ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್, 90 ದಿನಗಳ ಬಳಿಕ ತಾಯಿಯನ್ನು ನೆನೆದು ಭಾವುಕರಾಗಿದ್ದಾರೆ. ಪತ್ನಿ ವಿಜಯಲಕ್ಷ್ಮಿ ಜೊತೆ ಮಾತನಾಡುತ್ತಿದ್ದಾಗ, ಮುಂದಿನ ಬಾರಿ ಭೇಟಿಗೆ ಬರುವಾಗ ತಾಯಿಯನ್ನು ಕರೆದುಕೊಂಡು ಬರುವಂತೆ ಹೇಳಿದ್ದಾರೆ.
ಬಳ್ಳಾರಿ (ಸೆ.10): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಜೈಲು ಸೇರಿರುವ ನಟ ದರ್ಶನ್ ತೂಗುದೀಪ ಬೆಂಗಳೂರಿನ ಪರಪ್ಪನ ಅಗ್ರಹಾರ ಹಾಗೂ ಬಳ್ಳಾರಿಯ ಸೆಂಟ್ರಲ್ ಜೈಲುಗಳಲ್ಲಿ 90 ದಿನಗಳನ್ನು ಕಳೆದಿದ್ದಾನೆ. ಇದೀಗ ಅಮ್ಮನೇ ಬೇಡವೆಂದು ದೂರವಿಟ್ಟಿದ್ದ ದರ್ಶನ್‌ಗೆ ಇದೀಗ ಅಮ್ಮ ನೆನಪಾಗಿದ್ದಾರೆ. ಹೀಗಾಗಿ, ಹೆಂಡತಿಯೊಂದಿಗೆ ಫೋನಿನಲ್ಲಿ ಮಾತನಾಡುವಾಗ ಮುಂದಿನ ಬಾರಿ ಬರುವಾಗ ಅಮ್ಮನನ್ನು ಕರೆದುಕೊಂಡು ಬಾ ಎಂದು ಹೇಳಿ ಭಾವುಕನಾಗಿದ್ದಾನೆ ಎಂದು ತಿಳಿದುಬಂದಿದೆ.
ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿರುವ ನಟ ದರ್ಶನ್ ತೂಗುದೀಪ ಪತ್ನಿ ವಿಜಯಲಕ್ಷ್ಮಿಯೊಂದಿಗೆ ಪ್ರಿಸನ್ ಕಾಲ್ ಸಿಸ್ಟಮ್ ಮೂಲಕ ಮಾತನಾಡಿದ್ದಾನೆ. ಹೈ ಸೆಕ್ಯೂರಿಟಿ ಸೆಲ್ ನಿಂದಲೇ ಪ್ರಿಸನ್ ಕಾಲ್ ಸಿಸ್ಟಮ್ ಮೂಲಕ ಪತ್ನಿ ವಿಜಯಲಕ್ಷ್ಮಿ ಜೊತೆ ಐದು ನಿಮಿಷಗಳ ಕಾಲ ಮಾತನಾಡಿ, ಮುಂದಿನ ಕಾನೂನು ಹೋರಾಟದ ಚರ್ಚೆ ಮಾಡಿದ್ದಾನೆ. ನಂತರ ಪತ್ನಿ ಜೊತೆ ಮಾತನಾಡುತ್ತಾ ಇದ್ದಕ್ಕಿದ್ದಂತೆಯೇ ಭಾವುಕನಾಗಿದ್ದಾರೆ. ಈ ವೇಳೆ ಹೆಂಡತಿ ವಿಜಯಲಕ್ಷ್ಮಿ ಏಕೆಂದು ಕೇಳಿದಾಗ ನೀನು ನಾಳೆಯೇ ಜೈಲಿಗೆ ಬರುವಂತೆ ಪತ್ನಿಗೆ ತಿಳಿಸಿದ್ದಾನೆ.
ದರ್ಶನ್ ತಲೆಯಲ್ಲಿ ಎರಡು ಸುಳಿ: ಹೆಂಡ್ತಿ ವಿಜಯಲಕ್ಷ್ಮಿ ಇದ್ರೂ, ಪವಿತ್ರಾ ಗೌಡ ದೇವರ ಕೊಡುಗೆ ಎಂದ ನೆಟ್ಟಿಗರು!
ಜೊತೆಗೆ, ನಾಳೆ ನೀನು ಬರುವಾಗ ನಿನ್ನೊಂದಿಗೆ ಅಮ್ಮನನ್ನೂ ಕರೆದುಕೊಂಡು ಬಾ ಎಂದು ದರ್ಶನ್ ಹೇಳಿದ್ದಾನೆ. ಇದೇ ವೇಳೆ ಹೆಂಡತಿ ಭೇಟಿ ಮಾಡಲು ಬರುವುದರ ಬಗ್ಗೆ ಜೈಲಾಧಿಕಾರಿಗಳಿಗೂ, ದರ್ಶನ್ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ನಾಳೆ ಅಥವಾ ನಾಡಿದ್ದು ಸಂಜೆ 4 ಗಂಟೆಯ ನಂತರ ಬಳ್ಳಾರಿ ಸೆಂಟ್ರಲ್ ಜೈಲಿಗೆ ಬರಲಿರುವ ಆರೋಪಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ಅವರ ತಾಯಿ ಮೀನಾ ಬಂದು ಭೇಟಿ ಮಾಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
90 ದಿನಗಳ ಬಳಿಕ ಅಮ್ಮನ ನೆನೆದ ದಾಸ: ನಟ ದರ್ಶನ್ ತಾನಾಯ್ತು, ಸಿನಿಮಾ ಆಯ್ತು ಹಾಗೂ ತನ್ನ ಕುಟುಂಬವಾಯ್ತು ಎಂದು ಬೆಂಗಳೂರಿನಲ್ಲಿ ಐಷಾರಾಮಿ ಜೀವನ ಮಾಡಿಕೊಂಡಿದ್ದನು. ಆದರೆ, ತನ್ನ ತಾಯಿಯನ್ನು ಕುಟುಂಬದಿಂದ ದೂರವಿಟ್ಟಿದ್ದನು. ಜೊತೆಗೆ, ತಾಯಿ ಮೀನಾ ಅವರ ಕೊಡಗುನಲ್ಲಿದ್ದ ತವರು ಮನೆಯನ್ನು ಸ್ವತಃ ದರ್ಶನ್ ಮಾವಂದಿರೊಂದಿಗೆ ಜಗಳ ಮಾಡಿ ಕೆಡವಿ ಹಾಕಿದ್ದನಂತೆ. ಇದಾದ ನಂತರ ದರ್ಶನ್‌ನೊಂದಿಗೆ ತಾಯಿ ಹೆಚ್ಚು ಒಡನಾಟ ಹೊಂದಿರದೇ ಅವರಿಂದ ದೂರವಿದ್ದರು. ಇನ್ನು ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಜೈಲು ಸೇರಿದ ನಂತರ ಒಂದು ಬಾರಿಯೂ ಅಮ್ಮನನ್ನು ನೆನಪು ಮಾಡಿಕೊಂಡಿರಲಿಲ್ಲ. ಆದರೆ, ಹೆತ್ತ ಕರುಳು ಮಗ ಜೈಲಿನಲ್ಲಿ ಕಷ್ಟದಲ್ಲಿದ್ದಾನೆಂದು ತಿಳಿದು ತಡೆದುಕೊಳ್ಳಲಾಗದೇ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗ ಒಮ್ಮೆ ಹೋಗಿ ಭೇಟಿ ಮಾಡಿ ಬಂದಿದ್ದರು. ಇದೀಗ ಪುನಃ ಜೈಲಿನಲ್ಲಿರುವ ದಾಸನಿಗೆ ಅಮ್ಮ ನೆನಪಾಗಿದ್ದಾರೆ.
ಪಿಎಸ್ಐ ಪರೀಕ್ಷೆ ಮುಂದೂಡಿಕೆ, 600 ಹೊಸ ಪೋಸ್ಟ್ ಭರ್ತಿ ಬಗ್ಗೆ ಅಪ್ಡೇಟ್ ಕೊಟ್ಟ ಗೃಹ ಸಚಿವ ಪರಮೇಶ್ವರ!