
ಚಿತ್ರದುರ್ಗ ರೇಣುಕಾಸ್ವಾಮಿ ಕೊ*ಲೆ ಆರೋಪದಡಿ ನಟ ದರ್ಶನ್ ತೂಗುದೀಪ ಅವರು ಸದ್ಯ ಪರಪ್ಪನ ಅಗ್ರಹಾರದಲ್ಲಿದ್ದಾರೆ. ದರ್ಶನ್ ಸಂಬಂಧಿತ ಸಿನಿಮಾ, ಮನೆ, ನ್ಯಾಯಾಂಗ ಜವಾಬ್ದಾರಿ ಈಗ ವಿಜಯಲಕ್ಷ್ಮೀ ಹೆಗಲೇರಿದೆ. ದರ್ಶನ್ ಅವರ ‘ದಿ ಡೆವಿಲ್’ ಸಿನಿಮಾ ಪ್ರಚಾರದಲ್ಲಿ ವಿಜಯಲಕ್ಷ್ಮೀ ಬ್ಯುಸಿಯಿದ್ದರು. ಆ ವೇಳೆ ಅವರಿಗೆ ನೆಗೆಟಿವ್ ಕಾಮೆಂಟ್ಸ್ ಹಾಕಲಾಗಿದೆಯಂತೆ.
ಕೆಲವರು ಅಶ್ಲೀಲ ಕಾಮೆಂಟ್‌ಗಳನ್ನು ಹಾಕಿದ್ದಾರೆ ಎಂಬ ಆರೋಪದಡಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ದೂರು ದಾಖಲಿಸಿದ್ದರು. ಆಮೇಲೆ ಸರಿಯಾಗಿ ತನಿಖೆ ಮಾಡಿಲ್ಲ ಎಂದು ಆರೋಪ ಮಾಡಿದ್ದರು. ಈಗ ವಿಜಯಲಕ್ಷ್ಮೀ ಅವರು ಪೊಲೀಸರ ತನಿಖೆಗೆ ಸಹಕರಿಸುತ್ತಿಲ್ಲ, ಫೋನ್ ರಿಸೀವ್ ಮಾಡ್ತಿಲ್ಲ, ನೋಟೀಸ್‌ಗೂ ಕೂಡ ಉತ್ತರ ಕೊಟ್ಟಿಲ್ಲ ಎನ್ನಲಾಗಿದೆ.
ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. . ಪ್ರಕರಣದ ತನಿಖೆಯ ಭಾಗವಾಗಿ, ವಿಜಯಲಕ್ಷ್ಮಿ ಅವರ 164ನೇ ಕಲಂನಡಿ ಹೇಳಿಕೆ ದಾಖಲಿಸುವಂತೆ ಪೊಲೀಸರು ಸೂಚನೆ ನೀಡಿದ್ದಾರೆ.
ವಿಜಯಲಕ್ಷ್ಮಿ ದರ್ಶನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಅಶ್ಲೀಲವಾಗಿ ಕಾಮೆಂಟ್ ಮಾಡಿದವರ ವಿರುದ್ಧ ನಗರದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ (CCB) ಕಳೆದ ಡಿಸೆಂಬರ್‌ನಲ್ಲಿ ದೂರು ಕೊಟ್ಟಿದ್ದರು. ಹೀಗಾಗಿ ಸಿಸಿಬಿ ಪೊಲೀಸರು 3 ತಂಡಗಳಾಗಿ ತನಿಖೆ ಆರಂಭಿಸಿದ್ದರು, ಅಷ್ಟೇ ಅಲ್ಲದೆ ಮೆಟಾ ಸಂಸ್ಥೆಯಿಂದ ಕೆಟ್ಟ ಕಮೆಂಟ್ ಮಾಡಿದ್ದ ಖಾತೆಗಳ ಬಗ್ಗೆ ಮಾಹಿತಿ ಕೇಳಿದ್ದರು. ಒಟ್ಟಾರೆಯಾಗಿ ವಿಜಯಲಕ್ಷ್ಮಿ 18 ಅಕೌಂಟ್‌ಗಳ ವಿರುದ್ಧ ದೂರು ದಾಖಲಾಗಿತ್ತು. ಈಗಾಗಲೇ 8 ಜನರ ಅರೆಸ್ಟ್ ಆಗಿದೆ.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ, ದಾಖಲಾತಿಗಳನ್ನು ಸಮಗ್ರವಾಗಿ ದಾಖಲಿಸಲು 164 ಹೇಳಿಕೆ ಅಗತ್ಯವಿತ್ತು. ನ್ಯಾಯಾಲಯದಲ್ಲಿ ಈ ಹೇಳಿಕೆ ದಾಖಲಾಗುವುದು. ಮುಂದಿನ ನ್ಯಾಯಾಂಗ ಕ್ರಮಗಳಿಗೆ ಕೂಡ ಪ್ರಮುಖ ದಾಖಲೆ ಆಗಲಿದೆ.
ಜೈಲಿನಲ್ಲಿ ನಟ ದರ್ಶನ್ ಅವರನ್ನು ವಿಜಯಲಕ್ಷ್ಮೀ ಭೇಟಿ ಆಗುತ್ತಿರುತ್ತಾರೆ. ಅಭಿಮಾನಿಗಳಿಗೆ ದರ್ಶನ್ ಏನಾದರೂ ಹೇಳುವುದಿದ್ದರೆ ವಿಜಯಲಕ್ಷ್ಮೀ ಅದನ್ನು ತಲುಪಿಸುತ್ತಾರೆ. ಅಂದಹಾಗೆ ದರ್ಶನ್ ಯಾವಾಗ ಜೈಲಿನಿಂದ ಹೊರಬರುತ್ತಾರೆ ಎಂದು ಕಾದು ನೋಡಬೇಕಿದೆ. ಸದ್ಯ ಕೋರ್ಟ್ ತನಿಖೆ, ವಿಚಾರಣೆ ನಡೆಯುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.