
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಜನ್ಮದಿನದ ಅಂಗವಾಗಿ ‘ಮಾರ್ಟಿನ್’ ಚಿತ್ರತಂಡ ವಿಶೇಷ ಪೋಸ್ಟರ್ ಬಿಡುಗಡೆ ಮಾಡಿ ಶುಭ ಕೋರಿದೆ. ಸಖತ್ ರಗಡ್ ಲುಕ್‌ನಲ್ಲಿರುವ ಈ ಪೋಸ್ಟರ್‌ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಸದ್ಯ ಧ್ರುವ ಸರ್ಜಾ ವೈಜಾಗ್‌ನಲ್ಲಿ ಮಾರ್ಟಿನ್ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿ ಇದ್ದಾರೆ. ಅಲ್ಲೇ ಸರಳವಾಗಿ ಜನ್ಮದಿನ ಆಚರಿಸಿಕೊಂಡಿದ್ದಾರೆ.
ಜನ್ಮದಿನಕ್ಕೂ ಮೊದಲೇ ಧ್ರುವ ಅವರು ಸೋಷಿಯಲ್ ಮೀಡಿಯಾದಲ್ಲಿ, ‘ಕಳೆದ ಬಾರಿಯಂತೆ ಈ ಬಾರಿಯೂ ಬತ್‌ರ್‍ಡೇ ಆಚರಣೆ ಮಾಡಿಕೊಳ್ಳುತ್ತಿಲ್ಲ. ಬತ್‌ರ್‍ಡೇ ದಿನ ನಾನು ಮನೆಯಲ್ಲಿರೋದಿಲ್ಲ. ವೈಜಾಗ್‌ನಲ್ಲಿ ಮಾರ್ಟಿನ್ ಚಿತ್ರದ ಶೂಟಿಂಗ್‌ನಲ್ಲಿರುತ್ತೇನೆ’ ಎಂದು ತಿಳಿಸಿದ್ದರು. ಹೀಗಾಗಿ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲೇ ತಮ್ಮ ನೆಚ್ಚಿನ ಹೀರೋಗೆ ಶುಭ ಕೋರಿದ್ದಾರೆ. ಡಿಸೆಂಬರ್ ಮಧ್ಯಭಾಗದಲ್ಲಿ ‘ಮಾರ್ಟಿನ್’ ಶೂಟಿಂಗ್ ಸಂಪೂರ್ಣವಾಗಬೇಕಿದ್ದು, ಅದಕ್ಕಾಗಿ ಬ್ರೇಕ್ ಪಡೆಯದೇ ಧ್ರುವ ಸರ್ಜಾ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ.
ಹೊಸ ಸಿನಿಮಾ ಘೋಷಣೆ
ಧ್ರುವ ಸರ್ಜಾ ಜನ್ಮದಿನದಂದು ‘ಮಾರ್ಟಿನ್’ ನಿರ್ದೇಶಕ ಎ ಪಿ ಅರ್ಜುನ್-ಧ್ರುವ ಸರ್ಜಾ ಕಾಂಬಿನೇಶನ್‌ನ ಇನ್ನೊಂದು ಸಿನಿಮಾವನ್ನೂ ಘೋಷಿಸಲಾಗಿದೆ. ಎ ಪಿ ಅರ್ಜುನ್ ಫಿಲಂಸ್ ಬ್ಯಾನರ್‌ನಡಿ ಅರ್ಜುನ್ ಅವರೇ ಈ ಸಿನಿಮಾ ನಿರ್ಮಿಸಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.