ನಗುವ ನಯನ... ಹಾಡುವ ಮೂಲಕ ಕನ್ನಡಿಗರ ಮನಗೆದ್ದ ಬಾಲಿವುಡ್​ ನಟ ಅನಿಲ್​ ಕಪೂರ್​: ವಿಡಿಯೋ ವೈರಲ್​

Published : Mar 04, 2025, 04:32 PM ISTUpdated : Mar 04, 2025, 04:44 PM IST
ನಗುವ ನಯನ... ಹಾಡುವ ಮೂಲಕ ಕನ್ನಡಿಗರ ಮನಗೆದ್ದ ಬಾಲಿವುಡ್​ ನಟ ಅನಿಲ್​ ಕಪೂರ್​: ವಿಡಿಯೋ ವೈರಲ್​

ಸಾರಾಂಶ

ಖ್ಯಾತ ಬಾಲಿವುಡ್ ನಟ ಅನಿಲ್ ಕಪೂರ್ 1983ರಲ್ಲಿ 'ಪಲ್ಲವಿ ಅನುಪಲ್ಲವಿ' ಚಿತ್ರದ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡಿದರು. ಇತ್ತೀಚೆಗೆ, ಯಶ್ ಅವರ 'ಟಾಕ್ಸಿಕ್' ಚಿತ್ರದಲ್ಲಿ ಅವರು ನಟಿಸುವ ಸಾಧ್ಯತೆಯಿದೆ. ಮುಂಬೈನಲ್ಲಿ ಟಾಕ್ಸಿಕ್ ಅಡ್ಡೆಗೆ ಭೇಟಿ ನೀಡಿದ ವಿಡಿಯೋ ವೈರಲ್ ಆಗಿದೆ. ವಿಜಯ್ ಪ್ರಕಾಶ್ ಜೊತೆ 'ನಗುವ ನಯನ' ಹಾಡನ್ನು ಹಾಡಿರುವುದು ವೈರಲ್ ಆಗಿದೆ. ಆರ್.ಎನ್. ಜಯಗೋಪಾಲ್ ಅವರ ಸಹಾಯದಿಂದ ಅನಿಲ್ ಕಪೂರ್ 'ಪಲ್ಲವಿ ಅನುಪಲ್ಲವಿ' ಚಿತ್ರಕ್ಕೆ ಆಯ್ಕೆಯಾದರು.

ಬಾಲಿವುಡ್​ ನಟ ಅನಿಲ್​ ಕಪೂರ್​ ಇದಾಗಲೇ ಹಿಂದಿ ಚಿತ್ರರಂಗದಲ್ಲಿ ಬಹುದೊಡ್ಡ ಹೆಸರು ಮಾಡಿದವರು. ಆದರೆ ಇವರು ಕನ್ನಡ ಚಿತ್ರದಲ್ಲಿಯೂ ನಟಿಸಿರುವ ವಿಷಯ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ.  1983ರಲ್ಲಿ ಬಿಡುಗಡೆಯಾಗಿದ್ದ  'ಪಲ್ಲವಿ ಅನುಪಲ್ಲವಿ' ಚಿತ್ರದಲ್ಲಿ ನಾಯಕನಾಗಿ ಮಿಂಚಿದ್ದರು ಅನಿಲ್​ ಕಪೂರ್​. ಇದಾದ ಬಳಿಕ ಕನ್ನಡದತ್ತ ಮುಖ ಮಾಡದಿದ್ದರೂ ಇದೀಗ ಯಶ್​ ಅವರ ಬಹುನಿರೀಕ್ಷಿತ ಟಾಕ್ಸಿಕ್​ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದೇ ಹೇಳಲಾಗುತ್ತಿದೆ. ಅಷ್ಟಕ್ಕೂ ಟಾಕ್ಸಿಕ್​ ಚಿತ್ರದ ಬಗ್ಗೆ ಸಾಕಷ್ಟು ಗೋಪ್ಯತೆ ಮಾಡಲಾಗಿದೆ. ಇದರ ಬಗ್ಗೆ ಯಾವ ಮಾಹಿತಿಯೂ ಹೊರಗೆ ಹೋಗದಂತೆ ನೋಡಿಕೊಳ್ಳಲಾಗುತ್ತಿದೆ. ಆದರೆ  ಇತ್ತೀಚಿನ ಕೆಲವು ಬೆಳವಣಿಗೆಯಿಂದಾಗಿ ಅನಿಲ್​  ಕಪೂರ್​ ಕೂಡ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದೇ ಹೇಳಲಾಗುತ್ತಿದೆ.  ಇದಕ್ಕೆ ಕಾರಣ, ಅನಿಲ್ ಕಪೂರ್ ಮುಂಬೈನಲ್ಲಿ ಟಾಕ್ಸಿಕ್ ಅಡ್ಡೆಗೆ ತೆರಳುತ್ತಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು.

ಅದರ ಬೆನ್ನಲ್ಲೇ ಇದೀಗ ಅನಿಲ್​ ಕಪೂರ್​ ಅವರು ಕನ್ನಡದಲ್ಲಿ ಹಾಡಿರುವ ವಿಡಿಯೋ ವೈರಲ್​  ಆಗಿದೆ. ಪಲ್ಲವಿ- ಅನುಪಲ್ಲವಿ ಚಿತ್ರದ ನಗುವ ನಯನ ಹಾಡನ್ನು ಹಾಡಿದ್ದಾರೆ. ಇದರ ವಿಡಿಯೋ ಇದೀಗ ವೈರಲ್​ ಆಗಿದೆ. ಗಾಯಕ ವಿಜಯ ಪ್ರಕಾಶ್​ ಅವರ ಜೊತೆಗೂಡಿ ಈ ಹಾಡನ್ನು ಅನಿಲ್​  ಕಪೂರ್​ ಹಾಡಿದ್ದಾರೆ. ಅಷ್ಟಕ್ಕೂ ಈ ಚಿತ್ರಕ್ಕೆ ಅನಿಲ್​ ಕಪೂರ್ ಅವರು ಆಯ್ಕೆ ಆಗಿದ್ದ ಹಿನ್ನೆಲೆಯೂ ರೋಚಕವಾಗಿದೆ. ಇದಕ್ಕೆ ಕಾರಣ,  ಕನ್ನಡದ ರೈಟರ್, ಗೀತ ಸಾಹಿತಿ, ಸಂಗೀತ ನಿರ್ದೇಶಕ ಆರ್‌.ಎನ್. ಜಯಗೋಪಾಲ್.  

ಅನಿಲ್​ ಕಪೂರ್​ 10 ಕೋಟಿ ಆಫರ್​ ರಿಜೆಕ್ಟ್! ಶಾರುಖ್​- ಅಜಯ್​ ದೇವಗನ್​ ವಿರುದ್ಧ ನೆಟ್ಟಿಗರಿಂದ ಭಾರಿ ಆಕ್ರೋಶ

ಅಂದು ನಟ ಅನಿಲ್ ಕಪೂರ್ ಅವರು ಬೆಂಗಳೂರಿನಲ್ಲಿ ಕ್ಲಬ್ ಒಂದಕ್ಕೆ ಟೆನ್ನಿಸ್ ಆಡಲು ಬರುತ್ತಿದ್ದರು. ಅದೇ ಕ್ಲಬ್‌ಗೆ ಆರ್‌ಎನ್ ಜಯಗೋಪಾಲ್ ಕೂಡ ಬರುತ್ತಿದ್ದರು. ಹೀಗಾಗಿ ಅವರಿಬ್ಬರಿಗೆ ಪರಸ್ಪರ ಪರಿಚಯವಿತ್ತು. ಅದೇ ವೇಳೆ ಆರ್‌ಎನ್ ಜಯಗೋಪಾಲ್ ಅವರ ಕಥೆ ಓಕೆ ಆಗಿ ನಿರ್ದೇಶಕ ಮಣಿರತ್ನಂ ಅವರು ಪಲ್ಲವಿ ಅನುಪಲ್ಲವಿ ಚಿತ್ರಕ್ಕೆ ಆಯ್ಕೆಯಾಗಿದ್ದರು. ಆಗ ಅವರು ಆರ್‌ಎನ್ ಜಯಗೋಪಾಲ್ ಅವರ ಬಳಿ 'ಈ ಚಿತ್ರಕ್ಕೆ ಹೀರೋ ಆಗಿ ಯಾರನ್ನು ಆಯ್ಕೆ ಮಾಡುವದು?' ಎಂದು ಕೇಳಿದ್ದರಂತೆ. ‘

ಅದಕ್ಕೆ ಸಾಹಿತಿ, ಸಂಗೀತ ನಿರ್ದೇಶಕರಾದ ಆರ್‌ಎನ್ ಜಯಗೋಪಾಲ್ ಅವರು ಅನಿಲ್ ಕಪೂರ್ ಅವರನ್ನು ತೋರಿಸಿ 'ಈ ಹುಡುಗ ಮುಂಬೈನಿಂದ ಬಂದು ಇಲ್ಲಿ ಇದ್ದಾನೆ. ಚೂಟಿ ಹುಡುಗ, ಒಳ್ಳೆಯವನು, ಅವನನ್ನು ಆಯ್ಕೆ ಮಾಡಿಕೊಳ್ಳಬಹುದು' ಎಂದಿದ್ದಾರೆ. ಹೀಗೆ ಆರ್‌ಎನ್ ಜಯಗೋಪಾಲ್ ಮಾತಿನಿಂದ ಪಲ್ಲವಿ ಅನುಪಲ್ಲವಿ ಚಿತ್ರಕ್ಕೆ ಮುಂಬೈನ ಅನಿಲ್ ಕಪೂರ್ ಆಯ್ಕೆಯಾಗಿದ್ದಾರೆ. ನಾಯಕಿಯಾಗಿ ಪಂಚಭಾಷಾ ತಾರೆ ಲಕ್ಷ್ಮೀ ಆ ಚಿತ್ರದಲ್ಲಿ ನಟಿಸಿದ್ದಾರೆ. ಆದ್ದರಿಂದ ಮೊಟ್ಟಮೊದಲು ಕನ್ನಡ ಚಿತ್ರದಲ್ಲಿ ನಟಿಸಿ, ಬಳಿಕ ಮುಂಬೈಗೆ ಹೋಗಿ ಅಲ್ಲಿ ದೊಡ್ಡ ಸ್ಟಾರ್ ಆಗಿರುವ ನಟ ಅನಿಲ್ ಕಪೂರ್.  

ವಿಚಿತ್ರ ಬಟ್ಟೆ ಧರಿಸಿ ವೇದಿಕೆಯಲ್ಲಿ ಒಂದೊಂದೇ ಕಳಚಿದ ಉರ್ಫಿ ಜಾವೇದ್! ವಿಡಿಯೋ ನೋಡಿ ಸುಸ್ತಾದ ನೆಟ್ಟಿಗರು

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ
‘ನೀನಾದೆ ನಾ’ ಹಾಡು 100 Million Views ದಾಟಿದ ಖುಷಿಯಲ್ಲಿ ‘ಯುವರತ್ನ’ ನಾಯಕಿ ಸಯ್ಯೇಷಾ ಸೈಗಲ್