12 ವರ್ಷ ಸಿನಿ ಜರ್ನಿ; ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಕೃತಿ ಕರಬಂಧ

Suvarna News   | Asianet News
Published : Jun 13, 2021, 10:42 AM ISTUpdated : Jun 13, 2021, 11:03 AM IST
12 ವರ್ಷ ಸಿನಿ ಜರ್ನಿ; ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಕೃತಿ ಕರಬಂಧ

ಸಾರಾಂಶ

ಇನ್‌ಸ್ಟಾಗ್ರಾಂ ಲೈವ್‌ಚಾಟ್‌ ಮೂಲಕ ಅಭಿಮಾನಿಗಳ ಜೊತೆ ಮಾತನಾಡಿದ 'ಗೂಗ್ಲಿ' ನಟಿ ಕೃತಿ ಕರಬಂಧ. ಮೇಕಪ್ ಇಲ್ಲ, ಸಂತೋಷದ ಗ್ಲೋ ಇದು....  

2009ರಲ್ಲಿ 'ಬೋನಿ' ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ನಟಿ ಕೃತಿ, 12 ವರ್ಷದ ಸಿನಿ ಜರ್ನಿ ಪೂರೈಸಿರುವ ಪ್ರಯುಕ್ತ ಅಭಿಮಾನಿಗಳ ಜೊತೆ 45 ನಿಮಿಷ ಲೈವ್‌ನಲ್ಲಿ ಮಾತನಾಡಿದ್ದಾರೆ. 2010ರಲ್ಲಿ 'ಚಿರು' ಸಿನಿಮಾದಲ್ಲಿ ನಟಿಸಿದ ನಂತರ ಕೃತಿ ವೃತ್ತಿ ಜೀವನಕ್ಕೆ ಬ್ರೇಕ್‌ ಕೊಟ್ಟಂತ ಸಿನಿಮಾ 'ಪ್ರೇಮ್ ಅಡ್ಡ' ಮತ್ತು 'ಗೂಗ್ಲಿ'.

ನೋಡಲಾಗದ ಪರಿಸ್ಥಿತಿಯಲ್ಲಿ ನಟಿ ಕೃತಿ ಕರಬಂಧ; ಮಲೇರಿಯಾ ಎಫೆಕ್ಟ್‌! 

'ಜೂನ್12ಕ್ಕೆ, 12 ವರ್ಷದ ಸಿನಿ ವೃತ್ತಿ ಜರ್ನಿ. ಟೀನೇಜರ್‌ ಆಗಿ ಸಿನಿ ವೃತ್ತಿ ಜೀವನ ಅರಂಭಿಸಿದೆ, ಇಂದು ನಾನು ಏನೇ ಆಗಿದ್ದರೂ ಕ್ರೆಡಿಟ್ ನನ್ನ ಈ ಬ್ಯೂಟಿಫುಲ್ ಜರ್ನಿಗೆ.  ನಟಿಯಾಗಿ ನಾನು ಸಾಕಷ್ಟು ನಟ, ನಟಿಯರನ್ನು ಭೇಟಿ ಮಾಡಿರುವೆ. ಸಿನಿಮಾನೇ ನನ್ನ ಜೀವನ, ನನ್ನ ಗುರುತು ಆಗಿತ್ತು.  ನನ್ನ ಜರ್ನಿಗೆ ಜೊತೆಯಾಗಿದ್ದ ಪ್ರತಿಯೊಬ್ಬರಿಗೂ ಧನ್ಯವಾದಗಳು. ನಿಮಗೆ ನಾನು ಎಂದಿಗೂ ಗ್ರೇಟ್‌ಫುಲ್' ಎಂದು ಕೃತಿ ಬರೆದುಕೊಂಡಿದ್ದಾರೆ.

'ಪ್ರಗತಿಯಿಂದ ಡಾ.ಸ್ವಾತಿ, ಶುಕ್ಲಯಿಂದ ರಾಜಕುಮಾರಿ ಮೀನಾ  ಪಾತ್ರದವರಿಗೂ ನನ್ನದೊಂದು ದೊಡ್ಡ ಜರ್ನಿ. Immature ಟೀನೇಜರ್‌ ಈಗ ಅಡಲ್ಟ್ ಹುಡುಗಿ ಆಗಿ ಬೋಲ್ಡ್ ಆಗಿರುವೆ ಎಂದರೆ ಈ ಜರ್ನಿಯೇ ಕಾರಣ. ಅಲಂಕಾರ ಮಾಡಿಕೊಂಡು 90 ದಶಕದ ಹಾಡುಗಳಿಗೆ ಕುಣಿಯುತ್ತಿದ್ದ ಹುಡುಗಿ ಈಗ ಇದೇ ಜೀವನ ಆಗಿದೆ.  ಸಾಧಾರಣ ಮಿಡಲ್ ಕ್ಲಾಸ್ ಹುಡುಗಿ ಜೀವನ ಹಾಗೂ ವೃತ್ತಿ ಬಗ್ಗೆ ಕನಸು ಕಾಣಲು ಅವಕಾಶ ಮಾಡಿಕೊಟ್ಟಿದ್ದು ಇದೇ ಭಾರತೀಯ ಸಿನಿ ಜರ್ನಿ. ಎಲ್ಲರಿಗೂ ಧನ್ಯವಾದಗಳು' ಎಂದಿದ್ದಾರೆ ಕೃತಿ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12 Winner: 6 ತಿಂಗಳ ಹಿಂದೆ ಕಾಸಿಲ್ಲ- ಗಿಲ್ಲಿ ನಟನಿಗೆ ಈಗ ಹಣದ ಹೊಳೆ; ಕಿಚ್ಚ ಸುದೀಪ್‌ ಕೊಟ್ಟಿದ್ದೆಷ್ಟು?
ಭಾರತದ Bigg Boss ಇತಿಹಾಸದಲ್ಲೇ ದಾಖಲೆ ಸೃಷ್ಟಿಸಿದ ನಟ ಕಿಚ್ಚ ಸುದೀಪ್​- ಏನಿದು ರೆಕಾರ್ಡ್​?