ಅಂಬಿ ಮನೆಗೆ ಹೊಸ ಅತಿಥಿ ಆಗಮನ ಕನ್ಫರ್ಮ್, ಲೀಕ್ ಆಯ್ತು ಅವಿವಾ ಬಿದ್ದಪ್ಪ ಸೀಮಂತದ ಒಂದು ಫೋಟೋ!

Published : Sep 15, 2024, 04:58 PM ISTUpdated : Sep 15, 2024, 05:01 PM IST
ಅಂಬಿ ಮನೆಗೆ ಹೊಸ ಅತಿಥಿ ಆಗಮನ ಕನ್ಫರ್ಮ್, ಲೀಕ್ ಆಯ್ತು ಅವಿವಾ ಬಿದ್ದಪ್ಪ  ಸೀಮಂತದ ಒಂದು ಫೋಟೋ!

ಸಾರಾಂಶ

ರೆಬೆಲ್‌ ಸ್ಟಾರ್‌ ಅಂಬರೀಶ್‌ ಪುತ್ರ ಅಭಿಷೇಕ್‌ ಅವರ ಪತ್ನಿ ಅವಿವಾ ಬಿದ್ದಪ್ಪ ಗರ್ಭಿಣಿಯಾಗಿದ್ದು, ದಂಪತಿಗಳು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸೀಮಂತ ಶಾಸ್ತ್ರದ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ರೆಬಲ್‌ ಸ್ಟಾರ್‌ ಅಂಬರೀಶ್‌ ಪುತ್ರ ಅಭಿಷೇಕ್‌ ಅಪ್ಪ ಆಗೋ ಸಂಭ್ರಮದಲ್ಲಿದ್ದಾರೆ ಎಂಬ ಸುದ್ದಿ ಈಗ ಖಚಿವಾಗಿದೆ. ಅಭಿಷೇಕ್‌ ಅಂಬರೀಶ್‌ ಪತ್ನಿ ಅವಿವಾ ಬಿದ್ದಪ್ಪ ಗರ್ಭಿಣಿಯಾಗಿದ್ದು, ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮಾಜಿ ಸಂಸದೆ, ಹಿರಿಯ ನಟಿ ಸುಮಲತಾ ಅವರು ಸದ್ಯದಲ್ಲೇ ಅಜ್ಜಿಯಾಗಲಿದ್ದಾರೆ. ಅಂಬಿ ಕುಟುಂಬದಲ್ಲಿ ಸಂತಸದ  ಸುದ್ದಿ ಇದ್ದು ಹೊಸ ಅತಿಥಿಯ ಆಗಮನದ ನಿರೀಕ್ಷೆಯಲ್ಲಿದ್ದಾರೆಂದು ಕಳೆದ 1 ತಿಂಗಳಿನಿಂದ ಸುದ್ದಿಯಾಗಿತ್ತು.  ಆಗಸ್ಟ್ 15ರಂದು ಸೀಮಂತ ಶಾಸ್ತ್ರ ನೆರವೇರಿದೆ ಎಂದು ಸುದ್ದಿ ಹಬ್ಬಿತ್ತು. ಅತ್ಯಂತ ಖಾಸಗಿಯಾಗಿ ಈ ಕಾರ್ಯಕ್ರಮ ನಡೆದಿದ್ದು, ಕುಟುಂಬದ ಕಡೆಯಿಂದ ಯಾವುದೇ ಸ್ಪಷ್ಟನೆ ಸಿಕ್ಕಿರಲಿಲ್ಲ. ಈಗ ಫೋಟೋವೊಂದು ಲೀಕ್ ಆಗಿದ್ದು. ಎಲ್ಲಾ ಊಹಾಪೋಹಗಳಿಗೆ ತೆರೆ ಬಿದ್ದಿದೆ.

ಮೀರಾ ಜಾಸ್ಮಿನ್ ಸಿನಿಮಾ ಅವಕಾಶ ಕಳೆದುಕೊಳ್ಳಲು ನಿರ್ಮಾಪಕ ಮಾಡಿದ ಕಮೆಂಟ್‌ ಕಾರಣವೇ?

ಇದೀಗ ಅವಿವಾ ಬಿದ್ದಪ್ಪ  ಅವರ ಸೀಮಂತ ಶಾಸ್ತ್ರದ ಫೋಟೋ ವೈರಲ್ ಆಗಿದೆ. ಹಸಿರು ಮತ್ತು ಚಿನ್ನದ ಬಣ್ಣದ ಸೀರೆಯಲ್ಲಿ ಅವಿವಾ ಮಿಂಚಿದ್ದು, ಬೇಬಿ ಬಂಪ್ ಕಾಣಿಸುತ್ತಿದೆ. ನಟಿ ಪ್ರಿಯಾಂಕಾ ಉಪೇಂದ್ರ ಸೇರಿ ಹಲವು ಮಂದಿ ಸೀಮಂತಶಾಸ್ತ್ರದಲ್ಲಿ ಭಾಗಿಯಾಗಿದ್ದು ಕೆಲವೇ ಕೆಲವು ಫೋಟೋಗಳು ಮಾತ್ರ ವೈರಲ್ ಆಗಿದೆ. ಅಂಬಿ ನಿವಾಸದಲ್ಲಿ ಸೀಮಂತ ಕಾರ್ಯ ನೇರವೇರಿದೆ ಎಂದು ತಿಳಿದುಬಂದಿದೆ. ಅಕ್ಟೋಬರ್‌ ವೇಳೆಗೆ ಅಭಿಷೇಕ್‌ ಮನೆಗೆ ಹೊಸ ಅತಿಥಿಯ ಆಗಮನವಾಗಲಿದೆ ಎಂದು ವರದಿ ತಿಳಿಸಿದೆ. ಸೀಮಂತ ಯಾವಾಗ ನಡೆದಿದೆ ಎಂಬ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ.

ಇನ್ನು ಇತ್ತೀಚೆಗೆ  ಟ್ರೆಡಿಷನಲ್ ಲುಕ್​ನಲ್ಲಿ ಅವಿವಾ ಫೋಟೋ ಒಂದನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಾಕಿದ್ದರು. ಮಾತ್ರವಲ್ಲ ಮಾಲ್ಡೀವ್ಸ್ ನಲ್ಲಿರುವ ರೀಲ್ಸ್ ಶೇರ್ ಮಾಡಿದ್ದರು. ಇದೀಗ ಅಭಿಮಾನಿಗಳು  ಮಾಲ್ಡೀವ್ಸ್  ಗೆ ಬೇಬಿ ಮೂನ್‌ ಗೆ ತೆರಳಿರಬೇಕೆಂದು ಊಹಿಸುತ್ತಿದ್ದಾರೆ. ಆಗಸ್ಟ್ ನಲ್ಲಿ ಅವಿವಾ ಗರ್ಭಿಣಿ ಎಂಬ ಸುದ್ದಿ ಬೆನ್ನಲ್ಲೇ ತಿರುಪತಿಗೆ ತೆರಳಿ ಬಾಲಾಜಿ ದರ್ಶನ ಮಾಡಿದ ಫೋಟೋ ಕೂಡ ವೈರಲ್ ಆಗಿತ್ತು.

ಇನ್ಸ್ಟಾ ಬಯೋ ಬದಲಿಸಿದ ಕೆಲವೇ ಗಂಟೆಗಳಲ್ಲಿ ರಣವೀರ್ - ದೀಪಿಕಾ ಮಗಳೊಂದಿಗಿರುವ ವಿಡಿಯೋ ವೈರಲ್!

ಮಂಡ್ಯದ ಗಂಡು ಖ್ಯಾತಿಯ ನಟ ರೆಬೆಲ್‌ಸ್ಟಾರ್ ಅಂಬರೀಶ್ ಅವರು 2018ರ ನವೆಂಬರ್‌ನಲ್ಲಿ ನಿಧನರಾಗಿದ್ದರು. ಅಂಬರೀಶ್ ನಿಧನದ 5 ವರ್ಷದ ನಂತರ ಕಳೆದ ವರ್ಷ ಅಭಿಷೇಕ್ ಅಂಬರೀಶ್ ಪ್ರೀತಿಸಿದ ಹುಡುಗಿಯನ್ನು ವರಿಸಿದ್ದರು. ಅಂಬಿ ಸೊಸೆ ಗರ್ಭಿಣಿಯಾಗಿರುವ ಸುದ್ದಿ ಕೇಳಿದ ತಕ್ಷಣ ನಮ್ಮ ರೆಬೆಲ್‌ಸ್ಟಾರ್ ಅಂಬರೀಶ್ ಮತ್ತೆ ಹುಟ್ಟಿಬರಲಿದ್ದಾರೆ ಎಂದು ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದರು. 

ಹಲವು ವರ್ಷಗಳ ಕಾಲ ಪ್ರೀತಿಸುತ್ತಿದ್ದ ಅಭಿಷೇಕ್ ಅಂಬರೀಷ್ ಹಾಗೂ ಅವಿವಾ 2023ರ ಜೂನ್ 5ರಂದು ಅದ್ದೂರಿಯಾಗಿ ಮದುವೆಯಾಗಿದ್ದರು.  ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಫ್ಯಾಷನ್ ಉದ್ಯಮಿ ಅವಿವಾ ಬಿದ್ದಪ್ಪ ಅವರನ್ನು ಮದುವೆಯಾಗಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?