ದೈವ, ದೆವ್ವ ನಮ್ಮ ನಂಬಿಕೆಯಷ್ಟೇ, ಅವಮಾನಿಸುವ ಅವಶ್ಯಕತೆ ಇಲ್ಲ; ಕಾಂತಾರ ವೈರಲ್ ವಿಡಿಯೋಗೆ ಕಿಶೋರ್ ರಿಯಾಕ್ಷನ್

By Shruthi Krishna  |  First Published Jan 3, 2023, 3:07 PM IST

ಕಾಂತಾರ ಸಿನಿಮಾದ ವೈರಲ್ ವಿಡಿಯೋ ಬಗ್ಗೆ ನಟ ಕಿಶೋರ್ ಪ್ರತಿಕ್ರಿಯೆ ನೀಡಿದ್ದಾರೆ. 


ನಟ ಕಿಶೋರ್ ಇತ್ತೀಚಿಗಷ್ಟೆ ಕಾಂತಾರ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾದಲ್ಲಿ ಕಿಶೋರ್ ಅರಣ್ಯ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಕಿಶೋರ್ ಪಾತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಸಿನಿಮಾ ಎಷ್ಟು ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಸಿನಿಮಾದ ಬಗ್ಗೆ ನಟ ಕಿಶೋರ್ ಒಂದು ಪೋಸ್ಟ್ ಶೇರ್ ಮಾಡಿದ್ದಾರೆ. ಅಂದಹಾಗೆ ನಟ ಕಿಶೋರ್ ಸಾಮಾಜಿಕ ಜಾಲತಾಣದಲ್ಲಿ ಆಗಾಗ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿರುತ್ತಾರೆ. ಪೋಸ್ಟ್ ಗಳನ್ನು ಶೇರ್ ಮಾಡುತ್ತಿರುತ್ತಾರೆ. ಇದೀಗ ಕಾಂತಾರದ ವೈರಲ್ ವಿಡಿಯೋ ಬಗ್ಗೆ ಪೋಸ್ ಹಾಕಿದ್ದಾರೆ. 

ಕಿಶೋರ್ ಪೋಸ್ಟ್ 

Tap to resize

Latest Videos

ಕೊಲ್ಲುವ ದೈವ, ಮನಸ್ಸನ್ನು ಪರಿವರ್ತಿಸಲಾರದೇ? ಎಂದು ಹೇಳಿ ದೀರ್ಘವಾಗಿ ಬರೆದುಕೊಂಡಿದ್ದಾರೆ.  
'ಕಾಂತಾರದ ದೈವವನ್ನು ಅವಮಾನಿಸಿದ ಯುವಕ ರಕ್ತಕಾರಿ ಸಾವು ಅನ್ನೊ ವೈರಲ್ ವಿಡಿಯೊ ವಾಟ್ಸಾಪ್‌ನಲ್ಲಿ ಹರಿದು ಬಂತು. ಆ ಸಿನಿಮಾದ ಭಾಗವಾಗಿ ಈ ತರದ ತಪ್ಪು ತಿಳುವಳಿಕೆಗಳನ್ನು ತಿದ್ದುವುದು ನನ್ನ ಬಾಧ್ಯತೆ ಎಂದು ನಂಬಿ ಬರೆಯುತ್ತಿದ್ದೇನೆ. ಕೊಲ್ಲುವ ಶಕ್ತಿಯಿರುವ  ದೈವಕ್ಕೆ ಅದರ ಬದಲು ಮನಃಪರಿವರ್ತನೆ ಮಾಡುವ ಶಕ್ತಿ ಏಕೆ ಇರುವುದಿಲ್ಲ?' ಎಂದು ಕಿಶೋರ್ ಕೇಳಿದ್ದಾರೆ. 

Kanatara; ಗರ್ನಾಲು ಸಾಹೇಬನ ಧರ್ಮ ಕಾಣುತ್ತಿಲ್ಲವೇಕೆ? ನಟ ಕಿಶೋರ್ ಪ್ರಶ್ನೆ

'ಏಕೆಂದರೆ ಕತೆಗಾರನಿಗೆ ಕಥೆ ಮುಂದೆ ಸಾಗುವುದಿಲ್ಲ. ಅವನ ಮಟ್ಟಿಗೆ ಒಂದು ಕಥೆಯನ್ನು ಪರಿಣಾಮಕಾರಿಯಾಗಿ ಹೇಳುವ ತನ್ನ ಉದ್ದೇಶ ಸಾಧನೆಗೆ ದೈವವೊ, ದೆವ್ವವೊ ಒಂದು ಸಾಧನವಷ್ಟೆ, ಸಿನಿಮಾವಾಗಲಿ ಪುರಾಣವಾಗಲಿ. ದೈವವೋ ದೆವ್ವವೋ ನಮ್ಮ ನಮ್ಮ ನಂಬಿಕೆಯಷ್ಟೇ. ನಂಬಿದರೆ ಉಂಟು ನಂಬದಿದ್ದರೆ ಇಲ್ಲ. ಹಾಗೆಂದು ಕಷ್ಟಕಾಲದಲ್ಲಿ ಮನಸ್ಥೈರ್ಯ ಕೊಡುವ ನಂಬಿಕೆಗಳನ್ನು ಅವಮಾನಿಸುವ ಅವಶ್ಯಕತೆಯೂ ಇಲ್ಲ. ಕಿಡಿಗೇಡಿಗಳನ್ನು ಶಿಕ್ಷಿಸಲು ಕಾನೂನಿದೆ. ಅವರವರ ನಂಬಿಕೆ ಅವರಿಗೆ. ನಂಬಿಕೆ ಇರಲಿ ಮೂಢನಂಬಿಕೆ ಬೇಡ. ಅದರ ಹೆಸರಲ್ಲಿ ದ್ವೇಷವೂ' ಎಂದು ಹೇಳಿದ್ದಾರೆ.

Kantara; ರಿಷಬ್ ಶೆಟ್ಟಿ ಸಿನಿಮಾ ಸಕ್ಸಸ್‌ಗೆ ಅಭಿನಂದನೆ ಸಲ್ಲಿಸಿದ ನಟ ಅಲ್ಲು ಅರ್ಜುನ್

ಕಿಶೋರ್ ಟ್ವಿಟ್ಟರ್ ಖಾತೆ ಅಮಾನತು

ನಟ ಕಿಶೋರ್ ಟ್ವಿಟ್ಟರ್ ಖಾತೆ ಅಮಾನತುಗೊಳಿಸಲಾಗಿದೆ. ಅವರ ಖಾತೆ ಅಮಾನತು ಮಾಡುವಷ್ಟರ ಮಟ್ಟಿಗೆ ಕಿಶೋರ್ ಯಾವ ಪೋಸ್ಟ್ ಹಂಚಿಕೊಂಡಿದ್ದರು ಎನ್ನುವುದು ಅಭಿಮಾನಿಗಳ ಪ್ರಶ್ನೆಯಾಗಿದೆ. ಆದರೆ ಈ ಬಗ್ಗೆ ಕಿಶೋರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಖಾತೆ ಅಮಾನತು ಆಗಲು ಕಾರಣ ಕೂಡ ತಿಳಿದುಬಂದಿಲ್ಲ. ನಿಯಮಗಳನ್ನು ಉಲ್ಲಂಘಿಸಿದರೆ ಟ್ವಿಟ್ಟರ್ ಖಾತೆ ಅಮಾನತು ಆಗುತ್ತೆ. ಆದರೆ ಕಿಶೋರ್ ಯಾವ ನಿಯಮ ಉಲ್ಲಂಘಿಸಿದ್ದಾರೆ ಎನ್ನುವುದು ಬಹಿರಂಗವಾಗಿಲ್ಲ. ಇತ್ತೀಚಿಗಷ್ಟೆ ಕಿಶೋರ್ ಟ್ವಿಟರ್ ನಲ್ಲಿ ನಂದಿಯನ್ನು ಗುಜರಾತಿನ ಅಮುಲ್ ಜೊತೆ ವಿಲೀನ ಮಾಡಲು ಹೊರಟಿದ್ದ ಕೇಂದ್ರ ಸರ್ಕಾರದ ನೀತಿಯನ್ನು ಖಂಡಿಸಿ ಪೋಸ್ಟ್ ಹಾಕಿದ್ದರು. ಈ ಪೋಸ್ಟ್ ಗಾಗಿಯೇ ಅಮಾನತು ಮಾಡಲಾಗಿದ್ಯೆ ಎನ್ನುವುದು ಇನ್ನು ಬಹಿರಂಗವಾಗಿಲ್ಲ. 
 

click me!