
‘666 ಆಪರೇಷನ್ ಡ್ರೀಮ್ ಥಿಯೇಟರ್’ ಚಿತ್ರದ ಟೀಸರ್ ಬಿಡುಗಡೆ ಆಗಿದೆ. ಶಿವರಾಜ್‌ಕುಮಾರ್, ಡಾಲಿ ಧನಂಜಯ ಕಾಂಬಿನೇಶನ್‌ನ ಈ ಚಿತ್ರವನ್ನು ಹೇಮಂತ್ ರಾವ್ ನಿರ್ದೇಶಿಸಿದ್ದು, ವೈಶಾಖ್ ನಿರ್ಮಿಸಿದ್ದಾರೆ. ಟೀಸರ್ ಬಿಡುಗಡೆಯಲ್ಲಿ ಮಾತನಾಡಿದ ಶಿವಣ್ಣ, ಬಾಂಡ್ ಸಿನಿಮಾಗಳಲ್ಲಿ ಹೀರೋಗಳು ಈಜುಕೊಳದಲ್ಲಿರುವಾಗ ಸುತ್ತಾ ನಾಲ್ಕೈದು ಸುಂದರವಾದ ಹುಡುಗಿಯರು ಇರುತ್ತಾರೆ.
ಹುಡುಗಿಯರನ್ನು ಜೊತೆ ಮಾಡಿಕೊಂಡೇ ಬಾಂಡ್ ಕ್ಯಾರೆಕ್ಟರ್ ಆಗುತ್ತದೆ. ಆದರೆ, ನಾನು ‘666 ಆಪರೇಷನ್ ಡ್ರೀಮ್ ಥಿಯೇಟರ್’ ಚಿತ್ರದಲ್ಲಿ ಬಾಂಡ್ ಕ್ಯಾರೆಕ್ಟರ್ ಮಾಡಿದ್ದರೂ, ಡಿಸೆಂಟ್ ಬಾಂಡ್ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದೇನೆ. ಹೇಮಂತ್ ರಾವ್ ಒಳ್ಳೆಯ ನಿರ್ದೇಶಕ, ವೈಶಾಖ್ ನನ್ನ ಅಭಿಮಾನಿ. ಇವರು ಸೇರಿ ಈ ಚಿತ್ರ ಮಾಡುತ್ತಿರುವುದು ಖುಷಿ ಕೊಟ್ಟಿದೆ. ನನಗೆ ಸಿನಿಮಾ ಎಂದರೆ ಪ್ರೀತಿ. ಯಾವುದನ್ನೂ ಬಿಡೋದಿಲ್ಲ. ಆಪರೇಷನ್ ಡ್ರೀಮ್ ಥಿಯೇಟರ್ ಸಿನಿಮಾ ಒಂದೊಳ್ಳೆ ಅನುಭವ ಕೊಟ್ಟಿದೆ. ಆ ವೇಷ ಹಾಕಿದಾಗ ಆ ಅಟಿಡ್ಯೂಡ್, ಸ್ವ್ಯಾಗ್ ಎಲ್ಲವೂ ಬರುತ್ತದೆ. ವೈಶಾಖ್ ಸಕ್ಸಸ್ಫುಲ್ ಪ್ರೊಡ್ಯೂಸರ್ ಆಗ್ತಾರೆ ಎಂದರು.
ಡಾಲಿ ಧನಂಜಯ, ‘ವೈಶಾಖ್ ಅವರಿಗೆ ಸ್ಯಾಂಡಲ್ವುಡ್ಗೆ ಸ್ವಾಗತ. ಅವರು ಸಿನಿಮಾ ಬಗ್ಗೆ ಕಲಿತು, ಜೀವಿಸಿ, ಯಾರ ಜೊತೆ ಕೆಲಸ ಮಾಡಬೇಕು ಎಲ್ಲವನ್ನೂ ತಿಳಿದುಕೊಂಡು ಬಂದಿದ್ದಾರೆ. ಚಿತ್ರರಂಗಕ್ಕೆ ಒಳ್ಳೆ ನಿರ್ಮಾಪಕ ಆಗುವ ಶಕ್ತಿ ಅವರಲ್ಲಿದೆ. ಡಿಸ್ಟ್ರಿಬ್ಯೂಟರ್ ಆಫೀಸ್ನಲ್ಲಿ ಕುಳಿತು ಹೇಮಂತ್ ನನ್ನ ಸಿನಿಮಾ ಮಾಡಲು ಕರೆಯುತ್ತಿಲ್ಲವಲ್ಲ ಎಂದ ಒಂದು ವಾರಕ್ಕೆ ಮೀಟ್ ಮಾಡಬೇಕು ಎಂದರು. ಒಳ್ಳೆ ಟೀಂ ಸೇರಿಕೊಂಡು ಈ ಸಿನಿಮಾ ಮಾಡಿದ್ದೇವೆ. ಮಗು ರಚ್ಚೆ ಹಿಡಿದು ಕೆಲಸ ಮಾಡಿಸಿಕೊಳ್ಳುವ ರೀತಿ ಹೇಮಂತ್ ಕೆಲಸ ಮಾಡಿಸಿಕೊಳ್ಳುತ್ತಾರೆ. ಅವರಿಂದ ತುಂಬಾನೇ ಕಲಿತಿದ್ದೇನೆ. ಶಿವಣ್ಣ ನನಗೆ ದೊಡ್ಡ ಶಕ್ತಿ. ಇದು ಟೀಸರ್ ಅಷ್ಟೇ. ಚಿತ್ರದಲ್ಲಿ ಸಾಕಷ್ಟು ಸರ್ಪ್ರೈಸ್ ಇದೆ. ಇಡೀ ತಂಡ ಅದ್ಭುತವಾಗಿ ದುಡಿಸಿಕೊಂಡಿದೆ’ ಎಂದರು.
ಹೇಮಂತ್ ರಾವ್, ‘ಈ ಚಿತ್ರದ ನಿರ್ಮಾಣಕ್ಕೆ ಎಷ್ಟು ಮಂದಿ ನಿರ್ಮಾಪಕರನ್ನು ಹುಡುಕಿದ್ದೇನೆ, ಒದ್ದಾಡಿದ್ದೇನೆ ಎನ್ನುವುದು ನನಗೇ ಮಾತ್ರ ಗೊತ್ತು. ಕೊನೆಗೆ ಒಳ್ಳೆಯ ನಿರ್ಮಾಪಕರು ಸಿಕ್ಕಿದ್ದಾರೆ. ಅಂದುಕೊಂಡಂತೆ ಚಿತ್ರ ಮೂಡಿ ಬಂದಿದೆ’ ಎಂದರು. ಚಿತ್ರದಲ್ಲಿ ಏಜೆಂಟ್ ಪ್ರಕಾಶ್ ಎಂಬ ಪಾತ್ರದಲ್ಲಿ ಶಿವಣ್ಣ ನಟಿಸುತ್ತಿದ್ದಾರೆ. ಏಜೆಂಟ್ ಶಂಕರ್ ಪಾತ್ರದಲ್ಲಿ ಧನಂಜಯ್ ಬಣ್ಣ ಹಚ್ಚಿದ್ದಾರೆ. ಅದಿತಿ, ಪ್ರಿಯಾಂಕ ಮೋಹನ್ ಚಿತ್ರದ ನಾಯಕಿಯರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.