Viral Video: ತಮಿಳುನಾಡಲ್ಲಿ ಕಾಂತಾರ ಗಣಪತಿ ಸೃಷ್ಟಿ- ಅದ್ಭುತ ದೃಶ್ಯಕಾವ್ಯಕ್ಕೆ ಮನಸೋತ ಜನರು

By Suvarna News  |  First Published Sep 23, 2023, 6:18 PM IST

ಕಾಂತಾರ ಚಿತ್ರದ ಕ್ರೇಜ್​ ಗಣೇಶೋತ್ಸವದಲ್ಲಿಯೇ ಕಂಡುಬಂದಿದೆ. ತಮಿಳುನಾಡಿನಲ್ಲಿ ಕಾಂತಾರ ಚಿತ್ರವನ್ನು ಕಣ್ತುಂಬಿಸಿಕೊಳ್ಳಬಹುದಾದ ಅಪರೂಪದ ಗಣೇಶನ ರೂಪ ಸ್ಥಾಪಿಸಲಾಗಿದೆ.
 


ಅತ್ಯಂತ ಕಡಿಮೆ ಬಜೆಟ್​ನಲ್ಲಿಯೂ ಬ್ಲಾಕ್​ಬಸ್ಟರ್​ ಚಿತ್ರ ರೆಡಿ ಮಾಡಿ ಜಗತ್ತಿನಾದ್ಯಂತ ಕನ್ನಡದ ಕಂಪನ್ನು ಹರಿಸಲು ಸಾಧ್ಯ ಎನ್ನುವುದನ್ನು ತೋರಿಸಿಕೊಟ್ಟ ಚಿತ್ರ ಕಾಂತಾರ. ಕೊಲೆ, ಸುಲಿಗೆ, ರಕ್ತಪಾತ, ಲಾಂಗು-ಮಚ್ಚು ಹಿಡಿದು ಹೊಡಿ-ಬಡಿ ಎನ್ನುವ ಅತಿ ಹೆಚ್ಚು ಬಜೆಟ್​ನ ಸಿನಿಮಾಗಳ ನಡುವೆ ಕಾಂತಾರ ನಮ್ಮ ಸಂಸ್ಕೃತಿಯನ್ನು ಬಿಂಬಿಸಿ ಭೇಷ್​ ಎನಿಸಿಕೊಂಡಿದೆ. ದುಬಾರಿ ಬಜೆಟ್​ ಸಿನಿಮಾಗಳೂ ತೋಪೆದ್ದು ಹೋಗುತ್ತಿರುವ ಈ ಸಂದರ್ಭದಲ್ಲಿ ಕಾಂತಾರ ಸ್ಯಾಂಡಲ್​ವುಡ್​ ಮಟ್ಟಿಗೆ ಹೊಸ ಅಧ್ಯಾಯವನ್ನೇ ಬರೆದಿದೆ. 2022ರ ಸೆಪ್ಟೆಂಬರ್​ 30ರಂದು ಬಿಡುಗಡೆ ಆದ ಕಾಂತಾರ, ತುಳುನಾಡಿನ ಸಂಸ್ಕೃತಿ ಮತ್ತು ಆಚರಣೆಗಳ ಬಗ್ಗೆ ಹೈಲೈಟ್​ ಆಗಿದೆ.  ಬೇರೆ ಭಾಷೆಗಳಿಗೆ ಡಬ್​ ಆಗಿ ತೆರೆಕಂಡು ಹಲವು ರಾಜ್ಯಗಳಲ್ಲಿ ಈ ಸಿನಿಮಾ ಹೌಸ್​ಫುಲ್​ ಪ್ರದರ್ಶನ ಕಂಡಿತ್ತು. ಬಾಲಿವುಡ್​ ಮಟ್ಟದಲ್ಲಿ ರಿಷಬ್​ ಶೆಟ್ಟಿ ಅವರಿಗೆ ಜನಪ್ರಿಯತೆ ಸಿಕ್ಕಿತು. ‘ಹೊಂಬಾಳೆ ಫಿಲ್ಮ್ಸ್​’ ಸಂಸ್ಥೆಗೆ ಭರ್ಜರಿ ಲಾಭ ಆಯಿತು. 

ಕಳೆದ ವಾರವಷ್ಟೇ ದುಬೈನ ವರ್ಲ್ಡ್​ ಟ್ರೇಡ್​ ಸೆಂಟರ್​ನಲ್ಲಿ ನಡೆದ 2023ನೇ ಸಾಲಿನ ಸೈಮಾ ಪ್ರಶಸ್ತಿ ಪ್ರದಾನ  (SIIMA- South Indian International Movie Awards-2023)  ಸಮಾರಂಭದಲ್ಲಿ  ಕನ್ನಡ ಚಿತ್ರರಂಗದ ಹಲವು ನಟ-ನಟಿಯರು, ತಂತ್ರಜ್ಞರು ಸೈಮಾ ಪ್ರಶಸ್ತಿ ಮುಡಿಲಿಗೇರಿಸಿಕೊಂಡರು.  ಇದರ ನಡುವೆಯೇ,  ಕಾಂತಾರ ಚಿತ್ರ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹೈಲೈಟ್​ ಆಗಿದೆ. ಇದಕ್ಕೆ ಕಾರಣ, ಈ ಚಿತ್ರ ಬರೋಬ್ಬರಿ 10 ಪ್ರಶಸ್ತಿಗಳನ್ನು ಪಡೆದುಕೊಂಡಿದೆ.  ರಿಷಬ್​ ಶೆಟ್ಟಿ ಅವರಿಗೆ ಅತ್ಯುತ್ತಮ ನಿರ್ದೇಶಕ,  ಅತ್ಯುತ್ತಮ ನಟ (ಕ್ರಿಟಿಕ್ಸ್​) ಹಾಗೂ ಪಾತ್​ ಬ್ರೇಕಿಂಗ್​ ಸ್ಟೋರಿ ಪ್ರಶಸ್ತಿ ಸಿಕ್ಕಿದೆ. ಇನ್ನುಳಿದಂತೆ, ಅತ್ಯುತ್ತಮ ನಟಿ (ಕ್ರಿಟಿಕ್ಸ್​): ಸಪ್ತಮಿ ಗೌಡ, ಅತ್ಯುತ್ತಮ ಖಳನಟ: ಅಚ್ಯುತ್​ ಕುಮಾರ್​, ಅತ್ಯುತ್ತಮ ಸಂಗೀತ ನಿರ್ದೇಶನ: ಅಜನೀಶ್​ ಬಿ. ಲೋಕನಾಥ್​, ಅತ್ಯುತ್ತಮ ಗಾಯಕ: ವಿಜಯ್​ ಪ್ರಕಾಶ್​, ಅತ್ಯುತ್ತಮ ಹಾಸ್ಯ ನಟ: ಪ್ರಕಾಶ್​ ತುಮ್ಮಿನಾಡು, ಅತ್ಯುತ್ತಮ ಸಾಹಿತ್ಯ: ಪ್ರಮೋದ್​ ಮರವಂತೆ ಹಾಗೂ ವಿಶೇಷ ಮೆಚ್ಚುಗೆ ಪ್ರಶಸ್ತಿ: ಮುಕೇಶ್​ ಲಕ್ಷ್ಮಣ್ ಅವರಿಗೆ ಸಂದಿದ್ದು ಒಟ್ಟು 10 ಪ್ರಶಸ್ತಿ ಬಾಚಿಕೊಂಡಿದೆ. ​

Tap to resize

Latest Videos

10 ಸೈಮಾ ಪ್ರಶಸ್ತಿ ಬಾಚಿಕೊಂಡ ಕಾಂತಾರ: ಜಾಲತಾಣದಲ್ಲಿ ನಟ ರಿಷಬ್​ ಶೆಟ್ಟಿ ಪೋಸ್ಟ್​

ಇದೇ ಖುಷಿಗೆ ಈಗ ಕಾಂತಾರಾ ತಮಿಳುನಾಡಿನಲ್ಲಿ ಹೊಸಬಗೆಯಲ್ಲಿ ಮಿಂಚುತ್ತಿದೆ. ಈಗ ಎಲ್ಲೆಲ್ಲೂ ಗಣೇಶನ ಹಬ್ಬದ ಸಂಭ್ರಮ. ಈ ಬಾರಿ ಹಲವು ಕಡೆಗಳಲ್ಲಿ ಚಂದ್ರಯಾನ ಗಣಪತಿಯನ್ನು ಮಾಡಲಾಗಿದೆ. ಆದರೆ ಕುತೂಹಲದ ವಿಷಯವೆಂದರೆ ಕನ್ನಡದ ಕಾಂತಾರಾ ಗಣಪತಿ ತಮಿಳುನಾಡಿನಲ್ಲಿ ಮಿಂಚುತ್ತಿದೆ. ಗಣೇಶ ಹಬ್ಬದ ಪ್ರಯುಕ್ತ ಕಾಂತಾರ ಸಿನಿಮಾದ ಸೆಟ್‌ಗಳನ್ನು ಮತ್ತು ಅದೇ ರೀತಿಯ ಪಾತ್ರಧಾರಿಗಳನ್ನು ಹೋಲುವ ಥೀಮ್‌ನಲ್ಲಿ ಗಣಪತಿಯನ್ನು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಥಲ್ಲಿ ಎಂಬ ಊರಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ.

ಕಾಂತಾರ ಚಿತ್ರವನ್ನೇ ಹೋಲುವ  ಕಾಡುಬೆಟ್ಟ, ಪಂಜುರ್ಲಿ ದೈವ, ವರಾಹ ಮುಖ, ದೈವ ನರ್ತಕರು, ರಾಜ ಹೀಗೆ ಹಲವು ಬಗೆಯ ಪ್ರತಿಕೃತಿಗಳನ್ನು ನಿರ್ಮಿಸಲಾಗಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ಸಕತ್​ ವೈರಲ್​ ಆಗುತ್ತಿದೆ.  ವಿಡಿಯೋವನ್ನು ಜಾಲತಾಣದಲ್ಲಿ ಶೇರ್​ ಮಾಡಿಕೊಳ್ಳಲಾಗಿದೆ. ಇದರಲ್ಲೆ   ರಾಜನ ಅರಮನೆಯ ಭವ್ಯ ಚಿತ್ರಣವಿದೆ. ಆ ಮನೆ ಪ್ರವೇಶಕ್ಕೂ ಮುನ್ನ ವರಾಹ ಮುಖ, ಅದನ್ನು ದಾಟಿ ಒಳಗೆ ಹೋಗುತ್ತಿದ್ದಂತೆ, ಮೆಟ್ಟಿಲು ಮೇಲೆ ಕುಳಿತ ದೈವ ಕಾಣಿಸುತ್ತದೆ. ಇದಾದ ಬಳಿಕ ವನ ನೋಡಬಹುದು. ಅಲ್ಲಿಂದ ಮುಂದೆ ಸಾಗುತ್ತಿದ್ದಂತೆಯೇ  ಗುಳಿಗ ದೈವ ರೂಪಕಗಳ ದರ್ಶನವಾಗುತ್ತದೆ.  ಕಾಂತಾರ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಕಾಣಿಸುವ ರಿಷಬ್‌ ಶೆಟ್ಟಿಯ ದೈವ ಕುಣಿತದ ಭಂಗಿಯನ್ನೂ ಸೃಷ್ಟಿಸಲಾಗಿದೆ.  ದೈವಕ್ಕೆ ಇಡೀ ಭೂಮಿಯನ್ನು ಬಿಟ್ಟುಕೊಡುವ ರಾಜನಾಗಿ ಗಣಪತಿಯನ್ನು ಪ್ರತಿಷ್ಠಾಪಿಸಲಾಗಿದೆ. ಪಂಜುರ್ಲಿ ದೈವಕ್ಕೆ ಗಣಪತಿಯೇ ಪೂಜೆ ಮಾಡುವ ಭಂಗಿಯಲ್ಲಿ ನಿರ್ಮಿಸಲಾಗಿದೆ.

ಕಾಂತಾರ-2 ಮೊದಲ ಪಾರ್ಟ್‌ಗಿಂತ ಹತ್ತಾರು ಪಟ್ಟು ಅದ್ದೂರಿ; ಬಜೆಟ್ ಎಷ್ಟು ಗೊತ್ತಾ?

click me!