ಒಂದು ಏಟು ಕಪಾಳಕ್ಕೆ ಹೊಡೆದು ವಾರ್ನಿಂಗ್ ಮಾಡಿದ್ದೆ, ಆತನಿಗೆ ಊಟ ಕೊಟ್ಟು ಕಳಿಸಿಬಿಡಿ ಎಂದಿದ್ದೆ; ನಟ ದರ್ಶನ್ ಹೇಳಿಕೆ

By Sathish Kumar KH  |  First Published Jun 11, 2024, 6:00 PM IST

ನಾನು ಒಂದು ಏಟು ಕಪಾಳಕ್ಕೆ ಹೊಡೆದಿದ್ದು ನಿಜ. ಮತ್ತೆ ಈ ರೀತಿ ಮಾಡಬೇಡ ಅಂತಾ ವಾರ್ನಿಂಗ್ ಮಾಡಿದ್ದೇನೆ. ನಂತರ ಆತನಿಗೆ ಊಟ ಕೊಟ್ಟು ಕಳಿಸಿ ಅಂತಾ ಹೇಳಿದ್ದೇನೆ. ನಾನು ಕೊಲೆ ಮಾಡಿಲ್ಲ ಎಂದು ನಟ ದರ್ಶನ್ ಹೇಳಿಕೆ ದಾಖಲಿಸಿದ್ದಾರೆ.


ಬೆಂಗಳೂರು (ಜೂ.11): ನಾನು ಒಂದು ಏಟು ಕಪಾಳಕ್ಕೆ ಹೊಡೆದಿದ್ದು ನಿಜ. ಆದರೆ ಕೊಲೆ ಮಾಡುವ ಉದ್ದೇಶ ನನಗಿಲ್ಲ. ಮತ್ತೆ ಈ ರೀತಿ ಮಾಡಬೇಡ ಅಂತಾ ವಾರ್ನಿಂಗ್ ಮಾಡಿದ್ದೇನೆ. ಊಟ ಕೊಟ್ಟು ಕಳಿಸಿ ಅಂತಾ ಹೇಳಿದ್ದೇನೆ ಎಂದು ರೇಣುಕಾಸ್ವಾಮಿ ಕೊಲೆ ಬಗ್ಗೆ ನಟ ದರ್ಶನ್ ಪೊಲೀಸರ ಮುಂದೆ ಹೇಳಿಕೆ ಕೊಟ್ಟಿದ್ದಾರೆ.

ನಟ ದರ್ಶನ್ ಅವರ ಎರಡನೇ ಪತ್ನಿ ಪವಿತ್ರಾ ಗೌಡ ಅವರಿಗೆ ಅಶ್ಲೀಲವಾಗಿ ಕಾಮೆಂಟ್ ಮಾಡಿದ್ದಾರೆ ಎನ್ನಲಾದ ಚಿತ್ರದುರ್ಗದಿಂದ ವ್ಯಕ್ತಿ ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ ಪ್ರಕರಣದ ಬಗ್ಗೆ ಪೊಲೀಸರ ಮುಂದೆ ನಟ ದರ್ಶನ್ ಹೇಳಿಕೆ ನೀಡಿದ್ದಾರೆ. ನಾನು ಆ ಶೆಡ್ ಗೆ ಹೋದದ್ದು ನಿಜ. ನಾನು ಒಂದು ಏಟು ಕಪಾಳಕ್ಕೆ ಹೊಡೆದಿದ್ದು ನಿಜ. ಆದರೆ ಕೊಲೆ ಮಾಡುವ ಉದ್ದೇಶ ನನಗಿಲ್ಲ. ಮತ್ತೆ ಈ ರೀತಿ ಮಾಡಬೇಡ ಅಂತಾ ವಾರ್ನಿಂಗ್ ಮಾಡಿದ್ದೇನೆ. ಊಟ ಕೊಟ್ಟು ಕಳಿಸಿ ಅಂತಾ ಹೇಳಿದ್ದೇನೆ ಅಷ್ಟೇ. ನಂತರ ನಾನು ಅಲ್ಲಿಂದ ವಾಪಾಸ್ ಬೇಗ ಬಂದುಬಿಟ್ಟೆ. ಇಷ್ಟು ಬಿಟ್ಟರೆ ನನಗೆ ಈ ಪ್ರಕರಣದಲ್ಲಿ ಬೇರೆ ಏನೂ ಗೊತ್ತಿಲ್ಲ ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.

Latest Videos

undefined

ದರ್ಶನ್‌ನಿಂದ ಕೊಲೆಯಾದ ಬಜರಂಗದಳ ಕಾರ್ಯಕರ್ತ ರೇಣುಕಾಸ್ವಾಮಿ ಹೆಂಡ್ತಿ 5 ತಿಂಗಳ ಗರ್ಭಿಣಿ

ಪವಿತ್ರಾಗೌಡ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ಮೆಸೇಜ್ ಮಾಡಿದ್ದ ರೇಣುಕಾಸ್ವಾಮಿ ಅವರನ್ನು ದರ್ಶನ್ ಅಭಿಮಾನಿಗಳು ಚಿತ್ರದುರ್ಗದಿಂದ ಕರೆದುಕೊಂಡು ಬಂದಿದ್ದರು. ನಂತರ, ಆತನನ್ನು ಮೈಸೂರು ರಸ್ತೆಯಲ್ಲಿರುವ ಪಟ್ಟಣಗೆರೆ ಸಮೀಪದ ಶೆಡ್‌ನಲ್ಲಿ ಕೂಡಿ ಹಾಕಲಾಗಿತ್ತು. ನಂತರ ಸಂಜೆ ವೇಳೆಗೆ ರೇಣುಕಾಸ್ವಾಮಿಯನ್ನು ಎಳೆದು ತಂದಿದ್ದಾಗಿ ದರ್ಶನ್ ಅಭಿಮಾನಿಗಳು ಹೇಳಿದ್ದಾರೆ. ಈ ಸ್ಥಳಕ್ಕೆ ಬಂದ ದರ್ಶನ್ ಕೆಲವೇ ನಿಮಿಷದಲ್ಲಿ ಹೊರಗೆ ಹೋಗಿದ್ದರು. 

ನಂತರ, ಪುನಃ ರಾಜರಾಜೇಶ್ವರಿ ನಗರದ ಮನೆಗೆ ಹೋಗಿದ್ದ ದರ್ಶನ್, ಪವಿತ್ರಾಗೌಡ ಅವರನ್ನು ಕರೆದುಕೊಂಡು ಬಂದು ಅವರ ಮುಂದೆಯೇ ಕೆಟ್ಟದಾಗಿ ಕಾಮೆಂಟ್ ಮಾಡಿದ ರೇಣುಕಾಸ್ವಾಮಿ ಕೆನ್ನೆಗೆ ಒಂದು ಏಟು ಹೊಡೆದಿದ್ದಾರೆ. ನಂತರ, ಇನ್ನುಮುಂದೆ ಹೀಗೆ ಮಾಡಬೇಡಿ ಎಂದು ವಾರ್ನಿಂಗ್ ಕೂಡ ಕೊಟ್ಟಿದ್ದಾರೆ. ಇದಾದ ನಂತರ ಆತನಿಗೆ ಊಟ ಕೊಟ್ಟು ಊರಿಗೆ ಕಳಿಸಿಬಿಡಿ ಎಂದು ತನ್ನ ಆಪ್ತರಿಗೆ ಹೇಳಿ ಅಲ್ಲಿಂದ ಹೋಗಿದ್ದಾರೆ. ಆದರೆ, ದರ್ಶನ್ ಆಪ್ತರು ಮದ್ಯದ ಪಾರ್ಟಿ ಮಾಡಿ ಕುಡಿದ ನಶೆಯಲ್ಲಿ ಅಕ್ಕನಿಗೆ ಕೆಟ್ಟದಾಗಿ ಕಾಮೆಂಟ್ ಮಾಡ್ತೀಯಾ ಎಂದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇದರಿಂದ ಆತ ಒದ್ದಾಡಿ ಪ್ರಾಣ ಬಿಟ್ಟಿದ್ದಾರೆ. ರೇಣುಕಾಸ್ವಾಮಿ ಸಾವನ್ನಪ್ಪಿದ್ದನ್ನು ಕಂಡು ಗಾಬರಿಯಾದ ದರ್ಶನ್ ಆಪ್ತರು ಮಾಗಡಿ ರಸ್ತೆಯ ಸುಮನಹಳ್ಳಿ ಫ್ಲೈ ಓವರ್ ಪಕ್ಕದ ಸರ್ವೀಸ್ ರಸ್ತೆಗೆ ಎಸೆದು ಹೋಗಿದ್ದರು.

ವಿಕೃತವಾಗಿ ರೇಣುಕಾಸ್ವಾಮಿ ಕೊಲೆ, ಬರೋಬ್ಬರಿ 15 ಕಡೆ ಗಾಯದ ಬಗ್ಗೆ ಮರಣೋತ್ತರ ಪರೀಕ್ಷೆಯಿಂದ ಬಹಿರಂಗ!

ಕೊಲೆಯಾದ ರೇಣುಕಾಸ್ವಾಮಿ ದೇಹದ ಮೇಲೆ ಬರೋಬ್ಬರಿ 15 ಭಾಗಗಳಲ್ಲಿ ಗಾಯದ ಗುರುತುಗಳಿವೆ. ರೇಣುಕಾಸ್ವಾಮಿಯ ಮರ್ಮಾಂಗ, ಎದೆಭಾಗ, ಕೈ, ಕಾಲು ಮುಖದ ಮೇಲೆ ಭೀಕರ ಹಲ್ಲೆ ಮಾಡಲಾಗಿದೆ. ಕಸದ ರಾಶಿಯಲ್ಲಿ ಮೃತದೇಹ ಬೀಸಾಡಿದ್ದು, ಇಲಿ, ಹೆಗ್ಗಣಗಳು, ನಾಯಿಗಳು ಆತನ ಮೃತದೇಗದ ಮುಖದ ಭಾಗವನ್ನು ಕಚ್ಚಿ ತಿಂದಿವೆ. ಮೃತದೇಹ ಎಸೆದು ಹೋದ ಕಿಡಿಗೇಡಿಗಳು ತಾವೇ ಹೋಗಿ ಪೊಲೀಸರ ಮುಂದೆ ಸರೆಂಡರ್ ಆಗಿದ್ದಾರೆ. ನಂತರ ಅಣ್ಣ ಅತ್ತಿಗೆ ಎಂದು ಕಥೆ ಕಟ್ಟಿ ಕೊಲೆ ಮಾಡಿ, ಹೆಣವನ್ನು ಕಸದ ರಾಶಿಯಲ್ಲಿ ಎಸೆದಿದ್ದೇವೆ ಎಂದು ಹೇಳಿದ್ದಾರೆ.  ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ಮಾಡಿದಾಗ ದರ್ಶನ್ ಹಾಗೂ ಪವಿತ್ರಾಗೌಡ ಅವರ ಹೆಸರನ್ನು ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದಾರೆ. ನಂತರ ಮೈಸೂರಿನಲ್ಲಿದ್ದ ದರ್ಶನ್‌ನನ್ನು ಫೊಲೀಸರು ಎಳೆದುಕೊಂಡು ಬಂದು ಅರೆಸ್ಟ್‌ ಮಾಡಿದ್ದಾರೆ. ನಂತರ ಪೊಲೀಸರು ದರ್ಶನ್‌ನಿಂದ ಹೇಳಿಕೆ ದಾಖಲಿಸಿಕೊಂಡಿದ್ದಾರೆ.

click me!