
ಸತೀಶ್ ನೀನಾಸಂ ಮತ್ತು ಹರಿಪ್ರಿಯಾ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಸಿನಿಮಾ ‘ಪೆಟ್ರೋಮ್ಯಾಕ್ಸ್’ ಅಕ್ಟೋಬರ್ 15ಕ್ಕೆ ಬಿಡುಗಡೆ ಆಗುತ್ತಿದೆ. ವಿಜಯ್ ಪ್ರಸಾದ್ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ಮನೋರಂಜನೆಯೇ ಪ್ರಧಾನವಾಗಿರುತ್ತದೆ.
ಕೋವಿಡ್ ಎರಡನೇ ಅಲೆ ಕಾಣಿಸಿಕೊಳ್ಳದೇ ಇದ್ದಿದ್ದರೆ, ಈಗಾಗಲೇ ಈ ಚಿತ್ರ ಬಿಡುಗಡೆ ಆಗಿರುತ್ತಿತ್ತು. ತಡವಾದರೂ ತೊಂದರೆ ಇಲ್ಲ, ಇದು ಲೇಟೆಸ್ಟ್ ಸಿನಿಮಾ ಎನ್ನುತ್ತಾರೆ ಚಿತ್ರ ತಂಡದವರು. ನಾಲ್ಕು ಅನಾಥ ಮಕ್ಕಳು ಮತ್ತು ವೃದ್ಧೆ ಜತೆಗಿನ ಭಾವನಾತ್ಮಕ ಸಂಬಂಧದ ಕತೆಯನ್ನು ಪೆಟ್ರೋಮ್ಯಾಕ್ಸ್ ಹೊಂದಿದೆ. ಚಿತ್ರದಲ್ಲಿ ನಟಿ ಕಾರುಣ್ಯ ರಾಮ್, ಗೊಂಬೆಗಳ ಲವ್ ಚಿತ್ರದ ಅರುಣ್, ನಾಗಭೂಷಣ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
ನಿರ್ದೇಶಕ ವಿಜಯ್ ಪ್ರಸಾದ್ ಪೆಟ್ರೋಮ್ಯಾಕ್ಸ್ ಜೊತೆಗೆ ಜಗ್ಗೇಶ್ ನಟನೆಯ ತೋತಾಪುರಿ ಸಿನಿಮಾ ಚಿತ್ರೀಕರಣವನ್ನೂ ಮುಗಿಸಿದ್ದಾರೆ. ಈ ಎರಡೂ ಚಿತ್ರಗಳು ಬಿಡುಗಡೆಗೆ ಅಭಿಮಾನಿಗಳು ಕಾಯುತ್ತಿದ್ದಾರೆ.'ಪರಿಮಳ ಲಾಡ್ಜ್' ಚಿತ್ರೀಕರಣ ಇನ್ನೂ ಉಳಿದಿದೆ. ಕಳೆದ ತಿಂಗಳು ಇಡೀ ತಂಡ ಡಬ್ಬಿಂಗ್ ಮುಗಿಸಿ ಒಂದು ಫ್ಯಾಮಿಲಿ ಫೋಟೋ ರಿವೀಲ್ ಮಾಡಿದ್ದರು. 'ನಗಿಸುತ್ತಲೇ ಒಂದು ಒಳ್ಳೆಯ ವಿಷಯ ಹೇಳಬೇಕು, ಎಂಬುವುದು ನನ್ನ ಉದೇಶ. ಈ ನಿಟ್ಟಿನಲ್ಲಿ ಪೆಟ್ರೋಮ್ಯಾಕ್ಸ್ ಚಿತ್ರವನ್ನು ಕುಟುಂಬ ಸಮೇತರಾಗಿ ನೋಡಬಹುದು. ಸತೀಶ್ ಹಾಗೂ ಹರಿಪ್ರಿಯಾ ಸೇರಿದಂತೆ ಎಲ್ಲ ಪಾತ್ರಧಾರಿಗಳು ಕತೆಗೆ ಸಂಪೂರ್ಣ ನ್ಯಾಯ ಒದಗಿಸಿದ್ದಾರೆ,' ಎಂದು ನಿರ್ದೇಶಕ ವಿಜಯ್ ಪ್ರಸಾದ್ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.