ನಟಿ ಹರಿಪ್ರಿಯಾ ಪ್ರೆಗ್ನೆಂಟ್: ಬೇಬಿ ಬಂಪ್ ನೋಡಿ ಖಚಿತಪಡಿಸಿದ ಅಭಿಮಾನಿಗಳು!

By Sathish Kumar KH  |  First Published Oct 9, 2024, 7:00 PM IST

ನಟಿ ಹರಿಪ್ರಿಯಾ ಅವರು ಗರ್ಭಿಣಿ ಎಂಬಂತೆ ಹೊಸ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಹರಿಪ್ರಿಯಾ ಅಭಿಮಾನಿಗಳು ಈ ವಿಡಿಯೋದಲ್ಲಿ ಬೇಬಿ ಬಂಪ್ ಸ್ಪಷ್ಟವಾಗಿ ಕಾಣಿಸುತ್ತಿದೆ ಅವರು ಗರ್ಭಿಣಿ ಎಂದು ಊಹಿಸುತ್ತಿದ್ದಾರೆ.


ಬೆಂಗಳೂರು (ಅ.09): ಕನ್ನಡದ ರಿಕ್ಕಿ ಚೆಲುವೆ ನಟಿ ಹರಿಪ್ರಿಯಾ ಅವರು ವಶಿಷ್ಠ ಸಿಂಹ ಅವರನ್ನು ಮದುವೆಯಾಗಿ ಒಂದೂವರೆ ವರ್ಷಗಳು ಕಳೆದಿವೆ. ಸುಖ ಸಂಸಾರ ಮಾಡುತ್ತಿರುವ ಈ ಸ್ಟಾರ್ ದಂಪತಿ ಇದೀಗ ಸಂತಸ ಸುದ್ದಿ ನೀಡಲಿದ್ದಾರೆ. ನಟ ವಸಿಷ್ಠ ಅವರು ಹೆಂಡತಿ ಹರಿಪ್ರಿಯ ಅವರನ್ನು ಕರೆದುಕೊಂಡು ರೆಸಾರ್ಟ್ ಒಂದಕ್ಕೆ ಹೋಗಿದ್ದು, ಈ ಸಂಬಂಧಿತ ವಿಡಿಯೋದಲ್ಲಿ ಹರಿಪ್ರಿಯಾ ಬೇಬಿಬಂಪ್ ಸ್ಪಷ್ಟವಾಗಿ ಕಾಣುತ್ತಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ಕನ್ನಡ ಸ್ಟಾರ್ ಜೋಡಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಜೋಡಿ ಕಳೆದ 2023ರ ಜನವರಿಯಲ್ಲಿ ದಾಂಪತ್ಯಕ್ಕೆ ಕಾಲಿಟ್ಟಿದೆ. ಇನ್ನೇನು 2025ರ ಜನವರಿಗೆ ಎರಡು ವರ್ಷಗಳು ತುಂಬುತ್ತವೆ ಗುಡ್ ನ್ಯೂಸ್ ಏನೂ ಇಲ್ವಾ ಎಂದು ಕೇಳುತ್ತಿದ್ದ ಅಭಿಮಾನಿಗಳಿಗೆ ಇದೀಗ ಗುಡ್ ನ್ಯೂಸ್ ಕೊಡಲು ಸಿದ್ಧರಾಗಿದ್ದಾರೆ ಎಂಬ ಸುಳಿವು ಸಿಗುತ್ತಿದೆ. ಆದರೆ, ಈ ಬಗ್ಗೆ ಸ್ಟಾರ್ ದಂಪತಿ ಎಲ್ಲಿಯೂ ಮಾಹಿತಿ ಹಂಚಿಕೊಂಡಿಲ್ಲ. ಆದರೆ, ಸಿನಿಮಾ ಬಜಾರ್ ಎಂಬ ಸಾಮಾಜಿಕ ಜಾಲತಾಣದ ಖಾತೆಯೊಂದರಿಂದ ಹಂಚಿಕೊಳ್ಳಲಾದ ಹರಿಪ್ರಿಯಾ ವಿಡಿಯೋದಲ್ಲಿ ಅವರು ಗರ್ಭಿಣಿ ಆಗಿದ್ದಾರೆ ಎಂಬಂತೆ ಕಾಣುತ್ತಿದ್ದಾರೆ. ಅವರಲ್ಲಿ ಬೇಬಿ ಬಂಪ್ ಲಕ್ಷಣಗಳು ಕಾಣುತ್ತಿದ್ದು, ಗರ್ಭಿಣಿಯ ಎಲ್ಲ ಲಕ್ಷಣಗಳು ಕಂಡುಬರುತ್ತಿವೆ ಎಂದು ಹೇಳಲಾಗುತ್ತಿದೆ.

Tap to resize

Latest Videos

ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನ ಸಿನಿಮಾ ಬಜಾರ್ (@Cinema_bazaaar) ಎಂಬ ಖಾತೆಯಿಂದ 'ಹಸಿರಿನ ಮಡಿಲಲ್ಲಿ ವಸಿಷ್ಠ ಸಿಂಹ-ಹರಿಪ್ರಿಯ' ಎಂಬ ಟ್ಯಾಗ್ ಲೈನ್‌ನೊಂದಿಗೆ ವಿಡಿಯೋ ಪೋಸ್ಟ್ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ವಿಷ್ಮಾ ರೆಸಾರ್ಟ್‌ಗೆ ನಟ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ ಕಾರಿನಿಂದ ಇಳಿದು ಬರುತ್ತಿರುವುದು ಹಾಗೂ ರೆಸಾರ್ಟ್‌ನಲ್ಲಿ ಎಂಜಾಯ್ ಮಾಡುವ ದೃಶ್ಯಗಳನ್ನು ತೋರಿಸಲಾಗಿದೆ. ಇದರಲ್ಲಿ ಕಾರಿನಿಂದ ಇಳಿದು ರೆಸಾರ್ಟ್‌ನೊಳಗೆ ಹೋಗುವಾಗ ವಸಿಷ್ಠ ಸಿಂಹ ಕೈ ಹಿಡಿದುಕೊಂಡು ಕರೆದುಕೊಂಡು ಬಂದಿದ್ದಾರೆ. ಇದರಲ್ಲಿ ನಟಿ ಹರಿಪ್ರಿಯಾ ಹೊಟ್ಟೆಯೂ ಕೂಡ ಮೊದಲಿನಂತೆ ಸ್ಲಿಮ್ ಆಗಿಲ್ಲ ಎಂಬುದು ಕೂಡ ಕಾಣಿಸುತ್ತಿದೆ.

ಇದನ್ನೂ ಓದಿ: ದುನಿಯಾ ವಿಜಯ್, ರಚಿತಾರಾಮ್ ನಟನೆಯ 'ಚೌಡಯ್ಯ' ಚಿತ್ರತಂಡಕ್ಕೆ ತುಮಕೂರು ಆರ್‌ಟಿಒ ಶಾಕ್!

ಇದರ ಜೊತೆಗೆ, ಈ ವಿಡಿಯೋದಲ್ಲಿ ನಟಿ ಹರಿಪ್ರಿಯಾ ಮೊದಲು ಎಂಜಾಯ್ ಮಾಡುತ್ತಿದ್ದಂತೆ ಎಲ್ಲಿಯೂ ಸ್ವಿಮ್ಮಿಂಗ್ ಪೂಲ್ ನೀರಿಗಿಳಿದು ಎಂಜಾಯ್ ಮಾಡುವುದು ಅಥವಾ ವಿಭಿನ್ನವಾಗಿ ನಿಂತು ಪೋಸ್‌ ನೀಡುವ ದೃಶ್ಯಗಳಲ್ಲಿ ಕಾಣಿಸಿಕೊಂಡಿಲ್ಲ. ರೆಸಾರ್ಟ್‌ನಲ್ಲಿ ಸೈಕ್ಲಿಂಗ್, ರೋಪ್ ಆಕ್ಟಿವಿಟೀಸ್ ಸೇರಿದಂತೆ ಯಾವುದೇ ಔಟ್ ಡೋರ್ ಗೇಮ್‌ಗಳನ್ನು ಆಡುವುದು ಕಂಡುಬಂದಿಲ್ಲ. ಇದರ ಬದಲಿಗೆ ಇಂಡೋರ್ ಗೇಮ್‌ಗಳಾದ ಟೇಬಲ್ ಟೆನ್ನಿಸ್ ಹಾಗೂ ಚೆಸ್ ಸೇರಿದಂತೆ ಕೆಲವು ಆಟಗಳನ್ನು ಆಡಿ ಎಂಜಾಯ್ ಮಾಡಿದ್ದಾರೆ. ಮುಂದುವರೆದು ಉಳಿದ ಎಲ್ಲ ಕಡೆಗಳಲ್ಲಿ ಗರ್ಭಿಣಿಯರು ಜಾಗರೂಕತೆಯಿಂದ ನಡೆದುಕೊಳ್ಳುವ ರೀತಿಯಲ್ಲಿಯೇ ಕಾಣಿಸಿಕೊಂಡಿದ್ದಾರೆ. ಇನ್ನು ಫಾಲ್ಸ್ ಒಂದರ ಬಳಿ ಗ್ರೂಫ್ ಫೋಟೋ ತೆಗೆಸಿಕೊಂಡಾಗ ಅದರಲ್ಲಿ ತಮ್ಮ ಹೊಟ್ಟೆಯ ಮೇಲೆ ತಮ್ಮ ಸ್ವೆಟರ್ ಟಾಪ್ ಎಳೆದುಕೊಂಡು ಮುಚ್ಚಿಕೊಂಡಿದ್ದಾರೆ.

ಹರಿಪ್ರಿಯಾ ಗರ್ಭಿಣಿನಾ?
ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ವಿಡಿಯೋ ಹಂಚಿಕೊಂಡ ಖಾತೆದಾರರು ತಮ್ಮ ವಿಡಿಯೋ ಮೇಲೆ 'ಹರಿಪ್ರಿಯಾ ಗರ್ಭಿಣಿನಾ? ತಲೆಗೆ ಹುಳ ಬಿಟ್ಟುಕೊಂಡ ಫ್ಯಾನ್ಸ್' ಎಂಬ ತಲೆಬರಹ ನೀಡಲಾಗಿದೆ. ಇದಕ್ಕೆ ನೆಟ್ಟಿಗರು ಕೂಡ ತರಹೇವಾರಿ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಅದರಲ್ಲೊಬ್ಬರು ಮದುವೆ ಆದಮೇಲೆ ಮಕ್ಕಳು ಆಗುವುದು ಸಹಜ. ಇದರಲ್ಲೇನೋ ವಿಸ್ಮಯ ಎನ್ನುವಂತೆ ನೀವು ಆಶ್ಚರ್ಯಪಡುವುದು ಬೇಡ. ಯಾವ ಫ್ಯಾನ್ಸ್ ಕೂಡ ತಲೆಗೆ ಹುಳ ಬಿಟ್ಟುಕೊಳ್ಳುವುದಿಲ್ಲ ಎಂದಿದ್ದಾರೆ. ಇನ್ನು ಕೆಲವರು ಹೌದು, ಯೆಸ್, 100% ಶೂರ್ ಎಂದು ಕಾಮೆಂಟ್‌ ಮಾಡಿದ್ದಾರೆ. ಆದರೆ, ಈ ಬಗ್ಗೆ ಸ್ಟಾರ್ ಜೋಡಿಯೇ ಬಹಿರಂಗಪಡಿಸಬೇಕಿದೆ. ಇನ್ನು ಗರ್ಭಿಣಿ ಆಗಿದ್ದರೆ ಇಂದಲ್ಲಾ ನಾಳೆ ಒಂದೆರೆಡು ತಿಂಗಳಲ್ಲಿ ಇನ್ನೂ ಸ್ವಲ್ಪ ಹೊಟ್ಟೆ ಮುಂದೆ ಬಂದರೆ ಖಚಿತವಾಗುತ್ತದೆ ಅಷ್ಟೇ...

ಇದನ್ನೂ ಓದಿ: ಕನ್ನಡದ ಅತ್ಯಂತ ದುಬಾರಿ ಸಿನಿಮಾ ಮಾರ್ಟಿನ್‌, ಧ್ರುವ ಸರ್ಜಾ ನಟನೆ ಭರ್ಜರಿ: ನಿರ್ಮಾಪಕ ಉದಯ್‌ ಮೆಹ್ತಾ

click me!