ಭಜರಂಗಿ 2 ಚಿತ್ರದಲ್ಲಿ ಭಾವನಾ ಡಿಫರೆಂಟ್‌ ಗೆಟಪ್‌!

Suvarna News   | Asianet News
Published : Jan 09, 2020, 02:37 PM IST
ಭಜರಂಗಿ 2 ಚಿತ್ರದಲ್ಲಿ ಭಾವನಾ ಡಿಫರೆಂಟ್‌ ಗೆಟಪ್‌!

ಸಾರಾಂಶ

ಶಿವರಾಜ್‌ಕುಮಾರ್‌ ನಟನೆಯ ‘ಭಜರಂಗಿ 2’ ಸಿನಿಮಾ ನಿಧಾನಕ್ಕೆ ಸದ್ದು ಮಾಡಲಾರಂಭಿಸಿದೆ. ಸಂಕ್ರಾಂತಿ ಹಬ್ಬಕ್ಕೆ ಈ ಚಿತ್ರದ ವಿಶೇಷವಾದ ಲುಕ್ಕುಗಳನ್ನು ಬಿಡುಗಡೆ ಮಾಡುವ ತಯಾರಿಯಲ್ಲಿದ್ದಾಗಲೇ ಭಾವನಾ ಅವರ ಗೆಟಪ್‌ ಬಹಿರಂಗವಾಗಿದೆ. ಅವರದು ಈ ಚಿತ್ರದಲ್ಲಿ ಡಿಫರೆಂಟ್‌ ಗೆಟಪ್‌. ಹಣೆ ಮೇಲೆ ಬೊಟ್ಟು, ಕಾಡಿಗೆ, ಕುತ್ತಿಗೆಯಲ್ಲಿ ಇರುವ ತಾಯತದಿಂದಾಗಿ ಭಾವನಾರಿಗೆ ಹೊಸ ಲುಕ್‌ ಬಂದಿದೆ.

ನಿರ್ದೇಶಕ ಹರ್ಷ ಹೇಳುವಂತೆ, ಚಿತ್ರದಲ್ಲಿ ಭಾವನಾ ಅವರದ್ದು ಒಂದು ವಿಶೇಷವಾದ ಪಾತ್ರ. ಇದುವರೆಗೂ ಅವರನ್ನು ನೋಡಿರದ ಪಾತ್ರದಲ್ಲಿ ನೋಡುತ್ತೀರಿ. ಈ ಪಾತ್ರಕ್ಕೆ ಭಾವನಾ ಅವರು ಸಾಕಷ್ಟುಬದಲಾವಣೆ ಮಾಡಿಕೊಂಡಿದ್ದಾರಂತೆ.

ಮೈ ನೇಮ್ ಈಸ್ ಆಂಜಿ ಎಂದ ಜಾಕಿ ಭಾವನ!

ಸಂಕ್ರಾಂತಿ ಹಬ್ಬಕ್ಕೆ ಚಿತ್ರದ ಏಳು ಪ್ರಮುಖ ಪಾತ್ರಗಳ ಫಸ್ಟ್‌ ಲುಕ್‌ ಬಿಡುಗಡೆ ಮಾಡುವ ಜತೆಗೆ ‘ಭಜರಂಗಿ 2’ ಚಿತ್ರದ ರಿಯಲ್‌ ಪೋಸ್ಟರ್‌ ಆಚೆ ಬರಲಿದೆ. ಶೇ.75 ಭಾಗ ಶೂಟಿಂಗ್‌ ಮುಗಿಸಿದ್ದು, ಇನ್ನೂ 23 ದಿನಗಳ ಕಾಲ ಚಿತ್ರೀಕರಣ ಮಾಡುವ ಪ್ಲಾನ್‌ ನಿರ್ದೇಶಕರು ಹಾಕಿಕೊಂಡಿದ್ದಾರೆ. ಜ.10ರಿಂದ ಶೂಟಿಂಗ್‌ ಶುರುವಾಗಲಿದೆ. ವಿಶೇಷ ಅಂದರೆ ಇಡೀ ಸಿನಿಮಾ ಬೆಂಗಳೂರಿನಲ್ಲೇ ಚಿತ್ರೀಕರಣ ನಡೆಯುತ್ತಿದ್ದು, ಸೆಟ್‌ಗಳಲ್ಲಿ ಸಂಪೂರ್ಣವಾಗಿ ಮೇಕಿಂಗ್‌ ಮಾಡಲಾಗುತ್ತಿದೆ. 200ಕ್ಕೂ ಹೆಚ್ಚು ತಂತ್ರಜ್ಞರು ಕಾಡು, ಹಳ್ಳಿ ಸೇರಿದಂತೆ ಬೇರೆ ಬೇರೆ ರೀತಿಯ ಸೆಟ್‌ಗಳನ್ನು ರೀ-ಕ್ರಿಯೇಟ್‌ ಮಾಡಿದ್ದಾರೆ. ಸೆಟ್‌ಗಳ ಹೊರತಾಗಿ ಒಂದೊಂದು ದೃಶ್ಯವನ್ನೂ ಚಿತ್ರೀಕರಣ ಮಾಡಿಲ್ಲ.

ನಾಯಕಿಯಿಂದ ನಿರ್ದೇಶಕಿಯಾದ 'ಗಾಳಿಪಟ' ಹುಡುಗಿ!

‘ಹಬ್ಬಕ್ಕೆ ಚಿತ್ರದ ಪಾತ್ರಗಳನ್ನು ರಿವಿಲ್‌ ಮಾಡಿದ ಮೇಲೆ ‘ಭಜರಂಗಿ 2’ ಏನೂ ಅಂತ ಗೊತ್ತಾಗಲಿದೆ. ತುಂಬಾ ಕಡಿಮೆ ಜನಕ್ಕೆ ಗೊತ್ತಿರುವ ಮತ್ತು ಪುರಾಣಗಳ ಬಗ್ಗೆ ತಿಳುವಳಿಕೆ ಇರುವವರಿಗೆ ಮಾತ್ರ ಗೊತ್ತಿರುವ ಕತೆಯೊಂದನ್ನು ಈ ಚಿತ್ರದ ಮೂಲಕ ಹೇಳುವುದಕ್ಕೆ ಹೊರಟಿದ್ದೇನೆ. ಎಲ್ಲವೂ ಅಂದುಕೊಂಡಂತೆ ಆದರೆ, ಮೇ ತಿಂಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ದೃಶ್ಯ ವೈಭವ ಹಾಗೂ ಕಟೆಂಟ್‌ ಈ ಚಿತ್ರದ ಹೈಲೈಟ್‌. ಮೊದಲ ಭಾಗದ ಮುಂದುವರಿದ ಕತೆ ಅಲ್ಲ ಇದು. ‘ಭಜರಂಗಿ 2’ ಚಿತ್ರದ್ದು ಬೇರೆಯದ್ದೇ ಕತೆ’ ಎನ್ನುತ್ತಾರೆ ನಿರ್ದೇಶಕ ಹರ್ಷ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ