ರೆಬೆಲ್ ಸ್ಟಾರ್ 'ಅಂತ' ಮೇ 26ರಂದು ಹೊಸರೂಪದಲ್ಲಿ ಮರು ಬಿಡುಗಡೆ

By Kannadaprabha News  |  First Published May 24, 2023, 9:46 AM IST

ಅಂಬರೀಶ್‌ ನಟನೆಯ ಸೂಪರ್‌ಹಿಟ್‌ ಸಿನಿಮಾ ಅಂತ ಹೊಸ ರೂಪದಲ್ಲಿ ನಿಮ್ಮ ಮುಂದೆ ಬರಲಿದೆ. 


ಅಂಬರೀಶ್‌ ಹುಟ್ಟುಹಬ್ಬದ ಪ್ರಯುಕ್ತ ಅವರು ನಟಿಸಿರುವ ಸೂಪರ್‌ಹಿಟ್‌ ಸಿನಿಮಾ ‘ಅಂತ’ ಮೇ 26ರಂದು ಮರು ಬಿಡುಗಡೆ ಆಗುತ್ತಿದೆ. ನಲವತ್ತು ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ಈ ಚಿತ್ರವು ಈಗ ನೂತನ ತಂತ್ರಜ್ಞಾನದೊಂದಿಗೆ ಪ್ರೇಕ್ಷಕರ ಮುಂದೆ ಬರುತ್ತಿದೆ.

ಈ ಕುರಿತು ಮಾಹಿತಿ ನೀಡಿದ ನಿರ್ದೇಶಕ ರಾಜೇಂದ್ರಸಿಂಗ್‌ ಬಾಬು, ‘1981 ಫೆಬ್ರವರಿ 10ರಂದು ತೆರೆಗೆ ಬಂದ ಸಿನಿಮಾ ಅಂತ. ಪತ್ರಕರ್ತ ಎಂ ಬಿ ಸಿಂಗ್‌ ಮೂಲಕ ನನಗೆ ಈ ಕತೆ ಸಿಕ್ಕಿತು. ಇದನ್ನು ನಾನು ರಜನಿಕಾಂತ್‌ ಜೊತೆ ಸಿನಿಮಾ ಮಾಡಬೇಕೆಂದುಕೊಂಡಿದ್ದೆ. ಯಾಕೋ ಪ್ರಯತ್ನ ಕೈಗೂಡಲಿಲ್ಲ. ಆ ನಂತರ ಬಂದಿದ್ದೇ ಅಂಬರೀಶ್‌. ಆಗ ರು.20 ಲಕ್ಷದಲ್ಲಿ ನಿರ್ಮಾಣಗೊಂಡು ರು.40 ಲಕ್ಷ ಗಳಿಕೆ ಮಾಡಿದ ಸಿನಿಮಾ ಇದು. ಈಗಿನ ಲೆಕ್ಕದಲ್ಲಿ ಅಂದಿನ 20 ಲಕ್ಷ 20 ಕೋಟಿ, 40 ಲಕ್ಷ ನೂರು ಕೋಟಿ. ಮಾರುತಿ, ವೇಣು ಹಾಗೂ ಕೆ ಸಿ ಎನ್‌ ಚಂದ್ರಶೇಖರ್‌ ನಿರ್ಮಾಣ ಮಾಡಿದ್ದರು. ಈ ಚಿತ್ರದ ಸ್ಫೂರ್ತಿಯಿಂದ ಸಾವಿರಾರು ಸಿನಿಮಾಗಳು ಬಂದಿವೆ. ಅಂಥ ಚಿತ್ರವನ್ನು ಈಗ ಅಂಬರೀಶ್‌ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಮರು ಬಿಡುಗಡೆ ಆಗುತ್ತಿರುವುದು ಖುಷಿ ಕೊಟ್ಟಿದೆ’ ಎಂದು ಹೇಳಿದರು.

Tap to resize

Latest Videos

ಕನಸಾಗಿಯೇ ಉಳಿದ ಚಿತ್ರನಗರಿ ಯೋಜನೆ: ಸರ್ಕಾರದ ಮುಂದೆ ಬೇಡಿಕೆ ಇಡಲು ಚಿತ್ರರಂಗ ಸಿದ್ಧತೆ

ನಿರ್ಮಾಪಕರಲ್ಲೊಬ್ಬರಾದ ವೇಣು, ‘ಮೇ 29 ಅಂಬರೀಶ್‌ ಅವರ 71ನೇ ಹುಟ್ಟುಹಬ್ಬ. ಹೀಗಾಗಿ ಅಂತ ಚಿತ್ರವನ್ನು 70ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತಿದ್ದೇವೆ. 35 ಎಂಎಂನಿಂದ 70 ಎಂಎಂ ಸಿನಿಮಾ ಸ್ಕೋಪ್‌ ಮಾಡಲಾಗಿದೆ. ಸೌಂಡ್‌, ಕಲರಿಂಗ್‌ ಹೊಸದಾಗಿ ಮಾಡಲಾಗಿದೆ. ಜಯಣ್ಣ ಫಿಲಮ್ಸ್‌ ಚಿತ್ರವನ್ನು ವಿತರಣೆ ಮಾಡುತ್ತಿದೆ’ ಎಂದು ಹೇಳಿದರು.

click me!