Shiva Rajkumar: ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡುರನ್ನ ಭೇಟಿಯಾದ ಕರುನಾಡ ಚಕ್ರವರ್ತಿ

Suvarna News   | Asianet News
Published : Feb 16, 2022, 07:45 PM IST
Shiva Rajkumar: ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡುರನ್ನ ಭೇಟಿಯಾದ ಕರುನಾಡ ಚಕ್ರವರ್ತಿ

ಸಾರಾಂಶ

ಸ್ಯಾಂಡಲ್‌ವುಡ್‌ನ ಕರುನಾಡ ಚಕ್ರವರ್ತಿ ಶಿವರಾಜ್‍ಕುಮಾರ್ ಇಂದು ಬೆಳಗ್ಗೆ ಉಪ ರಾಷ್ಟ್ರಪತಿಗಳನ್ನು ಭೇಟಿ ಮಾಡಿದ್ದಾರೆ. ಚೆನ್ನೈನ ರಾಜಭವನದಲ್ಲಿ ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರನ್ನು ಶಿವಣ್ಣ ಭೇಟಿಯಾಗಿದ್ದಾರೆ.

ಸ್ಯಾಂಡಲ್‌ವುಡ್‌ನ ಕರುನಾಡ ಚಕ್ರವರ್ತಿ ಶಿವರಾಜ್‍ಕುಮಾರ್ (Shivarajkumar) ಇಂದು ಬೆಳಗ್ಗೆ ಉಪ ರಾಷ್ಟ್ರಪತಿಗಳನ್ನು ಭೇಟಿ ಮಾಡಿದ್ದಾರೆ. ಚೆನ್ನೈನ ರಾಜಭವನದಲ್ಲಿ ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು (M Venkaiah Naidu) ಅವರನ್ನು ಶಿವಣ್ಣ ಭೇಟಿಯಾಗಿದ್ದಾರೆ. ಇದೊಂದು ಸೌಹಾರ್ದಯುತ ಭೇಟಿ ಎನ್ನಲಾಗಿದೆ. ಈ ಸಂದರ್ಭದಲ್ಲಿ ವೆಂಕಯ್ಯ ನಾಯ್ಡು ಅವರು ಮೈಸೂರಿನ ಶಕ್ತಿಧಾಮಕ್ಕೆ ಭೇಟಿ ನೀಡಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಶಿವರಾಜ್‍ಕುಮಾರ್ ತಿಳಿಸಿದ್ದಾರೆ. 

ಈ ಹಿಂದೆ ಬೆಂಗಳೂರಿನಲ್ಲಿ ನಡೆದ ಟೆಕ್ ಸಮ್ಮೇಳನಲ್ಲಿ ವೆಂಕಯ್ಯ ನಾಯ್ಡುಅವರು ನಟ ಪುನೀತ್ ರಾಜ್‍ಕುಮಾರ್ (Puneeth Rajkumar) ಅವರ ಅಗಲಿಕೆಯ ನೋವನ್ನು ವ್ಯಕ್ತಪಡಿಸಿದ್ದರು. ಕನ್ನಡದ ಸ್ಟಾರ್‌ ನಟ ಪುನೀತ್ ರಾಜ್‍ಕುಮಾರ್ ಅವರನ್ನು ಕಳೆದುಕೊಂಡಿದ್ದೇವೆ. ಪ್ರತಿಭಾನ್ವಿತ ನಟರಾಗಿ ಗುರುತಿಸಿಕೊಂಡಿದ್ದರು. ಸಾಕಷ್ಟು ಜನಪ್ರಿಯತೆ ಹೊಂದಿದವರಾಗಿದ್ದರು. ಅಪ್ಪು ಅವರ ನಿಧನದಿಂದ ತುಂಬಲಾರದ ನಷ್ಟವಾಗಿದೆ ಎಂದು ಹೇಳುತ್ತಾ ಪುನೀತ್ ರಾಜ್‍ಕುಮಾರ್‌ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿ, ಸಂತಾಪವನ್ನು ವೆಂಕಯ್ಯ ನಾಯ್ಡುಅವರು ಸೂಚಿಸಿದ್ದರು.

Puneeth James Teaser: 'ಜೇಮ್ಸ್ ಸಿನಿಮಾ ಮಾಸ್ಟರ್‌ಪೀಸ್​ ಸಿನಿಮಾವಾಗುತ್ತೆ' ಎಂದ ಡಾರ್ಲಿಂಗ್ ಪ್ರಭಾಸ್!

ಪುನೀತ್ ನಿವಾಸಕ್ಕೆ ಭೇಟಿ ನೀಡಿ ಅಶ್ವಿನಿ ಪುನೀತ್‌ಗೆ ಸಾಂತ್ವನ ಹೇಳಿದ ನಟ ಅರ್ಜುನ್ ಸರ್ಜಾ ದಂಪತಿ
ಅಪ್ಪು ಅಗಲಿ ಮೂರು ತಿಂಗಳು ಆಯ್ತು. ಅಪ್ಪು ನನಗಿಂತ  ನನ್ನ ಪತ್ನಿ ನಿವೇದಿತಾ (Niveditha) ಜೊತೆ ತುಂಬ ಆತ್ಮಿಯರಾಗಿದ್ದರು. ನಮಗೆ ಅವರೊಂದಿಗೆ ಒಂದೊಳ್ಳೆ ಬಾಂಧವ್ಯವು ಇತ್ತು ಎಂದು ನಟ ಅರ್ಜುನ್ ಸರ್ಜಾ (Arjun Sarja) ಹೇಳಿದ್ದಾರೆ. ಅಪ್ಪು ಬಗ್ಗೆ ಎಷ್ಟೇ ಹೇಳಿದ್ರು, ಏನೇ ಹೇಳಿದ್ರು ಕಡಿಮೆನೇ.  ಅಂತಹ ಮಹಾನ್ ಕಲಾವಿದನ ಮಗನಾಗಿ ಹುಟ್ಟಿ, ಚಿಕ್ಕವಯಸ್ಸಿನಲ್ಲೇ ಇಷ್ಟು ದೊಡ್ಡ ಮಟ್ಟದ ಸಾಧನೆ ಮಾಡಿರುವುದು ನಿಜವಾಗ್ಲೂ ಹೆಮ್ಮೆ. ಅವರ ಕುಟುಂಬಸ್ಥರಿಗೆ ನಾವು ಏನನ್ನು ಹೇಳುವುದಕ್ಕೆ ಸಾಧ್ಯವಿಲ್ಲ. ಕಷ್ಟದ ಸಮಯದಲ್ಲಿ ನಾವು ಜೊತೆಯಾಗಿ ಇರ್ತಿವಿ ಎನ್ನುವುದನ್ನಷ್ಟೇ ಹೇಳಬಹುದು. ಸದ್ಯ ಅವರ ಮನೆಗೆ ಭೇಟಿ ನೀಡಿದ್ದು ಇದೇ ಕಾರಣಕ್ಕೆ ಎಂದು ಅರ್ಜುನ್ ಸರ್ಜಾ ತಿಳಿಸಿದರು.



ಇತ್ತೀಚೆಗಷ್ಟೇ ಶಿವರಾಜ್‍ಕುಮಾರ್, ಗೀತಾ ದಂಪತಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ (MK Stalin) ಅವರನ್ನು ಚೆನ್ನೈನ ನಿವಾಸದಲ್ಲಿ ಭೇಟಿಯಾಗಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಈ ಭೇಟಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿತ್ತು. ಮಾತ್ರವಲ್ಲದೇ ಎಂ.ಕೆ. ಸ್ಟಾಲಿನ್​ ಅವರಿಗೆ ಶಿವರಾಜ್​ಕುಮಾರ್​ ಅವರು ಶಾಲು ಹೊದಿಸಿ, ಹಾರ ಹಾಕಿ ಸನ್ಮಾನ ಮಾಡಿದ್ದರು. ಡಾ. ರಾಜ್​ಕುಮಾರ್​ ಮತ್ತು ಎಂ.ಕೆ. ಸ್ಟಾಲಿನ್​ ಕುಟುಂಬದ ನಡುವೆ ಒಡನಾಟ ಇದೆ. ಪುನೀತ್​ ರಾಜ್​ಕುಮಾರ್​ ನಿಧನರಾದಾಗ ಎಂ.ಕೆ. ಸ್ಟಾಲಿನ್​ ಅವರು ಪತ್ರದ ಮುಖಾಂತರ ಡಾ. ರಾಜ್​ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ್ದರು. ಅವರ ಪುತ್ರ, ನಟ, ಶಾಸಕ ಉದಯನಿಧಿ ಸ್ಟಾಲಿನ್ ಕೂಡ ಸದಾಶಿವನಗರದ ಅಪ್ಪು ಮನೆಗೆ ಭೇಟಿ ನೀಡಿದ್ದರು.

ಬ್ಯುಸಿನೆಸ್‌ಗಿಂತ ಭಾವನೆ ದೊಡ್ಡದ್ದು, ಪುನೀತ್ ರಾಜ್‌ಕುಮಾರ್ James Teaser ರಿಲೀಸ್!

ಇನ್ನು ಟಾಲಿವುಡ್ ನಟ ಅಲ್ಲು ಅರ್ಜುನ್ (Allu Arjun) ಈ ಹಿಂದೆ ಶಿವರಾಜ್‌ಕುಮಾರ್ ಅವರ ನಾಗಾವರದ ಮನೆಗೆ ಅಲ್ಲು ಅರ್ಜುನ್ ಭೇಟಿ ನೀಡಿ, ಅಲ್ಲಿಂದ ಪುನೀತ್ ರಾಜ್‍ಕುಮಾರ್ ಅವರ ಸದಾಶಿವ ನಗರದ ಮನೆಗೆ ಭೇಟಿ ನೀಡಿ ನಂತರ ಸಮಾಧಿ ಸ್ಥಳಕ್ಕೆ ಹೋಗಿ ಅಲ್ಲು ಅರ್ಜುನ್ ನಮನ ಸಲ್ಲಿಸಲಿದ್ದರು. ಪುನೀತ್ ಅವರ ಜೊತೆ ಆತ್ಮೀಯ ಒಡನಾಟವನ್ನು ಹೊಂದಿದ್ದ ಅಲ್ಲು ಅರ್ಜುನ್ ಪುನೀತ್ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದರು. 



'ಪುಷ್ಪಕ ವಿಮಾನಂ' ಚಿತ್ರದ ಪ್ರಮೋಷನ್ ಸಮಯದಲ್ಲಿ ಪುನೀತ್​ ಬಗ್ಗೆ ಅಲ್ಲು ಅರ್ಜುನ್,​ 'ಪುನೀತ್​ ಅವರು ನನಗೆ ತುಂಬಾ ವರ್ಷಗಳಿಂದ ಪರಿಚಯ. ನಮ್ಮ ಮನೆಗೆ ಅವರು ಬರುತ್ತಿದ್ದರು. ಎಷ್ಟೋ ಬಾರಿ ಜೊತೆಯಲ್ಲಿ ಕುಳಿತು ಊಟ ಮಾಡಿದ್ದೆವು. ನಮ್ಮಿಬ್ಬರ ನಡುವೆ ಪರಸ್ಪರ ಪ್ರೀತಿ-ವಿಶ್ವಾಸ ಇತ್ತು. ಒಂದು ಡ್ಯಾನ್ಸ್​ ಕಾರ್ಯಕ್ರಮದಲ್ಲಿ ನಾವು ಜಡ್ಜ್​ ಆಗಿದ್ದೆವು. ಯಾವಾಗ ಮಾತನಾಡಿದರೂ ಬೆಂಗಳೂರಿಗೆ ಬನ್ನಿ ಎಂದು ಕರೆಯುತ್ತಿದ್ದರು. ಆದರೆ ಇಂದು ಸಡನ್​ ಆಗಿ ಅವರು ಇಲ್ಲ ಎಂಬುದನ್ನು ನಂಬಲಾಗುತ್ತಿಲ್ಲ' ಎಂದು ಅಲ್ಲು ಅರ್ಜುನ್ ಹೇಳಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆರ್ಯನ್ ಖಾನ್‌ಗೆ ಝೈದ್ ಖಾನ್ ಸಪೋರ್ಟ್; ಆದ್ರೂ ಪಬ್ಲಿಕ್‌ ಪ್ಲೇಸ್‌ನಲ್ಲಿ 'ಮಿಡ್ಲ್ ಫಿಂಗರ್' ಎತ್ತಿದ್ದು ತಪ್ಪು ಅಂತಿರೋ ನೆಟ್ಟಿಗರು!
ರಿಷಬ್ ಶೆಟ್ಟಿ ದೈವದ ಮುಂದೆ ಅತ್ಬಿಟ್ರಾ? ಅಳಬೇಡ ಅಂತ ಸಂತೈಸಿದ್ದೇಕೆ ಪಂಜುರ್ಲಿ ದೈವ?