟ ಮೈಲ್ ಸ್ಟೋನ್‌ಗಳನ್ನು ಶೂಟ್ ಮಾಡಿದ್ದೆ. ಜೀವನ ಹೀಗೆ ಇರಬೇಕು ಎಂದು ಪ್ಲ್ಯಾನ್ ಮಾಡಿದ್ದೆ ಅದೇ ರೀತಿ ನಡೆದುಕೊಂಡು ಬಂದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.