ಶಿವಣ್ಣನ ಹೊಸ ಅವತಾರ: ನಿರೂಪ್‌ ‘ಸತ್ಯ ಸನ್‌ ಆಫ್‌ ಹರಿಶ್ಚಂದ್ರ’ದಲ್ಲಿ ಏನಿದು ಸರ್ಪ್ರೈಸ್‌?

Published : Oct 24, 2026, 03:16 PM IST
Satya Son of Harishchandra

ಸಾರಾಂಶ

‘ಸತ್ಯ ಸನ್‌ ಆಫ್‌ ಹರಿಶ್ಚಂದ್ರ’ ಚಿತ್ರದಲ್ಲಿ ಶಿವರಾಜ್‌ಕುಮಾರ್‌ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಿರೂಪ್‌ ಭಂಡಾರಿ ಹಾಗೂ ಸಾಯಿಕುಮಾರ್‌ ಅವರ ಕಾರಣಕ್ಕೆ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿರುವುದಾಗಿ ಶಿವಣ್ಣ ತಿಳಿಸಿದ್ದಾರೆ.

ನಿರೂಪ್‌ ಭಂಡಾರಿ ನಟನೆಯ ‘ಸತ್ಯ ಸನ್‌ ಆಫ್‌ ಹರಿಶ್ಚಂದ್ರ’ ಚಿತ್ರದಲ್ಲಿ ಶಿವರಾಜ್‌ಕುಮಾರ್‌ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ‘ನಾನು ಈ ಚಿತ್ರದಲ್ಲಿ ನಟಿಸಲು ಕಾರಣ ನಿರೂಪ್‌ ಭಂಡಾರಿ ಹಾಗೂ ಸಾಯಿಕುಮಾರ್‌. ಅವರ ಜೊತೆಗೆ ನನ್ನೊಂದು ವಿಭಿನ್ನ ರೀತಿಯ ಪಾತ್ರ. ಹೀಗಾಗಿ ತುಂಬಾ ಖುಷಿಯಿಂದಲೇ ಈ ಚಿತ್ರದಲ್ಲಿ ನಟಿಸಿದ್ದೇನೆ. ಈ ಚಿತ್ರದಲ್ಲಿನ ನನ್ನ ಪಾತ್ರದ ಲುಕ್‌ ಕೂಡ ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ’ ಎಂದು ಶಿವರಾಜ್‌ಕುಮಾರ್‌ ಹೇಳಿಕೊಂಡಿದ್ದಾರೆ.

ಸಚಿನ್‌ ನಿರ್ದೇಶನದ ಈ ಚಿತ್ರದಲ್ಲಿ ಬೃಂದಾ ಆಚಾರ್ಯ ಹಾಗೂ ಅಂಕಿತಾ ಅಮರ್‌ ನಾಯಕಿಯರು. ನಿರೂಪ್‌ ಭಂಡಾರಿ ಅವರೇ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಈ ಚಿತ್ರದಲ್ಲಿ ಅವರದ್ದು ಯಾವುದೇ ಸಮಸ್ಯೆಗೆ ತುಂಬಾ ವಿಚಿತ್ರವಾಗಿ ಯೋಚಿಸಿ ಪರಿಹಾರ ಹೇಳುವಂತಹ ಪಾತ್ರ. ಸ್ವಾತಿ ಗುರುದತ್‌, ಎಂ.ಕೆ. ಮಠ, ಚೇತನ್‌ ದುರ್ಗಾ ಚಿತ್ರದಲ್ಲಿ ನಟಿಸಿದ್ದಾರೆ. ಅಂಕಿತ್‌ ಸೋನಿಗಾರ ನಿರ್ಮಿಸುತ್ತಿದ್ದು, ಪ್ರಶಾಂತ್ ಮುಲಗೆ ಸಹ ನಿರ್ಮಾಪಕರು.

ಹಾಸ್ಯ ಮತ್ತು ಸಾಮಾಜಿಕ ಕಥಾಹಂದರ

ತೀರ್ಥಹಳ್ಳಿ, ಚನ್ನಗಿರಿ ಸೇರಿದಂತೆ ಮಲೆನಾಡಿನ ವಿವಿಧೆಡೆ ಚಿತ್ರೀಕರಣ ನಡೆದಿದೆ. ಮೊದಲಾರ್ಧ ಹಾಸ್ಯಮಯವಾಗಿದ್ದು, ದ್ವಿತೀಯಾರ್ಧದಲ್ಲಿ ಸಾಮಾಜಿಕ ಕಾಳಜಿಯ ಸಂದೇಶದೊಂದಿಗೆ ಕೋರ್ಟ್‌ರೂಮ್‌ ಡ್ರಾಮಾ ಇರಲಿದೆ ಎಂದು ನಿರ್ದೇಶಕ ಸಚಿನ್ ತಿಳಿಸಿದ್ದಾರೆ. ಸಾಯಿಕುಮಾರ್, ಸ್ವಾತಿ ಗುರುದತ್, ಎಂ.ಕೆ. ಮಠ ಮತ್ತು ಚೇತನ್ ದುರ್ಗಾ ಇತರ ತಾರಾಗಣದಲ್ಲಿದ್ದಾರೆ. ಹಾಸ್ಯ ಮತ್ತು ಸಾಮಾಜಿಕ ಕಥಾಹಂದರದ ‘ಸತ್ಯ ಸನ್‌ ಆಫ್‌ ಹರಿಶ್ಚಂದ್ರ’ ಚಿತ್ರಕ್ಕೆ ಸಚಿನ್ ಬಸ್ರೂರು ಅವರ ಸಂಗೀತ ಮತ್ತು ಉಜ್ವಲ್ ಚಂದ್ರ ಅವರ ಸಂಕಲನವಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಶ್ರೀನಾಥ್ ಕೆನ್ನೆಗೆ ಮುತ್ತಿಟ್ಟ ಅಂಬಿಕ.. ಪ್ರಣಯ ರಾಜನ ರಿಯಾಕ್ಷನ್‌ ನೋಡಿ ನಕ್ಕ ಫ್ಯಾನ್ಸ್
ದಾಸನ ಭಂಟ, ಪತ್ನಿ ಜಗಳ: ದರ್ಶನ್ ಜೈಲಿನಿಂದ ಹೊರಬರೋದು ವಿಜಯಕ್ಷ್ಮೀಗೆ ಇಷ್ಟವಿಲ್ವಾ? ಸ್ನೇಹಿತನ ಸ್ಫೋಟಕ ಆಡಿಯೋ ವೈರಲ್!