ಡಾ ರಾಜ್‌ ಜೊತೆ ಭವ್ಯಾ ಒಮ್ಮೆಯೂ ನಟಿಸಲಿಲ್ಲ; ಹೊರಬಿದ್ದಿರುವ ಆ ಗುಟ್ಟು ನಿಜವೇ?

By Shriram Bhat  |  First Published Nov 23, 2024, 3:48 PM IST

ಒಮ್ಮೆ ಸಂದರ್ಶನವೊಂದರಲ್ಲಿ ನಟಿ ಭವ್ಯಾ ಅವರೇ ಸ್ವತಃ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. 'ನಾನು ಕನ್ನಡ ಚಿತ್ರರಂಗದಲ್ಲಿ ಬೇರೆ ಎಲ್ಲಾ ದಿಗ್ಗಜರ ಜೊತೆಯೂ ತೆರೆ ಹಂಚಿಕೊಂಡಿದ್ದೇನೆ. ಆದರೆ, ಡಾ ರಾಜ್‌ಕುಮಾರ್ ಜೊತೆ ಮಾತ್ರ ನನಗೆ ನಟಿಸಲು ಸಾಧ್ಯವಾಗಲಿಲ್ಲ. ಅದು ನನಗೆ ನಿಜವಾಗಿಯೂ ..


ಡಾ ರಾಜ್‌ಕುಮಾರ್ (Dr Rajkumar) ಜೊತೆ ನಟಿ ಭವ್ಯಾ (Bhavya) ಒಂದೇ ಒಂದು ಸಿನಿಮಾ ಮಾಡಲಿಲ್ಲ. 80ರ ದಶಕದ ಸ್ಟಾರ್ ನಟಿ ಎನಿಸಿದ್ದ ನಟಿ ಭವ್ಯಾ ಅವರು ಕನ್ನಡ ಸೇರಿದಂತೆ, ತೆಲುಗು ಹಾಗೂ ಮಲಯಾಳಂ ಚಿತ್ರರಂಗದಲ್ಲಿ ಸಹ ಮಿಂಚಿದವರು. ಭವ್ಯಾ ಅವರು ಅಂದಿನ ಕಾಲದ ಅತಿರಥ ಮಹಾರಥರು ಎನ್ನಿಸಿದ್ದ ನಟರೆಲ್ಲರ ಜೊತೆಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಕನ್ನಡದಲ್ಲಿ ನಟ ಸಾಹಸಸಿಂಹ ವಿಷ್ಣುವರ್ಧನ್, ರೆಬಲ್ ಸ್ಟಾರ್ ಅಂಬರೀಷ್, ಶಂಕರ್ ನಾಗ್, ಅನಂತ್‌ ನಾಗ್ ಹಾಗೂ ಚರಣರಾಜ್ ಜೊತೆ ಕೂಡ ನಟಿಸಿದ್ದಾರೆ. ಆದರೆ ಡಾ ರಾಜ್‌ಕುಮಾರ್ ಜೋಡಿಯಾಗಿ ಮಾತ್ರ ನಟಿಸಲಿಲ್ಲ ಯಾಕೆ?

ಒಮ್ಮೆ ಸಂದರ್ಶನವೊಂದರಲ್ಲಿ ನಟಿ ಭವ್ಯಾ ಅವರೇ ಸ್ವತಃ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. 'ನಾನು ಕನ್ನಡ ಚಿತ್ರರಂಗದಲ್ಲಿ ಬೇರೆ ಎಲ್ಲಾ ದಿಗ್ಗಜರ ಜೊತೆಯೂ ತೆರೆ ಹಂಚಿಕೊಂಡಿದ್ದೇನೆ. ಆದರೆ, ಡಾ ರಾಜ್‌ಕುಮಾರ್ ಜೊತೆ ಮಾತ್ರ ನನಗೆ ನಟಿಸಲು ಸಾಧ್ಯವಾಗಲಿಲ್ಲ. ಅದು ನನಗೆ ನಿಜವಾಗಿಯೂ ಬೇಸರದ ಸಂಗತಿ' ಎಂದಿದ್ದರು ಭವ್ಯಾ. ಡಾ ರಾಜ್‌ಕುಮಾರ್ ಅವರು ನಟಿಸುತ್ತಿದ್ದ ಕಾಲದಲ್ಲಿಯೇ ಬೇರೆ ನಟರುಗಳ ಬಹಳಷ್ಟು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ ನಟಿ ಭವ್ಯ! ಹಾಗಿದ್ದರೂ ಅಣ್ಣಾವ್ರ ಜೊತೆ ಯಾಕೆ ನಟಿಸಲಿಲ್ಲ?

Tap to resize

Latest Videos

undefined

ದೊಡ್ಮನೆಯ ಮೊದಲ ಲವ್ ಸ್ಟೋರಿ ರಿವೀಲ್; ಶಿವಣ್ಣನ ಮದುವೆಯಲ್ಲೇ ನಡೆದಿತ್ತು ಕಣ್ಣಾಮುಚ್ಚಾಲೆ!

ಅದಕ್ಕೆ ನಿಜವಾದ ಕಾರಣ ಏನು ಎನ್ನುವುದು ಯಾರಿಗೂ ಗೊತ್ತಿಲ್ಲ. ಆದರೆ, ಹಲವರ ಪ್ರಕಾರ, ಅದಕ್ಕೆ ಕಾರಣ ಅವರಿಬ್ಬರ ಡೇಟ್ಸ್ ಹೊಂದಾಣಿಕೆ ಆಗದೇ ಇರುವುದು. ಅಂದು ಡಾ ರಾಜ್‌ಕುಮಾರ್ ಚಿತ್ರಗಳನ್ನು ನಿರ್ಮಿಸುತ್ತಿದ್ದುದು ಸ್ವತಃ ಪಾರ್ವತಮ್ಮನವರು. ಹೀಗಾಗಿ ಸಹಜವಾಗಿಯೇ ಡಾ ರಾಜ್‌ ಎದುರು ನಟಿಸಬೇಕಾದ ನಾಯಕಿಯನ್ನು ಸ್ವತಃ ಪಾರ್ವತಮ್ಮನವರೇ (Parvathamma Rajkumar) ಆಯ್ಕೆ ಮಾಡುತ್ತಿದ್ದರಂತೆ. (ಬಳಿಕ, ಅದೇ ಅವರ ಮಕ್ಕಳ ವಿಷಯದಲ್ಲೂ ಬಳಿಕ ಮುಂದುವರಿದಿದೆ).

ಒಮ್ಮೆ ಯಾರೋ ನಿರ್ದೇಶಕರು ನಟಿ ಭವ್ಯಾ ಹೆಸರನ್ನು ಡಾ ರಾಜ್‌ ಎದುರು ಸೂಚಿಸಿದಾಗ ಪಾರ್ವರಮ್ಮನವರು 'ಭವ್ಯಾ ಡೇಟ್ಸ್ ಇಲ್ಲ' ಎಂದಿದ್ದರಂತೆ. ಹಾಗಿದ್ದರೆ, ಪಾರ್ವತಮ್ಮನವರು ಯಾವುದೇ ಚಿತ್ರದಲ್ಲಿ ಡಾ ರಾಜ್‌ ಎದುರು ಭವ್ಯಾರನ್ನು ನಾಯಕಿ ಮಾಡಲೇ ಇಲ್ಲ ಯಾಕೆ ಎಂದರೆ, ಭವ್ಯಾ ಆಗಿನ್ನೂ ಎಳಸು, ಅವರಿಗೆ ವಯಸ್ಸು ಆಗ ಇಪ್ಪತ್ತು ಕೂಡ ಆಗಿರಲಿಲ್ಲ. ವಯಸ್ಸು ಐವತ್ತು ದಾಟಿದ್ದ ಡಾ ರಾಜ್‌ ಅವರಿಗೆ ಭವ್ಯಾ ಜೋಡಿಯಾದರೆ ಸರಿ ಆಗುವುದಿಲ್ಲ. ಈ ಜೋಡಿ ನೋಡಿದರೆ ಅಪ್ಪ-ಮಗಳ ಥರ ಕಾಣಿಸುತ್ತಾರೆ ಎನ್ನಬಹುದು.

ರೀಲ್‌ನಲ್ಲಿ 'ರಿಯಲೀ ಸೋ ಸ್ವೀಟ್' ಎಂದಿದ್ದ ಜೋಡಿ ರಿಯಲ್‌ನಲ್ಲಿ ಹೇಗಾಗ್ಬಿಟ್ರು ನೋಡಿ!

ಇನ್ನೊಂದು ಸಂಗತಿ ಎಂದರೆ, ಇಬ್ಬರ ಕಾಲ್‌ಶೀಟ್ಸ್‌ (ಡೇಟ್ಸ್‌) ಕೂಡಿ ಬರುತ್ತಿರಲಿಲ್ಲ. ಹಾಗೂ ಬ್ಯಾಕ್ ಟು ಬ್ಯಾಕ್ ವಿಷ್ಣುವರ್ಧನ್ ಜೊತೆ ಹನ್ನೆರಡು ಚಿತ್ರಗಳಲ್ಲಿ ನಟಿಸಿದ್ದ ನಟಿ ಭವ್ಯಾ ಡೇಟ್ಸ್‌ ಡಾ ರಾಜ್‌ ಚಿತ್ರಗಳಿಗೆ ಸಿಗಲೇ ಇಲ್ಲ! ಕೆಲವರು ಇನ್ನೂ ಒಂದು ಕಾರಣವನ್ನು ಹೇಳಿದ್ದಾರೆ, ಅದು ಭವ್ಯಾ ತಮ್ಮ ಎರಡನೇ ಚಿತ್ರದಲ್ಲಿಯೇ ಬಿಕಿನಿ ತೊಟ್ಟ ಬೋಲ್ಡ್‌ ಆಗಿ ನಟಿಸಿದ್ದರು. ಹೀಗಾಗಿ ಡಾ ರಾಜ್‌ ಚಿತ್ರಗಳಿಗೆ ಅವರ ಆಯ್ಕೆ ಅಷ್ಟು ಸಮಂಜಸವಲ್ಲ ಎಂದು ಪಾರ್ವತಮ್ಮನವರು ನಿರಾಕರಿಸಿರಬಹುದು.

ಒಂದು ಚಿತ್ರದಲ್ಲಷ್ಟೇ ನಟಿ ಭವ್ಯಾ ಅವರು ತುಂಬಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು ಹೌದು, ಆದರೆ ಮಿಕ್ಕ ಚಿತ್ರಳಲ್ಲಿ ಅವರು ಪಕ್ಕಾ ಫ್ಯಾಮಿಲಿ ವುಮನ್ ಆಗಿಯೂ ನಟಿಸಿದ್ದಾರೆ. ಅಂಬರೀಷ್-ಮಾಲಾಶ್ರೀ ನಟನೆಯ 'ಹೃದಯ ಹಾಡಿತು' ಚಿತ್ರದಲ್ಲಿ ನಟಿ ಭವ್ಯಾ ಭಾವಪ್ರಧಾನ ಪಾತ್ರದಲ್ಲಿ ಮಿಂಚಿದ್ದಾರೆ. 

ಸದಾಶಿವನಗರ ಮನೆ ಒಡೆಸಿದ ಪುನೀತ್: ಜನರ ಆರೋಪಕ್ಕೆ ಕೊಟ್ಟ ಉತ್ತರಕ್ಕೆ ಜೈ ಎಂದ ಫ್ಯಾನ್ಸ್!

ನಟಿ ಭವ್ಯಾ ಅವರು ಡಾ ರಾಜ್‌ಕುಮಾರ್ ಜೋಡಿಯಾಗಿ ನಟಿಸದಿರಲು ಕಾರಣ ಹಲವು ಆಗಿರಬಹುದು. ಭವ್ಯಾರನ್ನು ಆಯ್ಕೆ ಮಾಡದಿರಲು ಡೇಟ್ಸ್‌ ಕ್ಲಾಶ್‌ ಕೂಡ ರೀಸನ್ ಇರಬಹುದು. ಅಥವಾ ಹೇಳಲಾಗದ ಕಾರಣಗಳು ಏನೇ ಇದ್ದರೂ ಕನ್ನಡ ಸಿನಿಪ್ರೇಮಿಗಳು ಭವ್ಯಾ-ರಾಜ್ ಜೋಡಿ ಚಿತ್ರವನ್ನು ಮಿಸ್ ಮಾಡಿಕೊಂಡಿದ್ದಂತೂ ಹೌದು. ಇನ್ನೆಂದೂ ಯಾರೂ ಕೂಡ ಈ ಜೋಡಿಯನ್ನು ಒಟ್ಟಿಗೇ ತೆರೆಯ ಮೇಲೆ ನೋಡಲಿ ಸಾಧ್ಯವೇ ಇಲ್ಲ ಎನ್ನುವುದು ದುರಂತ ಕಥೆ ಎಂದರೆ ತಪ್ಪಲ್ಲವೇನೋ!

click me!