'ನೋಡಿ ಸ್ವಾಮಿ ಇವನು ಇರೋದೇ ಹೀಗೆ..' ಎಂದು ನಟ ರಿಷಿ ಡಿಪ್ರೆಷನ್ ಮತ್ತು ಆತ್ಮಹತ್ಯೆ ಕಥೆ ಹೇಳುತ್ತಿದ್ದಾರೆ!

Suvarna News   | Asianet News
Published : Sep 04, 2021, 12:50 PM IST
'ನೋಡಿ ಸ್ವಾಮಿ ಇವನು ಇರೋದೇ ಹೀಗೆ..' ಎಂದು ನಟ ರಿಷಿ ಡಿಪ್ರೆಷನ್ ಮತ್ತು ಆತ್ಮಹತ್ಯೆ ಕಥೆ ಹೇಳುತ್ತಿದ್ದಾರೆ!

ಸಾರಾಂಶ

ಕವಲುದಾರಿ ಚಿತ್ರದ ನಂತರ ಮತ್ತೊಂದು ವಿಭಿನ್ನ ಟೈಟಲ್‌ವುಳ್ಳ ಚಿತ್ರ ಅನೌನ್ಸ್ ಮಾಡಿದ ನಟ ರಿಷಿ. 

'ಆಪರೇಷನ್ ಅಲಮೇಲಮ್ಮ' ಹಾಗೂ 'ಕವಲುದಾರಿ' ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಎಕ್ಸಪರಿಮೆಂಟ್‌ ಸಿನಿಮಾಗಳ ಮೂಲಕ ವೀಕ್ಷಕರನ್ನು ಮನೋರಂಜಿಸುತ್ತಿರುವ ನಟ ರಿಷಿ ಇದೀಗ ಮತ್ತೊಂದು ಇಂಟ್ರೆಸ್ಟಿಂಗ್ ಎಕ್ಸಪರಿಮೆಂಟ್ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಟೈಟಲ್ ಎಷ್ಟು ವಿಭಿನ್ನವಾಗಿದೆಯೋ ರಿಷಿ ಲುಕ್ ಕೂಡ ಅಷ್ಟೇ ಡಿಫರೆಂಟ್ ಆಗಿದೆ. 

ಮಿಲ್ಟ್ರಿ ಡಿಸೈನ್ ಡೋಂಗ್ರಿ ಡ್ರೆಸ್ ಧಿರಿಸಿ ಚೇರ್‌ ಮೇಲೆ ಕುಳಿತಿರುವ ರಿಷಿ ಕೈಯಲ್ಲಿ ಬಾಕ್ಸಿಂಗ್ ಗ್ಲೌಸ್‌ ನೋಡಬಹುದು. ಅಷ್ಟೇ ಅಲ್ಲ, ವಿಚಿತ್ರವಾಗಿರುವ ಲೈಟ್ ಹೆಲ್ಮೆಟ್ ಧರಿಸಿದ್ದಾರೆ. ಆದರೆ ಮುಖದಲ್ಲಿ ಅದೇ ನಗು, ಏನಿದು ಎಂದು ಕನ್ಫ್ಯೂಸ್ ಆದ ಸಿನಿ ರಸಿಕರಿಗೆ ರಿಷಿ ಖಾಸಗಿ ವೆಬ್‌ ಪೋರ್ಟಲ್ ಮೂಲಕ ಉತ್ತರಿಸಿದ್ದಾರೆ. 

ನಾಗತಿಹಳ್ಳಿ ಸಿನಿಮಾ ಶಾಲೆಯಲ್ಲಿ ನಟ ರಿಷಿ ಜೊತೆ ಮಾತುಕತೆ..!

'ನೋಡಿ ಸ್ವಾಮಿ ಇವನು ಇರೋದೆ ಹೀಗೆ ಸಿನಿಮಾ ಡಿಪ್ರೆಷನ್ ಹಾಗೂ ಅತ್ಮಹತ್ಯೆ ಕುರಿತ ವಿಚಯಗಳನ್ನು ಹೊಂದಿದೆ. ಎಲ್ಲಾ ಕಡೆ ಪ್ಯಾನಿಕ್ ಅಟ್ಯಾಕ್, ಡಿಪ್ರೆಷನ್ ಜಾಸ್ತಿಯಾಗುತ್ತಿದೆ. ಇವತ್ತಿನ ದಿನದಲ್ಲಂತೂ ಇದು ತುಂಬಾನೇ ಸಾಮಾನ್ಯ ಸಂಗತಿ. ಮೊದಲೆಲ್ಲ ಡಿಪ್ರೆಷನ್ ಮತ್ತು ಒತ್ತಡದ ಬಗ್ಗೆ ಹೇಳಿಕೊಳ್ಳೋಕೆ ಜನರಿಗೆ ಗೊತ್ತಾಗುತ್ತಿರಲಿಲ್ಲ. ಸಿನಿಮಾದಲ್ಲಿ ಇದನ್ನು ತುಂಬಾ ಗಂಭೀರವಾಗಿ ಹೇಳುತ್ತಿಲ್ಲ. ಹಾಸ್ಯದ ಲೇಪನ ಇರುತ್ತದೆ. ಚಿತ್ರದಲ್ಲಿ ಹೀರೋಗೆ ಪೊಲೀಸ್ ಆಗಬೇಕು ಎಂದು ಮನೆಯಿಂದ ಒತ್ತಡ ಇರುತ್ತದೆ. ಅವನು ಲೋಕಲ್ ಹುಡುಗ ಆಗಿರುವ ಕಾರಣ ಸ್ನೇಹಿತರ ಜೊತೆ ಓಡಾಡಿಕೊಂಡು, ತಾನು ಡಾನ್ ಎಂದು ಭಾವಿಸಿಕೊಂಡಿರುತ್ತಾನೆ. ಪ್ರೇಮಿ ಬಂದ ನಂತರ ಅವನನನ್ನು ಎಲ್ಲೆಲ್ಲಿ ಕರೆದುಕೊಂಡು ಹೋಗುತ್ತೆ ಏನಾಗುತ್ತೆ, ಎನ್ನುವುದು ಸಿನಿಮಾದಲ್ಲಿದೆ. ಹೀರೋ ಎಲ್ಲಾ ರೀತಿ ಕೆಲಸ ಮಾಡುವುದರಿಂದ ಆತನಿಗೆ ಸಕಲಕಲಾ ವಲ್ಲಭ ಎಂದು ಹೆಸರನ್ನು ಇಡಲಾಗಿದೆ,' ಎಂದು ರಿಷಿ ಮಾತನಾಡಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Actress Amulya: ಮುದ್ದು ಮಕ್ಕಳು, ಗಂಡನ ಜೊತೆ ಪೋಸ್ ಕೊಟ್ಟ ಗೋಲ್ಡನ್ ಗರ್ಲ್
Mark Movie: ಡಿಸೆಂಬರ್‌ನಲ್ಲಿ ಏಕಕಾಲಕ್ಕೆ ಸ್ಟಾರ್‌ಗಳ ಸಿನಿಮಾ ರಿಲೀಸ್;‌ ಕಿಚ್ಚ ಸುದೀಪ್‌ ಏನಂದ್ರು?