ನಟ ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು!

By Suvarna NewsFirst Published Feb 16, 2021, 8:48 PM IST
Highlights

ನಟ, ನಿರ್ಮಾಪಕ, ವರನಟ ದಿ. ಡಾ. ರಾಜ್ ಕುಮಾರ್ 2ನೇ ಪುತ್ರ ರಾಘವೇಂದ್ರ ರಾಜ್ ಕುಮಾರ್ ಆರೋಗ್ಯದಲ್ಲಿ ಏರುಪೇರಾಗಿದ್ದು ಆಸ್ಪತ್ರೆ ದಾಖಲಾಗಿದ್ದಾರೆ. ಹೆಚ್ಚಿನ ವಿವರ ಇಲ್ಲಿದೆ.

ಬೆಂಗಳೂರು(ಫೆ.16): ನಟ ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ ಆರೋಗ್ಯದಲ್ಲಿ ಕೊಂಚ ಏರುಪೇರಾಗಿದ್ದು ಆಸ್ಪತ್ರೆ ದಾಖಲಾಗಿದ್ದಾರೆ. ಬೆಳಕು ಚಿತ್ರದ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದ ವೇಳೆ ನಟ ರಾಘವೇಂದ್ರ ರಾಜ್ ಕುಮಾರ್ ಅವರ ಆರೋಗ್ಯ ಕೊಂಚ ಏರುಪೇರಾಗಿದೆ. 

ರಾಜತಂತ್ರ ಟೀಸರ್‌ ಲಾಂಚ್‌ ಮಾಡಿದ ಪುನೀತ್‌;'ಕ್ಯಾ.ರಾಜಾರಾಮ್‌' ಪಾತ್ರದಲ್ಲಿ ರಾಘವೇಂದ್ರ ರಾಜ್‌ಕುಮಾರ್‌!

ಚಿತ್ರೀಕರಣದ ಸಮಯದಲ್ಲಿ  ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಕಾರಣ, ರಾಘವೇಂದ್ರ ರಾಜ್ ಕುಮಾರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.   ಇಂದು(ಫೆ.16) ಸಂಜೆ 5.30ಕ್ಕೆ ಯಶವಂತಪುರದ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರ ನಿಘಾ ಘಟಕದಲ್ಲಿ ರಾಘವೇಂದ್ರ ರಾಜಕುಮಾರ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ನಿವೃತ್ತ ಕ್ಯಾಪ್ಟನ್‌ ಪಾತ್ರದಲ್ಲಿ ರಾಘವೇಂದ್ರ ರಾಜ್‌ಕುಮಾರ್

ಹೆಚ್ಚಾದ ಹಾರ್ಟ್ ರೇಟ್ ಹಾಗೂ ಲೋಬಿಪಿ ಕೂಡ ಕಾಡುತ್ತಿದೆ. ಸದ್ಯ ಆರೋಗ್ಯ ಸ್ಥಿರವಾಗಿದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ. ನಾಳೆ ಬೆಳಗ್ಗೆ ಚಿಕಿತ್ಸೆ ನಡೆಸಲು ವೈದ್ಯರ ತಂಡ ನಿರ್ಧರಿಸಿದೆ. ಇನ್ನು ಎರಡು ದಿನದಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ರಾಘವೇಂದ್ರ ರಾಜ್ ಕುಮಾರ್ ಜೊತೆ  ಪತ್ನಿ ಹಾಗೂ ಮಗ ವಿನಯ್ ರಾಜ್ ಕುಮಾರ್ ಆಸ್ಪತ್ರೆಯಲ್ಲಿ ಉಳಿದುಕೊಂಡಿದ್ದಾರೆ.

ಎರಡು ದಿನದ ಹಿಂದೆ ಧ್ರುವ ಸರ್ಜಾ ಅಭಿಯನದ ಪೊಗರು ಆಡಿಯೋ ರಿಲೀಸ್ ನಲ್ಲೂ ರಾಘವೇಂದ್ರ ರಾಜ್ ಕುಮಾರ್ ಭಾಗಿಯಾಗಿದ್ದರು. ಸುದ್ದಿ ತಿಳಿಯುತ್ತಿದ್ದಂತೆ ಧ್ರುವ ಸರ್ಜಾ ಆಸ್ಪತ್ರೆಗೆ ಭೇಟಿ ಕೊಟ್ಟು ರಾಘವೇಂದ್ರ  ರಾಜ್ ಕುಮಾರ್ ಆರೋಗ್ಯ ವಿಚಾರಿಸಿದ್ದಾರೆ. 

"

ಆಸ್ಪತ್ರೆ ಮೂಲಗಳ ಪ್ರಕಾರ, ರಾಘವೇಂದ್ರ ರಾಜ್‌ಕುಮಾರ್ ಅವರಿಗೆ ಲೋ ಬಿಪಿ ಸಮಸ್ಯೆ ಉಲ್ಬಣಿಸಿದೆ. ಇಸಿಜಿ ಎನ್ಸ್ ಟೆಮಿ ಚೇಂಜಸ್ ಹಿನ್ನೆಲೆಯಲ್ಲಿ ವೈದ್ಯರು ರಾಘವೇಂದ್ರ ರಾಜ್‌ಕುಮಾರ್ ಅವರಿಗೆ ಆಂಜಿಯೋಗ್ರಾಂ ಮಾಡಲಾಗಿದೆ.  ಆ್ಯಂಜಿಯೋಗ್ರಾಂ ಮಾಡುವಾಗ ರಾಘವೇಂದ್ರ ರಾಜ್ ಕುಮಾರ್ ಹಾರ್ಟ್ ರೇಟ್ 180 ರಿಂದ190 ತಲುಪಿತ್ತು. ಸಾಮಾನ್ಯವಾಗಿ 70-100 ಹಾರ್ಟ್ ರೇಟ್ ಇರಲಿದೆ. ರಾಘವೇಂದ್ರ ರಾಜ್ ಕುಮಾರ್ ಹೃದಯ ಬಡಿತ ಹತೋಟಿಗೆ ತರಲಾಗಿದೆ. ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಘವೇಂದ್ರ ರಾಜ್‌ಕುಮಾರ್ ಅವರಿಗೆ ನಾಳೆ ಮತ್ತೆ ಚಿಕಿತ್ಸೆ ಮುಂದುವರಿಸಲಾಗುತ್ತದೆ.  

ರಾಘವೇಂದ್ರ ರಾಜ್‌ಕುಮಾರ್ ಆಸ್ಪತ್ರೆ ದಾಖಲಾಗುತ್ತಿದ್ದಂತೆ ಅಭಿಮಾನಿಗಳು ಆತಂಕಗೊಂಡಿದ್ದರು. ಇನ್ನು ರಾಧವೇಂದ್ರ ರಾಜ್‌ಕುಮಾರ್ ಪುತ್ರ ವಿನಯ್ ರಾಜ್ ಕುಮಾರ್, ಆರೋಗ್ಯದ ಮಾಹಿತಿ ನೀಡಿದ್ದಾರೆ.  ಸದ್ಯ ಅಪ್ಪಾಜಿ ಆರಾಮಾಗಿ ಇದ್ದಾರೆ.  ನಾಳೆವರೆಗೂ ವೈದ್ಯರ ನಿಘಾದಲ್ಲಿರಲಿದ್ದಾರೆ. ಸದ್ಯ ಯಾವುದೇ ಸಮಸ್ಯೆ ಇಲ್ಲ. ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ವಿನಯ್ ರಾಜ್‌ಕುಮಾರ್ ಹೇಳಿದ್ದಾರೆ.
 

click me!