ಮೂಗು ಚುಚ್ಚಿಸಿಕೊಂಡ ಹರಿಪ್ರಿಯಾ, ಮದ್ವೆ ಆಗ್ತಿರಬಹುದಾ ಡೌಟು!

Published : Nov 14, 2022, 10:04 AM IST
ಮೂಗು ಚುಚ್ಚಿಸಿಕೊಂಡ ಹರಿಪ್ರಿಯಾ, ಮದ್ವೆ ಆಗ್ತಿರಬಹುದಾ ಡೌಟು!

ಸಾರಾಂಶ

ಹರಿಪ್ರಿಯಾ ಚಿತ್ರರಂಗಕ್ಕೆ ಬಂದು ಹದಿನಾಲ್ಕು ವರ್ಷಗಳಾಗಿವೆ. ಅವರ ವಯಸ್ಸು ಈಗ ಮೂವತ್ತೊಂದು. ಮೂಗು ಚುಚ್ಚಿಸಿಕೊಳ್ಳುತ್ತಿರುವ ಫೋಟೋವನ್ನು ಹರಿಪ್ರಿಯಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದರ ಹಿನ್ನೆಲೆ ಏನು? ಈ ಮೂಲಕ ಹರಿಪ್ರಿಯಾ ಏನ್ ಗುಡ್‌ನ್ಯೂಸ್ ಕೊಡೋದಕ್ಕೆ ಹೊರಟಿದ್ದಾರೆ?

ಹರಿಪ್ರಿಯಾ ಮೂಲ ಹೆಸರು ಹೆಚ್ಚಿನವರಿಗೆ ಗೊತ್ತಿಲ್ಲ. ಅವರು ಸಿನಿಮಾರಂಗಕ್ಕೆ ಎಂಟ್ರಿಕೊಟ್ಟಿದ್ದು ಬೇರೆ ಹೆಸರಿನಿಂದ. ಆದರೆ ಅವರ ಅಮ್ಮನಿಗೆ ಆ ಹಳೆಯ ಹೆಸರಿನ ಬಗ್ಗೆ ಅಂಥಾ ಸಮಾಧಾನ ಇರಲಿಲ್ಲ. ಅದಕ್ಕಾಗಿ ಮಗಳ ಹೆಸರನ್ನು ಹರಿಪ್ರಿಯಾ ಅಂತ ಬದಲಾಯಿಸಿದರು. ಹರಿಪ್ರಿಯಾ ಅವರ ಮೊದಲ ಹೆಸರು ಶ್ರುತಿ ಚಂದ್ರಸೇನಾ ಅಂತಿತ್ತು. ಚಿಕ್ಕಬಳ್ಳಾಪುರ ಮೂಲದ ಹುಡುಗಿ ಇವರು. ಚಿಕ್ಕ ವಯಸ್ಸಿನಲ್ಲೇ ಪಠ್ಯೇತರ ಚಟುವಟಿಕೆ ಮೂಲಕ ಗುರುತಿಸಿಕೊಂಡವರು. ಭರತನಾಟ್ಯಂನಲ್ಲೂ ಹೆಸರು ಮಾಡಿದವರು. ಸೆಕೆಂಡ್ ಪಿಯುಸಿ ಓದುತ್ತಿದ್ದಾಗಲೇ ಸಿನಿಮಾ ಆಫರ್ ಬಂತು. ಮಂಗಳೂರಿನ ರಿಚರ್ಡ್ ಕಾಸ್ಟಲಿನೋ ಅವರು ತಮ್ಮ ಬದಿ ಅನ್ನೋ ತುಳು ಸಿನಿಮಾಕ್ಕೆ ಇವರನ್ನು ಸೆಲೆಕ್ಟ್ ಮಾಡ್ತಾರೆ. ಆಮೇಲೆ 2008ರಲ್ಲಿ 'ಮನಸುಗಳ ಮಾತು ಮಧುರ' ಅನ್ನೋ ಸಿನಿಮಾ ಮೂಲಕ ಇಂಟಸ್ಟ್ರಿಗೆ ಎಂಟ್ರಿಕೊಟ್ಟ ಹರಿಪ್ರಿಯಾ ಸತತ ಹದಿನಾಲ್ಕು ವರ್ಷ ಸಿನಿಮಾಗಳಲ್ಲಿ ನಟಿಸ್ತಾನೇ ಇದ್ರು. ಅವರಿಗೆ ಈಗಲೂ ಆಫರ್‌ ಗಳಿವೆ. ಶಶಾಂಕ್ ಉಪೇಂದ್ರ ಕಾಂಬಿನೇಶನ್‌ನಲ್ಲಿ ಬರುತ್ತಿರುವ ಹೊಸ ಚಿತ್ರಕ್ಕೆ ಅವರೇ ನಾಯಕಿ. ಈ ಎಲ್ಲದರ ನಡುವೆಯೇ ಇದೀಗ ಹೊಸತೊಂದು ಸುದ್ದಿ ಬಂದಿದೆ.

ಮೂಗು ಚುಚ್ಚಿಸಿಕೊಂಡ ಹರಿಪ್ರಿಯಾ
ಹರಿಪ್ರಿಯಾ ಮೂಗು ಚುಚ್ಚಿಸಿಕೊಳ್ಳುತ್ತಿರುವ ವೀಡಿಯೋ ಒಂದನ್ನು ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ಹಿನ್ನೆಲೆಯಲ್ಲಿ ಮಂತ್ರಘೋಷಗಳ ಸದ್ದು ಕೇಳುತ್ತದೆ. ಸೀರೆಯುಟ್ಟು ಸೂಜಿಗೆ ಮುಖವೊಡ್ಡಿದ ಹರಿಪ್ರಿಯಾ ಪರಂಪರೆಯ ಹಾಗೆ ಮೂಗು ಚುಚ್ಚಿಸಿಕೊಂಡಿದ್ದಾರೆ. ದಪ್ಪ ಸೂಜಿಯಿಂದ ಮೂಗು ಚುಚ್ಚುವಾಗ ಆದ ನೋವು ಅವರ ಮುಖದಲ್ಲಿ ಎದ್ದು ಕಾಣುತ್ತದೆ. ಕಣ್ಣುಗಳಲ್ಲಿ ನೀರು ತುಂಬಿಕೊಂಡಿದೆ. ಆದರೂ ಮೂಗು ಚುಚ್ಚಿಸಿಕೊಂಡ ಖುಷಿಯಲ್ಲಿ ಹರಿಪ್ರಿಯಾ ನಗುತ್ತಾರೆ.

ಬದುಕಿನ ಹೊಸ ಬದಲಾವಣೆ ಬಗ್ಗೆ ಮಾತು
'ಬದುಕಲ್ಲಿ ಬದಲಾವಣೆ ಆಗುತ್ತಲೇ ಇರುತ್ತದೆ. ತೆರೆಯ ಮೇಲೆ ಈವರೆಗೆ ಸಾಕಷ್ಟು ಬಾರಿ ಮೂಗುತಿ ಧರಿಸಿ ಕಾಣಿಸಿಕೊಂಡಿದ್ದೆ. ಆದರೆ ಅದ್ಯಾವುದೂ ರಿಯಲ್ ಆಗಿರಲಿಲ್ಲ. ಈಗ ನಿಮ್ಮೆದುರು ಕಾಣುತ್ತಿರುವುದು ಮಾತ್ರ ರಿಯಲ್. ನನಗಿದು ಬಹಳ ಖುಷಿ ಕೊಟ್ಟಿದೆ. ಯಾವತ್ತೂ ಖುಷಿ ಕೊಡುತ್ತದೆ' ಅಂತ ಹರಿಪ್ರಿಯಾ ಈ ವೀಡಿಯೋ ಜೊತೆ ಬರೆದುಕೊಂಡಿದ್ದಾರೆ. ಇದನ್ನು ಬಹಳಷ್ಟು ಮಂದಿ ಲೈಕ್‌ ಮಾಡಿದ್ದಾರೆ.

'RRR'ಸೀಕ್ವೆಲ್ ಕನ್ಫರ್ಮ್; ಇಂಟ್ರಸ್ಟಿಂಗ್ ಮಾಹಿತಿ ರಿವೀಲ್ ಬಿಚ್ಚಿಟ್ಟ ರಾಜಮೌಳಿ

ಗುಡ್‌ನ್ಯೂಸ್ ಏನು?
ಮದುವೆಯ ಹೊತ್ತಿಗೆ ಮೂಗು ಚುಚ್ಚಿಸಿಕೊಳ್ಳುವ (Nose piercing) ಸಂಪ್ರದಾಯ ಕೆಲವು ಕಡೆ ಇದೆ. ಚಿಕ್ಕ ವಯಸ್ಸಲ್ಲಿ ಮೂಗು ಚುಚ್ಚಿಸಿಕೊಳ್ಳದವರೂ ಮದುವೆ ಹೊತ್ತಿಗೆ ಮೂಗುತಿ ಹಾಕಿಕೊಳ್ಳೋದುಂಟು. ಹರಿಪ್ರಿಯಾ ಅವರ ಈ ವೀಡಿಯೋ ನೋಡಿರುವ ಹಲವರು ಹರಿಪ್ರಿಯಾ ಮದುವೆ(Marriage) ಆಗ್ತಿದ್ದಾರೆ ಅನ್ನೋ ಮಾತನ್ನು ಹೇಳ್ತಿದ್ದಾರೆ. ಮದುವೆ ಆಗ್ತಿರೋದಕ್ಕೇ ಈ ಮೂಗುತಿ ಹಾಕಿಕೊಂಡಿದ್ದಾರೆ ಅನ್ನೋ ಮಾತುಗಳಿವೆ. ಸೋಷಿಯಲ್ ಮೀಡಿಯಾ(Social media)ದಲ್ಲಿ ಅವರು ಹಾಕಿರುವ ಪೋಸ್ಟ್‌ಗೆ ಹೆಚ್ಚಿನವರು ಹರಿಪ್ರಿಯಾ ಮದುವೆ ಆಗ್ತಿದ್ದಾರೆ, ಅದಕ್ಕೋಸ್ಕರ ಮೂಗು ಚುಚ್ಚಿಸಿಕೊಂಡಿದ್ದಾರೆ ಅನ್ನೋ ಮಾತನ್ನು ಹೇಳ್ತಿದ್ದಾರೆ.

ನಯನತಾರಾ ಬಳಿಕ ಮದುವೆ ವಿಡಿಯೋ ಮಾರಿಕೊಂಡ ನಟಿ ಹನ್ಸಿಕಾ ಮೋಟ್ವಾನಿ

ಇದು ನಿಜನಾ?
ಹರಿಪ್ರಿಯಾ ಮದುವೆ ಆಗ್ತಿರೋದು ನಿಜನಾ? ಈ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಸಿಕ್ಕಿಲ್ಲ. ಆದರೆ ಇತ್ತೀಚೆಗೆ ಹರಿಪ್ರಿಯಾ ಉಪೇಂದ್ರ ಜೊತೆಗಿನ ಸಿನಿಮಾ ಬಿಟ್ಟರೆ ಬೇರ್ಯಾವ ಸಿನಿಮಾ (Movie)ವನ್ನೂ ಒಪ್ಪಿಕೊಂಡಿಲ್ಲ. ಜೊತೆಗೆ ಅವರ ವಯಸ್ಸೂ(Age) ಮೂವತ್ತೊಂದಾಯ್ತು. ಈಗ ಮೂಗು ಚುಚ್ಚಿಸಿಕೊಂಡಿದ್ದಾರೆ. ಇವೆಲ್ಲ ಹರಿಪ್ರಿಯಾ ಮದುವೆ ಆಗ್ತಿದ್ದಾರೆ ಅನ್ನೋ ಸುದ್ದಿಗೆ(News) ಪುಷ್ಠಿ ಕೊಡುತ್ತದೆ. ಈ ಗುಡ್‌ನ್ಯೂಸ್‌ ಅವರು ಯಾವಾಗ ಬಾಯ್ಬಿಟ್ಟು ಹೇಳ್ತಾರೆ ಅನ್ನೋದನ್ನು ಕಾದು ನೋಡಬೇಕು. ಹರಿಪ್ರಿಯಾ ಕನ್ನಡದಲ್ಲಿ ಮಾತ್ರವಲ್ಲ, ತಮಿಳು, ತೆಲುಗು ಮೊದಲಾದ ಭಾಷೆಗಳಲ್ಲೂ ನಟಿಸಿರುವ ಕಲಾವಿದೆ. ಅವರ 'ಬೆಲ್ ಬಾಟಂ', 'ನೀರ್ ದೋಸೆ' ಮೊದಲಾದ ಸಿನಿಮಾಗಳನ್ನು ಜನ ಮೆಚ್ಚಿಕೊಂಡಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಬಿಗ್ ಬಜೆಟ್ '45' ಅದ್ದೂರಿ ಇವೆಂಟ್, ಕರ್ನಾಟಕದ ಏಳು ಜಿಲ್ಲೆಗಳ ಚಿತ್ರಮಂದಿರದಲ್ಲಿ ಇವೆಂಟ್ ನೇರ ಪ್ರಸಾರ!
ಸೂರ್ಯನಿಗೆ ಬಹಳ ಹೊತ್ತು ಗ್ರಹಣ ಹಿಡಿಯಲ್ಲ.. ನಾನ್ ಬರ್ತಿದ್ದೀನಿ ಚಿನ್ನ: ದರ್ಶನ್‌ ಟ್ರೈಲರ್ ಡೈಲಾಗ್‌ಗೆ ಅಪಾರ್ಥ?