ಚಲನಚಿತ್ರೋದ್ಯಮಕ್ಕೆ ಸರ್ಕಾರದಿಂದ ಸಂಪೂರ್ಣ ಸಹಕಾರ: ಸಿಎಂ ಭರವಸೆ

Published : Mar 01, 2024, 09:08 AM IST
ಚಲನಚಿತ್ರೋದ್ಯಮಕ್ಕೆ ಸರ್ಕಾರದಿಂದ ಸಂಪೂರ್ಣ ಸಹಕಾರ: ಸಿಎಂ ಭರವಸೆ

ಸಾರಾಂಶ

ಧರ್ಮ, ಭಾಷೆ ಮೀರಿ ಮನುಷ್ಯರಾಗಿ ಬಾಳುವ ಸಂದೇಶ ಚಿತ್ರೋತ್ಸವದ ಉದ್ದೇಶ 15ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಅದ್ಧೂರಿ ಚಾಲನೆ.

ಪ್ರಭಾವಶಾಲಿ ಮಾಧ್ಯಮವಾದ ಚಲನಚಿತ್ರ ಗಳು ಎಲ್ಲರೂ ಒಟ್ಟಾಗಿ ಬಾಳಬೇಕು ಎಂಬ ಸಂದೇಶ ಸಾರಬೇಕು ಎಂದು ತಿಳಿಸಿದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಚಲನಚಿತ್ರೋ ದ್ಯಮಕ್ಕೆ ಸರ್ಕಾರದಿಂದಎಲ್ಲ ರೀತಿಯ ಸಹಕಾರ ನೀಡುವುದಾಗಿ ಅಭಯ ನೀಡಿದರು. ಗುರುವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ ವಿಧಾನಸೌಧದ ಮೆಟ್ಟಿಲುಗಳ ಮೇಲೆ ನಡೆದ 15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ' ಳೂರು ಉದ್ಘಾಟಿಸಿ ಮಾತನಾಡಿದರು.

ಜಗತ್ತು ಒಂದು ಗ್ರಾಮವಾಗಿರುವ ಹೊತ್ತಲ್ಲಿ ಪ್ರಭಾವಿ ಮಾಧ್ಯಮವಾದ ಚಲನಚಿತ್ರ ಯಾವ ವ್ಯಕ್ತಿ ಮೇಲಾದರೂ ಪರಿಣಾಮ ಬೀರುವ, ಚಿಂತನೆಯ ರೀತಿ ಬದಲಾಯಿಸುವ ಶಕ್ತಿ ಹೊಂದಿದೆ. ದೇಶದಲ್ಲಿ ಬೇರೆಲ್ಲೂ ಎಲ್ಲೂ ಇಲ್ಲದಷ್ಟು ಅನೇಕ ಜಾತಿ, ಧರ್ಮ, ಭಾಷೆಗಳಿವೆ. ರಾಜಕೀಯ, ಸಾಮಾಜಿಕ, ಆರ್ಥಿಕ ವೈರುಧ್ಯ, ಅಸಮಾನತೆಗಳಿವೆ. ಇವೆಲ್ಲದನ್ನೂ ತನ್ನೂ ಮೀರಿ. ಮನುಷ್ಯರಾಗಿ ಬಾಳುವ ಸಂದೇಶ ನೀಡುವುದೇ ಚಲನಚಿತ್ರೋತ್ಸವದ ಉದ್ದೇಶ ಎಂದರು. ಬೇರೆ ಭಾಷೆ, ವಿದೇಶಗಳ ಚಿತ್ರ ನೋಡಿದಾಗ ಅಲ್ಲಿನ ಜನಜೀವನ, ಸಂಸ್ಕೃತಿ ಅರಿಯಲು ಸಾಧ್ಯವಾಗುತ್ತದೆ. ಎಲ್ಲ ಸರ್ಕಾರಗಳು ಸಮಾನತೆಯನ್ನು ತರಲು ಪ್ರಯತ್ನಿಸಬೇಕು. ಇದೇ ಸಂವಿಧಾನದ ತಿರುಳಾಗಿದೆ. ಅಂಬೇಡ್ಕರ್ ಕುರಿತು ಕನ್ನಡದಲ್ಲಿ ಚಲನಚಿತ್ರ ಮಾಡಿದಲ್ಲಿ ಎಲ್ಲ ರೀತಿಯ ಸಹಕಾರನೀಡುವುದಾಗಿ ಅವರು ತಿಳಿಸಿದರು.

ನಟ ಡಾಲಿ ಧನಂಜಯ 15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ರಾಯಭಾರಿಯಾಗಿ ನೇಮಕ

ನಟ ಡಾ.ಶಿವರಾಜ್‌ ಕುಮಾರ್ ಮಾತನಾಡಿ, ಕೆಜಿಎಫ್, ಕಾಂತಾರದ ಮೂಲಕ ಕನ್ನಡ ಸಿನಿಮಾ ಅಂತಾರಾಷ್ಟ್ರೀಯ ಮಟ್ಟ ತಲುಪಿದೆ. ಇದೇವೇಳೆ ಕನ್ನಡ ಚಲನಚಿತ್ರ ರಂಗತೊಂಬತ್ತು ವರ್ಷ ಪೂರೈಸುತ್ತಿರುವುದು ಸಂತೋಷದ ವಿಚಾರ. ಈ ಹಂತದಲ್ಲಿ ಚಲನಚಿತ್ರೋತ್ಸವ ಆಯೋಜನೆ ಹೆಚ್ಚಿನ ಮಹತ್ವ ಪಡೆದಿದೆ ಎಂದರು.ಚಿತ್ರೋತ್ಸವದ ರಾಯಭಾರಿ ನಟ ಡಾಲಿ ಧನಂಜಯ, ಇತರೆ ದೇಶಗಳಸಂಸ್ಕೃತಿಯನ್ನು ನೋಡಿ ಕಲಿಯುವ ಅವಕಾಶವನ್ನು ಚಲನಚಿತ್ರೋತ್ಸವ ಕಲ್ಪಿಸುತ್ತಿದೆ. ಸಿನಿಮಾಗಳು ನಮ್ಮಲ್ಲಿ ಸ್ಪಂದನಾ ಭಾವವನ್ನು ಮೂಡಿಸುತ್ತವೆ. ಚಿತ್ರೋತ್ಸವದಲ್ಲಿ ನಟಿಯರಾದ ಪದ್ಮಾವಾಸಂತಿ, ಪ್ರಮೀಳಾ, ಹೇಮಾ ಚೌಧರಿ, ಜಯಮಾಲಾ ವಿಜ್ಞಾನ, ಕ್ರೀಡೆ, ಕಲೆ ಎಲ್ಲರನ್ನೂ ಒಂದುಗೂಡಿಸುತ್ತವೆ. ಈ ಸಿನಿಮೋತ್ಸವ ಎಲ್ಲ ಜಾತಿ ಬೇಧ ಮರೆಸಿ ಸಮಾಜ ಒಂದಾಗಿ ಬಾಳಿಸುವಂತಾಗಲಿ ಎಂದರು. ಜತೆಗೆ ಕೋವಿಡ್ ಬಳಿಕ ನಿಂತುಹೋಗಿರುವ ಚಲನಚಿತ್ರ ಪ್ರಶಸ್ತಿ, ಚಲನಚಿತ್ರಗಳಿಗೆ ಸಬ್ಸಿಡಿ ನೀಡುವುದನ್ನು ಮುಂದುವರೆಸಲು ಅವರು ಕೋರಿದರು.

2019ರಿಂದ ಚಲನಚಿತ್ರಗಳ ಪ್ರಶಸ್ತಿಯನ್ನು ನೀಡಲಾಗಿಲ್ಲ. ಪ್ರಶಸ್ತಿ ಸಂಬಂಧ ಸರ್ಕಾರದಿಂದ ಈಗಾಗಲೇ ಸಮಿತಿ ರಚನೆ ಮಾಡಲಾಗಿದ್ದು, ಆಯ್ಕೆ ಅನುಸಾರ ಈ ವರ್ಷ ಸೇರಿ ಹಿಂದಿನ ಎಲ್ಲ ವರ್ಷಗಳ ಪ್ರಶಸ್ತಿಯನ್ನ ಪ್ರದಾನ ಮಾಡಲಾಗುವುದು. - ಸಿದ್ದರಾಮಯ್ಯ ಮುಖ್ಯಮಂತ್ರಿ

ಚಿತ್ರೋತ್ಸವದ ಸ್ಮರಣ ಸಂಚಿಕೆಯನ್ನು ನಟ ಶಿವರಾಜ್‌ ಕುಮಾರ್, ಕೈಪಿಡಿಯನ್ನು ಡಾಲಿ ಧನಂಜಯ್ ಬಿಡುಗಡೆ ಮಾಡಿದರು. ಸಭಾಪತಿ ಬಸವರಾಜ ಹೊರಟ್ಟಿ, ಮಹಾರಾಷ್ಟ್ರದ ನಿರ್ದೇಶಕ ಜಬ್ಬಾರ್‌ಪಟೇಲ್ ಮಾತನಾಡಿದರು. ವಿಧಾನಪರಿಷತ್ ಸದಸ್ಯ ಸಲೀಂ ಅಹಮದ್, ಶಾಸಕ ಪ್ರದೀಪ್ ಈಶ್ವರ್, ಬಸವಂತಪ್ಪ, ಕಲಾ ನಿರ್ದೇಶಕ ಎನ್. ವಿದ್ಯಾಶಂಕರ್, ಚಲಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ.ಸುರೇಶ್, ನಟ ಸಾಧುಕೋಕಿಲ, ನಟಿ ಆರಾಧನಾ ರಾಮ್, ಚೆಕ್ ರಿಪಬ್ಲಿಕ್‌ನ ಚಿತ್ರ ವಿಮರ್ಷಕಿ ಅಜಮೇರಿ ಬಾಧೋನ್ ಇದ್ದರು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಶಿರಸಿ ಸಾಯಿಬಾಬಾಗೆ ಬಲು ದುಬಾರಿಯ ಚಿನ್ನದ ಕಿರೀಟ ಅರ್ಪಿಸಿದ ನಟಿ ಮಾಲಾಶ್ರೀ: ಕಾರಣವೂ ರಿವೀಲ್​!
34th Wedding Anniversary : ಅಂಬಿ ನೆನಪಲ್ಲಿ ಸುಮಲತಾ ಭಾವನಾತ್ಮಕ ಪೋಸ್ಟ್