ಶ್ರೀದೇವಿಯನ್ನು ವಿದೇಶಕ್ಕೆ ಕಳಿಸಿ, ಅನೈತಿಕ ಸಂಬಂಧದ ಕಥೆ ಕಟ್ಟಿ ಡಿವೋರ್ಸ್ ಕೊಡ್ತಿದ್ದಾರೆ; ವಕೀಲೆ ದೀಪ್ತಿ

By Sathish Kumar KH  |  First Published Jun 11, 2024, 3:34 PM IST

ಶ್ರೀದೇವಿಯನ್ನು ಸ್ವತಃ ಯುವರಾಜ್‌ ಅವರೇ ಉನ್ನತ ವ್ಯಾಸಂಗಕ್ಕಾಗಿ ಯುಎಸ್‌ಎಗೆ ಕಳಿಸಿ, ಅನೈತಿಕ ಸಂಬಂಧದ ಕಥೆ ಕಟ್ಟಿ ಡಿವೋರ್ಸ್ ನೋಟಿಸ್ ಕಳುಹಿಸಿದ್ದಾರೆ ಎಂದು ಶ್ರೀದೇವಿ ಪರ ವಕೀಲೆ ದೀಪ್ತಿ ಆಯಥಾನ್ ತಿರುಗೇಟು ಕೊಟ್ಟಿದ್ದಾರೆ.


ಬೆಂಗಳೂರು (ಜೂ.11):  ಡಾ. ರಾಜ್‌ಕುಮಾರ್ ಅಕಾಡೆಮಿಯಲ್ಲಿ ಅಭ್ಯಾಸ ಮಾಡುತ್ತಿದ್ದ ಶ್ರೀದೇವಿಯನ್ನು ಸ್ವತಃ ಆಕೆಯ ಪತಿ ನಟ ಯುವ ರಾಜ್‌ಕುಮಾರ್ ಅವರೇ ಉನ್ನತ ವ್ಯಾಸಂಗಕ್ಕಾಗಿ ಯುಎಸ್‌ಎಗೆ ಕಳಿಸಿದ್ದಾರೆ.ಪತ್ನಿ ತನ್ನ ಜೊತೆಗಿಲ್ಲವೆಂದು, ಅನೈತಿಕ ಸಂಬಂಧದ ಕಥೆ ಕಟ್ಟಿ ಡಿವೋರ್ಸ್ ನೋಟಿಸ್ ಕಳುಹಿಸಿದ್ದಾರೆ ಎಂದು ಶ್ರೀದೇವಿ ಪರ ವಕೀಲೆ ದೀಪ್ತಿ ಆಯಥಾನ್ ತಿರುಗೇಟು ಕೊಟ್ಟಿದ್ದಾರೆ.

ದೊಡ್ಮನೆ ಕುಟುಂಬದ ಇದೇ ಮೊದಲ ಬಾರಿಗೆ ಡಿವೋರ್ಸ್ ಪ್ರಕರಣವೊಂದು ಮುನ್ನೆಲೆಗೆ ಬಂದಿದೆ. ನಟ ರಾಘವೇಂದ್ರ ರಾಜ್ ಕುಮಾರ್ ಅವರ 2ನೇ ಪುತ್ರ ಯುವರಾಜ್ ಹಾಗೂ ಶ್ರೀದೇವಿ ಬೈರಪ್ಪ ಡಿವೋರ್ಸ್ ಕೇಸ್ ಕೋರ್ಟ್ ಮೆಟ್ಟಿಲೇರುತ್ತಿದ್ದಂತೆ, ಯುವರಾಜ್ ಪರ ವಕೀಲರು ಶ್ರೀದೇವಿಗೆ ಅನೈತಿಕ ಸಂಬಂಧವಿದೆ ಎಂದು ಆರೋಪ ಮಾಡಿದ್ದರು. ಇದನ್ನು ಅಲ್ಲಗಳೆದ ಶ್ರೀದೇವಿ ಪರ ವಕೀಲೆ ದೀಪ್ತಿ ಅಯಥಾನ್ ಅವರು, ಇದು ವೈವಾಹಿಕ ಜೀವನದ ಸಮಸ್ಯೆಯಾಗಿದೆ. ಆದ್ರೆ ಯುವರಾಜ್ ಪರ ವಕೀಲರು ಮಾತನಾಡಿದ್ದು, ನೋಡಿದ್ರೆ ಹೆಣ್ಣು ಮಕ್ಕಳ ಮೇಲೆ ಹೇಗೆ ಪರಿಣಾಮ ಬೀರಬಹುದು ಅಂತಾ ಗೊತ್ತಾಗುತ್ತದೆ. ಅವರ ಹೇಳಿಕೆಗೆ ಶ್ರೀದೇವಿ ಶಾಕ್ ಆಗಿದ್ದಾರೆ. ಡಾ.ರಾಜ್ ಕುಮಾರ್ ಸ್ಫರ್ಧಾತ್ಮಕ ಕೋಚಿಂಗ್ ಸೆಂಟರ್ ನಡೆಸುವಾಗ ಶ್ರೀದೇವಿಯನ್ನು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಯುವ ಅವರೇ ಓದಬೇಕು ಅಂತಾ ಕಳಿಸಿದ್ದಾರೆ. ಈಗ ಡಿವೋರ್ಸ್ ನೋಟೀಸ್ ಕಳಿಸಿದ್ದಾರೆ ಎಂದು ಹೇಳಿದರು.

Latest Videos

undefined

ಹೆಣ್ಣಿನ ಚಾರಿತ್ರ್ಯದ ಬಗ್ಗೆ ಕೀಳು ಮಟ್ಟದ ಸುಳ್ಳು ಆರೋಪ ಮಾಡಿರುವುದು ನೋವು ಮಾಡಿದೆ: ಶ್ರೀದೇವಿ ಬೈರಪ್ಪ

ಶ್ರೀದೇವಿ ಪರ ವಕೀಲೆ ದೀಪ್ತಿ ಅಯಥಾನ್ ಮಾಧ್ಯಮಗಳೊಂದಿಗೆ ಮಾತನಾಡಿ,  ಇದು ವೈವಾಹಿಕ ಜೀವನದ ಸಮಸ್ಯೆಯಾಗಿದೆ. ಆದರೆ, ಯುವರಾಜ್ ಪರ ವಕೀಲರು ಮಾತನಾಡಿದ್ದು ನೋಡಿದ್ರೆ ಹೆಣ್ಮಕ್ಳ‌ ಮೇಲೆ ಹೇಗೆ ಪರಿಣಾಮ ಬೀರಬಹುದು ಅಂತಾ ಗೊತ್ತಾಗುತ್ತದೆ. ಅವರ ಹೇಳಿಕೆಗೆ ಶ್ರೀದೇವಿ ಶಾಕ್ ಆಗಿದ್ದಾರೆ. ಆಕೆ ಯುಎಸ್ಎಗೆ ಓದೋದಕ್ಕೆ ಹೋಗಿದ್ದಾರೆ. ಶ್ರಿದೇವಿಗೆ ಡಿಸೆಂಬರ್ ನಲ್ಲಿ ಡಿವೋರ್ಸ್ ನೋಟಿಸ್ ಕೊಟ್ಟಿದ್ದಾರೆ. ಅಗೌರವ ತೋರಿದ್ದಾರೆ ಎಂದು ದೂರು ಹಾಕಿದ್ದಾರೆ. ಇದಕ್ಕೆ ಈಗಾಗಲೆ ನಾವು ಹೇಗೆ ಉತ್ತರ ಕೊಡ್ಬೇಕು ಅದನ್ನು ಕೊಡ್ತೀವಿ ಎಂದು ಹೇಳಿದರು.

ಶ್ರೀದೇವಿಗೆ ಅನೈತಿಕ ಸಂಬಂಧವಿದೆ, ಬಾಯ್‌ಫ್ರೆಂಡ್‌ನಿಂದ ಮಗು ಪಡೆಯುವ ನಿರ್ಧಾರ ಮಾಡಿದ್ರು: ಯುವ ಪರ ವಕೀಲನ ಹೇಳಿಕೆ

ಇನ್ನು ಶ್ರೀದೇವಿ ಹಣದ ಅವ್ಯವಹಾರ ಮಾಡಿದ್ದಾರೆ ಎನ್ನುವ ಆರೋಪದ ಕೇಳಿಬಂದಿದೆ. ಆದರೆ, ಯುವರಾಜ್‌ನ ಪತ್ನಿ ಶ್ರೀದೇವಿ ಕೂಡ ಡಾ.ರಾಜ್‌ ಕುಮಾರ್ ಅಕಾಡೆಮಿ ಪಾರ್ಟ್ನರ್ ಆಗಿದ್ದಾರೆ. ಹಣದ ಅವ್ಯವಹಾರದ ಬಗ್ಗೆ ಕೋರ್ಟ್‌ನಿಂದ ನೋಟಿಸ್ ಬಂದ್ಮೇಲೆ ನೋಡಿ ಮಾತನಾಡುತ್ತೇವೆ. ಶ್ರೀದೇವಿ ಈಗಾಗಲೆ ದೊಡ್ಡಮನೆ ಸಮಸ್ಯೆ  ಹೊರಗಿನವರಿಗೆ ಗೊತ್ತಾಗಬಾರದು ಎಂದು ಸುಮ್ಮನಿದ್ದರು. ಇನ್ನು ಯುಎಸ್‌ಎನಲ್ಲಿ ಅಭ್ಯಾಸ ಮಾಡುತ್ತಿರುವ ಶ್ರೀದೇ ಅವರೇ ಬಂದು ಮಾಧ್ಯಮದ ಮುಂದೆ ಬಂದು ಮಾತಾಡ್ತಿನಿ ಅಂದಿದ್ದಾರೆ. ಆದರೆ, ಯುವರಾಜ್ ಪರ ವಕಿಲರು ಸತ್ಯಕ್ಕೆ ದೂರವಾದ ಮಾತುಗಳನ್ನು ಹೇಳಿದ್ದಾರೆ. ಯುವ ವಕೀಲರ ವಿರುದ್ದ  ಡಿಫಮೇಷನ್ ಕೇಸ್ ದಾಖಲಿಸುತ್ತೇವೆ, ಇದಕ್ಕೆ ತಯಾರಿ ಮಾಡ್ತಿದ್ದೇವೆ ಎಂದು ಶ್ರೀದೇವಿ ಪರ ವಕೀಲೆ ಆಯಥಾನ್ ತಿಳಿಸಿದರು.

click me!