ರಜನಿಕಾಂತ್ ಭೇಟಿ ಬಳಿಕ ಅನಿರುದ್ದ ಜತ್ಕರ್ ಮಾತು.. ಎಲ್ಲೂ ಎಂದೂ ಹೇಳಿರದ ಈ ದೊಡ್ಡ 'ಫ್ಯಾಮಿಲಿ ಸೀಕ್ರೆಟ್' ಹೊರಬಿತ್ತು!

Published : Sep 30, 2026, 04:28 PM IST
Aniruddha Jatkar

ಸಾರಾಂಶ

ಸಾಹಸಸಿಂಹ ಡಾ. ವಿಷ್ಣುವರ್ಧನ್ ಮತ್ತು ರಜನಿಕಾಂತ್ ನಡುವಿನ ಸ್ನೇಹ ಹಾಗೂ ಆತ್ಮೀಯ ಒಡನಾಟ ಕನ್ನಡ ಮತ್ತು ತಮಿಳು ಚಿತ್ರರಂಗದ ಅಭಿಮಾನಿಗಳಿಗೆ ಚಿರಪರಿಚಿತ. ಹೀಗಾಗಿ ವಿಷ್ಣುವರ್ಧನ್ ಕುಟುಂಬ ರಜನಿಕಾಂತ್ ಅವರನ್ನು ಭೇಟಿಯಾಗಿರುವುದು ಭಾವನಾತ್ಮಕ ಕ್ಷಣವಾಗಿ ಮೂಡಿಬಂದಿದೆ. ಈ ವೇಳೆ ನಡೆದ ಮಾತುಕತೆ ಬಗ್ಗೆ ಅನುರುದ್ಧ್ ಏನು ಹೇಳಿದಾರೆ ನೋಡಿ..

Aniruddha Jatkar meets Super Star rajinikanth: ಸೂಪರ್‌ಸ್ಟಾರ್ ರಜನಿಕಾಂತ್ (Rajinikanth) ಎಲ್ಲಿಗೆ ಹೋದರೂ ಅಲ್ಲೊಂದು ವಿಶೇಷ ಕ್ರೇಜ್ ಸೃಷ್ಟಿಯಾಗುತ್ತದೆ. ಅವರ ಸಿನಿಮಾದ ಶೂಟಿಂಗ್ ನಡೆಯುತ್ತಿದೆ ಎಂದರೆ ಅಭಿಮಾನಿಗಳ ಸಂಭ್ರಮಕ್ಕೆ ಮಿತಿಯೇ ಇರುವುದಿಲ್ಲ. ಇದೀಗ ತಲೈವಾ ಕರ್ನಾಟಕಕ್ಕೆ ಆಗಮಿಸಿದ್ದು, ಮೈಸೂರಿನ ಐತಿಹಾಸಿಕ ತಾಣ ಸೋಮನಾಥಪುರದಲ್ಲಿ ನಡೆಯುತ್ತಿರುವ ‘ಧರ್ಮನ್’ ಚಿತ್ರದ ಚಿತ್ರೀಕರಣದಿಂದ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ರಜನಿಕಾಂತ್ ಅವರನ್ನು ಕಣ್ತುಂಬಿಕೊಳ್ಳಲು ಸೋಮನಾಥಪುರದಲ್ಲಿ ಅಭಿಮಾನಿಗಳ ದಂಡೇ ಜಮಾಯಿಸಿದ್ದು, ಶೂಟಿಂಗ್ ಸ್ಥಳದ ಸುತ್ತಮುತ್ತ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

ರಜನಿಕಾಂತ್ ಭೇಟಿಯಾದ ಭಾರತಿ ವಿಷ್ಣುವರ್ಧನ್ ಹಾಗೂ ಕುಟುಂಬ

ಇದೇ ಸಂದರ್ಭದಲ್ಲಿ ‘ಧರ್ಮನ್’ ಚಿತ್ರದ ಶೂಟಿಂಗ್ ಸೆಟ್‌ಗೆ ಹಿರಿಯ ನಟಿ ಭಾರತಿ ವಿಷ್ಣುವರ್ಧನ್, ಅಳಿಯ ಅನಿರುದ್ಧ್ ಜತ್ಕರ್ (Aniruddha Jatkar) ಹಾಗೂ ಅನಿರುದ್ದ್ ಪತ್ನಿ ಕೀರ್ತಿವರ್ಧನ್ ಹಾಗೂ ಹಾಗೂ ಅನಿರುದ್ದ್ ಮಕ್ಕಳಾದ ಜ್ಯೇಷ್ಠವರ್ಧನ್ ಹಾಗೂ ಶ್ಲೋಕ ಭೇಟಿ ನೀಡಿರುವುದು ಮತ್ತೊಂದು ವಿಶೇಷವಾಗಿದೆ. ಸೆಟ್‌ನಲ್ಲಿ ರಜನಿಕಾಂತ್ ಅವರನ್ನು ಆತ್ಮೀಯವಾಗಿ ಭೇಟಿಯಾದ ಕುಟುಂಬ, ಅವರೊಂದಿಗೆ ಕೆಲಕಾಲ ಮಾತುಕತೆ ನಡೆಸಿದೆ. ಈ ಭೇಟಿಯ ವೇಳೆ ಹಳೆಯ ನೆನಪುಗಳೂ ಮೆಲುಕು ಹಾಕಲ್ಪಟ್ಟಿವೆ.

ಸಾಹಸಸಿಂಹ ಡಾ. ವಿಷ್ಣುವರ್ಧನ್ ಮತ್ತು ರಜನಿಕಾಂತ್ ನಡುವಿನ ಸ್ನೇಹ ಹಾಗೂ ಆತ್ಮೀಯ ಒಡನಾಟ ಕನ್ನಡ ಮತ್ತು ತಮಿಳು ಚಿತ್ರರಂಗದ ಅಭಿಮಾನಿಗಳಿಗೆ ಚಿರಪರಿಚಿತ. ಹೀಗಾಗಿ ವಿಷ್ಣುವರ್ಧನ್ ಕುಟುಂಬ ರಜನಿಕಾಂತ್ ಅವರನ್ನು ಭೇಟಿಯಾಗಿರುವುದು ಭಾವನಾತ್ಮಕ ಕ್ಷಣವಾಗಿ ಮೂಡಿಬಂದಿದೆ. ರಜನಿಕಾಂತ್ ಜೊತೆಗಿನ ಭೇಟಿಯ ಫೋಟೋಗಳನ್ನು ಅನಿರುದ್ಧ್ ಜತ್ಕರ್ ಹಾಗೂ ಕುಟುಂಬದವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ನಟ, ಡಾ ವಿಷ್ಣುವರ್ಧನ್ ಅಳಿಯ ಅನಿರುದ್ಧ ಈ ಭೇಟಿಯ ಬಗ್ಗೆ ವಿಶೇಷವಾಗಿ ಮಾತನ್ನಾಡಿದ್ದಾರೆ.

ರಜನಿಕಾಂತ್ ಭೆಟಿಯ ಬಳಿಕ ಅನಿರುದ್ಧ ಜತ್ಕರ್ ಆಡಿರೋ ಮಾತುಗಳು:-

ಸೂಪರ್ ಸ್ಟಾರ್ ನಟ ರಜನಿಕಾಂತ್ ಅವರು ಸೋಮನಾಥಪುರಕ್ಕೆ ಬಂದಿದ್ದಾರೆ ಅಂತ ಗೊತ್ತಾಯ್ತು. ಅದಕ್ಕೇ ಅವರನ್ನು ಭೇಟಿಯಾಗಲು ನಾನು, ಭಾರತಿ ಅಮ್ಮ, ನನ್ನ ಪತ್ನಿ ಕೀರ್ತಿ, ಹಾಗೂ ನನ್ನ ಮಕ್ಕಳಾದ ಜ್ಯೇಷ್ಠವರ್ಧನ, ಶ್ಲೋಕ ಇಲ್ಲಿಗೆ ಬಂದಿದ್ವಿ. ಭೇಟಿ ಮಾಡಿದ್ವಿ, ನಮ್ಮ ಜೊತೆ ರಜನಿಯವರು ಸಾಕಷ್ಟು ಹೊತ್ತು ಮಾತುಕತೆ ನಡೆಸಿದ್ದಾರೆ. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಅವರು ನಮ್ಮೊಟ್ಟಿಗೆ ಕುಳಿತಿದ್ರು. ತುಂಬಾ ಖುಷಿ ಆಯ್ತು.

ನಮ್ಮೊಂದಿಗೆ ತುಂಬಾ ಆತ್ಮೀಯವಾಗಿ ಮಾತನ್ನಾಡಿದ್ರು. ನಮ್ಮ ಕುಟುಂಬಕ್ಕೆ ಅವರ ಆಶೀರ್ವಾದ ಇರ್ಲಿ ಅಂತ ಅವ್ರನ್ನ ಭೆಟಿಯಾದ್ವಿ. ಜೊತೆಗೆ, ನಮ್ಮ ಮಕ್ಕಳಾದ ಜ್ಯೇಷ್ಠವರ್ಧನ್ ಹಾಗೂ ಶ್ಲೋಕ ಕೂಡ ಮುಂದೆ ಸಿನಿಮಾರಂಗಕ್ಕೆ ಬರಲಿದ್ದಾರೆ. ಅದಕ್ಕೇ ಅವರ ಆಶೀರ್ವಾದ ಇರ್ಲಿ ಅಂತ ಅವ್ರನ್ನ ಭೇಟಿ ಆದ್ವಿ. ತುಂಬಾ ಖುಷಿ ಆಯ್ತು' ಅಂದಿದ್ದಾರೆ ನಟ ಅನಿರುದ್ಧ ಜತ್ಕರ್.

ಟಿ. ನರಸೀಪುರ ತಾಲೂಕಿನ ಸೋಮನಾಥಪುರದಲ್ಲಿರುವ ಹೊಯ್ಸಳರ ಕಾಲದ ಪ್ರಸಿದ್ಧ ಕೇಶವ ದೇವಾಲಯದ ಆವರಣದಲ್ಲಿ ‘ಧರ್ಮನ್’ ಸಿನಿಮಾದ ಪ್ರಮುಖ ದೃಶ್ಯಗಳ ಚಿತ್ರೀಕರಣ ನಡೆಯುತ್ತಿದೆ. ಭವ್ಯವಾದ ಹೊಯ್ಸಳ ಶಿಲ್ಪಕಲೆ, ಐತಿಹಾಸಿಕ ಹಿನ್ನೆಲೆ ಹಾಗೂ ದೇವಾಲಯದ ವಿಶಿಷ್ಟ ವಾಸ್ತುಶಿಲ್ಪದ ನಡುವೆ ರಜನಿಕಾಂತ್ ಕಾಣಿಸಿಕೊಳ್ಳುತ್ತಿರುವ ದೃಶ್ಯಗಳನ್ನು ಸೆರೆಹಿಡಿಯಲಾಗುತ್ತಿದೆ ಎನ್ನಲಾಗಿದೆ. ಹೀಗಾಗಿ ಸಿನಿಮಾ ಮಾತ್ರವಲ್ಲದೆ ಶೂಟಿಂಗ್ ನಡೆಯುತ್ತಿರುವ ಸ್ಥಳವೂ ಸಿನಿಪ್ರಿಯರ ಕುತೂಹಲಕ್ಕೆ ಕಾರಣವಾಗಿದೆ.

ಆಟೋದಲ್ಲಿ ಬಂದ ತಲೈವಾ!

ರಜನಿಕಾಂತ್ ಅವರ ಎಂಟ್ರಿಯೇ ಈ ಬಾರಿ ಅಭಿಮಾನಿಗಳಿಗೆ ಅಚ್ಚರಿ ನೀಡಿದೆ. ಯಾವುದೇ ದೊಡ್ಡ ಕಾರು ಅಥವಾ ವಿಶೇಷ ವಾಹನದಲ್ಲಿ ಆಗಮಿಸುವ ಬದಲು ತಲೈವಾ ಆಟೋದಲ್ಲಿ ಶೂಟಿಂಗ್ ಸ್ಥಳಕ್ಕೆ ಬಂದಿದ್ದಾರೆ. ಸರಳ ಜೀವನಶೈಲಿಗೆ ಹೆಸರಾಗಿರುವ ರಜನಿಕಾಂತ್ ಅವರ ಈ ನಡೆ ಅಭಿಮಾನಿಗಳ ಮನ ಗೆದ್ದಿದೆ.

ತಮ್ಮ ನೆಚ್ಚಿನ ನಟ ಆಟೋದಲ್ಲಿ ಬರುತ್ತಿರುವುದನ್ನು ನೋಡುತ್ತಿದ್ದಂತೆಯೇ ಅಭಿಮಾನಿಗಳು ಜೈಕಾರ ಹಾಕಿ ಸಂಭ್ರಮಿಸಿದ್ದಾರೆ. ಆಟೋದಲ್ಲೇ ಕುಳಿತ ರಜನಿಕಾಂತ್ ಕೂಡ ಅಭಿಮಾನಿಗಳತ್ತ ಕೈಬೀಸಿ ಅವರ ಪ್ರೀತಿಗೆ ಪ್ರತಿಕ್ರಿಯಿಸಿದ್ದಾರೆ. ಈ ವೇಳೆ ಪುಟ್ಟ ಬಾಲಕನೊಬ್ಬ ರಜನಿಕಾಂತ್ ಅಭಿನಯದ ಜನಪ್ರಿಯ ‘ಬಾಬಾ’ ಚಿತ್ರದ ಶೈಲಿಯನ್ನು ನೆನಪಿಸುವ ಮುದ್ರೆಯನ್ನು ಪ್ರದರ್ಶಿಸಿರುವುದು ಎಲ್ಲರ ಗಮನ ಸೆಳೆದಿದೆ. ತಲೈವಾ ಮತ್ತು ಬಾಲ ಅಭಿಮಾನಿಯ ಈ ಕ್ಷಣದ ವಿಡಿಯೋಗಳು ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಹೊಯ್ಸಳ ಶಿಲ್ಪಕಲೆಯ ನಡುವೆ ‘ಧರ್ಮನ್’

ಸೋಮನಾಥಪುರದ ಕೇಶವ ದೇವಾಲಯವು ಹೊಯ್ಸಳರ ಅದ್ಭುತ ಶಿಲ್ಪಕಲೆಗೆ ಪ್ರಸಿದ್ಧವಾಗಿರುವ ಐತಿಹಾಸಿಕ ತಾಣ. ದೇವಾಲಯದ ಕಲ್ಲಿನ ಕೆತ್ತನೆಗಳು ಮತ್ತು ವಿಶಿಷ್ಟ ವಾಸ್ತುಶೈಲಿಯ ಹಿನ್ನೆಲೆಯಲ್ಲಿ ‘ಧರ್ಮನ್’ ಚಿತ್ರದ ಕೆಲವು ಪ್ರಮುಖ ದೃಶ್ಯಗಳನ್ನು ಚಿತ್ರೀಕರಿಸಲಾಗುತ್ತಿದೆ. ಹೀಗಾಗಿ ಈ ಸಿನಿಮಾದಲ್ಲಿ ಕಥೆಯ ಜೊತೆಗೆ ಕರ್ನಾಟಕದ ಐತಿಹಾಸಿಕ ಸೊಬಗು ಕೂಡ ಪ್ರೇಕ್ಷಕರಿಗೆ ಕಾಣಸಿಗುವ ನಿರೀಕ್ಷೆ ಮೂಡಿದೆ.

ಅಶ್ವತ್ ಮಾರಿಮುತ್ತು ನಿರ್ದೇಶನದ ‘ಧರ್ಮನ್’ ಚಿತ್ರವನ್ನು ಕಮಲ್ ಹಾಸನ್ ಅವರ ರಾಜ್ ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗುತ್ತಿದೆ. ಚಿತ್ರದಲ್ಲಿ ರಜನಿಕಾಂತ್ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದ್ದು, ಅವರ ಪಾತ್ರ ಹೇಗಿರಲಿದೆ ಎಂಬ ಕುತೂಹಲ ಈಗಾಗಲೇ ಹೆಚ್ಚಾಗಿದೆ.

ಮೈಸೂರಿನ ನೆಲದಲ್ಲಿ ತಲೈವಾ ಕಾಣಿಸಿಕೊಂಡಿರುವುದು ಅಭಿಮಾನಿಗಳಿಗೆ ದೊಡ್ಡ ಸಂಭ್ರಮ ತಂದಿದೆ. ಅದರಲ್ಲೂ ಆಟೋದಲ್ಲಿ ಆಗಮಿಸಿ ಅಭಿಮಾನಿಗಳತ್ತ ಕೈಬೀಸಿದ ರಜನಿಕಾಂತ್ ಅವರ ಸರಳತೆ ಮತ್ತೊಮ್ಮೆ ಅಭಿಮಾನಿಗಳ ಮನ ಗೆದ್ದಿದೆ. ಇದೀಗ ಸೋಮನಾಥಪುರದ ಐತಿಹಾಸಿಕ ಹಿನ್ನೆಲೆಯೊಂದಿಗೆ ಮೂಡಿಬರುತ್ತಿರುವ ‘ಧರ್ಮನ್’ ಸಿನಿಮಾದ ದೃಶ್ಯಗಳನ್ನು ದೊಡ್ಡ ಪರದೆಯಲ್ಲಿ ನೋಡಲು ಸಿನಿಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

‘ಸಿಟಿ ಲೈಟ್ಸ್’ ಸಕ್ಸಸ್: ಮೂರನೇ ವಾರಕ್ಕೆ ಕಾಲಿಟ್ಟ ಸಿನಿಮಾ, ಹ್ಯಾಟ್ರಿಕ್ ಡೈರೆಕ್ಟರ್ ಆದ ದುನಿಯಾ ವಿಜಯ್
'ಅವರ ನಂಬಿಕೆ ಕಂಡು ನಾನು ಹಾಗೂ ಗೀತಾ ಕಣ್ಣೀರಿಟ್ಟಿದ್ದೆವು': ಶಿವಣ್ಣ ಹೇಳಿದ್ದೇನು?