ಕರಿಯ ಚಿತ್ರ ನೋಡಲು ಪ್ರಸನ್ನ ಚಿತ್ರಮಂದಿರಕ್ಕೆ ಬಂದಿರುವ ನಟ ವಿನೋದ್ ಪ್ರಭಾಕರ್ ಅವರು, ದರ್ಶನ್ ಅಭಿಮಾನಿಗಳ ಜೊತೆ ಚಿತ್ರ ನೋಡುತ್ತಿದ್ದಾರೆ. ನಟ ವಿನೋದ್ ಪ್ರಭಾಕರ್ ಅವರನ್ನು ನೋಡ್ತಿದಂತೆ ದರ್ಶನ್ ಫ್ಯಾನ್ಸ್ ಸಂಭ್ರಮಿಸಿದ್ದಾರೆ..
ದರ್ಶನ್ (Actor Darshan) ನಟನೆಯ 'ಕರಿಯ' ಸಿನಿಮಾ (Kariya) ರೀ-ರಿಲೀಸ್ ಆಗಿದ್ದು, ಅದನ್ನು ನೋಡಲು ನಟ ವಿನೋದ್ ಪ್ರಭಾಕರ್ (Vinod Prabhakar) ಅವರು ಪ್ರಸನ್ನ ಥಿಯೇಟರ್‌ಗೆ ಬಂದಿದ್ದಾರೆ. ಪ್ರೇಮ್ ನಿರ್ದೇಶನದ 'ಕರಿಯ' ಚಿತ್ರ ಬಿಡುಗಡೆಯಾಗಿ 20 ವರ್ಷ ಕಳೆದ ಹಿನ್ನೆಲೆಯಲ್ಲಿ ಈ ಚಿತ್ರವನ್ನು ಮರುಬಿಡುಗಡೆ ಮಾಡಲಾಗಿದೆ. ಬೆಂಗಳೂರಿನ ಪ್ರಸನ್ನ ಥಿಯೇಟರ್‌ನಲ್ಲಿ ಈ ಚಿತ್ರವು ಮತ್ತೆ ಬಿಡುಗಡೆ ಅಗಿದ್ದು, ಯಾವುದೇ ರೀತಿ ಅಹಿತಕರ ಘಟನೆ ನಡೆಯದಂತೆ ತಡೆಯಲು ಬಾಡಿ ವೋರ್ನ್ ಕ್ಯಾಮೆರಾ ಹಾಕಿಕೊಂಡಿರುವ ಪೊಲೀಸ್ ನಿಯೋಜಿಸಲಾಗಿದೆ.
ಕರಿಯ ಚಿತ್ರ ನೋಡಲು ಪ್ರಸನ್ನ ಚಿತ್ರಮಂದಿರಕ್ಕೆ ಬಂದಿರುವ ನಟ ವಿನೋದ್ ಪ್ರಭಾಕರ್ ಅವರು, ದರ್ಶನ್ ಅಭಿಮಾನಿಗಳ ಜೊತೆ ಚಿತ್ರ ನೋಡುತ್ತಿದ್ದಾರೆ. ನಟ ವಿನೋದ್ ಪ್ರಭಾಕರ್ ಅವರನ್ನು ನೋಡ್ತಿದಂತೆ ದರ್ಶನ್ ಫ್ಯಾನ್ಸ್ ಸಂಭ್ರಮಿಸಿದ್ದಾರೆ. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ನಟ ವಿನೋದ್ ಪ್ರಭಾಕರ್ 'ನಾನು ಕಾಟೇರ, ಕ್ರಾಂತಿ ಎಲ್ಲಾ ಸಿನಿಮಾಗಳ ಫಸ್ಟ್ ಡೇ ಫಸ್ಟ್ ಶೋಗೆ ಬಂದಿದ್ದೆ. ಈಗ ಅದೇ ರೀತಿಲ್ಲಿ 'ಕರಿಯ' ಚಿತ್ರವನ್ನು ನೋಡಲು ಬಂದಿದ್ದೀನಿ' ಎಂದಿದ್ದಾರೆ.
ದರ್ಶನ್ 'ಕರಿಯ' ರೀ-ರಿಲೀಸ್, ಪ್ರಸನ್ನ ಮುಂದೆ ಬಾಡಿ ವೋರ್ನ್ ಕ್ಯಾಮೆರಾ ಪೊಲೀಸ್ ನಿಯೋಜನೆ!
ದರ್ಶನ್ 'ಕರಿಯ' ರೀ-ರಿಲೀಸ್, ಪ್ರಸನ್ನ ಮುಂದೆ ಬಾಡಿ ವೋರ್ನ್ ಕ್ಯಾಮೆರಾ ಪೊಲೀಸ್ ನಿಯೋಜನೆ!ಮುಂದುವರೆದು ನಟ ವಿನೋದ್ ಪ್ರಭಾಕರ್ 'ನಮ್ಮ ಸ್ನೇಹಿತ ಮುನಿಸ್ವಾಮಿ ಕರಿಯ ಚಿತ್ರವನ್ನ ರೀ-ರಿಲೀಸ್ ಮಾಡಿದ್ದಾರೆ. ನನಗೆ ಕಾಲ್ ಮಾಡಿ ಕೇಳಿದ್ರು, ಏನೇ ಸಫೋರ್ಟ್ ಬೇಕು ಅಂದ್ರೂ ಮಾಡ್ತಿನಿ ಅಂದಿದ್ದೆ. ಈ ಸಿನಿಮಾ ಮಾತ್ರವಲ್ಲ, ಕನ್ನಡದ ಎಲ್ಲಾ ಚಿತ್ರಗಳಿಗೂ ಒಳ್ಳೆದಾಗಲಿ, ಪೆಪೆ ಚಿತ್ರಕ್ಕೂ ಒಳ್ಳೆದಾಗಲಿ' ಎಂದಿದ್ದಾರೆ ನಟ ವಿನೋದ್ ಪ್ರಭಾಕರ್.
'ನಿಮ್ಮ ಸ್ನೇಹಿತ ದರ್ಶನ್ ಅವರನ್ನು ಎಷ್ಟು ಮಿಸ್ ಮಾಡ್ಕೋತೀರ' ಎಂಬ ಪ್ರಶ್ನೆ ಕೇಳಿದಾಗ 'ಖಂಡಿತಾ ಒಂದು ಮಾತು ಹೇಳೋಕೆ ನಾನು ಇಷ್ಟ ಪಡ್ತಿನಿ, ಚೆನ್ನಾಗಿದ್ದಾಗ ಮಾತ್ರ ಜೊತೆಲಿ ಇರೋದು ಎಂಥಾ ಫ್ರೆಂಡ್ ಶಿಪ್? ಈಗ ಸಿನಿಮಾ ನೋಡೊಕೆ ಬಂದಿದ್ದೀನಿ, ಬಳ್ಳಾರಿಗೆ ಹೋಗೊದ್ರ ಬಗ್ಗೆ ಅಮೇಲೆ ಹೇಳ್ತಿನಿ..' ಎಂದಿದ್ದಾರೆ ನಟ ವಿನೋದ್ ಪ್ರಭಾಕರ್. ಸದ್ಯ ಅವರು ಕರಿಯ ಚಿತ್ರವನ್ನು ಅಲ್ಲಿರುವ ದರ್ಶನ್ ಅಭಿಮಾನಿಗಳ ಜೊತೆ ನೋಡಲು ಥಿಯೇಟರ್ ಒಳಗೆ ಹೋಗಿದ್ದಾರೆ.
ತೊಡೆಯಿಂದ ಸೀಟ್ ಕೆಳಗೆ ಬಾಂಬ್ ಟ್ರಾನ್ಸ್‌ಫರ್ ಮಾಡೋದ್ರಲ್ಲಿ ಅರ್ಥವೇ ಇಲ್ಲ; ರಮೇಶ್ ಅರವಿಂದ್!