ಕೊನೆಗೂ ರಿವೀಲ್ ಆಯ್ತು ಧ್ರುವ ಸರ್ಜಾ ಕಾರ್ ನಂಬರ್ ಸಿಕ್ರೇಟ್ !

Suvarna News   | Asianet News
Published : Jan 09, 2020, 12:32 PM IST
ಕೊನೆಗೂ ರಿವೀಲ್ ಆಯ್ತು ಧ್ರುವ ಸರ್ಜಾ ಕಾರ್ ನಂಬರ್ ಸಿಕ್ರೇಟ್ !

ಸಾರಾಂಶ

ಸ್ಯಾಂಡಲ್‌ವುಡ್ ಆ್ಯಕ್ಷನ್ ಪ್ರಿನ್ಸ್  ಧ್ರುವ ಸರ್ಜಾ ಇತ್ತೀಚಿಗೆ ತಮ್ಮ ಬಾಲ್ಯದ ಗೆಳತಿ ಪ್ರೇರಣ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಜೀವನದ ಅತ್ಯಮೂಲ್ಯ ದಿನದಂದು ಬರೋಬ್ಬರಿ 1  ಕೋಟಿ ರೂಪಾಯಿ ಮೌಲ್ಯದ ಪೋರ್ಶೆ ಮಕಾನ್ ಎಸ್‌ ಕಾರು ಬರಮಾಡಿಕೊಂಡಿದ್ದರು, ಈ ವೇಳೆ ಅವರ ಕಾರಿನ ನಂಬರ್ ಅಭಿಮಾನಿಗಳ ಗಮನ ಸೆಳೆದಿತ್ತು. ಸದ್ಯ ಈ ನಂಬರ್ ರಹಸ್ಯ ರಿವೀಲ್ ಮಾಡಿದ್ದಾರೆ...  

'ಅದ್ಧೂರಿ'ಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ಧ್ರುವ ಸರ್ಜಾ 'ಬಹದ್ದೂರ್' ಸ್ಟಾರ್‌ ನಟನಾಗಿ 'ಭರ್ಜರಿ'ಯಾಗಿ ಅಭಿಮಾನಿಗಳ ಪ್ರೀತಿ ಗಳಿಸಿಕೊಂಡರು. ಇದರ ಬೆನ್ನಲ್ಲೇ ವರ್ಷಗಳ ತಯಾರಿ ಮಾಡಿಕೊಂಡು ಜನರ ಮುಂದೆ 'ಪೊಗರು' ತೋರಿಸಲು ಸಜ್ಜಾಗುತ್ತಿದ್ದಾರೆ. 

ಮದ್ವೆ ನಂತರ ಅದ್ಧೂರಿ ಕಾರು ಕೊಂಡ ಭರ್ಜರಿ ನಟ

ಕೆಲ ತಿಂಗಳ ಹಿಂದಷ್ಟೇ ಬಾಲ್ಯದ ಗೆಳತಿ ಪ್ರೇರಣ ಶಂಕರ್‌ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 2018ರ ಡಿಸೆಂಬರ್‌ 9 ರಂದು ಬೆಂಗಳೂರಿನ ದೇವಗಿರಿ ವೆಂಕಟೇಶ್ವರ ದೇವಸ್ಥಾನದಲ್ಲಿ ಗುರು ಹಿರಿಯರ ಸಮುಖದಲ್ಲಿ ನಿಶ್ಚಿತಾರ್ಥವಾಗಿತ್ತು. ಹೀಗಿರುವಾಗ 2019ರ ಡಿಸೆಂಬರ್ ನಲ್ಲಿ ನಿಶ್ಚಿತಾರ್ಥವಾಗಿ 1 ವರ್ಷದ ಸಂಭ್ರಮಾಚರಣೆ ವೇಳೆ, ಪೋರ್ಶೆ ಮಕಾನ್ ಎಸ್‌ ಕಾರ್‌ ಖರೀದಿಸಿದ್ದರು. 

ಕಾರು ಪೂಜಿಸುತ್ತಿರುವ ವಿಡಿಯೋವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಗೆ ಅಪ್ಲೋಡ್ ಮಾಡುವ ಮೂಲಕ ಅಭಿಮಾನಿಗಳೊಂದಿಗೆ ಈ ಖುಷಿಯನ್ನು ಹಂಚಿಕೊಂಡಿದ್ದರು. ಅಲ್ಲದೇ 'ಒಂದೇ ದಿನ ಹಲವು ವಿಶೇಷತೆಗಳಿದ್ದಾಗ ನಿಮ್ಮೊಡನೆ ಹಂಚಿಕೊಳ್ಳೋ ಖುಷಿ. ಮೊದಲಿಗೆ ಇಷ್ಟ ದೇವರು #ಹನುಮಜಯಂತಿ.ನನ್ನೆಲ್ಲಾ ಹಿತೈಷಿ, ಕನ್ನಡ ಬಂಧುಗಳಿಗೆ ಹನುಮದೇವರ ಕೃಪಾಶೀರ್ವಾದವಿರಲಿ! ಇಂದಿಗೆ ನಾವು ನಿಶ್ಚಿತಾರ್ಥವಾಗಿ 1 ವರ್ಷ! ಜೊತೆಗೆ ಹೊಸ ಅತಿಥಿಯಾಗಿ ಕಾರು ಆಗಮನ ಇನ್ನಷ್ಟು ಸಂಭ್ರಮ. ಆಂಜನೇಯನ ಆಶೀರ್ವಾದ, ನಿಮ್ಮೆಲ್ಲರ ಹಾರೈಕೆ ನಮಗೆ ಶ್ರೀರಕ್ಷೆ. ಜೈ ಆಂಜನೇಯ' ಎಂದು ಬರೆದುಕೊಂಡಿದ್ದರು.

ಪತ್ನಿ ಜೊತೆ ಧ್ರುವ ಸರ್ಜಾ ಹಾರ್ಸ್ ರೈಡಿಂಗ್; ವಿಡಿಯೋ ವೈರಲ್

ಧ್ರುವ ಸರ್ಜಾ ಖರೀದಿಸಿದ್ದ ಜೆಟ್ ಬ್ಲಾಕ್‌ ಕಾರಿನ ಮತ್ತೊಂದು ವಿಶೇಷತೆಯೇ ನಂಬರ್ ’ಕೆಎ 18 ಎಂಎ 0006’. ಧ್ರುವ ಸರ್ಜಾ ಹುಟ್ಟಿದ ದಿನಾಂಕ, ಪ್ರೇರಣಾ ಬರ್ತ್ ಡೇಟ್ ಹಾಗೂ ಮದುವೆ ಡೇಟ್ ಹೀಗೆ ಒಟ್ಟಾಗಿ ಸೇರಿಕೊಂಡು ಕ್ರಿಯೇಟ್ ಆಗಿರುವ ನಂಬರ್. ಧ್ರುವ ಹುಟ್ಟಿದ ದಿನ 06, ಪ್ರೇರಣಾ ಬರ್ತ್ ಡೇಟ್ 18, ಹಾಗೂ 24 ಇಬ್ಬರೂ ಮದುವೆಯಾದ ದಿನಾಂಕ. 18+6=24.

ಸದ್ಯ ಈ ರಹಸ್ಯವನ್ನೂ ಧ್ರುವ ಸರ್ಜಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಮೂಲಕ ರಿವೀಲ್ ಮಾಡಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಪಹಲ್ಗಾಮ್‌ನಲ್ಲಿ ಶೂಟಿಂಗ್.. ಗಣೇಶ್-ರಮೇಶ್ ಅರವಿಂದ್ ಹೇಳೋದೇನು? ಸುರಕ್ಷತೆ ಇದೆಯಾ ಅಲ್ಲಿ?
ಶ್ರೀಮಂತರ ಮನೆಗೆ ಹೆಣ್ಣು ಮಕ್ಕಳನ್ನು ಸೊಸೆಯಾಗಿ ಕಳಿಸೋದೇ ಈ ತಾಯಿ ಗುರಿ; Gowri Kalyana Serial