ಮರಳಿ ಬಂದರು 6-2=5 ಖ್ಯಾತಿಯ ಅಶೋಕ್‌!

By Web Desk  |  First Published Oct 11, 2019, 9:24 AM IST

ಒಂದಿನ ಲೈಬ್ರರಿಯಲ್ಲಿ ಓದುತ್ತಿರಬೇಕಾದ್ರೆ, ತಲೆ ಎತ್ತಿ ನೋಡಬೇಕೆನಿಸಿತು. ಯಾರೋ ಕಿವಿ ಹತ್ತಿರ ಬಂದು ‘ತಲೆ ಎತ್ತಿ ನೋಡು’ ಅಂತ ಪಿಸುಗುಟ್ಟಿದ ಹಾಗಾಯಿತು. ನೋಡೇ ಬಿಡೋಣ ಅಂತ ತಲೆ ಎತ್ತಿ ನೋಡಿದೆ. ಎದುರಿಗಿದ್ದವನು ಕುರುಚಲು ಗಡ್ಡದ ನವ ತರುಣ. ನನ್ನ ಕಣ್ಣಿಗೆ ಅವನು ಈ ಪ್ರಪಂಚದಲ್ಲೇ ಅತೀ ಸುಂದರವಾದ ವಸ್ತು ತರ ಕಾಣಿಸಿಬಿಟ್ಟ. ಅಲ್ಲಿಂದ ನನ್ನ ಹಾರ್ಟು ಡ್ರಮ್‌ ಥರ ಬಡೆದುಕೊಳ್ಳತೊಡಗಿತು...!


- ಸ್ವಗತದಲ್ಲಿ ಆಕೆ ಹಾಗೆ ಪಿಸುಗುಡುತ್ತಾ ಬಂದು ನಿಂತಿದ್ದು ರೈಲ್ವೆ ಹಳಿಗಳ ಮಧ್ಯೆ. ಒಂದು ಕ್ಷಣ ಕಣ್ಣು ಬಿಡುವ ಹೊತ್ತಿಗೆ ಆಕೆಯ ಮೈ ಮೇಲೆಯೇ ರೈಲು ಹಾದು ಹೋದ ಅನುಭವ. ಹಾಗಾದ್ರೆ ಆಕೆ ಬದುಕಿಲ್ಲವೇ? ಅದು ವಾಸ್ತವವೋ ಅಥವಾ ಕನಸೋ? ಟೀಸರ್‌ ಹುಟ್ಟು ಹಾಕಿದ ಪ್ರಶ್ನೆ ಅದು.

ಮೋಸ್ಟ್ ಬ್ಯೂಟಿಫುಲ್ ಕಪಲ್; ದಿನೇಶ್ ಕಾರ್ತಿಕ್-ದೀಪಿಕಾಗೆ ಅಗ್ರಸ್ಥಾನ!

Tap to resize

Latest Videos

ಸದ್ಯಕ್ಕೆ ಇಂತಹದೊಂದು ಟೀಸರ್‌ ಮೂಲಕ ಸುದ್ದಿಯಲ್ಲಿರುವ ಚಿತ್ರ ‘ದಿಯಾ’. ಚಂದನವನದಲ್ಲಿ ಈ ಹಿಂದೆ ‘6-5= 2’ ಹೆಸರಿನ ಹಾರರ್‌ ಚಿತ್ರದ ಮೂಲಕ ಸಾಕಷ್ಟುಸುದ್ದಿ ಮಾಡಿದ್ದ ನಿರ್ದೇಶಕ ಅಶೋಕ್‌ ಅವರ ಎರಡನೇ ಚಿತ್ರ ಇದು. ಹಳೇ ಟೀಮು ಹೊಸ ಚಾರ್ಮು ಎನ್ನುವ ಹಾಗೆ ಹಿಂದಿನ ಸಿನಿಮಾದ ಬಹಳಷ್ಟುಜನ ಇಲ್ಲೂ ಇದ್ದಾರೆ. ಕೃಷ್ಣ ಚೈತನ್ಯ ಇದರ ನಿರ್ಮಾಪಕರು. ತಂತ್ರಜ್ಞರು ಕೂಡ ಹಳಬರು. ದೀಕ್ಷಿತ್‌ ಶೆಟ್ಟಿಹಾಗೂ ಖುಷಿ ಇದರ ನಾಯಕ-ನಾಯಕಿ. ಚಿತ್ರ ಶುರುವಾಗಿ ಈಗಾಗಲೇ ಎರಡೂವರೆ ವರ್ಷ ಕಳೆದಿದೆ. ಇದೀಗ ಟೀಸರ್‌ ಲಾಂಚ್‌ ಮೂಲಕ ಸುದ್ದಿ ಮಾಡಿದೆ ಚಿತ್ರತಂಡ.

ಕೇರಳ ದೇವಸ್ಥಾನಕ್ಕೆ ಭೇಟಿ: ಸಾಂಪ್ರದಾಯಿಕ ಲುಕ್ ನಲ್ಲಿ ಕಂಗೊಳಿಸಿದ ಸಿಂಧು

ಆ ದಿನ ಬೆಂಗಳೂರಿನ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಚಿತ್ರತಂಡ ಆಯೋಜಿಸಿದ್ದ ಟೀಸರ್‌ ಲಾಂಚ್‌ ಕಾರ್ಯಕ್ರಮಕ್ಕೆ ನಟ ಶ್ರೀಮುರಳಿ ಮುಖ್ಯ ಅತಿಥಿ. ಚಿತ್ರತಂಡ ಚಿತ್ರದ ವಿಶೇಷತೆ ಕುರಿತು ಮಾತನಾಡಿತು. ‘ಚಿತ್ರ ಶುರುವಾಗಿ ಹೆಚ್ಚು ಕಡಿಮೆ ಮೂರು ವರ್ಷವೇ ಆಯಿತು. ಶುರುವಾದಾಗ ಆದಷ್ಟುಬೇಗ ಚಿತ್ರವನ್ನು ತೆರೆಗೆ ತರೋಣ ಅಂತಲೇ ಇದ್ದೆವು. ಆದರೆ ಚಿತ್ರದ ಕ್ವಾಲಿಟಿಗಾಗಿ ಟ್ರಯಲ್‌ ಆ್ಯಂಡ್‌ ಎರರ್‌ ಎನ್ನುವ ಹಾಗೆ ಇಷ್ಟುದಿನ ಕಳೆದು ಹೋಯಿತು. ಚಿತ್ರ ಚೆನ್ನಾಗಿ ಬಂದಿದೆ’ ಎಂದರು ನಿರ್ದೇಶಕ ಅಶೋಕ್‌.

ಅಲೆಲೆ ಶ್ರೀಲೀಲಾ.. ಅಂದದ ಹುಡುಗಿಯ ಚಂದದ ಫೋಟೋಗಳಿವು

ಟೀಸರ್‌ ಜತೆಗೆ ಅಲ್ಲಿ ಕುತೂಹಲ ಮೂಡಿಸಿದ್ದು ಚಿತ್ರದ ಟೈಟಲ್‌ ಕೂಡ. ದಿಯಾ ಹಾಗಂದ್ರೇನು? ನಿರ್ದೇಶಕರು ಮಾತಿಗೆ ನಿಂತಾಗ ಮೊದಲು ಅವರಿಗೆ ಎದುರಾದ ಪ್ರಶ್ನೆ ಅದು. ‘ದಿಯಾ ಅಂದ್ರೆ ಹಿಂದಿಯಲ್ಲಿ ಕೊಡು, ನೀಡು ಅಂದರ್ಥ. ಆದರೆ ಇಲ್ಲಿ ದಿಯಾ ಅಂದ್ರೆ ಕಥಾ ನಾಯಕಿ ಹೆಸರು. ಅದಕ್ಕೆ ತಕ್ಕಂತೆ ಇದು ಆಕೆಯ ಸುತ್ತಲು ನಡೆಯುವ ಕತೆ. ಇದೊಂದು ರೊಮ್ಯಾಂಟಿಕ್‌ ಲವ್‌ಸ್ಟೋರಿ ಎಂದರು ನಿರ್ದೇಶಕರು. ನಿರ್ಮಾಪಕ ಕೃಷ್ಣ ಚೈತನ್ಯ, ನಾಯಕ ದೀಕ್ಷಿತ್‌ ಶೆಟ್ಟಿ, ಮತ್ತೋರ್ವ ನಾಯಕ ಪೃಥ್ವಿ , ನಾಯಕಿ ಖುಷಿ ಸೇರಿ ಇಡೀ ಚಿತ್ರ ತಂಡ ಚಿತ್ರದ ಕುರಿತು ಮಾತನಾಡಿತು. ನಂತರ ಶ್ರೀಮುರಳಿ ಟೀಸರ್‌ ಲಾಂಚ್‌ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದರು.

click me!