ಈ ಗ್ರಾಮದಲ್ಲಿ ಕೆಲಸ ಮಾಡುವ ಡಾಕ್ಟರಿಗೆ ಸಿಗುತ್ತೆ 3 ಕೋಟಿ ಸಂಬಳ !

Published : Apr 01, 2025, 12:11 PM ISTUpdated : Apr 01, 2025, 12:57 PM IST
 ಈ ಗ್ರಾಮದಲ್ಲಿ ಕೆಲಸ ಮಾಡುವ ಡಾಕ್ಟರಿಗೆ ಸಿಗುತ್ತೆ 3 ಕೋಟಿ ಸಂಬಳ !

ಸಾರಾಂಶ

ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನ ಜೂಲಿಯಾ ಕ್ರೀಕ್ ಎಂಬ ಹಳ್ಳಿಯಲ್ಲಿ ವೈದ್ಯರ ಕೊರತೆಯಿದೆ. ಅಲ್ಲಿ ವೈದ್ಯರಿಗೆ ವಾರ್ಷಿಕ 3.6 ಕೋಟಿ ರೂ. ಸಂಬಳ, ಬಾಡಿಗೆ ಮನೆ ಹಾಗೂ ಕಾರು ನೀಡಲಾಗುವುದು. ವೈದ್ಯರು ಅಲ್ಲಿಯೇ ನೆಲೆಸಬೇಕು. ಹಳ್ಳಿ ನಗರದಿಂದ ದೂರವಿದ್ದು, ಹತ್ತಿರದ ಆಸ್ಪತ್ರೆಗೆ ತಲುಪಲು ಮೂರು ಗಂಟೆ ಬೇಕಾಗುತ್ತದೆ. ಈ ಹಿಂದೆ ವೈದ್ಯರಾಗಿದ್ದ ಆಡಮ್ ಲೋವ್ಸ್ ರಾಜೀನಾಮೆ ನೀಡಿದ್ದಾರೆ.

ಡಾಕ್ಟರ್ಸ್ (Doctors) ಗೆ ಸದಾ ಬೇಡಿಕೆ ಇದೆ. ವೈದ್ಯ ವೃತ್ತಿಯಲ್ಲಿ ಸಂಪಾದನೆ ಕೂಡ ಹೆಚ್ಚಿರುತ್ತೆ. ಎಂಬಿಬಿಎಸ್ ಮುಗಿಸಿ ಖಾಸಗಿ ಆಸ್ಪತ್ರೆ ತೆರೆದ್ರೆ ಹಣವೋ ಹಣ ಎನ್ನುವ ಮಾತೊಂದಿದೆ. ಸರ್ಕಾರಿ ಆಸ್ಪತ್ರೆಗಳಲ್ಲೂ ವೈದ್ಯರಿಗೆ ಉತ್ತಮ ಸಂಬಳದ ಜೊತೆ ಹೆಚ್ಚುವರಿ ಸೌಲಭ್ಯಗಳನ್ನೂ ನೀಡಲಾಗುತ್ತದೆ. ಆದ್ರೆ ನಗರಗಳಿಗೆ ಹೋಲಿಕೆ ಮಾಡಿದ್ರೆ ಹಳ್ಳಿಗಳಲ್ಲಿ ಡಾಕ್ಟರ್ ಸಂಖ್ಯೆ ಹಾಗೂ ಸೌಲಭ್ಯದ ಸಂಖ್ಯೆ ಕಡಿಮೆ. ಇದ್ರಿಂದ ಹಳ್ಳಿಯವರು ಚಿಕಿತ್ಸೆಗಾಗಿ ದೂರದ ಪಟ್ಟಣಕ್ಕೆ ಬರ್ಬೇಕು. ಅನೇಕ ಬಾರಿ ಇಂಥ ಸಂದರ್ಭದಲ್ಲಿ ರೋಗಿ ಸಾವನ್ನಪ್ಪಿದ್ದಿದೆ. ಈ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಈ ಹಳ್ಳಿಯೊಂದು ಸಖತ್ ಆಫರ್ ನೀಡ್ತಿದೆ. ವೈದ್ಯರಿಗೆ ಮೂರು ಕೋಟಿಗಿಂತ ಹೆಚ್ಚು ಸಂಬಳ ಸಿಗಲಿದೆ. ಅದ್ರ ಜೊತೆ ಬಾಡಿಗೆ ಮನೆ, ಕಾರು ಕೂಡ ಲಭ್ಯವಿದೆ. ಆ ಹಳ್ಳಿ ಯಾವ್ದು, ಅಲ್ಲಿನ ವೈದ್ಯರಿಗೆ ಇರುವ ಷರತ್ತು ಏನು ಎಂಬ ಮಾಹಿತಿ ಇಲ್ಲಿದೆ.

ಮೂರು ಕೋಟಿಗಿಂತಲೂ ಹೆಚ್ಚು ಸಂಬಳ ಪಡೆಯಲು ನೀವು ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನಲ್ಲಿರುವ (Australia Queensland) ಜೂಲಿಯಾ ಕ್ರೀಕ್ (Julia Creek) ಎಂಬ ಸಣ್ಣ ಹಳ್ಳಿಗೆ ಹೋಗ್ಬೇಕು. ಈ ಹಳ್ಳಿಯಲ್ಲಿ 500ಕ್ಕಿಂತ ಹೆಚ್ಚು ಜನರಿದ್ದಾರೆ. ಈ ಹಳ್ಳಿಗೆ ವೈದ್ಯರಾಗಿ ನೇಮಕವಾಗುವವರಿಗೆ ಷರತ್ತೊಂದಿದೆ. ವೈದ್ಯರು ಪರ್ಮನೆಂಟ್ ಆ ಹಳ್ಳಿಯಲ್ಲಿ ನೆಲೆಸಬೇಕು. ಹಾಗಂತ ಮನೆಗೆ ಖರ್ಚು ಮಾಡ್ಬೇಕಾಗಿಲ್ಲ. ಅವರಿಗೆ ಮನೆ ಹಾಗೂ ಓಡಾಡಲು ಒಂದು ಕಾರನ್ನು ನೀಡಲಾಗುತ್ತದೆ. 

ಏಪ್ರಿಲ್‌ನಲ್ಲಿ 16 ದಿನ ಬ್ಯಾಂಕ್ ರಜೆ! ಹಣಕಾಸು ವ್ಯವಹಾರಕ್ಕೆ ಮೊದಲೇ ಪ್ಲಾನ್ ಮಾಡಿ

ಈ ಹಳ್ಳಿಯಲ್ಲಿ ಇಷ್ಟು ದಿನ ವೈದ್ಯ ವೃತ್ತಿ ಮಾಡ್ತಿದ್ದ ಆಡಮ್ ಲೋವ್ಸ್, ತಮ್ಮ ಹುದ್ದೆಗೆ ರಾಜೀನಾಮೆ ನೀಡ್ತಿದ್ದಾರೆ. ಹಾಗಾಗಿ ಹೊಸ ವೈದ್ಯರನ್ನು ನೇಮಕ ಮಾಡಿಕೊಳ್ಳಲು ಹಳ್ಳಿಗರು ಮುಂದಾಗಿದ್ದಾರೆ. ಈ ಬಗ್ಗೆ ಜಾಹೀರಾತನ್ನು ನೀಡಿದ್ದಾರೆ. ಮಾಹಿತಿ ಪ್ರಕಾರ, ಇಲ್ಲಿ ಕೆಲಸ ಮಾಡುವ ವೈದ್ಯರಿಗೆ 680,000 ಆಸ್ಟ್ರೇಲಿಯನ್ ಡಾಲರ್ ಸಿಗಲಿದೆ. ಅಂದ್ರೆ 3.6 ಕೋಟಿ ಸಂಬಳ ಸಿಗಲಿದೆ. 

ಜೂಲಿಯಾ ಕ್ರೀಕ್,  ಆಸ್ಟ್ರೇಲಿಯಾದ ಔಟ್‌ಬ್ಯಾಕ್ ಪ್ರದೇಶದಲ್ಲಿದೆ. ಇದು ಸಿಟಿಯಿಂದ ಸಂಪೂರ್ಣ ಬೇರ್ಪಟ್ಟಿದೆ.  ಬ್ರಿಸ್ಬೇನ್‌ನಿಂದ ಇಲ್ಲಿಗೆ ತಲುಪಲು 17 ಗಂಟೆ ಕ್ರಮಿಸಬೇಕು. ಅದೇ ಜೂಲಿಯಾ ಕ್ರೀಕ್ ನಿಂದ  ಹತ್ತಿರದ ನಗರವಾದ ಟೌನ್ಸ್‌ವಿಲ್ಲೆ ತಲುಪಲು ಏಳು ಗಂಟೆ ಅಗತ್ಯ. ಹತ್ತಿರದ ಆಸ್ಪತ್ರೆ ಈ ಹಳ್ಳಿಯಿಂದ ಮೂರು ಗಂಟೆ ದೂರದಲ್ಲಿದೆ. ತುರ್ತು ಪರಿಸ್ಥಿತಿಯಲ್ಲಿ ಅಲ್ಲಿಯವರೆಗೆ ಕ್ರಮಿಸೋದು ಕಷ್ಟ. ಹಾಗಾಗಿಯೇ ಹಳ್ಳಿಗೆ ವೈದ್ಯರ ಅಗತ್ಯವಿದೆ. ಜೂಲಿಯಾ ಕ್ರೀಕ್, ತುಂಬಾ ಬಿಸಿಲಿರುವ ಪ್ರದೇಶ. ಇಲ್ಲಿ ಹವಾಮಾನ ಆಗಾಗ ಬದಲಾಗ್ತಿರುವ ಕಾರಣ, ಅನೇಕ ಆರೋಗ್ಯ ಸಮಸ್ಯೆ ಜನರನ್ನು ಕಾಡುತ್ತದೆ. ಹಾಗಾಗಿಯೇ ವೈದ್ಯರು ಕೂಡ ಇಲ್ಲಿ ಬಂದು ನೆಲೆಸಲು ಮನಸ್ಸು ಮಾಡೋದಿಲ್ಲ. 

ತಿಂಗಳಿಗೆ 1.5 ಲಕ್ಷ ರೂ ಗಳಿಸಬೇಕಾ? ಮನೆಯಿಂದಲೇ ಮಾಡುವ ಈ ಬಿಸಿನೆಸ್ ಟ್ರೈ ಮಾಡಿ!

ಆಡಮ್ ಲೋವ್ಸ್ 2022 ರಲ್ಲಿ ಜೂಲಿಯಾ ಕ್ರೀಕ್ ಗೆ ಬಂದಿದ್ದರು. ಜಾಹೀರಾತು ನೋಡಿ ಈ ಹಳ್ಳಿಗೆ ಬಂದ ಲೋವ್ಸ್ ಇಲ್ಲಿಯೇ ವೈದ್ಯ ಸೇವೆ ಮಾಡಿದ್ದರು. ವೈದ್ಯರಿಗೆ ಇದೊಂದು ಸುವರ್ಣಾವಕಾಶ. ಉತ್ತಮ ಹಣ ಸಿಗುವ ಕಾರಣ, ಕುಟುಂಬ ಹಾಗೂ ನನ್ನ ಜೀವನ ಶೈಲಿ ಸಂಪೂರ್ಣ ಬದಲಾಗಿದೆ ಎಂದು ಆಡಮ್ ಲೋವ್ಸ್ ಹೇಳಿದ್ದಾರೆ. ಆಡಮ್ ಲೋವ್ಸ್ ಗಿಂತ ಮೊದಲು ಈ ಹಳ್ಳಿಯಲ್ಲಿ ಯಾವುದೇ ವೈದ್ಯರು ಇರಲಿಲ್ಲ. ಆಗಾಗ ಬೇರೆ ಊರಿನಲ್ಲಿರುವ ವೈದ್ಯರು ಇಲ್ಲಿಗೆ ಬಂದು ಹೋಗ್ತಿದ್ದರು. 

ಆಸ್ಟ್ರೇಲಿಯಾದಲ್ಲಿ ವೈದ್ಯರಿಗೆ ಆಫರ್ ನೀಡಿದ್ರೆ ಇಟಲಿ ಸಾಮಾನ್ಯ ಜನರಿಗೆ ವಾಸದ ಆಫರ್ ನೀಡ್ತಾ ಇದೆ. ಇಟಲಿಯ ಟ್ರೆಂಟಿನೊ ಪ್ರಾಂತ್ಯವೂ ಇತ್ತೀಚೆಗೆ ಅಲ್ಲಿಗೆ ಬರುವ ಜನರಿಗೆ 92 ಲಕ್ಷ ರೂಪಾಯಿ ನೀಡುವುದಾಗಿ ಹೇಳಿದೆ. ಆದ್ರೆ ಇಲ್ಲಿ ಕನಿಷ್ಠ 10 ವರ್ಷಗಳ ಕಾಲ ವಾಸಿಸಬೇ. ನಿಮ್ಮ ಆಸ್ತಿಯನ್ನು ಬಾಡಿಗೆಗೆ ನೀಡಬೇಕು. 

PREV
Read more Articles on
click me!

Recommended Stories

ಬೆಂಗಳೂರಿನ ಅಮರ್‌ ಸುಬ್ರಹ್ಮಣ್ಯ ಆಪಲ್‌ ಎಐ ಟೀಮ್‌ಗೆ ಉಪಾಧ್ಯಕ್ಷ!
ಸರಾಸರಿ ಮಾಸಿಕ ವೇತನ: ದೇಶದಲ್ಲಿಯೇ 2ನೇ ಸ್ಥಾನದಲ್ಲಿ ಕರ್ನಾಟಕ, ಸಿಗೋ ಸ್ಯಾಲರಿ ಎಷ್ಟು?