ಇಷ್ಟೊಂದು ದುಡ್ಡು, ಪವರ್ ಇಟ್ಟುಕೊಂಡಿರುವ ನನಗೇ ಯಾಮಾರಿಸಿದ್ರು: ನಟ ಝೈದ್ ಖಾನ್

Kannadaprabha News   | Kannada Prabha
Published : Jan 06, 2026, 09:15 AM IST
Zaid Khan

ಸಾರಾಂಶ

ನಟ ಝೈದ್ ಖಾನ್ ಕನ್ನಡ ಚಿತ್ರರಂಗದಲ್ಲಿನ ಥಿಯೇಟರ್ ಮಾಫಿಯಾ ವಿರುದ್ಧ ಧ್ವನಿ ಎತ್ತಿದ್ದು, ಹೊಸಬರ ಸಿನಿಮಾಗಳಿಗೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿದ್ದಾರೆ. ತಮ್ಮದೇ ಅನುಭವವನ್ನು ಹಂಚಿಕೊಂಡ ಅವರು, ಫಿಲಂ ಛೇಂಬರ್ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. 

ದಾವಣಗೆರೆ: ಕನ್ನಡ ಚಿತ್ರರಂಗದಲ್ಲಿ ಹೊಸಬರ ಸಿನಿಮಾಗಳಿಗೆ ಥಿಯೇಟರ್ ಮಾಫಿಯಾ ಕಾಟವಿದೆ. ಇಂತಹ ಥಿಯೇಟರ್ ಮಾಫಿಯಾ ವಿರುದ್ಧ ಫಿಲಂ ಛೇಂಬರ್ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಸತಿ ಸಚಿವ ಜಮೀರ್ ಅಹ್ಮದ್ ಪುತ್ರ, ಕಲ್ಟ್‌ ಸಿನಿಮಾ ನಾಯಕ ನಟ ಝೈದ್ ಖಾನ್ ಒತ್ತಾಯಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೈರಸಿ ಮಾಫಿಯಾಗಿಂದಲೂ ಥಿಯೇಟರ್ ಮಾಫಿಯಾ ಕನ್ನಡ ಸಿನಿಮಾಗಳು ಅದರಲ್ಲೂ ಹೊಸಬರ ಸಿನಿಮಾಗಳಿಗೆ ಕಾಟ ನೀಡುತ್ತಿದೆ. ಥಿಯೇಟರ್‌ ಮಾಫಿಯಾದಿಂದ ಏನು ಸಂಕಷ್ಟ ಅನುಭವಿಸಿದ್ದೇನೆ ಅಂತ ನನಗೇ ಗೊತ್ತು. ನನಗೊಂದು ಬ್ಯಾಕ್ ಗ್ರೌಂಡ್‌ ಇತ್ತು, ನೆಟ್‌ವರ್ಕ್ ಇತ್ತು. ನನ್ನ ಮೊದಲ ಚಿತ್ರಕ್ಕೆ ನೂರು ಸ್ಕ್ರೀನ್ ನೀಡಿದ್ದರು. ಅದಾಗಿ 3-4 ದಿನದಲ್ಲೇ ಅದು 50 ಸ್ಕ್ರೀನ್‌ಗೆ ಇಳಿದಿತ್ತು ಎಂದರು.

ಫಿಲಂ ಛೇಂಬರ್ ನೋಟಿಸ್ ನೀಡಬೇಕು

ಕನ್ನಡ ಸಿನಿಮಾಗಳಿಗೆ ಕನಿಷ್ಠ ಇಂತಿಷ್ಟು ಸ್ಕ್ರೀನ್ ಅಂತಾ ಕಡ್ಡಾಯವಾಗಿ ಕೊಡಬೇಕು. ಫಿಲಂ ಛೇಂಬರ್ ನೋಟಿಸ್ ನೀಡಬೇಕು. ಇಷ್ಟೊಂದು ದುಡ್ಡು, ಪವರ್ ಇಟ್ಟುಕೊಂಡಿರುವ ನನಗೇ ಯಾಮಾರಿಸಿದ್ದಾರೆಂದರೆ ಏನೂ ಬ್ಯಾಕ್‌ ಗ್ರೌಂಡ್ ಇಲ್ಲದ, ಸಿನಿಮಾ, ಚಿತ್ರರಂಗವನ್ನೇ ನಂಬಿ ಬರುವ ಹೊಸಬರ ಕಥೆ ಏನಾಗಬೇಡ ಎಂದು ಝೈದ್‌ ಪ್ರಶ್ನಿಸಿದರು.

ಟೆಕ್ನಾಲಜಿ ನೆಕ್ಸ್ಟ್‌ ಲೆವೆಲ್‌ಗೆ ಬಂದಿದೆ. ಇದರಿಂದಾಗಿ ಪೈರಸಿ ತಡೆಯುವುದು ಕಷ್ಟವಾಗುತ್ತದೆ. ಈ ನಿಟ್ಟಿನಲ್ಲಿ ಫಿಲಂ ಛೇಂಬರ್ ಫೈರಸಿ ತಡೆಯಲು ಏನೆಲ್ಲಾ ಹೊಸ ತಾಂತ್ರಿಕ ವಿಧಾನ ಏನಿವೆಯೋ ಅವುಗಳನ್ನೆಲ್ಲಾ ಮಾಡಬೇಕು. ಅದೇ ರೀತಿ ಥಿಯೇಟರ್ ಮಾಫಿಯಾದ ಕಾಟವನ್ನೂ ತಪ್ಪಿಸಬೇಕು ಎಂದು ನಟ ಝೈದ್ ಖಾನ್ ಮನವಿ ಮಾಡಿದರು.

23ರಂದು ರಾಜ್ಯಾದ್ಯಂತ ಕಲ್ಟ್‌ ತೆರೆಗೆ: ಝೈದ್

ಉತ್ತಮ ಮನರಂಜನೆ, ಅದ್ಭುತ ಸಂದೇಶ ಹೊಂದಿರುವ ಕಲ್ಟ್ ಸಿನಿಮಾ ಜ.23ರಂದು ರಾಜ್ಯಾದ್ಯಂತ 150ಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ತೆರೆಗೆ ಬರಲಿದೆ ಎಂದು ಚಿತ್ರದ ನಾಯಕ ನಟ ಝೈದ್ ಖಾನ್ ಹೇಳಿದರು. ಪ್ರೇಕ್ಷಕರಿಗೆ ಇಷ್ಟವಾಗುವ ಎಲ್ಲ ಅಂಶಗಳನ್ನೂ ಕಲ್ಟ್ ಸಿನಿಮಾ ಹೊಂದಿದೆ. ಪ್ರತಿಯೊಬ್ಬ ಪ್ರೇಕ್ಷಕರೂ ಚಿತ್ರ ಮಂದಿರದಲ್ಲೇ ಸಿನಿಮಾ ನೋಡಿ ಪ್ರೋತ್ಸಾಹಿಸಬೇಕು. ವಿಜಯ ನಗರದಿಂದ ಸಿನಿಮಾದ ಪ್ರಚಾರ ಆರಂಭಿಸಿದ್ದು, ರಾಜ್ಯಾದ್ಯಂತ ಕಲ್ಟ್ ಸಿನಿಮಾ ಪ್ರಚಾರ ಕೈಗೊಂಡಿದ್ದೇವೆ ಎಂದರು.

ಚಿತ್ರದ ನಿರ್ದೇಶಕ ಟಿ.ಎಂ. ಅನಿಲಕುಮಾರ ಮಾತನಾಡಿ, ಕಲ್ಟ್ ಸಿನಿಮಾದ ಶೂಟಿಂಗ್ ಹೆಚ್ಚಾಗಿ ಹೊಸಪೇಟೆ ಭಾಗದಲ್ಲೇ ಆಗಿದೆ. ಕಲ್ಟ್ ಎನ್ನುವುದು ಸಂಸ್ಕೃತಿ, ವ್ಯಕ್ತಿತ್ವವನ್ನು ಬಿಂಬಿಸುತ್ತದೆ. ನಾಯಕ ವಿಭಿನ್ನ ವ್ಯಕ್ತಿತ್ವ ಹೊಂದಿರುವ ಕಾರಣ ಕಲ್ಟ್ ಶೀರ್ಷಿಕೆ ಇಡಲಾಗಿದೆ. ನಾಯಕಿಯರಾಗಿ ಮಲೈಕಾ ವಸುಪಾಲ್, ರಚಿತಾ ರಾಮ್‌ ಅಭಿನಯಿಸಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: ಅದೊಂದು ತಪ್ಪು ಮಾಡಿ Bigg Boss ಟ್ರೋಫಿಯಿಂದ ದೂರ ಆಗ್ತಿದ್ದಾರಾ Ashwini Gowda? ಕಂಪೆನಿ HR ಏನಂತಾರೆ?

ನನ್ನೂರು ದಾವಣಗೆರೆಯಲ್ಲೇ ಕಲ್ಟ್ ಸಿನಿಮಾದ ಪ್ರಮೋಷನ್

ಚಿತ್ರದ ನಾಯಕಿ, ದಾವಣಗೆರೆ ಹುಡುಗಿ ಮಲೈಕಾ ವಸುಪಾಲ್ ಮಾತನಾಡಿ, ನನ್ನೂರು ದಾವಣಗೆರೆಯಲ್ಲೇ ಕಲ್ಟ್ ಸಿನಿಮಾದ ಪ್ರಮೋಷನ್ ನಡೆಸುತ್ತಿರುವುದು ಖುಷಿಯ ವಿಚಾರವಾಗಿದೆ. ಕಲ್ಟ್ ಸಿನಿಮಾ ಎಲ್ಲರಿಗೂ ಇಷ್ಟವಾಗುವ ನಿರೀಕ್ಷೆ ಇದೆ. ಕಲ್ಟ್ ಎಲ್ಲರ ಮನ ಗೆದ್ದು, ಯಶಸ್ವಿ ಆಗುತ್ತದೆಂಬ ಸಂಪೂರ್ಣ ವಿಶ್ವಾಸವಿದೆ ಎಂದರು. ಕೆಜಿಪಿ ಜ್ಯುವೆಲರ್ಸ್, ಕೆಜಿಪಿ ಸಮೂಹ ಸಂಸ್ಥೆಗಳ ಮಾಲೀಕ, ಕೆಜೆಪಿ ಫೌಂಡೇಷನ್ ಅಧ್ಯಕ್ಷ ಶ್ರೀಗಂಧ ಶೇಟ್, ಸಂದೇಶ್ ರಾಯ್ಕರ್, ಸಂಕೇತ್ ಶೇಟ್‌, ಪೃಥ್ವಿ, ರಾಘವೇಂದ್ರ, ರಾಜೇಶ, ರಿಜ್ವಾನ್ ಇತರರು ಇದ್ದರು.

ಇದನ್ನೂ ಓದಿ: ಅಲ್ಲು ಅರ್ಜುನ್ ಹೊಸ ಥಿಯೇಟರ್‌ನಲ್ಲಿ ಇಬ್ಬರು ಕನ್ನಡ ನಿರ್ದೇಶಕರ ಫೋಟೋ.. ಏನ್ ಇದರ ರಹಸ್ಯ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Century Gowda Death: ಗಡ್ಡಪ್ಪ ನಂತರ ತಿಥಿ ಸಿನಿಮಾದ ಸೆಂಚುರಿ ಗೌಡ ನಿಧನ!
ಕಿಚ್ಚನ ಜೊತೆ Rachita Ram ಮಾತನಾಡಲ್ವಾ? ದರ್ಶನ್ ಗ್ಯಾಂಗಿನಲ್ಲೇ ಕಾಣಿಸಿಕೊಳ್ಳೋದೇಕೆ?