
ಸ್ಯಾಂಡಲ್‌ವುಡ್‌ನಲ್ಲಿ ಈಗ ಯುದ್ಧದ ಕಾರ್ಮೋಡ ಕವಿದಿದೆ.. ಈ ಯುದ್ಧ ಯಾರ ಮೇಲೆ..? ಯಾಕೆ..? ಅನ್ನೋದು ಅವರವರಿಗೇ ಗೊತ್ತು.. ಆದ್ರೆ ಯುದ್ಧ ಮಾಡೋರು ಮಾಡಿಕೊಳ್ಳಲಿ. ನಾವು ಸಿನಿಮಾ ಮಾಡಿ ಗೆಲ್ಲೋಣ ಅಂತ 45 ಸ್ಟಾರ್ಸ್ ಸೈಲೆಂಟ್ ಆಗಿ ಮುನ್ನುಗ್ಗುತ್ತಿದ್ದಾರೆ. ಸೌಂಡ್ ಮಾಡೋದು ವೇದಿಕೆ ಮೇಲಲ್ಲಾ ಥಿಯೇಟರ್ನಲ್ಲಿ ಅಂತ ಟಿಕೆಟ್ ಬುಕ್ಕಿಂಗ್ ಮೂಲಕ ಹೇಳ್ತಾ ಇದ್ದಾರೆ. ಹಾಗಾದ್ರೆ 45 ಮೂವಿ ಟಿಕೆಟ್ ಬುಕ್ಕಿಂಗ್ ಹೇಗಿದೆ..? ಈ ಸಿನಿಮಾ ಕಡೆ ಪ್ರೇಕ್ಷಕನ ಒಲವು ಹೇಗಿದೆ.
ಸ್ಯಾಂಡಲ್‌ವುಡ್‌ನಲ್ಲಿ ಯುದ್ಧದ ವಿಚಾರ ಕೋಲಾಹಲ ಎಬ್ಬಿಸಿದೆ. ಪೈರಸಿಯ ಯುದ್ಧದ ಬಗ್ಗೆ ಕಿಚ್ಚ ಸುದೀಪ್ ಮಾತನಾಡಿದಕ್ಕೆ ತರಹೇವಾರಿ ಬಣ್ಣಗಳು ಹಚ್ಚಿ ಎಲ್ಲರ ಅಟೆಕ್ಷನ್ಅನ್ನ ಯುದ್ಧಕ್ಕೆ ತಿರುಗಿಸಲಾಗಿದೆ. ಆದ್ರೆ ಸ್ಯಾಂಡಲ್ವುಡ್ನ ಸೂಪರ್ ಸ್ಟಾರ್ ಡಾಕ್ಟರ್ ಶಿವರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗು ರಾಜ್ ಬಿ ಶೆಟ್ಟಿ ಈ ಯುದ್ಧವೆಲ್ಲ ಸೈಡಿಗಿರ್ಲಿ ಜನ ಥಿಯೇಟರ್ಗೆ ಬಂದು ಸಿನಿಮಾ ನೋಡಿ ಅನ್ನೋ ಮೆಸೆಜ್ ಪಾಸ್ ಮಾಡಿದ್ದಾರೆ. ಅದು 45 ಸಿನಿಮಾದ ಟಿಕೆಟ್ ಬುಕ್ಕಿಂಗ್ ಮೂಲಕ. ಯೆಸ್, ಈಗ 45 ಸಿನಿಮಾ ಬಗ್ಗೆ ಪ್ರೇಕ್ಷಕ ತಲೆ ಕಡೆಸಿಕೊಂಡಿದ್ದಾನೆ. ಈ ಸಿನಿಮಾದ ಟ್ರೈಲರ್ ಸಿನಿ ಭಕ್ತ ಗಣವನ್ನ ಸಿನಿಮಾ ನೋಡುವಂತೆ ಕೆಣಕಿದೆ.
ಹೀಗಾಗಿ 45ಗಾಗಿ ಪ್ರೇಕ್ಷಕ ಮುಗಿ ಬೀಳೋ ಹಾಗಾಗಿದೆ. ಟಿಕೆಟ್ ಬುಕ್ಕಿಂಗ್ ನಲ್ಲಿ 45 ಸಿನಿಮಾ ಹೊಸ ಇತಿಹಾಸ ಬರೆದೆ. ಡಿಸೆಂಬರ್ 25ಕ್ಕೆ ವರ್ಲ್ಡ್ ವೈಡ್ ರಿಲೀಸ್ ಆಗೋ 45 ವರ್ಲ್ಡ್ ನೋಡೋಕೆ ಒಂದು ದಿನ ಮೊದಲೇ ಬೇಡಿಕೆ ಹೆಚ್ಚಾಗಿದೆ. ಒಂದು ದಿನ ಮೊದಲೇ ಕರ್ನಾಟಕದಾದ್ಯಂತ 45 ಪೈಯ್ಡ್ ಪ್ರೀಮಿಯರ್ ಶೋ ಹಾಕಲಾಗಿದ್ದು, ಎಲ್ಲಾ ಶೋಗಳ ಟಿಕೆಟ್ಗಳು ಬುಕ್ ಆಗಿವೆ. ಒಂದ್ ಕಡೆ ಪೈರೆಸಿ ಕಾಟ.. ಇದಕ್ಕಾಗೆ ಕಿಚ್ಚ ಯುದ್ಧಕ್ಕೆ ಸಿದ್ಧರಾಗಿ ಅಂದಿದ್ದಾರಂತೆ. ಆದ್ರೆ ಆ ಭಯ ಇಲ್ಲದೇ 45 ಸಿನಿಮಾ ಒಂದು ದಿನ ಮೊದಲೇ ಬೆಂಗಳೂರಿ 30 ಕಡೆ ಪೈಯ್ಡ್ ಪ್ರೀಮಿಯರ್ ಶೋ ಹಾಕಿದ್ದಾರೆ. ಈ ಎಲ್ಲಾ ಪ್ರದರ್ಶನದ ಟಿಕೆಟ್ಗಳು ಬಿಕರಿ ಆಗಿದೆ.
ಅಷ್ಟೆ ಅಲ್ಲ 45 ಸಿನಿಮಾ ಇರೋ ಎಲ್ಲಾ ಚಿತ್ರಮಂದಿರಗಳಲ್ಲಿ ಫಾಸ್ಟ್ ಫಿಲ್ಲಿಂಗ್ ಆಗ್ತಾ ಇದೆ. ‘45’ ಸಿನಿಮಾ ಡಿಸೆಂಬರ್ 24ರ ರಾತ್ರಿಯೇ ಶೋ ಪ್ರದರ್ಶನ ಮಾಡುತ್ತಿದೆ. ಡಿಸೆಂಬರ್ 24ರ ರಾತ್ರಿಯೇ ವಿಶೇಷ ಶೋ ಅನ್ನು ‘45’ ಚಿತ್ರತಂಡ ಆಯೋಜಿಸಿದ್ದು ರಾತ್ರಿ 7 ಗಂಟೆಗೆ ಕೆಲವೆಡೆ, 7:30ಕ್ಕೆ ಕೆಲವೆಡೆ ಶೋಗಳು ಪ್ರದರ್ಶನಗೊಳ್ಳಲಿವೆ. ಅಷ್ಟೆ ಅಲ್ಲ 45 ದೊಡ್ಡ ಕ್ಯಾನ್ವಸ್ ಸಿನಿಮಾ ಆಗಿದ್ರು ಟಿಕೆಟ್ ದರ ಕೂಡ ನಾಮರ್ಲ್ ಆಗಿದೆ. 200 ರಿಂದ 250 ರೂಪಾಯಿಗೆ 45 ಟಿಕೆಟ್ಗಳು ಸಿಗುತ್ತಿವೆ. ಹೇಳಿ ಕೇಳಿ 45 ಸಿನಿಮಾದಲ್ಲಿ ಮೂವರು ದಿಗ್ಗಜರು ಮೇಳೈಸಿದ್ದಾರೆ. ಅರ್ಜುನ್ ಜನ್ಯಾ ಕೈ ಚಳಕ ಜೋರಾಗೆ ಆಗಿದ್ದು, ಬಿಗ್ ಬಜೆಟ್ನಲ್ಲಿ ರಮೇಶ್ ರೆಡ್ಡಿ ನಿರ್ಮಾಣ ಮಾಡಿದ್ದಾರೆ. ಹೀಗಾಗಿ ಈ ಸಿನಿಮಾ ಮೇಲೆ ಸಹಜವಾಗಿಯೇ ನಿರೀಕ್ಷೆ ಇದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.