
ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳು ಅಪ್ಪು ಮಾಲೆ ಆರಂಭಿಸಿದರು. ಸಾಮಾಜಿಕ ಜಾಲತಾಣದಲ್ಲಿ ವ್ರತ ಆಚರಣೆ ಮಾಡುವ ವಿಧಾನದ ಪತ್ರವೊಂದು ಸಖತ್ ವೈರಲ್ ಆಗುತ್ತಿದೆ. ಈ ಪತ್ರ ನಿರ್ದೇಶಕ ಕಮ್ ನಟ ಒಳ್ಳೆ ಹುಡುಗ ಪ್ರಥಮ್ ಗಮನಕ್ಕೆ ಬಂದಿದೆ. ಧಾರ್ಮಿಕ ನಂಬಿಕೆಗಳಲ್ಲಿ ಯಾರೂ ಅತೀರೇಕದಲ್ಲಿ ವರ್ತಿಸಬೇಡಿ ಎಂದಿದ್ದಾರೆ.
ಪ್ರಥನ್ ಟ್ವೀಟ್:
'ದೇವರ ಮೇಲೆ ಭಕ್ತಿ ಇರಲಿ. ಕಲಾವಿದರ ಮೇಲೆ ಪ್ರೀತಿ, ಅಭಿಮಾನಿವಿರಲಿ..! #ಶಬರಿಮಲೆಗೆ ಹೋಗೋದು ಅಯ್ಯಪ್ಪನಲ್ಲಿ ಶರಣಾಗೋಕೆ. ಬಹಳ ಶಿಸ್ತುಗಳನ್ನು ಪಾಲಿಸಿ ಶ್ರದ್ಧಾಭಕ್ತಿಗಳಿಂದ ಮಾಲೆ ಧಾರಣೆ ಮಾಡಬೇಕು. ಕಲಾವಿದರನ್ನು ಕಲಾವಿದರಾಗಿರೋಕೆ ಬಿಡಿ. ಧಾರ್ಮಿಕ ನಂಬಿಕೆಗಳಲ್ಲಿ ಯಾರೂ ಅತೀರೇಕದ ವರ್ತನೆ ತೋರಬಾರದು. ದೇವರು ದೇವರೇ ಕಲಾವಿದರು ಕಲಾವಿದರೇ' ಎಂದು ಪ್ರಥಮ್ ಟ್ವೀಟ್ ಮಾಡಿದ್ದಾರೆ.
ಪ್ರಥಮ್ ಟ್ವೀಟ್‌ಗೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಅಪ್ಪು ಅಭಿಮಾನಿಗಳು ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ ನೆಟ್ಟಿಗರು ಹೆಸರು ಹಾಳು ಮಾಡುತ್ತಿದ್ದೀರಾ ಎನ್ನುತ್ತಿದ್ದಾರೆ. 'ಪ್ರಥಮ್ ಒಳ್ಳೆಯ ಮಾತು ಹೇಳಿದ್ದಾರೆ ಎಷ್ಟು ದೊಡ್ಡ ಮನುಷ್ಯ ಆದ್ರೂ ಅವರು ಮಾನವರೇ. ದೇವರು ಹಾಗೆ ಅನ್ನಬಹುದು ಅಷ್ಟೇ ದೇವರು ಅಲ್ಲ ಅಯ್ಯಪ್ಪ ಸ್ವಾಮಿಗೆ ಇದು ಅವಮಾನ ಅನಿಸುತ್ತೆ ಎಂದು ನೆಟ್ಟಿಗನೊಬ್ಬ ಕಾಮೆಂಟ್ ಮಾಡಿದ್ದಾರೆ.
ಇಷ್ಟು ದಿನ ನೀವು ಅಯ್ಯಪ್ಪ ಸ್ವಾಮಿ ಮಾಲೆ, ಓಂ ಶಕ್ತಿ ಮಾಲೆ ಹಾಕುವುದನ್ನು ಕೇಳಿದ್ದೀರಿ ಆದರೆ ಈ ವರ್ಷ ಇದೇ ಮೊದಲು ಅಪ್ಪು ದೇವರ ಮಾಲೆ ಎಂದು ಅಭಿಮಾನಿಗಳು ಆರಂಭಿಸಿದ್ದಾರೆ.ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿರುವ ಅಪ್ಪು ನಿಜಕ್ಕೂ ದೇವರು ಹೀಗಾಗಿ ಅವರಿಗೆ ವಿಶೇಷ ಪೂಜೆ ಸಲ್ಲಿಸಬೇಕು ಎಂದು ಈ ಆಚರಣೆ ಆರಂಭಿಸಲಾಗಿದೆ. ಮಾರ್ಚ್ 18ರಂದು ಅಪ್ಪು ಹುಟ್ಟುಹಬ್ಬವೂ ಇದೆ.
ಅಯ್ಯಪ್ಪ ಸ್ವಾಮಿ ನಂತರ 'ಪುನೀತ್ ರಾಜ್‌ಕುಮಾರ್ ಮಾಲೆ' ಹಾಕುತ್ತಿರುವ ಅಭಿಮಾನಿಗಳು; ವ್ರತ ಮಾಡೋ ವಿಧಾನ ಹೀಗಿದೆ..
ಮಾರ್ಚ್ 1ರಿಂದ 17ರ ವರೆಗೂ ಅಪ್ಪು ಮಾಲೆ ವ್ರತ ನಡೆಯಲಿದೆ. ಪುನೀತ್ ರಾಜ್‌ಕುಮಾರ್ ವೃತ್ತದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಅಪ್ಪು ಹುಟ್ಟುಹಬ್ಬದ ದಿನ ಬೆಳಗಿನ ಜಾವ ಪುಣ್ಯ ಭೂಮಿಗೆ ಭೇಟಿ ನೀಡಿ ಮತ್ತೊಂದು ಪೂಜೆ ಸಲ್ಲಿಸಲಾಗುತ್ತದೆ. ಮಾಲೆ ಹಾಕುವ ಪ್ರತಿಯೊಬ್ಬರು ಅಪ್ಪು ದೇವರು ಇರುವ ಡಾಲರ್, ಕೇಸರಿ ಶಾಲು, ಕೇಸರಿ ಪಂಚೆ ಮತ್ತು ಕೇಸರಿ ಶರ್ಟ್‌ನ ಮಾತ್ರ ಧರಿಸಬೇಕಂತೆ. ಅಷ್ಟೇ ಅಲ್ಲ ಸೂರ್ಯ ಹುಟ್ಟುವ ಮುನ್ನ ಮತ್ತು ಸೂರ್ಯ ಮುಳುಗಿದ ನಂತರ ಸ್ನಾನ ಮಾಡಬೇಕು. ಊಟದಲ್ಲಿ ಬದಲಾವಣೆಗಳು ಇರಲಿದೆ, ಬೆಳಗ್ಗೆ ಉಪಹಾರ (ಟಿಫನ್), ಮಧ್ಯಾಹ್ನ ಊಟ ಮತ್ತು ರಾತ್ರಿ ಉಪಹಾರ (ಟಿಫಿನ್) ಸೇವಿಸಬೇಕು.
ಮಾಲೆ ಹಾಕುವ ಪ್ರತಿಯೊಬ್ಬರು ಐದು ದಿನ, 11 ದಿನ ಅಥವಾ ಒಂದು ದಿನ ಮಾಲೆ ಹಾಕಬಹುದು. ಪುಣ್ಯಭೂಮಿಗೆ ಹೋಗುವ ದಿನ ಎಲ್ಲರೂ ತಮ್ಮ ಕೈಲಾದ ದಿನಸಿಗಳನ್ನು ಇರುಮುಡಿಯಾಗಿ ತೆಗೆದುಕೊಂಡು ಹೋಗಬೇಕು ಅದರಲ್ಲಿ ಎಣ್ಣೆ ಬೆಳೆ ಅಕ್ಕಿ ತೆಗೆದುಕೊಂಡು ಹೋಗಬಹುದಂತೆ. ಈ ರೀತಿ ವ್ರತ ಮುಗಿಸಿದ ಮಾಲಾಧಾರಿಗಳು ಪುಣ್ಯ ಭೂಮಿಯಲ್ಲಿ ದರ್ಶನ ಮುಗಿಸಿ ಹಂಪಿಯ ಪುಣ್ಯ ನದಿಯಲ್ಲಿ ಸ್ನಾವನ್ನು ಮಾಡಿ ಶ್ರೀ ವಿರುಪಾಕ್ಷೇಶ್ವರ ಸ್ವಾಮಿಯ ಪೂಜೆಯನ್ನು ಸಲ್ಲಿಸಿ ಮಾಲೆಯನ್ನು ವಿಸರ್ಜನೆ ಮಾಡಬೇಕು. ವಿಜಯನಗರ ಜಿಲ್ಲೆ ಹೊಸಪೇಟೆಯ ಪುನೀತ್ ರಾಜ್‌ಕುಮಾರ್ ವೃತ್ತದಲ್ಲಿ ಮಾಲೆ ಧರಿಸಲಾಗುತ್ತದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.