'ಅಕ್ಕಾ... ಶಿವಣ್ಣನಿಗೆ ತಮನ್ನಾ ಜೊತೆ ಹಾಡು ಬೇಕಂತೆ': ಗೀತಕ್ಕನ ಮುಂದೆ Fitting ಇಟ್ಟ ನಿರ್ದೇಶಕ ಶ್ರೀನಿ

Published : Jul 13, 2026, 05:53 PM IST
Shivarajkumar

ಸಾರಾಂಶ

ಶಿವರಾಜ್‌ಕುಮಾರ್ ಅವರ ಹುಟ್ಟುಹಬ್ಬದ ಸಂಭ್ರಮಕ್ಕೆ ಚಿತ್ರತಂಡ ಅಭಿಮಾನಿಗಳಿಗೆ ವಿಶೇಷ ಉಡುಗೊರೆ ನೀಡಿದೆ. ಶಿವಣ್ಣ ಅಭಿನಯದ ಹೊಸ ಸಿನಿಮಾ ‘A For ಆನಂದ್’ ಚಿತ್ರದ ಪ್ರೋಮೋ ಬಿಡುಗಡೆಯಾಗಿದೆ.

ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್ ಅವರ ಹುಟ್ಟುಹಬ್ಬದ ಸಂಭ್ರಮಕ್ಕೆ ಚಿತ್ರತಂಡ ಅಭಿಮಾನಿಗಳಿಗೆ ವಿಶೇಷ ಉಡುಗೊರೆ ನೀಡಿದೆ. ಶಿವಣ್ಣ ಅಭಿನಯದ ಹೊಸ ಸಿನಿಮಾ ‘A For ಆನಂದ್’ ಚಿತ್ರದ ಮನರಂಜನಾತ್ಮಕ ಪ್ರೋಮೋ ಬಿಡುಗಡೆಯಾಗಿದ್ದು, ಅದರಲ್ಲಿನ ಹಾಸ್ಯಮಯ ಸಂಭಾಷಣೆಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿವೆ.

Cake Cutting Maadi ಅಂದ್ರೆ Fitting ಕೆಲಸ ಮಾಡಿದ್ದೀರಾ..

ಪ್ರೋಮೋದಲ್ಲಿ ನಿರ್ದೇಶಕ ಶ್ರೀನಿ, ಶಿವರಾಜ್‌ಕುಮಾರ್ ಮತ್ತು ಅವರ ಪತ್ನಿ ಗೀತಾ ಶಿವರಾಜ್‌ಕುಮಾರ್ ಅವರ ನಡುವಿನ ಕಾಲ್ಪನಿಕ ಸಂಭಾಷಣೆಯನ್ನು ಹಾಸ್ಯದ ಸೊಗಡಿನಲ್ಲಿ ಕಟ್ಟಿಕೊಟ್ಟಿದ್ದಾರೆ. ವಿಡಿಯೋ ಆರಂಭದಲ್ಲೇ ಶಿವಣ್ಣ, ಚಿತ್ರದ ಸ್ಕ್ರಿಪ್ಟ್‌ನಲ್ಲಿ ಕೆಲವು ಬದಲಾವಣೆಗಳನ್ನು ಮಾಡುವಂತೆ ಶ್ರೀನಿಗೆ ಸೂಚಿಸುತ್ತಾರೆ. ಬಳಿಕ ಅವರ ಮನೆಗೆ ಬಂದ ಶ್ರೀನಿ, ಗೀತಾ ಅವರ ಎದುರಲ್ಲೇ ಶಿವಣ್ಣ ಹೇಳಿದ ಎಲ್ಲ 'ರಹಸ್ಯಗಳನ್ನು' ಒಂದೊಂದಾಗಿ ಬಿಚ್ಚಿಡಲು ಆರಂಭಿಸುತ್ತಾರೆ.

"ಅಕ್ಕಾ... ಶಿವಣ್ಣ ಅವರು ತಮನ್ನಾ ಜೊತೆ ಒಂದು ಇಂಟೆನ್ಸ್ ಸಾಂಗ್ ಇರಬೇಕು ಅಂತ ವಾಟ್ಸಾಪ್ ಗ್ರೂಪ್‌ನಲ್ಲಿ ಮೆಸೇಜ್ ಹಾಕಿದ್ದರು" ಎಂದು ಶ್ರೀನಿ ಹೇಳುತ್ತಿದ್ದಂತೆ, ಗೀತಾ ಶಿವರಾಜ್‌ಕುಮಾರ್ ಅಚ್ಚರಿಯಿಂದ ಶಿವಣ್ಣ ಕಡೆ ನೋಡುತ್ತಾರೆ. ಇದರಿಂದ ಗಾಬರಿಗೊಂಡ ಶಿವಣ್ಣ, "ಅದು ತಮನ್ನಾ ಅಲ್ಲ... 'ಪಬ್ ಸಾಂಗ್' ಅಂತ ಬರೆಯಲು ಹೋಗಿದ್ದೆ. ಆಟೋಕರೆಕ್ಟ್ ಆಗಿ 'ತಮನ್ನಾ' ಅಂತ ಆಗಿಬಿಟ್ಟಿದೆ!" ಎಂದು ಪರಿಸ್ಥಿತಿಯನ್ನು ನಿಭಾಯಿಸಲು ಮಾಡುವ ಪ್ರಯತ್ನ ಪ್ರೋಮೋದ ಪ್ರಮುಖ ಹೈಲೈಟ್ ಆಗಿದೆ.

ಆದರೆ ಅಲ್ಲಿಯೇ ನಿಲ್ಲದ ಶ್ರೀನಿ, ಮತ್ತಷ್ಟು 'ಪಿಟ್ಟಿಂಗ್' ಮುಂದುವರಿಸುತ್ತಾರೆ. "ಈ ಸಿನಿಮಾದಲ್ಲಿ ಇಬ್ಬರು ಹೀರೋಯಿನ್ ಇರಬೇಕು ಅಂತ ಶಿವಣ್ಣ ಹೇಳಿದ್ದರು. ರವಿಚಂದ್ರನ್ ಅವರಿಂದ ಹಾಡಿಗೆ ಕೊರಿಯೋಗ್ರಫಿ ಮಾಡಿಸೋಣ ಅಂತ ಕೂಡ ಸಲಹೆ ಕೊಟ್ಟಿದ್ದಾರೆ" ಎಂದು ಹೇಳುತ್ತಾ ಶಿವಣ್ಣನನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸುತ್ತಾರೆ. ಗೀತಕ್ಕನ ಎದುರೇ ನಿರ್ದೇಶಕ ಹೇಳುವ ಈ 'ಗುಟ್ಟುಗಳು' ಮತ್ತು ಅದಕ್ಕೆ ಶಿವಣ್ಣ ನೀಡುವ ತಕ್ಷಣದ ಪ್ರತಿಕ್ರಿಯೆಗಳು ಪ್ರೇಕ್ಷಕರಿಗೆ ನಗುವಿನ ರಸದೌತಣ ನೀಡುತ್ತವೆ.

ಕೊನೆಯಲ್ಲಿ ಚಿತ್ರತಂಡ ಶಿವರಾಜ್‌ಕುಮಾರ್ ಅವರ ಹೊಸ ಅವತಾರವನ್ನು ಅನಾವರಣಗೊಳಿಸಿದೆ. ‘A For ಆನಂದ್’ ಚಿತ್ರದಲ್ಲಿ ಅವರು ‘ಮಾಸ್ ಲೀಡರ್’ ಅಲ್ಲ, ‘ಕ್ಲಾಸ್ ಲೀಡರ್’ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುಳಿವನ್ನೂ ಪ್ರೋಮೋ ನೀಡುತ್ತದೆ. ಖಡಕ್ ಲುಕ್‌ನಲ್ಲಿ ಕಾಣಿಸಿಕೊಂಡ ಶಿವಣ್ಣ ಅವರ ಹೊಸ ಗೆಟಪ್ ಈಗಾಗಲೇ ಅಭಿಮಾನಿಗಳ ಮೆಚ್ಚುಗೆ ಗಳಿಸಿದೆ.

ಚಿತ್ರದ ಶೂಟಿಂಗ್ ಶೀಘ್ರದಲ್ಲೇ ಆರಂಭವಾಗಲಿದ್ದು, ಶಿವರಾಜ್‌ಕುಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆಯಾದ ಈ ವಿಶೇಷ ಪ್ರೋಮೋ ಅಭಿಮಾನಿಗಳಲ್ಲಿ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಹಾಸ್ಯ, ಕುತೂಹಲ ಮತ್ತು ಶಿವಣ್ಣನ ಹೊಸ ಲುಕ್‌ನೊಂದಿಗೆ ಮೂಡಿಬಂದಿರುವ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸ್ಟಾರ್‌ಡಮ್ ಶಾಶ್ವತವಲ್ಲ, ಸಾವು ಕೂಡ ಬದುಕಿನಷ್ಟೇ ಸತ್ಯ: ಅಪ್ಪು ನೆನೆದು ಶಿವಣ್ಣ ಭಾವುಕ
ಸಂಗೀತಾಸಕ್ತರಿಗೆ ಸಿಹಿ ಸುದ್ದಿ: ಯುವ ಗಾಯಕರ ಆಲ್ಬಂ ನಿರ್ಮಾಣಕ್ಕೆ ಮುಂದಾದ ಗಾಯಕ ವಿಜಯ್ ಪ್ರಕಾಶ್