ಸಾಕು ನಾಯಿ ಲಕ್ಕಿಯನ್ನು ಕಳೆದುಕೊಂಡ ನಟಿ ಹರಿಪ್ರಿಯಾ ಭಾವುಕ ಮಾತು!

Suvarna News   | Asianet News
Published : Jul 01, 2021, 10:38 AM ISTUpdated : Jul 01, 2021, 10:39 AM IST
ಸಾಕು ನಾಯಿ ಲಕ್ಕಿಯನ್ನು ಕಳೆದುಕೊಂಡ ನಟಿ ಹರಿಪ್ರಿಯಾ ಭಾವುಕ ಮಾತು!

ಸಾರಾಂಶ

ಮುದ್ದಾದ ಸಾಕು ನಾಯಿಯನ್ನು ಕಳೆದುಕೊಂಡ ದುಖಃದಲ್ಲಿ ನಟಿ ಹರಿಪ್ರಿಯಾ. 

ಸ್ಯಾಂಡಲ್‌ವುಡ್‌ ಸುಂದರಿ, ನಟಿ ಹರಿಪ್ರಿಯಾಗೆ ಸಾಕು ನಾಯಿ ಲಕ್ಕಿ ಅಂದ್ರೆ ಸಿಕ್ಕಾಪಟ್ಟೆ ಇಷ್ಟ. ಮನುಷ್ಯರು ಹೇಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಾರೋ ನಾಯಿಗಳಿಗೂ ಅದೇ ಅದ್ಧೂರಿ ರೀತಿಯಲ್ಲಿ ಆಚರಣೆ ಮಾಡುತ್ತಾರೆ. ಇದೀಗ ಆ ನಾಯಿ ಸಾವನ್ನಪ್ಪಿದೆ.  ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹರಿಪ್ರಿಯಾ ಭಾವುಕರಾಗಿ ಬರೆದುಕೊಂಡಿದ್ದಾರೆ.

ಹರಿಪ್ರಿಯಾ ಮಾತು: 

'ಲಕ್ಕಿ, ಅದ್ಭುತ ಆತ್ಮ, ನನ್ನ ಮೊದಲ ಬೇಬಿ, ನನ್ನ ಕುಟುಂಬ. ನಮ್ಮ ಜೀವನದಲ್ಲಿ ಒಂದು ಭಾಗವಾಗಿದ್ದ. 8.5 ವರ್ಷ ನಮ್ಮ ಜೊತೆ ಕಳೆದಿದ್ದಾನೆ. ಆತನೊಂದಿಗೆ ನನಗೆ ಸುರಕ್ಷಿತವಾಗಿದ್ದೇನೆಂಬ ಭಾವನೆ ಬರುತ್ತಿತ್ತು. ಒಟ್ಟಿಗೆ ಆಟ ಆಡುತ್ತಿದ್ದೆವು, ಪ್ರಯಾಣಿಸುತ್ತಿದ್ದೆವು ಹಾಗೂ ಪರಸ್ಪರ ಕಾಟ ಕೊಡುತ್ತಿದ್ದೆವು. ಮುಂದಿನ ಜನ್ಮದಲ್ಲಿ ನಾನು ನಿನಗೆ ಸಿಕ್ಕರೆ, ಗುರುತಿಸಿ ಮಾತನಾಡಿಸು. ನೀನು ಮತ್ತೆ ಹುಟ್ಟಿ ಬರುವೆ ಎಂದು ನನ್ನ ನಂಬಿಕೆ. ನಿನಗೆ ಗುಡ್‌ಬೈ ಹೇಳುವುದಕ್ಕೆ ನೋವಾಗುತ್ತದೆ. ಯಾರನ್ನು ನಿನ್ನಷ್ಟು ಮಿಸ್ ಮಾಡಿಕೊಳ್ಳುವುದಿಲ್ಲ.' ಎಂದು ಹರಿಪ್ರಿಯಾ ಬರೆದುಕೊಂಡಿದ್ದಾರೆ.

'ಹ್ಯಾಪಿ' ಆ್ಯಂಡ್‌ 'ಲಕ್ಕಿ' ಹುಟ್ಟುಹಬ್ಬ ಆಚರಿಸಿದ ನಟಿ ಹರಿ ಪ್ರಿಯಾ! 

ಲಕ್ಕಿ ಕುಟುಂಬಕ್ಕೆ ಆಗಮಿಸಿದ ದಿನದಿಂದಲೂ ಸಾಮಾಜಿಕ ಜಾಲತಾಣದಲ್ಲಿ ಹರಿಪ್ರಿಯಾ ಫೋಟೋ ಹಂಚಿಕೊಳ್ಳುತ್ತಿದ್ದಾರೆ.ಅದರಲ್ಲೂ ಈ ಲಾಕ್‌ಡೌನ್‌ ಅವಧಿಯಲ್ಲಿ ಲಕ್ಕಿಯೊಂದಿಗೆ ಹೆಚ್ಚಿನ ಸಮಯ ಕಳೆದಿದ್ದಾರೆ.

ಸತೀಶ್ ನೀನಾಸಂ ಜೊತೆ ಅಭಿನಯಿಸಿರುವ ಹರಿಪ್ರಿಯಾರವರ 'ಪೆಟ್ರೋಮ್ಯಾಕ್ಸ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಉಪೇಂದ್ರ ಜೊತೆ 'ಲಗಾಮ್' ಸಿನಿಮಾದಲ್ಲಿ, ರಿಷಬ್ ಶೆಟ್ಟಿ ಜೊತೆ 'ಬೆಲ್ ಬಾಟಂ 2' ಚಿತ್ರದಲ್ಲಿ ಹಾಗೂ ದಿಗಂತ್ ಜೊತೆ ಹೆಸರಿಡದ ಚಿತ್ರವೊಂದರಲ್ಲಿ ಅಭಿನಯಿಸುತ್ತಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಟಾಕ್ಸಿಕ್ ಪೋಸ್ಟರ್ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿದ ಯಶ್, ಸಿನಿಮಾ ಬಿಡುಗಡೆ ಕೌಂಟ್‌ಡೌನ್ ಶುರು
ಕನ್ನಡಿಗರ ಪ್ರೀತಿಯ ಪುಟ್ಟಿ ಯಾಕ್ ಹೀಗಾದ್ರು? Rukmini Vasanth ನ್ಯೂ ಲುಕ್ ವೈರಲ್