ಕಂಪನಿ ಟಾರ್ಗೆಟ್ ನೀಡುತ್ತೆ, ಉದ್ಯೋಗಿಗಳು ರೀಚ್ ಮಾಡೋಕೆ ಒದ್ದಾಡ್ತಾರೆ. ವಾರ, ತಿಂಗಳು, ವರ್ಷ ಹೀಗೆ ಕಳೆದು ಹೋಗುತ್ತೆ. ಟಾರ್ಗೆಟ್ ಗಲಾಟೆಯಲ್ಲಿ ಆರೋಗ್ಯ ಹಾಳೇ ವಿನಃ ಉದ್ಯೋಗಿಗಳಿಗೆ ಹೆಚ್ಚಿನ ಲಾಭವಿಲ್ಲ ಅನ್ನೋರು ಈ ಸ್ಟೋರಿ ಓದಿ.
ಈಗ ಬಹುತೇಕ ಕಂಪನಿಗಳು ಟಾರ್ಗೆಟ್ (Target) ಹಿಂದೆ ಓಡ್ತಿವೆ. ಉದ್ಯೋಗಿಗಳು ಟಾರ್ಗೆಟ್ ರೀಚ್ ಆಗ್ಲೇಬೇಕು. ಇಲ್ಲ ಅಂದ್ರೆ ಕಚೇರಿ (Office) ಯಿಂದ ನಾನಾ ತರಹದ ಟಾರ್ಚರ್ ಎದುರಿಸಬೇಕು. ಕೆಲವೊಮ್ಮೆ ಕೆಲಸ ಕೈತಪ್ಪಿ ಹೋಗುವ ಭಯ ಉದ್ಯೋಗಿಗಳಿಗೆ ಇರುತ್ತೆ. ಅದೇ ಪ್ರತಿ ತಿಂಗಳು ಟಾರ್ಗೆಟ್ ರೀಚಾದವರಿಗೆ ಬಹುತೇಕ ಕಂಪನಿಗಳು ಉಡುಗೊರೆ ನೀಡೋದಿರಲಿ ಒಂದು ಅಭಿನಂದನೆ ಸಲ್ಲಿಸುವ ಕೆಲಸವನ್ನೂ ಮಾಡೋದಿಲ್ಲ. ಟಾರ್ಗೆಟ್ ಅಂತ ರಾತ್ರಿ – ಹಗಲು ನಿದ್ರೆ ಬಿಡುವ ಉದ್ಯೋಗಿಗಳಿಗೆ ಇಲ್ಲೊಂದು ಸುದ್ದಿ ಇದೆ. ನಿಮ್ಮ ಕಂಪನಿ ಹೇಗಿದೆ, ಈಗ ನಾವು ಹೇಳ್ತಿರೋ ಕಂಪನಿ ಹೇಗಿದೆ ಅನ್ನೋದನ್ನು ವಿಶ್ಲೇಷಣೆ ಮಾಡಿ. ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ಬರೀ ಟಾರ್ಗೆಟ್ ನೀಡಿಲ್ಲ. ಟಾರ್ಗೆಟ್ ಪೂರ್ಣಗೊಳಿಸಿದ ಉದ್ಯೋಗಿಗಳಿಗೆ ಭರ್ಜರಿ ಗಿಫ್ಟ್ ನೀಡಿದೆ. ಯಸ್. ಕಚೇರಿಯಲ್ಲಿ ಟಾರ್ಗೆಟ್ನಿಂದ ಸೃಷ್ಟಿಯಾಗುವ ಒತ್ತಡದ ವಾತಾವರಣ ಕಡಿಮೆ ಮಾಡಲು ಗುಜರಾತ್ ಕಂಪನಿ ಮಹತ್ವದ ಹೆಜ್ಜೆ ಇಟ್ಟಿದೆ. ಗುರಿ ತಲುಪಿದ ಉದ್ಯೋಗಿಗಳಿಗೆ ಐಷಾರಾಮಿ ಕಾರು, ಮೊಬೈಲ್ ಫೋನ್ ಹಾಗೂ ಬಂಗಾರದ ನಾಣ್ಯವನ್ನು ಉಡುಗೊರೆಯಾಗಿ ನೀಡಿದೆ.
ಉದ್ಯೋಗಿಗಳಿಗೆ ಗಿಫ್ಟ್ ನೀಡಿದ ಕಂಪನಿ ಯಾವುದು? : ಉದ್ಯೋಗಿಗಳಿಗೆ ಉಡುಗೊರೆ ನೀಡಿದ ಕಂಪನಿ ಅಹಮದಾಬಾದ್ ನ ಆಭರಣ ಕಂಪನಿ ಕಬ್ರಾ ಜ್ಯುವೆಲ್ಸ್ ಲಿಮಿಟೆಡ್ (Kabra Jewels Ltd) . ಕಂಪನಿ ವ್ಯವಹಾರವನ್ನು ಆಕಾಶದೆತ್ತರಕ್ಕೆ ಕೊಂಡೊಯ್ದ ತನ್ನ 12 ಉದ್ಯೋಗಿಗಳಿಗೆ ಕಂಪನಿ ಹೊಸ ಕಾರನ್ನು ಗಿಫ್ಟ್ ಆಗಿ ನೀಡಿದೆ. 200 ಕೋಟಿ ರೂಪಾಯಿಗಳ ವಹಿವಾಟಿನ ಯಶಸ್ಸನ್ನು ಆಚರಿಸಲು ಉದ್ಯೋಗಿಗಳಿಗೆ ಈ ಬಹುಮಾನ ನೀಡಲಾಗಿದೆ. ಮಹೀಂದ್ರಾ XUV 700, ಟೊಯೋಟಾ ಇನ್ನೋವಾ, ಹುಂಡೈ i10, ಹುಂಡೈ ಆಕ್ಸೆಂಟ್, ಮಾರುತಿ ಸುಜುಕಿ ಎರ್ಟಿಗಾ ಮತ್ತು ಮಾರುತಿ ಸುಜುಕಿ ಬ್ರೆಝಾ ಮುಂತಾದ ಕಾರುಗಳನ್ನು 12 ಉದ್ಯೋಗಿಗಳಿಗೆ ಉಡುಗೊರೆಯಾಗಿ ನೀಡಲಾಗಿದೆ. ಇದಲ್ಲದೆ, ದ್ವಿಚಕ್ರ ವಾಹನ, ಮೊಬೈಲ್ ಫೋನ್, ಫ್ಯಾಮಿಲಿ ಹಾಲಿಡೇ ಪ್ಯಾಕೇಜ್ ಮತ್ತು ಚಿನ್ನ ಮತ್ತು ಬೆಳ್ಳಿ ನಾಣ್ಯಗಳನ್ನು ಸಹ ತಂಡದ ಇತರ ಸದಸ್ಯರಿಗೆ ಉಡುಗೊರೆಯಾಗಿ ನೀಡಲಾಗಿದೆ.
ಈ ಗ್ರಾಮದಲ್ಲಿ ಕೆಲಸ ಮಾಡುವ ಡಾಕ್ಟರಿಗೆ ಸಿಗುತ್ತೆ 3 ಕೋಟಿ ಸಂಬಳ !
ಈ ಕಂಪನಿ ಮಾಲೀಕ ಯಾರು? : ಕಬ್ರಾ ಜ್ಯುವೆಲ್ಸ್ ಲಿಮಿಟೆಡ್ ಮಾಲೀಕರ ಹೆಸರು ಕೈಲಾಶ್ ಕಬ್ರಾ. ಕಬ್ರಾ ಜ್ಯುವೆಲ್ಸ್ ಲಿಮಿಟೆಡ್ ಅಹಮದಾಬಾದ್ನಲ್ಲಿ ಕೆಕೆ ಜ್ಯುವೆಲ್ಸ್ ಬ್ರ್ಯಾಂಡ್ ಅಡಿಯಲ್ಲಿ ಆಭರಣ ಶೋರೂಮ್ ನಡೆಸುತ್ತಿದೆ. 21 ನೇ ವಯಸ್ಸಿನಲ್ಲಿ ಸ್ವಂತ ಬ್ಯುಸಿನೆಸ್ ಶುರು ಮಾಡಿದವರು ಕೈಲಾಶ್ ಕಬ್ರಾ. ಯಶಸ್ವಿ ಉದ್ಯಮಿ ಎನಿಸಿಕೊಂಡಿರುವ ಕೈಲಾಶ್, ಕೆಕೆ ಜ್ಯುವೆಲ್ಸ್ ಕಂಪನಿ ಲಾಭವನ್ನು ತಮ್ಮದೆಂದುಕೊಂಡಿಲ್ಲ. ಸ್ವಾರ್ಥ ಬಿಟ್ಟು, ಕಂಪನಿಗೆ ದುಡಿದ ತಮ್ಮ ತಂಡಕ್ಕೆ ಲಾಭದ ಭಾಗವನ್ನು ಹಂಚಿದ್ದಾರೆ. ಆರಂಭದಲ್ಲಿ ಕೇವಲ 12 ಸದಸ್ಯರೊಂದಿಗೆ 2 ಕೋಟಿ ರೂಪಾಯಿ ವಹಿವಾಟು ನಡೆಸಿತ್ತು ಕಂಪನಿ. ಆದ್ರೆ ಇಂದು ತಂಡ 140 ಸದಸ್ಯರನ್ನು ಹೊಂದಿದೆ. 2024-25ನೇ ಆರ್ಥಿಕ ವರ್ಷದಲ್ಲಿ ಕಂಪನಿ 200 ಕೋಟಿ ರೂಪಾಯಿಗಳ ವಹಿವಾಟನ್ನು ದಾಟಿದೆ. ತಂಡದ ಅವಿರತ ಪ್ರಯತ್ನವಿಲ್ಲದೆ ಈ ಸಾಧನೆ ಸಾಧ್ಯವಾಯ್ತು ಎಂದು ಕೈಲಾಶ್ ಹೇಳಿದ್ದಾರೆ.
ಈ ಖಾಸಗಿ ಕಂಪನಿಯಲ್ಲಿ ನೌಕರ ಸತ್ತರೆ ಹೆಂಡತಿಗೆ 10 ವರ್ಷ ಉಚಿತ ಸಂಬಳ
ಗುಜರಾತ್ ನ ಖೇಡಾ ಜಿಲ್ಲೆಯ ಮಹೇಮ್ದವಾಡ ಬಳಿ ಕಬ್ರಾ ಜ್ಯುವೆಲ್ಸ್ ಲಿಮಿಟೆಡ್, ವಿಶೇಷ ಕಾರ್ಯಕ್ರವನ್ನು ಹಮ್ಮಿಕೊಂಡಿತ್ತು. ಅಲ್ಲಿ, ಉದ್ಯೋಗಿಗಳಿಗೆ ಕಾರು ಮತ್ತು ಇತರ ಉಡುಗೊರೆಗಳನ್ನು ವಿತರಿಸಲಾಯ್ತು. ಇಡೀ ದಿನ ಕೆಲಸ ಮಾಡಿ, ಕಂಪನಿಯನ್ನು ಯಶಸ್ವಿ ಶಿಖರಕ್ಕೆ ಕೊಂಡೊಯ್ದ ಉದ್ಯೋಗಿಗಳು ಖುಷಿಯಾಗಿದ್ದಾರೆ. ಶ್ರಮಕ್ಕೆ ತಕ್ಕ ಫಲ ಸಿಕ್ಕಿದ್ದು, ಮತ್ತಷ್ಟು ಕೆಲಸ ಮಾಡುವ ಹುಮ್ಮಸ್ಸು ಬಂದಿದೆ ಎಂದಿದ್ದಾರೆ.