'ಅಮೃತವರ್ಷಿಣಿ' ನೆನಪಲ್ಲಿ ಸದಾ ಜೊತೆಗಿರುತ್ತೀರಿ: ಶರತ್ ಬಾಬು ನಿಧನಕ್ಕೆ ರಮೇಶ್ ಅರವಿಂದ್ ಕಂಬನಿ

By Shruthi KrishnaFirst Published May 23, 2023, 3:55 PM IST
Highlights

'ಅಮೃತವರ್ಷಿಣಿ' ನೆನಪಲ್ಲಿ ಸದಾ ಜೊತೆಗಿರುತ್ತೀರಿ ಎಂದು ನಟ ಶರತ್ ಬಾಬು ನಿಧನಕ್ಕೆ ರಮೇಶ್ ಅರವಿಂದ್ ಕಂಬನಿ ಮಿಡಿದಿದ್ದಾರೆ. 

ಅಮೃತವರ್ಷಿಣಿ ಈ ಸಿನಿಮಾ ಮರೆಯಲು ಸಾಧ್ಯನಾ...ರಮೇಶ್ ಅರವಿಂದ್, ಶರತ್ ಬಾಬು ಮತ್ತು ಸುಹಾಸಿನಿ ಕಾಂಬಿನೇಷನ್ ಕನ್ನಡ ಅಭಿಮಾನಿಗಳಿಗೆ ಇನ್ನೂ ಕಣ್ಣಿದ ಕಟ್ಟಿದ ಹಾಗಿದೆ. ದಿನೇಶ್ ಬಾಬು ನಿರ್ದೇಶನ, ಚಿತ್ರಕಥೆ, ನಟನೆ, ಹಾಡುಗಳು ಎಲ್ಲವೂ ಅದ್ಭುತ. ಶರತ್ ಬಾಬು ಅಂದರೆ ಕನ್ನಡಿಗರಿಗೆ ನೆನಪಾಗೋದೆ ಅಮೃತವರ್ಷಿಣಿ ಸಿನಿಮಾ. ಈ ಶರತ್ ಬಾಬು ಅವರಿಗೆ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿತ್ತು. ಅಲ್ಲಿಂದ ರಮೇಶ್ ಅರವಿಂದ್ ಮತ್ತು ಶರತ್ ಬಾಬು ನಡುವೆ ಉತ್ತಮ ಸ್ನೇಹ ಬಾಂಧವ್ಯವಿತ್ತು. ಶರತ್ ಬಾಬು ಈಗ ನೆನಪು ಮಾತ್ರ. ಅನಾರೋಗ್ಯದಿಂದ ಬಳಲುತ್ತಿದ್ದ ಶರತ್ ಬಾಬು ಕೊನೆಯುಸಿರೆಳೆದಿದ್ದಾರೆ. ಶರತ್ ಅವರ ಬಗ್ಗೆ ನಟ ರಮೇಶ್ ಅರವಿಂದ್ ಪ್ರತಿಕ್ರಿಯೆ ನೀಡಿ ಬೇಸರ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಶರತ್ ಬಾಬು ಅವರ ಫೋಟೋ ಶೇರ್ ಮಾಡಿ, 'ವಿದಾಯ ಶರತ್ ಬಾಬು ಅವರಿಗೆ. ಅಮೃತವರ್ಷಿಣಿಯ ನಮ್ಮ ಪ್ರೀತಿಯ ನೆನಪುಗಳಲ್ಲಿ ನೀವು ಬದುಕುವುದನ್ನು ಮುಂದುವರಿಸಿ' ಎಂದು ಹೇಳಿದ್ದಾರೆ. ಇನ್ನೂ ಆಂಗ್ಲ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ರಮೇಶ್ ಅರವಿಂದ್, ಶರತ್ ಬಾಬು ಜೊತೆಗಿನ ನೆನಪು ಬಿಚ್ಚಿಟ್ಟಿದ್ದಾರೆ. ಶರತ್ ಬಾಬು ಸೌಮ್ಯ ಸ್ವಭಾವದ ವ್ಯಕ್ತಿ.  'ಅಜನಬಾಹು' ಆಗಿದ್ದರು ಆದರೆ ಅವರ ಪಾತ್ರವು ತಂಗಾಳಿಯಂತೆ ಸೌಮ್ಯವಾಗಿತ್ತು. ನನಗೆ ಮೊದಲು ನೆನಪಿಗೆ ಬರುವುದು ಅವರ ಪ್ರತಿಭೆ. ನಗು ಮತ್ತು ಮೃದುವಾದ ನೋಟ' ಎಂದು ಹೇಳಿದ್ದಾರೆ. 

Latest Videos

Sarath Babu Death: ಖ್ಯಾತ ನಟನ ನಿಧನಕ್ಕೆ ಪ್ರಧಾನಿ ಮೋದಿ, ರಜನಿಕಾಂತ್, ಚಿರಂಜೀವಿ ಸೇರಿ ಅನೇಕ ಗಣ್ಯರ ಸಂತಾಪ

'ಅವರು ತುಂಬಾ ಆರೋಗ್ಯದ ಬಗ್ಗೆ ಕಾಳಜಿ ಹೊಂದಿದ್ದರು. ಅವರು ಚಿತ್ರೀಕರಣ ಸ್ಥಳದಿಂದ ಅರ್ಧ ಕಿಲೋಮೀಟರ್ ದೂರದಲ್ಲಿಯೇ  ತಮ್ಮ ಕಾರನ್ನು ನಿಲ್ಲಿಸುವುದನ್ನು ನಾನು ನೋಡಿದ್ದೇನೆ, ಅಲ್ಲಿಂದ ಅವರು ನಡೆದುಕೊಂಡು ಬರುತ್ತಿದ್ದರು' ಎಂದು ಹೇಳಿದ್ದಾರೆ.

Farewell Sarathbabu garu🙏You continue to live… in our fond memories of Amrutavarshini . pic.twitter.com/qdllQeOeqh

— Ramesh Aravind (@Ramesh_aravind)

ನಟಿ ನಮಿತಾ ಜೊತೆ 4ನೇ ಮದುವೆ ಆಗಿದ್ರಾ ಶರತ್ ಬಾಬು? ಪತಿ ವೀರೇಂದ್ರ ಚೌಧರಿ ಹೇಳಿದ್ದೇನು?

ಆಸ್ಪತ್ರೆಯಲ್ಲಿ ನಿಧನ

ನಟ ಶರತ್ ಬಾಬು ನಿನ್ನೆ (ಮೇ 22) ಕೊನೆಯುಸಿರೆಳೆದಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ನಟ ಶರತ್ ಬಾಬು ಅವರನ್ನು ಕಳೆದ ಒಂದು ತಿಂಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೈದರಾಬಾದ್​‌ನ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಇರಿಸಿ ಶರತ್ ಬಾಬು ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಸುಮಾರು ಒಂದು ತಿಂಗಳಿಗೂ ಅಧಿಕ ಕಾಲ ಆಸ್ಪತ್ರೆ ಬೆಡ್‌ ಮೇಲೆ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಶರತ್ ಬಾಬು ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದರು. ಶರತ್ ಬಾಬು ಅವರ ನಿಧನಕ್ಕೆ ಅನೇಕರು ಪ್ರಧಾನಿ ನರೇಂದ್ರ ಮೋದಿ, ರಜನಿಕಾಂತ್, ಚಿರಂಜೀವಿ ಸೇರಿದಂತೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸುತ್ತಿದ್ದಾರೆ. ಇಂದು ಚೆನ್ನೈನಲ್ಲಿ ಅವರ ಅಂತ್ಯಕ್ರಿಯೆ ನೆರವೇರಿದೆ. 

click me!