ಆನ್‌ಲೈನ್ ಆಹಾರ ವಿತರಣಾ ಸಂಸ್ಥೆ ಝೊಮೆಟೊ ಒಂದು ವರ್ಷದಲ್ಲಿ 600 ಉದ್ಯೋಗಿಗಳನ್ನು ತೆಗೆದುಹಾಕಿದೆ. ಕಳಪೆ ಕಾರ್ಯಕ್ಷಮತೆ ಮತ್ತು ಕೃತಕ ಬುದ್ಧಿಮತ್ತೆ ಅಳವಡಿಕೆಯಿಂದ ಉದ್ಯೋಗ ಕಡಿತ ಮಾಡಲಾಗಿದೆ ಎಂದು ವರದಿಯಾಗಿದೆ.
ಆನ್‌ಲೈನ್ ನಲ್ಲಿ ಆಹಾರ ವಿತರಣೆ ಮಾಡುವ ಝೊಮೆಟೊ ಒಂದು ವರ್ಷದೊಳಗೆ 600 ಮಂದಿ ಉದ್ಯೋಗಿಗಳನ್ನು ತೆಗೆದು ಹಾಕಿದೆ. ಆಹಾರ ವಿತರಣೆ ಮತ್ತು ತ್ವರಿತ ವಾಣಿಜ್ಯ ಸಂಸ್ಥೆಯಾದ ಝೊಮೆಟೊತನ್ನ ಪ್ರಮುಖ ಆಹಾರ ವಿತರಣಾ ವ್ಯವಹಾರದಲ್ಲಿ ನಿಧಾನಗತಿಯ ಬೆಳವಣಿಗೆ ಕಾಣುತ್ತಿದೆ ಜೊತೆಗೆ ಅದರ ಅಂಗಸಂಸ್ಥೆ ಬ್ಲಿಂಕಿಟ್‌ನಲ್ಲಿ ಹೆಚ್ಚುತ್ತಿರುವ ನಷ್ಟದ ಪರಿಣಾಮ ಉದ್ಯೋಗ ಕಡಿತದ ಕ್ರಮವನ್ನು ಕಂಪನಿ ತೆಗೆದುಕೊಂಡಿದೆ ಎಂದು ವರದಿ ತಿಳಿಸಿದೆ.
ವರದಿಯಂತೆ ಒಂದು ವರ್ಷದ ಹಿಂದೆ ಝೊಮೆಟೊಅಸೋಸಿಯೇಟ್ ಆಕ್ಸಿಲರೇಟರ್ ಪ್ರೋಗ್ರಾಂ (ZAAP) ಅಡಿಯಲ್ಲಿ ಗ್ರಾಹಕ ಸೇವಾ ವಿಭಾಗದಲ್ಲಿ ಖಾಲಿ ಹುದ್ದೆಗಳಿಗೆ ಸುಮಾರು 1,500 ಉದ್ಯೋಗಿಗಳನ್ನು ನೇಮಿಸಿಕೊಂಡಿತ್ತು. ಆದರೆ ಈಗ ಒಂದೇ ವರ್ಷದಲ್ಲಿ ಅರ್ಧದಷ್ಟು ಜನರನ್ನು ಕೆಲಸದಿಂದ ಕಿತ್ತು ಹಾಕಿದೆ. ಗ್ರಾಹಕ ಸೇವಾ ನೌಕರರಿಗೆ ಒಂದು ತಿಂಗಳ ಸಂಬಳವನ್ನು ಪರಿಹಾರವಾಗಿ ನೀಡಿ ಯಾವುದೇ ಸೂಚನೆ ಇಲ್ಲದೆ, ಅವಧಿಯನ್ನೂ ನೀಡಿದ ಕೆಲಸದಿಂದ ತೆಗೆದು ಹಾಕಲಾಯ್ತು ಎಂದು ವರದಿ ಉಲ್ಲೇಖಿಸಿದೆ. ಜೊತೆಗೆ ಜೊಮ್ಯಾಟೊದ ಗ್ರಾಹಕ ಸೇವಾ ವಿಭಾಗವನ್ನು AI ಯಾಂತ್ರೀಕರಣಕ್ಕೆ ಮಾರ್ಪಡು ಮಾಡಲಾಗಿದೆ.
ಸ್ಟಾರ್ಟಪ್ ಜಗತ್ತಿನಲ್ಲಿ LAT ಏರೋಸ್ಪೇಸ್, ಮಾಜಿ ಮುಖ್ಯಸ್ಥೆಯ ಕಂಪೆನಿಗೆ ಜೊಮ್ಯಾಟೊ ಸಿಇಒ ಹೂಡಿಕೆ!
ಕಳಪೆ ಕಾರ್ಯಕ್ಷಮತೆ ಮತ್ತು ಕಳಪೆ ಸಮಯಪಾಲನೆ ಸೇರಿದಂತೆ ಇತರ ಕಾರಣಗಳನ್ನು ನೀಡಲಾಯ್ತು. ZAAP ಕಾರ್ಯಕ್ರಮದಡಿಯಲ್ಲಿ ನೇಮಕಗೊಂಡ ಹೆಚ್ಚಿನ ಉದ್ಯೋಗಿಗಳನ್ನು ಕಳೆದ ಒಂದು ವಾರದಿಂದ ವಿನಾಕಾರಣ ತೆಗೆಯಲಾಗಿದೆ. ಇದರಲ್ಲಿ ಹೆಚ್ಚಿನ ಉದ್ಯೋಗಿಗಳು ಗುರುಗ್ರಾಮ್ ಮತ್ತು ಹೈದರಾಬಾದ್ ಶಾಖೆಯವರು ಎನ್ನಲಾಗಿದೆ. ಹೀಗಾಗಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವವರಿಗೆ ಉದ್ಯೋಗದ ಅಭದ್ರತೆ ಕಾಡುತ್ತಿದೆ. ಗ್ರಾಹಕ ಸೇವಾ ವಿಭಾಗಕ್ಕೆ ಕೃತಕ ಬುದ್ಧಿಮತ್ತೆಯನ್ನು ಅಳವಡಿಸಿಕೊಳ್ಳಲು ಈ ನಿರ್ಧಾರ ಮಾಡಿದೆ.
ಜೊಮಾಟೊದ "ನಗೆಟ್" ಅನ್ನು ಅಳವಡಿಕೆ ಮಾಡಿದ ನಂತರ ಈ ವಜಾ ಪ್ರಕ್ರಿಯೆ ನಡೆದಿದೆ. ನಗೆಟ್ ಅಂದರೆ AI-ಚಾಲಿತ ಗ್ರಾಹಕ ಬೆಂಬಲ ಸೇವೆಯಾಗಿದೆ. ಇದು ಬ್ಲಿಂಕಿಟ್ ಮತ್ತು ಹೈಪರ್‌ಪ್ಯೂರ್ ಸೇರಿದಂತೆ ಜೊಮಾಟೊದ ಬ್ರ್ಯಾಂಡ್‌ಗಳಲ್ಲಿ ತಿಂಗಳಿಗೆ 15 ಮಿಲಿಯನ್‌ಗಿಂತಲೂ ಹೆಚ್ಚು ಗ್ರಾಹಕ ಸಂವಹನಗಳನ್ನು ನಡೆಸುತ್ತದೆ. ಮಾನವ ಸಂವಹನವಿಲ್ಲದೆ 80% ವಿಚಾರಣೆಗಳನ್ನು ನುಗ್ಗೆಟ್ ಪರಿಣಾಮಕಾರಿಯಾಗಿ ನಿರ್ವಹಿಸಿದೆ.
ಝೊಮೆಟೊಬಾಯ್ ಲೇಟಾದ್ದಕ್ಕೆ ಆರತಿ ಬೆಳಗಿ, ಕುಂಕುಮ ಇಟ್ಟು ಬರಮಾಡಿಕೊಂಡ ಉದ್ಯಮಿ: ವಿಡಿಯೋ ವೈರಲ್
2024 ರ ಹಣಕಾಸು ವರ್ಷದ ಅಂತ್ಯದ ವೇಳೆಗೆ Zomato ನ ಉದ್ಯೋಗಿಗಳ ಸಂಖ್ಯೆ 34% ರಷ್ಟು ಹೆಚ್ಚಾಗಿ 8,244 ಉದ್ಯೋಗಿಗಳು ಕಾರ್ಯ ನಿರ್ವಹಿಸಿಸುತ್ತಿದ್ದರು. ಇದು ಹಣಕಾಸು ವರ್ಷ 2023 ಕ್ಕೆ ಹೋಲಿಸಿದರೆ ಏರಿಕೆಯಾಗಿತ್ತು FY23ರಲ್ಲಿ 6,173 ಉದ್ಯೋಗಿಗಳು ಎಂದು ಕಂಪನಿಯ ವಾರ್ಷಿಕ ವರದಿ ತಿಳಿಸಿದೆ. ಕಂಪನಿಯು ಹಣಕಾಸು ವರ್ಷ 2025 ರ Q3ಕ್ಕೆ 59 ಕೋಟಿ ರೂ.ಗಳ ಏಕೀಕೃತ ನಿವ್ವಳ ಲಾಭವನ್ನು ವರದಿ ಮಾಡಿದೆ. ಇದು ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ ದಾಖಲಾದ Rs 138 ಕೋಟಿ ಲಾಭಕ್ಕಿಂತ 57% ಕುಸಿತವನ್ನು ಸೂಚಿಸುತ್ತದೆ. ಆದರೂ ಕಾರ್ಯಾಚರಣೆಗಳಿಂದ ಬರುವ ಆದಾಯವು ವರ್ಷದಿಂದ ವರ್ಷಕ್ಕೆ ಗಮನಾರ್ಹ ಏರಿಕೆಯನ್ನು ಕಂಡಿದೆ. ಇದು Rs 3,288 ಕೋಟಿಯಿಂದ ಈಗ Rs 5,405 ಕೋಟಿಗೆ ಏರಿದೆ.
ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ವಜಾ ಘಟನೆಯ ಬಗ್ಗೆ ಚರ್ಚಿಸಲು ರೆಡ್ಡಿಟ್ ಮೊರೆ ಹೋದರು. ವಜಾಗೊಂಡ ವ್ಯಕ್ತಿಯೊಬ್ಬ ಬರೆದುಕೊಂಡು ನಾನು ಈ ರೀತಿ ಬರೆದುಕೊಳ್ಳುತ್ತೇನೆಂದು ಊಹಿಸಿಯೂ ಇರಲಿಲ್ಲ. ನನ್ನನ್ನು ಜೊಮಾಟೊದಿಂದ ವಜಾಗೊಳಿಸಲಾಗಿದೆ. ಇದನ್ನು ಹಾಸ್ಯಾಸ್ಪದ ಮತ್ತು ಅನ್ಯಾಯದ ಕಾರಣಕ್ಕಾಗಿ ಮಾತ್ರ ವಿವರಿಸಬಹುದು. ಕಳೆದ ಮೂರು ತಿಂಗಳುಗಳಲ್ಲಿ ಸರಾಸರಿ ಕೇವಲ 28 ನಿಮಿಷಗಳು ತಡವಾಗಿ ಬಂದಿದ್ದೇನೆ. ಯಾವುದೇ ಎಚ್ಚರಿಕೆ ಇಲ್ಲ, ಸುಧಾರಿಸಲು ಅವಕಾಶವಿಲ್ಲ - ಅತ್ಯುತ್ತಮ ಮೆಟ್ರಿಕ್ಸ್, ಉತ್ತಮ ಟ್ರ್ಯಾಕ್ ರೆಕಾರ್ಡ್ ಜೊತೆಗೆ ಕೆಲಸದಲ್ಲಿ ಬಲವಾದ ಉಪಸ್ಥಿತಿಯನ್ನು ಹೊಂದಿದ್ದರೂ ಸಹ, ಕೇವಲ ಒಂದು ಕೋಲ್ಡ್ ಟರ್ಮಿನೇಷನ್ ಎಂದು ಬರೆದುಕೊಂಡಿದ್ದಾರೆ. ಈ ಬಗ್ಗೆ ಕಾಮೆಂಟ್ ಮಾಡಿರು ಬಳಕೆದಾರರೊಬ್ಬರು ಜೊಮಾಟೊ ತನ್ನ ಉದ್ಯೋಗಿಗಳ ದೈನಂದಿನ ಕೆಲಸ, ಲಾಭ, ಜೊತೆಗೆ ಕೊಡುಗೆಯನ್ನು ಲೆಕ್ಕಿಸದೆ ಉದ್ಯೋಗಿಯನ್ನು ಬಳಸಿ ಬಿಸಾಡಬಹುದಾದ ವಸ್ತುವಿನಂತೆ ಕಂಡಿದೆ ಎಂದು ಖಾರವಾಗಿ ಪ್ರತಿಕ್ರಿಯಸಿದ್ದಾರೆ.